ಅದ್ಧೂರಿ ಬನಶಂಕರಿದೇವಿ ರಥೋತ್ಸವ
Team Udayavani, Jan 4, 2018, 10:46 AM IST
ಕಾಳಗಿ: ಗ್ರಾಮದ ಆದಿಶಕ್ತಿ, ಜಗನ್ಮಾತೆ ಬನಶಂಕರಿದೇವಿ ಜಾತ್ರಾಮಹೋತ್ಸವ ಅಂಗವಾಗಿ ಮಂಗಳವಾರ ರಾತ್ರಿ ಅಪಾರ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು.
ರಥೋತ್ಸವದ ನಿಮಿತ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ವೇ.ಮೂ.
ಶಂಕ್ರಯ್ಯಸ್ವಾಮಿ ದೇವಾಂಗ ಮಠ ನೇತೃತ್ವದಲ್ಲಿ ಬನಶಂಕರಿದೇವಿ ಮೂರ್ತಿಗೆ ಮಹಾ ರುದ್ರಾಭಿಷೇಕ, ದಾರಾಭಿಷೇಕ ಜರುಗಿತು.
ನಂತರ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವಿಗೆ ವಿಶೇಷ ನೈವೇದ್ಯ ಅರ್ಪಿಸಿ ಪೂಜೆ ಮಾಡಿದರು. ದೇವಸ್ಥಾನದ ಅಂಗಳದಲ್ಲಿ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು.
ಸಂಜೆ ಗ್ರಾಮದ ಪ್ರಮುಖ ಮುಖಂಡರೊಂದಿಗೆ ಡೊಳ್ಳು, ಹಲಗೆ, ಭಾಜಾ-ಭಜಂತ್ರಿ, ವಾದ್ಯ ಮೇಳಗಳೊಂದಿಗೆ ಭಜನೆ ಮಾಡುತ್ತಾ ದೇವಾಂಗ ಮಠದಿಂದ ಕುಂಭ, ಕಳಶ ಹಾಗೂ ಪುರವಂತರನ್ನು ಕರೆದುಕೊಂಡು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು.
ತದನಂತರ ಹಿರೇಮಠದ ಪೂಜ್ಯ ಶಿವಬಸವ ಶಿವಾಚಾರ್ಯರು, ಡೊಣ್ಣೂರಿನ ಶಿವಾನಂದ ದೇವರು ನೇತೃತ್ವದಲ್ಲಿ ಅಲಂಕೃತ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಅಪಾರ ಭಕ್ತ ಸಮೂಹದ ಮಧ್ಯೆ ರಥವು ಸ್ಥಳ ಬಿಡುತ್ತಿದ್ದಂತೆ ಬನಶಂಕರಿದೇವಿ ಮಾತಾಕೀ ಜೈ ಎನ್ನುವ ಜಯಘೋಷಣೆ ಕೂಗುತ್ತಾ ರಥಕ್ಕೆ ಉತ್ತತ್ತಿ, ನಾರು, ಬಾಳೆಹಣ್ಣು, ಹೂ, ನಾಣ್ಯಗಳನ್ನೆಸೆದು ಭಕ್ತಿ ಸಮರ್ಪಿಸಿದರು.
ಬನಶಂಕರಿ ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಬಾಲಚಂದ್ರ ಕಾಂತಿ, ಅಧ್ಯಕ್ಷ ವೀರೇಶ ಸಿಂಗಶೆಟ್ಟಿ, ನಾಗಣ್ಣಾ ಟೆಂಗಳಿಕರ್, ರಾಮಣ್ಣಾ ಕಣ್ಣಿ, ಗಣಪತರಾವ್ ಸಿಂಗಶೆಟ್ಟಿ, ಮುಖಂಡರಾದ ಶಿವಶರಣಪ್ಪ ಕಮಲಾಪುರ, ಶರಣಗೌಡ ಪೊಲೀಸ ಪಾಟೀಲ, ಜೈಶಂಕರ ಮಾಲಿಪಾಟೀಲ, ಶಿವಶರಣಪ್ಪ ಗುತ್ತೇದಾರ, ಪಾಂಡುರಂಗ ಕಣ್ಣಿ, ರವಿ ಅಲ್ಲಾಪುರ, ಅಣವೀರಪ್ಪ ಸಿಂಗಶೆಟ್ಟಿ, ವೀರಣ್ಣ ಟಿಂಗಳಿ, ನಾಗರಾಜ ಟೆಂಗಳಿಕರ್, ಬಸವರಾಜ ಸಿಂಗಶೆಟ್ಟಿ, ವಾಸುದೇವ ಕಣ್ಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.