ಎಂಜಿಆರ್-ಶಿವಾಜಿ ಜೋಡಿಯಂತೆ ಆಗುವರೇ ಕಮಲ್-ರಜನಿ ಕಾಂತ್?
Team Udayavani, Jan 4, 2018, 6:55 AM IST
ಚೆನ್ನೈ: ಸುಮಾರು 40 ವರ್ಷಗಳ ನಂತರ, ತಮಿಳುನಾಡು ರಾಜಕೀಯ ರಂಗ ಮತ್ತೂಂದು “ಘಟಾನುಘಟಿಗಳ ಮಹಾ ಸಮರ’ಕ್ಕೆ ರಣಾಂಗಣವಾಗಲಿದೆ. ಕೆಲವೇ ತಿಂಗಳುಗಳ ಹಿಂದಷ್ಟೆ, ಅಲ್ಲಿನ ಸಿನಿ ಸೂಪರ್ ಸ್ಟಾರ್ ಕಮಲ ಹಾಸನ್ ಅವರು ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದರು. ಇದೀಗ ಕೆಲ ದಿನಗಳ ಹಿಂದಷ್ಟೆ ಮತ್ತೂಬ್ಬ ಸೂಪರ್ ಸ್ಟಾರ್ ಹಾಗೂ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ರಜನಿಕಾಂತ್ ರಾಜಕೀಯ ಪ್ರವೇಶ ಮಾಡಿದ್ದಾರೆ. ಇದು, 40 ವರ್ಷಗಳ ಹಿಂದೆ ತಮಿಳುನಾಡು ರಾಜಕೀಯದಲ್ಲಿ ನಡೆದಿದ್ದ ಇಬ್ಬರು ಘಟಾನುಘಟಿ ಸಿನಿ ಸ್ಟಾರ್‌ಗಳ ರಾಜಕೀಯ ಸಮರವನ್ನು ನೆನಪಿಸುತ್ತಿದೆ.
70ರ ದಶಕದಲ್ಲಿ ಅಂದಿನ ತಮಿಳು ಸಿನಿ ರಂಗದ ಅನಭಿಷಿಕ್ತ ದೊರೆಗಳಾಗಿದ್ದ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಹಾಗೂ ಶಿವಾಜಿ ಗಣೇಶನ್, ರಾಜಕೀಯದಲ್ಲಿ ರೇಸ್‌ಗೆ ಇಳಿದಿದ್ದರು. ಈ ರೇಸ್‌ನಲ್ಲಿ ಎಂಜಿಆರ್ ಗೆದ್ದರೆ, ಶಿವಾಜಿ ಅರ್ಧದಲ್ಲೇ ಸ್ಪರ್ಧೆಯಿಂದ ಹೊರನಡೆದರು. ಇದಕ್ಕೆ ಕಾರಣ, ಸಿನಿರಂಗದಲ್ಲಿ ಅವರನ್ನು ಆರಾಧಿಸಿದ ಜನ ರಾಜಕೀಯ ವ್ಯಕ್ತಿಯಾಗಿ ನೋಡಲು ಇಚ್ಛಿಸದಿದ್ದದು.
ಅದು ಆ ಕಾಲ. ಇದು ಈ ಕಾಲ. ಆಗ ಎಂಜಿಆರ್‌ರನ್ನು ಅಂದಿನ ಜನ ಬೆಂಬಲಿಸಿದ ಹಾಗೆ ಇಂದಿನ ಜನ ರಜನಿಕಾಂತ್ ಅವರನ್ನು ಬೆಂಬಲಿಸುವರೇ ಎಂಬುದೇ ಈಗ ಎಲ್ಲೆಡೆ ಚರ್ಚಿತವಾಗುತ್ತಿರುವ ವಿಚಾರ. ಇದಕ್ಕೆ, ಕೆಲ ಮಾಧ್ಯಮಗಳು ನಡೆಸಿದ ಅಭಿಪ್ರಾಯ ಸಂಗ್ರಹಣೆಯಲ್ಲಿ ಸಾಹಿತಿಗಳು ಹಾಗೂ ಇತರ ಕ್ಷೇತ್ರಗಳ ತಜ್ಞರು ರಜನಿಗೆ ರಾಜಕೀಯ ಸವಾಲಾದರೂ ಅವರ ಈವರೆಗಿನ ದಾನ-ಧರ್ಮ, ನೇರ ನಡೆ ನುಡಿಯ ವ್ಯಕ್ತಿತ್ವ, ವಿವಾದ ರಹಿತ- ಸರಳ ಜೀವನ, ಎಲ್ಲಕ್ಕೂ ಮಿಗಿಲಾಗಿ ಬಹುದೊಡ್ಡ ಅಭಿಮಾನಿ ಬಳಗ ಯಶಸ್ಸು ಕೊಡಲಿದೆ ಎಂದಿದ್ದಾರೆ. ಇದೇ ಯಶಸ್ಸು ಕಮಲ್‌ಗೆ ಸಿಗುವುದು ಅನುಮಾನ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.