ಚಟ್ನಿ ಚಮತ್ಕಾರ
Team Udayavani, Jan 3, 2018, 3:02 PM IST
ಬೆಳಗ್ಗಿನ ಅಥವಾ ಸಂಜೆಯ ವೇಳೆ ತಯಾರಿಸುವ ಬಹುತೇಕ ಖಾದ್ಯಗಳು ಚಟ್ನಿ ಇಲ್ಲದೆ ಅಪೂರ್ಣ. ನಾಲಗೆಗೆ ಚುರುಕು ಮುಟ್ಟಿಸುವಂಥ ಥರಹೇವಾರಿ ಚಟ್ನಿಗಳ ಪರಿಚಯ ಇಲ್ಲಿದೆ.
ಮೂಲಂಗಿ ಚಟ್ನಿ
ಬೇಕಾದ ಸಾಮಗ್ರಿ:
ಮೂಲಂಗಿ ತುರಿ-1 ಕಪ್, ಒಣಮೆಣಸಿನಕಾಯಿ-5-6, ತೆಂಗಿನಕಾಯಿ ತುರಿ-1/2 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಕರಿಬೇವಿನ ಎಲೆಗಳು- 8-10, ಹುಣಸೆ ಹಣ್ಣು- 1 ಇಂಚಿನಷ್ಟು, ಬೆಲ್ಲದ ತುರಿ- 1 ಚಮಚ, ಎಣ್ಣೆ-4 ಚಮಚ, ಸಾಸಿವೆ- 1 ಚಮಚ, ಇಂಗು- 1/4 ಚಮಚ
ಮಾಡುವ ವಿಧಾನ- ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಹುಣಸೆ ಹಣ್ಣುಗಳನ್ನು ಬೇರೆಬೇರೆಯಾಗಿ ಎಣ್ಣೆಯಲ್ಲಿ ಹುರಿದುಕೊಳ್ಳಿ. ಹುರಿದ ಮಿಶ್ರಣಕ್ಕೆ, ಮೂಲಂಗಿ ತುರಿ, ತೆಂಗಿನಕಾಯಿ ತುರಿ, ಬೆಲ್ಲ, ಉಪ್ಪು ಹಾಕಿ ತರಿತರಿಯಾಗಿ ಅರೆದು, ಸಾಸಿವೆ- ಇಂಗಿನ ಒಗ್ಗರಣೆ ಕೊಟ್ಟರೆ, ರುಚಿಯಾದ ಮೂಲಂಗಿ ಚಟ್ನಿ ತಯಾರು.
ಕ್ಯಾರೆಟ್ ಚಟ್ನಿ
ಬೇಕಾಗುವ ಸಾಮಗ್ರಿ: ಕ್ಯಾರೆಟ್ ಹೋಳು- 2 ಕಪ್, ತೆಂಗಿನಕಾಯಿ ತುರಿ-1 ಕಪ್, ಒಣಮೆಣಸಿನಕಾಯಿ- 4-5, ಹುಣಸೆ ಹಣ್ಣು- 1 ಇಂಚಿನಷ್ಟು, ಉಪ್ಪು- ರುಚಿಗೆ ತಕ್ಕಷ್ಟು, ಕರಿಬೇವಿನ ಸೊಪ್ಪು- 7-8 ಎಲೆಗಳು, ಎಣ್ಣೆ- 3 ಚಮಚ, ಸಾಸಿವೆ- 1 ಚಮಚ, ಇಂಗು- 1/4 ಚಮಚ
ಮಾಡುವ ವಿಧಾನ: ಒಣಮೆಣಸಿನಕಾಯಿ ಹಾಗೂ ಕರಿಬೇವಿನ ಸೊಪ್ಪುಗಳನ್ನು ಸೇರಿಸಿ ಎಣ್ಣೆಯಲ್ಲಿ ಹುರಿದಿರಿಸಿ. ಕ್ಯಾರೆಟ್ ಹೋಳುಗಳು, ತೆಂಗಿನಕಾಯಿ ತುರಿ, ಹುರಿದ ಸಾಮಗ್ರಿಗಳು, ಹುಣಸೆಹಣ್ಣು, ಉಪ್ಪು ಸೇರಿಸಿ ನುಣ್ಣಗೆ ಅರೆದಿರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ- ಇಂಗಿನ ಒಗ್ಗರಣೆ ಮಾಡಿ. ಅರೆದಿರಿಸಿದ ಚಟ್ನಿ ಮಿಶ್ರಣಕ್ಕೆ, ತಯಾರಿಸಿರಿಸಿದ ಒಗ್ಗರಣೆ ಸೇರಿಸಿದರೆ ರುಚಿಕರ ಕ್ಯಾರೆಟ್ ಚಟ್ನಿ ರೆಡಿ. ಚಪಾತಿಯೊಂದಿಗೆ ಇಲ್ಲವೇ ಅನ್ನದೊಂದಿಗೆ ವ್ಯಂಜನವಾಗಿ ತಿನ್ನಲು ಬಲು ರುಚಿ.
ಕರಿಬೇವು ಸೊಪ್ಪಿನ ಚಟ್ನಿ
ಬೇಕಾದ ಸಾಮಗ್ರಿ: ಕರಿಬೇವಿನ ಎಲೆಗಳು-1 ಕಪ್, ಜೀರಿಗೆ-3 ಚಮಚ, ಹಸಿಮೆಣಸಿನಕಾಯಿ- 5-6, ಹುಣಸೆ ಹಣ್ಣು- 2 ಇಂಚಿನಷ್ಟು, ಉಪ್ಪು- ರುಚಿಗೆ ತಕ್ಕಷ್ಟು, ತೊಗರಿಬೇಳೆ- 4 ಚಮಚ, ತೆಂಗಿನಕಾಯಿ ತುರಿ- 1 ಕಪ್, ಎಣ್ಣೆ- 1/4 ಕಪ್, ಸಾಸಿವೆ- 1 ಚಮಚ, ಇಂಗು- 1/4 ಚಮಚ
ಮಾಡುವ ವಿಧಾನ- ತೊಗರಿಬೇಳೆ, ಹುಣಸೆಹಣ್ಣು, ಹಸಿಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಎಣ್ಣೆಯಲ್ಲಿ ಹುರಿದಿರಿಸಿ. ಹುರಿದ ಸಾಮಗ್ರಿಗಳಿಗೆ, ತೆಂಗಿನಕಾಯಿ ತುರಿ, ಜೀರಿಗೆ, ಉಪ್ಪು ಸೇರಿಸಿ ಚಟ್ನಿಯ ಹದಕ್ಕೆ ಅರೆದಿರಿಸಿ. ಅರೆದ ಮಿಶ್ರಣಕ್ಕೆ, ಸಾಸಿವೆ- ಇಂಗಿನ ಒಗ್ಗರಣೆ ಕೊಟ್ಟರೆ, ಕರಿಬೇವಿನ ಸೊಪ್ಪಿನ ಚಟ್ನಿ ರೆಡಿ.
ಆಮಸೋಲ್(ಕೋಕಮ್ ಚಟ್ನಿ)
ಬೇಕಾದ ಸಾಮಗ್ರಿ: ಆಮಸೋಲ್- 5-6, ಬೆಲ್ಲ- 1/2 ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಲವಂಗ- 3-4, ಏಲಕ್ಕಿ ಪುಡಿ- 1/4 ಚಮಚ
ಮಾಡುವ ವಿಧಾನ: ಆಮಸೋಲ್‌ಗಳನ್ನು ಎರಡು ಗಂಟೆ ಸಮಯ ನೀರಿನಲ್ಲಿ ನೆನೆಸಿ ಬಸಿದಿಡಿ. ಬಸಿದ ಆಮಸೋಲ್‌ಗಳಿಗೆ, ಬೆಲ್ಲ, ಏಲಕ್ಕಿ ಪುಡಿ, ಲವಂಗದ ಪುಡಿ, ಉಪ್ಪು ಸೇರಿಸಿ. ತರಿತರಿಯಾಗಿ ಅರೆದರೆ, ಸಿಹಿ- ಹುಳಿ ಮಿಶ್ರಿತ ಆಮಸೋಲ್ ಚಟ್ನಿ ತಯಾರು.
ನೆಲ್ಲಿಕಾಯಿ ಚಟ್ನಿ
ಬೇಕಾದ ಸಾಮಗ್ರಿ: ಬೀಜ ತೆಗೆದು ಕತ್ತರಿಸಿದ ನೆಲ್ಲಿಕಾಯಿ ಹೋಳುಗಳು-1 ಕಪ್, ಒಣಕೊಬ್ಬರಿ ತುರಿ- 1 ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಒಣಮೆಣಸಿನಕಾಯಿ- 7-8, ಜೀರಿಗೆ- 2 ಚಮಚ, ಕರಿಬೇವಿನ ಎಲೆಗಳು- 8-10, ಬೆಲ್ಲದ ತುರಿ- 1/4 ಕಪ್, ಎಣ್ಣೆ- 1/4 ಕಪ್, ಸಾಸಿವೆ- 1 ಚಮಚ, ಇಂಗು- 1/4 ಚಮಚ
ಮಾಡುವ ವಿಧಾನ: ನೆಲ್ಲಿಕಾಯಿ ಹೋಳುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿಡಿ. ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳು, ಒಣಕೊಬ್ಬರಿ ತುರಿಗಳನ್ನು ಬೇರೆಬೇರೆಯಾಗಿ ಹುರಿದಿಡಿ. ನೆಲ್ಲಿಕಾಯಿ ಹೋಳುಗಳಿಗೆ, ಹುರಿದ ಸಾಮಗ್ರಿಗಳು, ಜೀರಿಗೆ, ಉಪ್ಪು, ಬೆಲ್ಲದ ತುರಿ ಹಾಕಿ ನುಣ್ಣಗೆ ಅರೆದಿರಿಸಿ. ಅರೆದ ಮಿಶ್ರಣಕ್ಕೆ, ಸಾಸಿವೆ- ಇಂಗಿನ ಒಗ್ಗರಣೆ ಕೊಟ್ಟರೆ, ರುಚಿಯಾದ ನೆಲ್ಲಿಕಾಯಿ ಚಟ್ನಿ ಸವಿಯಲು ಸಿದ್ಧ.
ಜಯಶ್ರೀ ಕಾಲ್ಕುಂದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.