ಚಾರ್ಕೋಪ್ ಕನ್ನಡಿಗರ ಬಳಗ:14 ನೇ ವಾರ್ಷಿಕ ಮಹಾಸಭೆ
Team Udayavani, Jan 2, 2018, 4:51 PM IST
ಮುಂಬಯಿ: ಚಾರ್ಕೋಪ್ ಕನ್ನಡಿಗರ ಬಳಗವನ್ನು ಇನ್ನಷ್ಟು ಅಭಿವೃದ್ಧಿಯ ಪಥದತ್ತ ಮುನ್ನಡೆಸುವ ಉದ್ದೇಶವನ್ನಿಟ್ಟುಕೊಂಡು ಮುಂದಿನ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಹೆಚ್ಚು ಜನಸ್ನೇಹಿ ಸಂಸ್ಥೆಯನ್ನಾಗಿ ಬೆಳೆಸಲಾಗುವುದು. ಈ ಉದ್ದೇಶದಿಂದ ಬಳಗದಲ್ಲಿ ಹೊಸ ಸದಸ್ಯರ ನೇಮಕ ಅಭಿಯಾನ ಪ್ರಾರಂಭಿಸಲಾಗುವುದು. ಇದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಚಾರ್ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷ ಮಂಜುನಾಥ ಬನ್ನೂರು ಅವರು ಅಭಿಪ್ರಾಯಿಸಿದರು.
ಡಿ. 25 ರಂದು ಪೊಯಿಸರ್ ಜಿಮಾVನದಲ್ಲಿ ನಡೆದ ಚಾರ್‌ಕೋಪ್ ಕನ್ನಡಿಗರ ಬಳಗದ 14 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಮುಂಬರುವ ದಿನಗಳಲ್ಲಿ ಬಳಗದ ವತಿಯಿಂದ ಕವಿಗೋಷ್ಠಿ, ದತ್ತಿ ಉಪನ್ಯಾಸಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಹೆಚ್ಚು ಮಹತ್ವ ನೀಡಲಾಗುವುದು. ಸಂಸ್ಥೆಯ ಎಲ್ಲಾ ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.
ಪ್ರಾರಂಭದಲ್ಲಿ ಆರಾಧ್ಯ ದೇವರಾದ ಸರಸ್ವತಿಗೆ ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಗದ ಸದಸ್ಯೆ ಲತಾ ಬಂಗೇರ ಪ್ರಾರ್ಥನೆಗೈದರು. ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ ಅವರು ಸ್ವಾಗತಿಸಿದರು. 2016-2017 ನೇ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ಮಂಜೂರಾತಿ ಗೊಳಿಸಲಾಯಿತು. ಆಂತರಿಕ ಲೆಕ್ಕ ಪರಿಶೋಧಕರು ಹಾಗೂ ಲೆಕ್ಕ ಪರಿಶೋಧಕರನ್ನು ನೇಮಿಸಲಾಯಿತು.
ಬಳಗದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಇತ್ತೀಚೆಗೆ ನಡೆದ ಆರತಿತಟ್ಟೆ ಸ್ಪರ್ಧೆ, ಪಾಕಸ್ಪರ್ಧೆ, ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಬಳಗದ ಮಹಿಳಾ ಸದಸ್ಯೆಯರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ಇತ್ತೀಚೆಗೆ ಡೊಂಬಿವಲಿ ಕರ್ನಾಟಕ ಸಂಘದ ಸುವರ್ಣ ಮಹೋತ್ಸವ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಗ್ಗದ ಕೊನೆ ನಾಟಕವನ್ನು ಪ್ರದರ್ಶಿಸಿ ತೃತೀಯ ಬಹುಮಾನ ಪಡೆದ ಬಳಗದ ಸದಸ್ಯರನ್ನು ಮಹಾಸಭೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ಬಳಗದ ವಿಶ್ವಸ್ಥ ಭಾಸ್ಕರ ಸರಪಾಡಿ ಅವರು ಮಾತನಾಡಿ, ನಮ್ಮ ಬಳಗದ ಏಳ್ಗೆಗಾಗಿ ಎಲ್ಲಾ ಸದಸ್ಯರು ಪ್ರಾರಂಭದಿಂದಲೇ ಸಹಕರಿಸುತ್ತಿದ್ದು, ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರು ತುಂಬಾ ಉತ್ಸುಕತೆಯಿಂದ ಎಲ್ಲಾ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸು ತ್ತಿದ್ದಾರೆ. ಬಳಗಕ್ಕೆ ಕಾರ್ಯಕಾರಿ ಸಮಿತಿಯ ಜೊತೆಗೆ ಉಪಸಮಿತಿಯ ಸದಸ್ಯರು ಜತೆಗೂಡಿ ಬಳಗವನ್ನು ಮುನ್ನಡೆಸುವ ಬಗ್ಗೆ ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರುಗಳಾದ ಕೃಷ್ಣ ಟಿ. ಅಮೀನ್, ಕೃಷ್ಣ ಎಂ. ಶೆಟ್ಟಿ, ಕೋಶಾಧಿಕಾರಿ ಗೌರಿ ಪಣಿಯಾಡಿ, ಸದಸ್ಯ ರಮàಶ್ ಕೋಟ್ಯಾನ್, ಚಂದ್ರಶೇಖರ ಶೆಟ್ಟಿ, ಪದ್ಮಾವತಿ ಶೆಟ್ಟಿ, ಹರೀಶ್ ಚೇವಾರ್, ಶಾಂತಾ ಭಟ್, ಕರುಣಾಕರ ಶೆಟ್ಟಿಗಾರ್, ಜತೆ ಕಾರ್ಯದರ್ಶಿ ವಿಜಯ ಡಿ. ಪೂಜಾರಿ, ಸದಾಶಿವ ಸಿ. ಪೂಜಾರಿ ಹಾಗೂ ಬಳಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಬಳಗದ ಗೌರವ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ, ಬಳಗದ ಸದಸ್ಯರು ತಮ್ಮ 18 ವರ್ಷ ಮೇಲ್ಪಟ್ಟ ತಮ್ಮ ಮಕ್ಕಳನ್ನು ಮತ್ತು ಪರಿಸರದ ತುಳು-ಕನ್ನಡಿಗರ ಮಕ್ಕಳನ್ನು ಬಳಗದ ಸದಸ್ಯರನ್ನಾಗಿ ಮಾಡಬೇಕು ಎಂದು ವಿನಂತಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.