ಟ್ರಂಪ್ ನಿರ್ಧಾರಕ್ಕೆ ಪಾಕ್ ಗಲಿಬಿಲಿ
Team Udayavani, Jan 3, 2018, 8:35 AM IST
ಇಸ್ಲಾಮಾಬಾದ್: ಉಗ್ರ ನಿಗ್ರಹದಲ್ಲಿ ವಿಫಲವಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಪಾಕ್ಗೆ ನೀಡಬೇಕಾಗಿದ್ದ 255 ದಶಲಕ್ಷ ಡಾಲರ್ ನೆರವನ್ನು ಅಮೆರಿಕ ಸ್ಥಗಿತಗೊಳಿಸಿರುವುದು ಪಾಕಿಸ್ತಾನದ ನಿದ್ದೆಗೆಡಿಸಿದೆ. ಈ ಬೆಳವಣಿಗೆಯಿಂದ ವಿಲವಿಲನೆ ಒದ್ದಾಡುತ್ತಿರುವ ಪಾಕ್, ನಮ್ಮ ವಿರುದ್ಧ ಏಕೆ ಇಂತಹ ಕ್ರಮ ಕೈಗೊಂಡಿದ್ದೀರಿ ಎಂದು ಅಮೆರಿಕವನ್ನು ಪ್ರಶ್ನಿಸತೊಡಗಿದೆ. ಇನ್ನೊಂದೆಡೆ, ಚೀನಾ ಕೂಡ ಪಾಕ್ ಬೆನ್ನಿಗೆ ನಿಂತಿದ್ದು, ಉಗ್ರರ ನಿರ್ಮೂಲನೆಗಾಗಿ ಪಾಕಿಸ್ತಾನವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಅದನ್ನು ವಿಶ್ವ ಸಮುದಾಯ ಪರಿಗಣಿಸಬೇಕು ಎಂದು ಹೇಳಿದೆ.
ಪಾಕಿಸ್ತಾನವೊಂದು ಸುಳ್ಳುಗಳನ್ನೇ ಹೇಳುವ ರಾಷ್ಟ್ರ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಘೋಷಿಸಿದ್ದು, ಅದರ ನಂತರ ಆರ್ಥಿಕ ನೆರವನ್ನು ತಡೆಹಿಡಿದಿದ್ದು ಪಾಕಿಸ್ತಾನಕ್ಕೆ ದೊಡ್ಡ ಆಘಾತವನ್ನೇ ನೀಡಿದೆ. ಹೀಗಾಗಿ, ಈ ಬೆಳವಣಿಗೆಯ ಬೆನ್ನಲ್ಲೇ ಪಾಕ್ನಲ್ಲಿರುವ ಅಮೆರಿಕ ರಾಯಭಾರಿ ಡೇವಿಂಡ್ ಹೇಲ್ ಅವರನ್ನು ಕರೆಸಿಕೊಂಡು, ಅಮೆರಿಕದ ನಿರ್ಧಾರ ಕುರಿತು ವಿವರಣೆಯನ್ನು ಕೇಳಿದೆ. ಆದರೆ, ಇದಕ್ಕೆ ಅಮೆರಿಕದ ರಾಯಭಾರಿ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಮಾತುಕತೆ ನಡೆದಿರುವುದನ್ನು ಸ್ವತಃ ಅಮೆರಿಕವೇ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ, ಪಾಕಿಸ್ತಾನದ ಮಿತ್ರರಾಷ್ಟ್ರವಾಗಿರುವ ಚೀನಾ ಕೂಡ ಈ ಬೆಳವಣಿಗೆಯಿಂದ ಗಲಿಬಿಲಿಗೊಂಡಿದೆ. ಮಂಗಳವಾರ ಪಾಕ್ ಅನ್ನು ಸಮರ್ಥಿಸಿಕೊಂಡ ಚೀನಾ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪಾಕಿಸ್ತಾನವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜತೆಗೆ, ಹಲವು ತ್ಯಾಗಗಳನ್ನೂ ಮಾಡಿದೆ. ಇದನ್ನು ವಿಶ್ವ ಸಮುದಾಯವನ್ನು ಪರಿಗಣಿಸಬೇಕು ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.