ರಂಗಚಟುವಟಿಕೆ ನಿರಂತರವಾಗಿರಲಿ: ಸದಾನಂದ
Team Udayavani, Jan 3, 2018, 12:55 PM IST
ಮಹಾನಗರ: ರಂಗಭೂಮಿ ಚಟುವಟಿಕೆಗಳು ನಗರದಲ್ಲಿ ಗರಿ ಗೆದರುವ ಮೂಲಕ ಹೊಸದೊಂದು ಶಕೆ ಆರಂಭವಾಗಿದ್ದು ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಪ್ರೇಕ್ಷಕರಿಗೂ ಇದೆ ಎಂದು ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಹೇಳಿದರು.
ಅವರು ಅರೆಹೊಳೆ ಪ್ರತಿಷ್ಠಾನ ಮತ್ತು ಸುಮನಸಾ ಕೊಡವೂರು ಜಂಟಿಯಾಗಿ ಆಯೋಜಿಸಿದ್ದ ಅರೆಹೊಳೆ ರಂಗಹಬ್ಬದ ಸಮಾರೋಪದಲ್ಲಿ ಮಾತನಾಡಿದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಗಳೂರು ರಂಗಭೂಮಿಯಲ್ಲಿ ಇತ್ತೀಚೆಗಿನ ದಿನಗಳಲ್ಲಿ ಗರಿಗೆದರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ರಂಗಕಲಾವಿದ ವಿಜಯಕುಮಾರ್ ಕೊಡಿಯಾಲ್‌ಬೈಲ್, ಲಯನ್ಸ್ ಜಿಲ್ಲಾ ಕನ್ನಡಾಭಿವೃದ್ಧಿ ಸಂಯೋಜಕ ಕೇಶವ ಭಟ್, ರಂಗಾಯಣ ಕಲಾವಿದ ಮೈಮ್ ರಮೇಶ್, ರಂಗಕರ್ಮಿ ಜಗನ್ ಪವಾರ್, ಸುಮನಸಾ ಕೊಡವೂರಿನ ಪ್ರವೀಣ್ ಜಿ. ಕೊಡವೂರು ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರು, ಅರೆಹೊಳೆ ಸದಾಶಿವ ರಾವ್ ಉಪಸ್ಥಿತರಿದ್ದರು. ವಿಶಾಲಾಕ್ಷಿ ರಾವ್ ಸ್ವಾಗತಿಸಿ, ಪೃಥ್ವಿ ರಾವ್, ನಿಶ್ಚಿತಾ ನಿರೂಪಿಸಿದರು. ಸುಮನ ಸಾದ ಸದಸ್ಯ ದಯಾನಂದ ಕರ್ಕೇರ ವಂದಿಸಿದರು . ವಲ್ಲರಿ ಕಡೆಕಾರ್ ಅವರಿಂದ ಏಕವ್ಯಕ್ತಿ ಪ್ರದರ್ಶನ ಹಾಗೂ ಮೈಮ್ ರಮೇಶ್ ತಂಡದಿಂದ ಸಿರಿ ನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ
Goddess Lakshmi: ಲಕ್ಷ್ಮೀ ಆರಾಧನೆಯ ಪರ್ವ ಸಮಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.