ಭಾಯಂದರ್ ಶ್ರೀ ಮಣಿಕಂಠ ಸೇವಾ ಸಂಘ: ಮಹಾಪೂಜೆ
Team Udayavani, Jan 2, 2018, 4:54 PM IST
ಮುಂಬಯಿ: ತಪಶಕ್ತಿ, ನಿಯಮ, ತ್ಯಾಗ, ಯೋಗ, ಉತ್ಸವ ಮತ್ತು ಅನ್ನದಾನದಂತಹ ಮಹತ್ಕಾರ್ಯಗಳಿಂದ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ತವರು ಮನೆಗೆ ಹೊದ ಸಂತೋಷವನ್ನು ದೇವರ ಉತ್ಸವಗಳು ನೀಡುತ್ತವೆ. ಕ್ಷೇತ್ರದ ಅಭಿವೃದ್ಧಿ ಹಾಗೂ ತವರು ಮನೆಯ ಸಂಭ್ರಮದ ಆಸ್ವಾದನೆ ಶ್ರೀ ಹನುಮಾನ್ ಭಜನ ಮಂಡಳಿಯ ರಜತ ಮಹೋತ್ಸವದಲ್ಲಿ ಕಂಡು ಪುಳಕಿತನಾದೆ. ಸಂಸ್ಕಾರ ನೀಡುವ ಈ ಸಂಸ್ಥೆ ಸಾಧನೆಯ ಪ್ರತಿಬಿಂಬವಾಗಿದೆ ಎಂದು ವೇ|ಮೂ| ಪ್ರಸನ್ನ ಭಟ್ ಉಡುಪಿ ಅವರು ನುಡಿದರು.
ಡಿ. 30ರಂದು ಭಾಯಂದರ್ ಪೂರ್ವದ ಹನುಮಾನ್ ನಗರದಲ್ಲಿ ಶ್ರೀ ಹನುಮಾನ್ ಭಜನ ಮಂಡಳಿಯ ಶ್ರೀ ಮಣಿಕಂಠ ಸೇವಾ ಸಂಘದ 20 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಬಿಡುವಿನ ಸಮಯವನ್ನು ಆಧ್ಯಾತ್ಮಿಕ ಚಿಂತನೆಗೆ ಒಳಪಡಿಸಿದ ಈ ಸಂಸ್ಥೆಯ ಸದಸ್ಯರು ಧನ್ಯರು. ಭಜನೆಯಿಂದ ಪ್ರಾರಂಭವಾದ ಶ್ರೀ ಹನುಮಾನ್ ಭಜನ ಮಂಡಳಿ ಬೃಹತ್ ಸಂಸ್ಥೆಯಾಗಿ ಬೆಳೆದು ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ ನೇರವಾಗಿ ದೇವರ ಸೇವೆ ಮಾಡುತ್ತಿದೆ. ಮನುಷ್ಯತ್ವವನ್ನು ಉಳಿಸಿ ಸನಾತನ ಧರ್ಮವನ್ನು ಬೋಧಿಸುವ ತಮ್ಮ ಕಾರ್ಯ ಸಾಧನೆ ಶಾಶ್ವತವಾಗಿರಲಿ ಎಂದು ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ಯೋಗಾನುಯೋಗ ಹಾಗೂ ಭಗವಂತನ ಸಂಕಲ್ಪದಿಂದ ಈ ಸಂಸ್ಥೆ ಕೂಡುಕುಟುಂಬದ ವಾತಾವರಣದಲ್ಲಿ ಇಪ್ಪತ್ತೆ$çದು ವರ್ಷ ಪೂರೈಸಿದೆ. ಅಂದಿನ ಪರಿಸ್ಥಿತಿಯಲ್ಲಿ ಇಷ್ಟು ವೇಗದಲ್ಲಿ ಮುಂದುವರಿಯುವ ಭರವಸೆ ನಮಗಿಲ್ಲದಾ ಯಿತು. ನಿರ್ಮಲ ಮನಸ್ಸಿನಿಂದ ಶ್ರದ್ಧಾಭಕ್ತಿಯಿಂದ ಭಜಿಸಿದರೆ ಸ್ಥಳದಲ್ಲಿಯೇ ದೇವರು ನೆಲೆಯೂರು ತ್ತಾನೆ ಎಂಬುವುದಕ್ಕೆ ಶ್ರೀ ಹನುಮಾನ್ ಭಜನ ಮಂಡಳಿ ಸ್ಪಷ್ಟ ನಿದರ್ಶನವಾಗಿದೆ. ಆರ್ಥಿಕವಾಗಿ, ಧಾರ್ಮಿಕವಾಗಿ ಬಲಾಡ್ಯವಾಗಿರುವ ಈ ಮಂಡಳಿ ಅನೇಕ ಸಾಧಕರನ್ನು, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಿದೆ ಎಂದರು.
ಕಾರ್ಯದರ್ಶಿ ಅಶೋಕ್ ಕೋಟ್ಯಾನ್ ಅವರು ಸಂಸ್ಥೆಯು ನಡೆದು ಬಂದ ದಾರಿ ಮತ್ತು ಕಾರ್ಯಯೋಜನೆಗಳ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ವೇದಮೂರ್ತಿ ಪ್ರಸನ್ನ ಭಟ್ ಉಡುಪಿ ಮತ್ತು ಶ್ರೀ ಹನುಮಾನ್ ಭಜನ ಮಂಡಳಿಯ ಸ್ಥಾಪಕ ಸದಸ್ಯ ಕೇಶವ ಎಂ. ಪೂಜಾರಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಚಿನ್ನದ ಉಂಗುರ, ಸಮ್ಮಾನ ಪತ್ರ, ಸ್ಮರಣಿಕೆಯೊಂದಿಗೆ ಸಮ್ಮಾನಿಸಿ ಗೌರವಿಸಲಾಯಿತು.
ಬಾಲಕಲಾವಿದೆ ನಿಧಿ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಸ್ಥಳೀಯ ನಗರ ಸೇವಕಿಯರುಗಳಾದ ವಂದನಾ ಮಂಗೇಶ್ ಪಾಟೀಲ್, ಮೇಘನಾ ದೀಪಕ್ ರಾವಲ್, ಮಂಗೇಶ್ ಪಟೇಲ್, ಅರುಣ್ ತಂತ್ರಿ ಖಂಡಿಕೆ, ಗಣೇಶ್ ಸರಳಾಯ, ಕೇಶವ ಎಂ. ಪೂಜಾರಿ ಶುಭಹಾರೈಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನೀತಾ ಎಸ್. ಶೆಟ್ಟಿ ಮತ್ತು ಕಾರ್ಯದರ್ಶಿ ಲಕ್ಷಿ¾à ಎಸ್. ಸುವರ್ಣ ಅವರು ಸಮ್ಮಾನಿತರನ್ನು ಪರಿಚಯಿಸಿದರು. ರಂಗನಿರ್ದೇಶಕ ದೇವದಾಸ್ ಪಿ. ಸಾಲ್ಯಾನ್ ಅವರು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಶಿಬಿರದ ಸಂತೋಷ್ ಗುರುಸ್ವಾಮಿ ಮೂಡುಮಾರ್ನಾಡು, ಪದಾಧಿಕಾರಿಗಳಾದ ಸುಕುಮಾರ್ ಎಂ. ಶೆಟ್ಟಿ, ಸುರೇಶ್ ಶೆಟ್ಟಿ, ಜಯ ಆರ್. ಪೂಜಾರಿ, ಅಶೋಕ್ ಆರ್. ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ನಗರ ಸೇವಕ ಮತ್ತು ಗೌರವಾಧ್ಯಕ್ಷ ಅರವಿಂದ ಎ. ಶೆಟ್ಟಿ, ಶಾಸಕ ನರೇಂದ್ರ ಮೆಹ್ತಾ, ಸಮಾಜ ಸೇವಕ ಗಣೇಶ್ ವಿ. ಶೆಟ್ಟಿ, ರಾಕೇಶ್ ಶಾØ ಮೊದಲಾದವರು ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ, ಬೇಬಿ ಆನಂದ ಶೆಟ್ಟಿ ಕಂಕನಾಡಿಗುತ್ತು ಅವರ ಸೇವಾರ್ಥಕವಾಗಿ ಶ್ರೀ ಗುರುನಾರಾಯಣ ಯಕ್ಷಗಾನ ಕಲಾಮಂಡಳಿ ಸಾಂತಾಕ್ರೂಜ್ ಕಲಾವಿದರುಗಳಿಂದ ಕೋರªಬ್ಬು ಬಾರಗ ಬಯಲಾಟ ಪ್ರದರ್ಶನಗೊಂಡಿತು.
ಚಿತ್ರ-ವರದಿ : ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.