ರಾಜಧಾನಿಗೆ ಕಾಲಿಟ್ಟ ಹಕ್ಕಿಜ್ವರ
Team Udayavani, Jan 3, 2018, 12:48 PM IST
ಬೆಂಗಳೂರು: ಕಳೆದ ತಿಂಗಳು ಮೈಸೂರಿನಲ್ಲಿ ಹಕ್ಕಿ ಜ್ವರ ಪತ್ತೆಯಾದ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲೂ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿಯ ದಾಸರಹಳ್ಳಿಯಲ್ಲಿ ಕೋಳಿ ಮಾರಾಟ ಕೇಂದ್ರದಲ್ಲಿ ಕಳೆದ ಡಿಸೆಂಬರ್ 25ರಂದು ಕೋಳಿಗಳು ಅಸ್ವಾಭಿಕವಾಗಿ ಮರಣಹೊಂದಿದ್ದು ಅವುಗಳ ಮಾದರಿಗಳನ್ನು ಪರೀಕ್ಷೆಗಾಗಿ ಭೂಪಾಲದ “ನ್ಯಾಷನ್‌ನಲ್ ಇನ್ಸಿಟಿಟ್ಯೂಟ್ ಆಫ್ ಹೈಸೆಕ್ಯೂರಿಟಿ ಅನಿಮಲ್ ಡಿಸೀಸ್’ (ಎನ್‌ಐಎಚ್‌ಎಸ್‌ಎಡಿ)ಗೆ ರವಾನಿಸಲಾಗಿತ್ತು. ಪರೀಕ್ಷೆಯಿಂದ ಸತ್ತ ಕೋಳಿಗಳ ಮಾದರಿಯಲ್ಲಿ ಹಕ್ಕಿ ಜ್ವರ (ಎಚ್5ಎನ್1) ಇರುವುದು ದೃಢಪಟ್ಟಿದೆ.
ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳ ತಂಡ ಕೋಳಿ ಮಾರಾಟ ಕೇಂದ್ರ ಹಾಗೂ ಸುತ್ತಲಿನ ಪ್ರದೇಶಕ್ಕೆ ಭೇಟಿ ಕೊಟ್ಟು ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದೆ. ರೋಗ ಪತ್ತೆಯಾದ ದಾಸರಹಳ್ಳಿಯ ಭುವನೇಶ್ವರಿ ನಗರ ಹಾಗೂ ಅದರ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು “ರೋಗಪೀಡಿತ ವಲಯ’ ಎಂದು ಹಾಗೂ 1ರಿಂದ 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಿದೆ.
ಆತಂಕ ಬೇಡ: ಸದ್ಯ ರೋಗವು ಹತೋಟಿಯಲ್ಲಿದ್ದು ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಅದಾಗ್ಯೂ ಸಾರ್ವಜನಿಕರು 70 ಡಿಗ್ರಿ ಸೆ ಗಿಂತ ಹೆಚ್ಚಿನ ಉಷ್ಣಾಂಶದಲ್ಲಿ ಬೇಯಿಸದ ಅಥವಾ ಅರ್ಧಬೆಂದ ಕೋಳಿ ಮಾಂಸ ಅಥವಾ ಕೋಳಿ ಮೊಟ್ಟೆಗಳನ್ನು ತಿನ್ನಬಾರದೆಂದು ಇಲಾಖೆ ಮನವಿ ಮಾಡಿದೆ.
ಎಲ್ಲಿಂದ ಬಂತು ಹಕ್ಕಿ ಜ್ವರ: ತಮಿಳುನಾಡಿನ ಕೋಳಿ ಮಾರಾಟಗಾರರಿಂದ ದಾಸರಹಳ್ಳಿಯ ಕೆಜಿಎನ್ ಅಂಗಡಿ ಮಾಲಿಕ 15 ಕೋಳಿಗಳನ್ನು ಖರೀದಿಸಿದ್ದ. ನಾಲ್ಕೈದು ಕೋಳಿಗಳು ಅಸ್ವಾಭಾವಿಕವಾಗಿ ಸತ್ತ ಹಿನ್ನೆಲೆಯಲ್ಲಿ ಮೊದಲು ಅವುಗಳ ಮಾದರಿಯನ್ನು ಹೆಬ್ಟಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಪರೀಕ್ಷಿಸಲಾಯಿತು.
ಬಳಿಕ ಅದನ್ನು ಭೂಪಾಲದ “ನ್ಯಾಷನ್‌ನಲ್ ಇನ್ಸಿಟಿಟ್ಯೂಟ್ ಆಫ್ ಹೈಸೆಕ್ಯೂರಿಟಿ ಅನಿಮಲ್ ಡಿಸೀಸ್’ (ಎನ್‌ಐಎಚ್‌ಎಸ್‌ಎಡಿ)ಗೆ ರವಾನಿಸಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದ ಬಳಿಕ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಹೀಗಾಗಿ, ಬೆಂಗಳೂರಿನಲ್ಲಿ ಹಕ್ಕಿಜ್ವರ ಹರಡಲು ತಮಿಳುನಾಡಿನಿಂದ ತಂದ ಕೋಳಿಗಳು ಕಾರಣ ಅನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ?: ಹಕ್ಕಿಜ್ವರ ಮನುಷ್ಯರಿಗೆ ಹರಡುವುದು ತೀರಾ ಕಡಿಮೆ. ಏಕೆಂದರೆ, ಹಕ್ಕಿಜ್ವರ ಮೊಟ್ಟೆ, ಮಾಂಸ ತಿನ್ನುವುದರಿಂದ ಅಲ್ಲ, ಉಸಿರೆಳತದಿಂದ ಹರಡುತ್ತದೆ. ಎಚ್1ಎನ್1 ವೈರಾಣು ರೀತಿಯಲ್ಲಿ ಎಚ್5ಎನ್1 (ಹಕ್ಕಿಜ್ವರ) ವೈರಾಣು ಶ್ವಾಸೇಂದ್ರಿಯಗಳ ಮೇಲ್ಭಾಗವನ್ನು ಬೇಗ ಬಾಧಿಸುವುದಿಲ್ಲ. ಹಾಗಾಗಿ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ.
ಹಕ್ಕಿ ಜ್ವರ ಮನುಷ್ಯರಿಗೆ ಬಾಧಿಸಿದ ಒಂದೇ ಒಂದು ನಿದರ್ಶನ ಇಲ್ಲಿವರೆಗೆ ಇಡೀ ದೇಶದಲ್ಲಿ ಎಲ್ಲೂ ಇಲ್ಲ. ಆದರೆ, ನಿರಂತರವಾಗಿ ಕೋಳಿಗಳನ್ನು ತಪಾಸಣೆ ಮಾಡುವ, ಕೋಳಿಫಾರಂಗಳಲ್ಲಿ ಕೆಲಸ ಮಾಡುವವರಿಂದ ಒಂದಿಷ್ಟು ಅಪಾಯ ಇರುತ್ತದೆ. ಅಂತಹವರು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.