ಶ್ರವಣಬೆಳಗೊಳದ ಭಿತ್ತಿಚಿತ್ರಗಳ ವಿಶೇಷ ಕ್ಯಾಲೆಂಡರ್ ಬಿಡುಗಡೆ
Team Udayavani, Jan 4, 2018, 6:15 AM IST
ಬೆಂಗಳೂರು: “ಪರಂಪರೆಯ ಸ್ವರ್ಶ ಇಲ್ಲದ ಕಲೆ ಮತ್ತು ಕಲಾವಿದನಿಂದ ಹೊಸತನದ ಸೃಷ್ಟಿ ಅಸಾಧ್ಯ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಿಸಿದರು.
ನಗರದ ನಯನ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ಸವಿನೆನಪಿಗಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಹೊರ ತಂದಿರುವ ಶ್ರವಣ ಬೆಳಗೊಳದ ಭಿತ್ತಿಚಿತ್ರಗಳ ವಿಶೇಷ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಲಾವಿದನಿಗೆ ಕಲೆಯ ಜತೆಗೆ ಬಡತನವೂ ಅಂಟಿ ಕೊಂಡು ಬಂದಿರುತ್ತದೆ.
ಕಲೆಯನ್ನು ನಿಭಾಯಿಸುವಂತೆ ಬಡತನ ವನ್ನು ನಿಭಾಯಿಸಿ, ಸ್ವಾಭಿಮಾನದಿಂದ ಬದುಕುತ್ತಾನೆ ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ, ರಿಜಿಸ್ಟ್ರಾರ್ ಎಚ್.ವಿ. ಇಂದ್ರಮ್ಮ, ಸದಸ್ಯ ಗಣಪತಿ ಎಸ್. ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.
ಕ್ಯಾಲೆಂಡರ್ ಕುರಿತು: ಮಹಾಮಸ್ತಕಾಭಿಷೇಕ ಮಹೋತ್ಸವ- 2018ರ ಸವಿನೆನಪಿಗಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಶ್ರವಣಬೆಳಗೊಳದ ಭಿತ್ತಿಚಿತ್ರ ಗಳ ವಿಶೇಷ ಕ್ಯಾಲೆಂಡರ್ ಹೊರತಂದಿದೆ. ಬಾಹುಬಲಿಯ ಪರಿಚಯದ ಜತೆಗೆ ಮಹಾಮಸ್ತಕಾಭಿಷೇಕದ ಚಿತ್ರಗಳು, ಇತಿಹಾಸದ ಪರಿಕಲ್ಪನೆ ಸಹಿತವಾಗಿ ಕ್ಯಾಲೆಂಡರ್‌ನ ರಚನೆ ಮಾಡಲಾಗಿದೆ. ಮೊದಲ ಪುಟದಲ್ಲಿ ಬಾಹುಬಲಿ ಚಿತ್ರ ಮತ್ತು ಇತಿಹಾಸದ ಬಗ್ಗೆ ವಿವರಣೆ ನೀಡ ಲಾ ಗಿದೆ. ಉಳಿದ 12 ಪುಟದಲ್ಲಿ ಮಹಾಮಸ್ತಕಾಭಿಷೇಕದ ಚಿತ್ರಗಳನ್ನು ಜೋಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.