ಮತ್ತೆ ಚೀನದಿಂದ ಸೀಮೋಲ್ಲಂಘನೆ?


Team Udayavani, Jan 4, 2018, 6:55 AM IST

china-seemolangane.jpg

ಬೀಜಿಂಗ್‌/ಹೊಸದಿಲ್ಲಿ: ಅರುಣಾಚಲ ಪ್ರದೇಶವನ್ನು ಭಾರತಕ್ಕೆ ಸೇರಿರುವ ರಾಜ್ಯ ಎಂದು ಅಂಗೀಕರಿಸಿಲ್ಲ ಎಂದು ಚೀನ ಹೇಳಿರುವಂತೆಯೇ, ಅದು ಡೊಕ್ಲಾಮ್‌ ಮಾದರಿ ಉದ್ಧಟತನ ಮೆರೆದ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ತಿಂಗಳ 22ರಂದು ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಿಂದ 200 ಮೀಟರ್‌ ದೂರದ ವರೆಗೆ ರಸ್ತೆ ನಿರ್ಮಾಣ ಯಂತ್ರಗಳೊಂದಿಗೆ ಅತಿಕ್ರಮ ಪ್ರವೇಶ ಮಾಡಿರುವ ಪ್ರಸಂಗ ಈಗ ಬೆಳಕಿಗೆ ಬಂದಿದೆ.  ಆದರೆ, ಈ ಬಗ್ಗೆ ಭಾರತೀಯ ಸೇನೆ ಸ್ಪಷ್ಟನೆ ನೀಡಿಲ್ಲ. ಕುತೂಹಲದ ವಿಚಾರ ವೆಂದರೆ, ಡೊಕ್ಲಾಮ್‌ ಪ್ರಸಂಗದ ನಂತರ, ಮೊದಲ ಬಾರಿಗೆ ಡಿ. 22ರಂದು ಭಾರತದ ರಾಷ್ಟ್ರೀ ಯ ಭದ್ರತಾ ಸಲಹೆಗಾರ ಅಜಿತ್‌ ಧೋ ವಲ್‌ ಹಾಗೂ ಚೀನದ ರಾಜತಾಂತ್ರಿಕ ಅಧಿಕಾರಿ ಯಂಗ್‌ ಜೈಚಿ ನಡುವೆ ನವದೆಹಲಿ ಯಲ್ಲಿ ನಡೆದಿದ್ದ ಮಾತುಕತೆ ವೇಳೆಯಲ್ಲೇ  ಅತ್ತ ಅರು ಣಾಚಲ ಪ್ರದೇಶದಲ್ಲಿ ಗಡಿ ಉಲ್ಲಂಘನೆ ಯಾಗಿದೆ ಎಂದು ಅಧಿಕೃತ ಮೂಲಗಳೇ ತಿಳಿಸಿವೆ. 

ಎಲ್ಲಿ ಬಂದಿದ್ದರು?: ಅರುಣಾಚಲ ಪ್ರದೇಶದ ಬಿಶಿಂಗ್‌ ಹಳ್ಳಿ ಚೀನ ಗಡಿ ಭಾಗಕ್ಕೆ ಹತ್ತಿರದ ಲ್ಲಿರುವ ಭಾರತದ ಕೊನೆಯ ಹಳ್ಳಿ. ಇಲ್ಲಿಂದ ಭಾರತದ ಕಡೆಗೆ ಬರಬೇಕಾದರೆ ಸಿಗುವ ಮತ್ತೂಂ ದು ಹಳ್ಳಿ ಟ್ಯುಟಿಂಗ್‌. ಅಲ್ಲಿಂದ ಮುಂದಕ್ಕೆ ಪೆಕಾಂಗ್‌ ಹಾಗೂ ಸಿಂಗಿಂಗ್‌ ಎಂಬ ಹಳ್ಳಿಗಳು ಸಿಗುತ್ತವೆ. ಈ ಎಲ್ಲವೂ ಅಪ್ಪರ್‌ ಸಿಯಾಂಗ್‌ ಜಿಲ್ಲೆಗೆ ಸೇರಿವೆ.

ಹೆಸರನ್ನೇಳಲು ಇಚ್ಛಿಸದ ಸ್ಥಳೀಯರು ನೀಡಿರುವ ಮಾಹಿತಿ ಉಲ್ಲೇಖೀಸಿರುವ ಪಿಟಿಐ ವರದಿಯ ಪ್ರಕಾರ, ಚೀನದ ಸೇನೆ ಭಾರತದ ಗಡಿ ದಾಟಿ ಸುಮಾರು 200 ಮೀಟರ್‌ಗಳಷ್ಟು ದೂರದವರೆಗೆ ನಡೆದು ಬಂದಿದೆ. ಇನ್ನೇನು ಬಿಶಿಂಗ್‌ ಹಳ್ಳಿಯ ಸಮೀಪಕ್ಕೆ  ಬರುವ ಹೊತ್ತಿಗೆ ಭಾರತೀಯ ಸೇನೆ ಅವರನ್ನು ತಡೆದು ನಿಲ್ಲಿಸಿ, ಅವರು ತಂದಿದ್ದ ಜಿಸಿಬಿ ಮಾದರಿಯ ಯಂತ್ರ ಗಳು ಸೇರಿದಂತೆ ರಸ್ತೆ ನಿರ್ಮಾಣದ ಮತ್ತಷ್ಟು ಯಂತ್ರೋಪಕರಣಗಳನ್ನು ವಶಪಡಿಸಿಕೊಂಡು ಕಳುಹಿಸಿದೆ. ಆದರೆ,ಇದೇ ಭಾಗದ ಜನರು ನೀಡಿರುವ ಮತ್ತೂಂದು ಮಾಹಿತಿ ಯನ್ನೂ ಉಲ್ಲೇಖೀಸಿರುವ ಪಿಟಿಐ, ಚೀನ ಸೈನಿಕರು ಬಿಶಿಂಗ್‌ ಹಳ್ಳಿಯನ್ನೂ ದಾಟಿ ಗೆಲಿಂಗ್‌ ಹಳ್ಳಿಯವರೆಗೂ ಬಂದಿದ್ದಾಗಿ ಹೇಳಿದೆ. 

ಸೇನೆಯ ಮೌನ: ಈಶಾನ್ಯ ವಲಯದಲ್ಲಿನ ಸೇನಾ ಧಿ ಕಾರಿಗಳು ಈ ಪ್ರಕರಣವನ್ನು ಒಪ್ಪಿ ಕೊಂಡಿ  ಯೂ ಇಲ್ಲ ಅಥವಾ ನಿರಾಕರಿಸಿಯೂ ಇಲ್ಲ ಎಂದು ಪಿಟಿಐ ಹೇಳಿದೆ.  ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಪ್ಪರ್‌ ಸಿಯಾಂಗ್‌ ಜಿಲ್ಲೆಯ ಜಿಲ್ಲಾಧಿಕಾರಿ ದುಲಿ ಕಾಮುxಕ್‌, “ಗಡಿಯಲ್ಲಿ ಚೀನ ಸೇನೆಯ ಅತಿಕ್ರಮಣದ ಬಗ್ಗೆ ನಮ್ಮ ಅಧಿಕಾರಿಗಳಿಂದ ಯಾವುದೇ ದೂರು ಬಂದಿಲ್ಲ. ಸೇನೆಯಿಂದಲೂ  ಮಾಹಿತಿ ಇಲ್ಲ’ ಎಂದಿದ್ದಾರೆ.

ಅರುಣಾಚಲವನ್ನು ಒಪ್ಪಿಕೊಂಡಿಲ್ಲ: ಚೀನ
ಚೀನ ಸೈನಿಕರಿಂದ ಅರುಣಾಚಲ ಪ್ರದೇಶದಲ್ಲಿ ಗಡಿ ಉಲ್ಲಂಘನೆಯಾದ ಬಗ್ಗೆ ಭಾರತೀಯ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌, “”ಅರುಣಾಚಲದ ಅಸ್ತಿತ್ವವನ್ನು ಚೀನ ಎಂದಿಗೂ ಒಪ್ಪಿಕೊಂಡಿಲ್ಲ. ಹಾಗಾಗಿ, ಇಲ್ಲಿನ ಗಡಿ ವಿಚಾರದಲ್ಲಿ ನಮ್ಮ ನಿಲುವು ಯಾವತ್ತಿಗೂ ಒಂದೇ ಆಗಿದೆ. ಆದರೆ, ಅರುಣಾಚಲ ಎಂಬ ಪ್ರದೇಶದಲ್ಲಿ ಗಡಿ ಉಲ್ಲಂಘನೆಯಾಗಿದೆ ಎಂಬ ವಿಚಾರ ನನಗೆ ಗೊತ್ತಿಲ್ಲ” ಎಂದಿದ್ದಾರೆ ಎಂದು ಪಿಟಿಐ ಹೇಳಿದೆ. ಅತ್ತ, ಇಂಡಿಯಾ ಟಿವಿ ತನ್ನದೇ ಸುದ್ದಿ ಮೂಲಗಳನ್ನು ಉಲ್ಲೇಖೀಸಿ ಮಾಡಿರುವ ವರದಿಯಲ್ಲಿ, ಚೀನ ಈ ಗಡಿ ಉಲ್ಲಂಘನೆ ಒಪ್ಪಿಕೊಂಡಿದೆಯಾದರೂ ರಸ್ತೆ ನಿರ್ಮಾಣ ಯಂತ್ರಗಳನ್ನು ಕೊಂಡೊಯ್ದಿರಲಿಲ್ಲ ಎಂದಿರುವುದಾಗಿ ತಿಳಿಸಿದೆ. 

ಟಾಪ್ ನ್ಯೂಸ್

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

school

KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.