![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 28, 2020, 12:14 PM IST
ಕಾಲಕ್ಕೆ ತಕ್ಕಂತೆ ಬದಲಾಗುವುದು ಜಾಣರ ಲಕ್ಷಣ. ಈ ಮಾತು ಫ್ಯಾಷನ್ ಕ್ಷೇತ್ರಕ್ಕೂ ಅನ್ವಯ. ಸೀಸನ್‌ಗೆ ತಕ್ಕಂತೆ ವಾರ್ಡ್‌ರೋಬ್ ಅನ್ನು ಅಪ್‌ಡೇಟ್ ಮಾಡಬೇಕು. ಆಗ ನೀವು ಸ್ಟೈಲಿಶ್ ಆಗಿ ಮಿಂಚಲಷ್ಟೇ ಅಲ್ಲದೆ, ವಾತಾವರಣದಲ್ಲಾಗುವ ಬದಲಾವಣೆಗೆ ದೇಹ ಹೊಂದಿಕೊಳ್ಳಲೂ ಸಾಧ್ಯವಾಗುತ್ತದೆ. ಈ ಚಳಿಗಾಲದ ಶಾಪಿಂಗ್ ಹೇಗೆ ಮಾಡಬೇಕು? ಯಾವ್ಯಾವ ಡ್ರೆಸ್ ಖರೀದಿಸಿ ವಾರ್ಡ್‌ರೋಬ್ ಅಪ್‌ಡೇಟ್ ಮಾಡಬೇಕು ಅನ್ನೋ ಸಂದೇಹವನ್ನು ಪರಿಹರಿಸೋ ಪ್ರಯತ್ನ ಇಲ್ಲಿದೆ.
1. ನಿಟ್ಟೆಡ್ ಡ್ರೆಸ್/ ನೇಯ್ದ ಬಟ್ಟೆಗಳು
ಹಿಂದೆಲ್ಲಾ ಚಳಿಗಾಲದ ಆರಂಭಕ್ಕೂ ಮುನ್ನ ಅಮ್ಮನೋ/ ಅಜ್ಜಿಯೋ ಸ್ವೆಟರ್, ಕಾಲಿcàಲ, ಮಫ್ಲರ್‌ಗಳನ್ನು ಕೈಯಿಂದ ನೇಯುತ್ತಿದ್ದುದು ನೆನಪಿರಬಹುದು. ಈಗ ಕಾಲ ಬದಲಾಗಿದೆ. ಥರಹೇವಾರಿ ಉಣ್ಣೆಯ ಬಟ್ಟೆಗಳು ಫ್ಯಾಶನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಉಣ್ಣೆಯ ಸ್ವೆಟರ್, ಕೋಟ್, ಫುಲ್ ಸ್ಲಿವ್ಸ್ ಟಾಪ್ ಹಾಗೂ ಡ್ರೆಸ್‌ಗಳನ್ನು ನಿಮ್ಮ ಶಾಪಿಂಗ್ ಲಿಸ್ಟ್‌ಗೆ ಸೇರಿಸಿ. ಈ ಬಟ್ಟೆಗಳು ನಿಮ್ಮನ್ನು ಬೆಚ್ಚಗಿಡುವುದಲ್ಲದೆ, ಸ್ಟೈಲಿಶ್ ಆಗಿ ಕಾಣುವಲ್ಲಿಯೂ ಸಹಕರಿಸುತ್ತವೆ.
2. ಜಾಕೆಟ್:
ಜಾಕೆಟ್‌ಗಳಿಲ್ಲದೆ ಚಳಿಗಾಲದ ಡ್ರೆಸ್‌ಕೋಡ್ ಅಪೂರ್ಣ. ಜಾಕೆಟ್‌ಗಳನ್ನು ಔಟಿಂಗ್, ಆಫೀಸ್ ಹೀಗೆ ಎಲ್ಲ ಕಡೆಯಲ್ಲೂ ಧರಿಸಬಹುದು. ಡ್ರೆಸ್ ಮೇಲೆ ಧರಿಸಿ ಸ್ಟೈಲ್ ಕೂಡ ಮಾಡಬಹುದು. ಹಾಗಿರುವಾಗ ಈ ಚುಮು ಚುಮು ಚಳಿಯಲ್ಲಿ ಜಾಕೆಟ್ ಖರೀದಿಸೋಕೆ ಮೀನ ಮೇಷ ಯಾಕೆ? ತಡಮಾಡದೆ, ಲೆದರ್ ಜ್ಯಾಕೆಟ್, ಬ್ಲೇಝರ್, ಡೆನಿಮ್ ಜ್ಯಾಕೆಟ್‌ಗಳನ್ನು ನಿಮ್ಮ ವಾರ್ಡ್‌ರೋಬ್‌ಗ ಸೇರಿಸಿಬಿಡಿ.
3. ಪಾಂಚೊ
ದಕ್ಷಿಣ ಅಮೆರಿಕ ಮೂಲದ ಈ ಡ್ರೆಸ್ ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ. ಪಾಂಚೊ ಧರಿಸಿದರೆ ಉಣ್ಣೆಯ ಶಾಲನ್ನು ಸುಮ್ಮನೆ ಹೊದ್ದುಕೊಂಡಿದ್ದೇವೆ ಎನ್ನುವಷ್ಟು ಬೆಚ್ಚನೆಯ ಅನುಭವವಾಗುತ್ತದೆ. ಇದು ನೋಡಲು ರೈನ್‌ಕೋಟ್‌ನಂತೆ ಕಾಣುತ್ತದೆ. ಸಡಿಲವಾಗಿರುವ ಪಾಂಚೊವನ್ನು ಧರಿಸಿದರೆ ಬಹಳ ಆರಾಮದಾಯಕ ಅನ್ನಿಸುತ್ತದೆ. ಮ್ಯಾಕ್ಸಿ ಸ್ಕರ್ಟ್ ಅಥವಾ ಡೆನಿಮ್ ಹಾಗೂ ವಿಂಟರ್ ಶೂ ಜೊತೆಗೆ ಪಾಂಚೊ ಧರಿಸಬಹುದು. ಮೊದಲು ಆಯತಾಕಾರದ ಉಣ್ಣೆಯ ಬಟ್ಟೆಯ ಮಧ್ಯದಲ್ಲಿ ತಲೆ ನುಗ್ಗಿಸಲು ಜಾಗ ಇರುವ ಸಾದಾ ಶೈಲಿಯ ಪಾಂಚೊಗಳು ಲಭ್ಯವಿದ್ದವು .ಈಗಂತೂ ಬೇರೆ ಬೇರೆ ಶೈಲಿಯ, ಅಂದರೆ ಪಾಂಚೊ ಸ್ವೆಟರ್, ಹೂಡಿ, ಟಾಪ್, ಡ್ರೆಸ್, ಕೋಟ್‌ಗಳೂ ಸಿಗುತ್ತವೆ.
4. ಫ್ಲೋರಲ್ ಪ್ಯಾಂಟ್ಸ್
ಚಳಿಗಾಲದಲ್ಲಿ ಸುತ್ತಲಿನ ವಾತಾವರಣವೇ ಒಂಥರಾ ಡಲ್ ಆಗಿರುತ್ತದೆ. ಮನಸ್ಸಿಗೆ ಆಗಾಗ ಮಂಕು ಕವಿಯುವುದು ಕೂಡ ಕಾಲದ ಮಹಿಮೆಯೇ. ನೀವು ಕೂಡ ಕಪ್ಪು, ನೀಲಿ, ಗ್ರೇನಂಥ ಸಾಂಪ್ರದಾಯಕ ಬಣ್ಣದ ಪ್ಯಾಂಟ್ ಧರಿಸಿ ಡಲ್ ಆಗಿ ಕಾಣೋದ್ಯಾಕೆ? ಚಳಿಗಾಲದ ಶಾಪಿಂಗ್‌ನಲ್ಲಿ ಫ್ಲೋರಲ್ ಪ್ಯಾಂಟ್‌ಗಳನ್ನು ಖರೀದಿಸಿ. ನಿಮಗಿಷ್ಟದ ಬಣ್ಣ ಮತ್ತು ಪ್ರಿಂಟ್‌ನ ಪ್ಯಾಂಟ್‌ಗಳು ಈಗ ಲಭ್ಯ ಇವೆ. ಫ್ಲೋರಲ್ ಪ್ಯಾಂಟ್‌ಗಳ ಇನ್ನೊಂದು ಪ್ಲಸ್ ಪಾಯಿಂಟ್ ಏನಂದ್ರೆ, ಒಂದು ಪ್ಯಾಂಟ್‌ನ್ನು ನೀವು ಬೇರೆ ಬೇರೆ ಕಾಂಬಿನೇಷನ್ ಆಗಿ ಧರಿಸಬಹುದು. ಪ್ಯಾಂಟ್‌ಗೆ ಮ್ಯಾಚ್ ಆಗೋವಂಥ ಕಲರ್ ಕಲರ್ ಟಾಪ್ ಮತ್ತು ಶೂ ಧರಿಸಿ ಮಿಂಚಬಹುದು.
5. ಶ್ರಗ್ಸ್
ಈ ಚಳಿಗಾಲಕ್ಕೆ ಶ್ರಗ್ಸ್‌ಗಿಂತ ಬೇರೆ ಬೆಸ್ಟ್ ಫ್ರೆಂಡ್ ನಿಮಗೆ ಸಿಗೋದಿಲ್ಲ. ಡ್ರೆಸ್ ಮೇಲೆ ಶ್ರಗ್ಸ್ ಧರಿಸೋದು ಈಗ ತುಂಬಾನೇ ಕಾಮನ್. ಸ್ಲಿವ್‌ಲೆಸ್, ಟ್ಯಾಂಕ್ ಟಾಪ್, ಡ್ರೆಸ್, ಡೆನಿಮ್, ಪಲಾಝೋ ಪ್ಯಾಂಟ್… ಹೀಗೆ ಯಾವುದರ ಮೇಲೆ ಧರಿಸಿದರೂ ಓಕೆ. ಬಗೆ ಬಗೆ ವಿನ್ಯಾಸದ, ಬಣ್ಣದ ಶ್ರಗ್ಸ್‌ಗಳು ನಿಮ್ಮ ವಾರ್ಡ್‌ರೋಬ್ ಸೇರಿಕೊಳ್ಳಲಿ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.