ಫ‌ಲಿಸದ ಮೊಸಳೆಯ ಉಪಾಯ


Team Udayavani, Jan 4, 2018, 11:11 AM IST

04-14.jpg

ಕಾಡಿನಲ್ಲಿ ಆಳವಾದ ನದಿಯೊಂದಿತ್ತು. ಆ ನದಿಯಲ್ಲಿ ಮೊಸಳೆಯೊಂದು ವಾಸವಾಗಿತ್ತು. ಅಲ್ಲಿಗೆ ನೀರು ಕುಡಿಯಲು ಬರುವ ಪ್ರಾಣಿಗಳನ್ನು  ಹೊಂಚು ಹಾಕಿ ಕಬಳಿಸುತ್ತಿತ್ತು. ಒಮ್ಮೆ ಮೊಸಳೆಯ ದುರಾದೃಷ್ಟಕ್ಕೆ ಎಂಟು ದಿನಗಳಾದರೂ ಒಂದು ಪ್ರಾಣಿಯೂ ನದಿಯತ್ತ ಸುಳಿಯಲಿಲ್ಲ. ಹಸಿವು ಹೆಚ್ಚಾಗಿ ಮೊಸಳೆ ತತ್ತರಿಸಿ ಹೋಯಿತು. ಒಂದು ಸಣ್ಣ ಮಾಂಸದ ತುಂಡಾದರೂ ಸಿಕ್ಕರೆ ಸಾಕು ಎಂದು ಆ ದಡದಿಂದ ಈ ದಡಕ್ಕೆ, ಈ ದಡದಿಂದ ಆ ದಡಕ್ಕೆ ಅಲೆದಾಡಿತು. ಅಷ್ಟರಲ್ಲಿ ಅಲ್ಲೇ ಹಾರಾಡುತ್ತಿದ್ದ ಕೊಕ್ಕರೆ ಅದರ ಕಣ್ಣಿಗೆ ಬಿತ್ತು. ಉಪಾಯ ಮಾಡಿ ಅದನ್ನು ಕಬಳಿಸಬೇಕೆಂದು ನಿರ್ಧರಿಸಿ ದಂಡೆಗೆ ಬಂದಿತು. ಕೊಕ್ಕರೆಯನ್ನು ಕರೆದು “ಗೆಳೆಯಾ, ನನ್ನ ದವಡೆ ಹಲ್ಲುಗಳಲ್ಲಿ ಆಹಾರದ ತುಂಡು ಸಿಕ್ಕಿಹಾಕಿಕೊಂಡಿದೆ. ಎಷ್ಟು ಪ್ರಯತ್ನಿಸಿದರೂ ಗಂಟಲಿಗೂ ಇಳಿಯದೇ ಹೊರಗೂ ಬಾರದೆ ಕಿರಿಕಿರಿಯೆನಿಸುತ್ತಿದೆ. ಅದನ್ನು ನಿನ್ನ ಉದ್ದನೆಯ ಕೊಕ್ಕಿನಿಂದ ಹೆಕ್ಕಿ ತಿಂದುಬಿಡು. ನಿನ್ನ ಹೊಟ್ಟೆಯೂ ತುಂಬುತ್ತದೆ; ನನ್ನ ಸಮಸ್ಯೆಯೂ ಬಗೆಹರಿಯುತ್ತದೆ. ದಯವಿಟ್ಟು ಸಹಾಯ ಮಾಡುವೆಯಾ?’ ಎಂದು ಪ್ರಾರ್ಥಿಸಿತು. 

ಕೊಕ್ಕರೆ ಸ್ವಲ್ಪ ಯೋಚಿಸಿ, “ಖಂಡಿತವಾಗಿಯೂ ನಿನಗೆ ಸಹಾಯ ಮಾಡುವ ಮನಸ್ಸಿದೆ. ಆದರೆ, ನನಗೆ ಎರಡು ದಿನಗಳಿಂದ ಕೊಕ್ಕಿನಲ್ಲಿ ಸಿಕ್ಕಾಪಟ್ಟೆ ನೋವಿದೆ. ಆದ್ದರಿಂದ ಬೇರೆ ಉಪಕರಣ ಬಳಸಿ ನಿನ್ನ ಬಾಯಿಯನ್ನು ಸ್ವತ್ಛಗೊಳಿಸುವೆ’ ಎಂದಿತು. ಹೇಗಾದರೂ ಸರಿ ಕೊಕ್ಕರೆ ತನ್ನ ಹತ್ತಿರ ಬಂದರೆ ಸಾಕೆಂದು ಮೊಸಳೆ ಕೊಕ್ಕರೆಯ ನಿಬಂಧನೆಗೆ ಒಪ್ಪಿತು.

ಕೊಕ್ಕರೆ ಮೊಸಳೆಯ ಬಳಿ ಬಂದು ಬಾಯಿ ಅಗಲಿಸಲು ಹೇಳಿತು. ಒಳಗೊಳಗೇ ನಗುತ್ತಾ ಮೊಸಳೆ ಬಾಯಿ ತೆರೆಯಿತು. ಕೊಕ್ಕರೆ ಬಾಯಿ ಹತ್ತಿರ ಬಂದ ಕೂಡಲೆ ಕಬಳಿಸಬೇಕೆಂದು ಮನಸ್ಸಿನಲ್ಲಿ ಲೆಕ್ಕ ಹಾಕಿತು. ಕೊಕ್ಕರೆ, ಮೊಸಳೆಗೆ ಇನ್ನೂ ದೊಡ್ಡದಾಗಿ ಬಾಯಿ ಅಗಲಿಸಲು ಹೇಳಿತು. ಮೊಸಳೆ ಕಷ್ಟಪಟ್ಟು ಬಾಯಿ ಹಿಗ್ಗಿಸಿದ ತಕ್ಷಣವೇ ಕೊಕ್ಕರೆ ತನ್ನೊಡನೆ ತಂದಿದ್ದ ಮರದ ಕೋಲನ್ನು ಮೊಸಳೆಯ ಬಾಯೊಳಗೆ ಉದ್ದಕ್ಕೆ ನಿಲ್ಲಿಸಿತು. ಈಗ ಮೊಸಳೆ ಏನು ಮಾಡಿದರೂ ಬಾಯಿ ಮುಚ್ಚಲು ಸಾಧ್ಯವಿರಲಿಲ್ಲ. ಮೊಸಳೆಯ ಹಲ್ಲುಗಳನ್ನು ಶುದ್ಧಗೊಳಿಸಿದ ಬಳಿಕ ಬುದ್ಧಿವಂತ ಕೊಕ್ಕರೆ ಕೋಲಿನೊಂದಿಗೆ ಹಾರಿ ಹೋಯಿತು. ಬೇಸ್ತು ಬಿದ್ದ ಮೊಸಳೆ ಹಾರಿ ಹೋಗುತ್ತಿದ್ದ ಕೊಕ್ಕರೆಯನ್ನೇ ಮಿಕ ಮಿಕ ನೋಡಿತು.

ಅಶೋಕ ವಿ ಬಳ್ಳಾ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.