ಮರಣಶಯ್ಯೆಯಲ್ಲಿ ಮದುವೆ
Team Udayavani, Jan 4, 2018, 6:10 AM IST
ಹಾರ್ಟ್‌ಫೋರ್ಡ್ (ಅಮೆರಿಕ): ಪ್ರೀತಿಸಿದವನನ್ನು ಮದುವೆಯಾಗಿ ಬಾಳಿ ಬದುಕುವ ಕನಸು ಹೊತ್ತಿದ್ದಾಕೆಗೆ ಕ್ಯಾನ್ಸರ್ ಅಪ್ಪಳಿಸಿತ್ತು. ಆಸ್ಪತ್ರೆಯ ಹಾಸಿಗೆಯಲ್ಲಿ ತನ್ನ ಬದುಕಿನ ಕೊನೆಯ ದಿನಗಳನ್ನು ಎದುರಿಸುತ್ತಿದ್ದವಳನ್ನು ಆಕೆಯ ಪ್ರಿಯತಮ ಹಾಗೆ ಒಂಟಿಯಾಗಿ ಸಾಯಲು ಬಿಡಲಿಲ್ಲ. ಆಕೆ ಕೊನೆಯುಸಿರೆಳೆಯುವ 18 ಗಂಟೆ ಮೊದಲು ಆಕೆಯನ್ನು ಆಸ್ಪತ್ರೆಯಲ್ಲೇ ಮದುವೆಯಾದ. ದೇಹ ನಶ್ವರ, ಪ್ರೇಮ ಅಮರ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದ. ಡಿ.23ರಂದು ನಡೆದಿದ್ದ ಈ ಮದುವೆಯ ಫೋಟೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಈ ಘಟನೆ ನಡೆದಿರುವುದು ಹಾರ್ಟ್ ಫೋರ್ಡ್‌ನ ಸೇಂಟ್ ಫ್ರಾನ್ಸಿಸ್ ಹಾಸ್ಪಿಟರ್ ಹಾಗೂ ಮೆಡಿಕಲ್ ಸೆಂಟರ್‌ನಲ್ಲಿ. ಯುವತಿಯ ಹೆಸರು ಹೀತರ್ ಮೊಶರ್. ಈಕೆಯನ್ನು ಮದುವೆಯಾದ ಪ್ರಿಯತಮ ಡೇವಿಡ್.
ಈಸ್ಟ್ ವಿಂಡ್ಸರ್ ಪ್ರಾಂತ್ಯದವರಾದ ಈ ಇಬ್ಬರೂ 2015ರಲ್ಲಿ ನೃತ್ಯ ಶಾಲೆಯೊಂದರಲ್ಲಿ ತರಬೇತಿ ಪಡೆಯುತ್ತಿದ್ದಾಗ ಪರಿಚಯಗೊಂಡಿದ್ದರು. 2016ರಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾದರೂ ಹೇಳಿಕೊಂಡಿರಲಿಲ್ಲ. ಆದರೆ, ಧೈರ್ಯ ಮಾಡಿ ಅದೇ ವರ್ಷ ಡಿ. 23ರಂದು ಆಕೆಯ ಮುಂದೆ ಪ್ರೇಮ ನಿವೇದಿಸಿಕೊಂಡಿದ್ದರು ಡೇವಿಡ್. ಆದರೆ, ದುರದೃಷ್ಟವಶಾತ್ ಅದೇ ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅನೇಕ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗಳಲ್ಲೇ ಮತ್ತೂಂದು ವರ್ಷ ಕಳೆದು ಹೋಯಿತು.
ಉಳಿಯುವುದು ಅಸಾಧ್ಯ ಎನ್ನುವಾಗ ಡಿ. 27ರಂದು ಆಕೆಯನ್ನು ವರಿಸಲು ಡೇವಿಡ್ ಬಲವಾಗಿ ನಿರ್ಧರಿಸಿದರು. ಆದರೆ, ವೈದ್ಯರು ಮದುವೆ ಬೇಗ ಆಗಲೆಂದು ಸಲಹೆ ನೀಡಿದ್ದರು. ಹಾಗಾಗಿ, ಡಿ. 23ರಂದು ಡೇವಿಡ್ ಆಕೆಯನ್ನು ವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.