ನಮ್ಮೂರು ಈಗ ನಶೆಯ ಅಡ್ಡೆ!
Team Udayavani, Jan 4, 2018, 12:00 PM IST
ಬೆಂಗಳೂರು: ಹೊಟ್ಟೆಪಾಡಿಗೆಂದು ದೂರದೂರು ಮತ್ತು ವಿದೇಶಗಳಿಂದ ಬಂದವರಿಗೆ ಆಶ್ರಯ ನೀಡಿದ ಬೆಂಗಳೂರು ಮಹಾನಗರ ಈಗ ಅದೇ ಹೊರಗಿನವರಿಂದ ಅಪಖ್ಯಾತಿಗೆ ತುತ್ತಾಗಿದೆ. ನಗರದಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆ ಅವ್ಯಾಹತವಾಗಿ ಹೆಚ್ಚುತ್ತಿದ್ದು, ಇದರಲ್ಲಿ ಭಾಗಿಯಾಗಿರುವ ಬಹುತೇಕರು ಹೊರ ರಾಜ್ಯ ಮತ್ತು ವಿದೇಶಿಗರು ಎಂಬ ಅಂಶ ಹೊರಬಿದ್ದಿದೆ.
ಕೇವಲ ಮೂರು ವರ್ಷ ಅವಧಿಯಲ್ಲಿ (2015ರಿಂದ 20017) ನಗರದಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆ ಐದು ಪಟ್ಟು ಹೆಚ್ಚಾಗಿದೆ. ಇದು ನಗರ ಪೊಲೀಸರು ಹಾಗೂ ಎನ್‌ಸಿಬಿಯ (ಕೇಂದ್ರ ಮಾದಕ ವಸ್ತು ನಿಯಂತ್ರಣ ಘಟಕ) ನಿದ್ದೆಗೆಡಿಸಿದೆ.
ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ 2015ರಲ್ಲಿ 69 ಪ್ರಕರಣ ದಾಖಲಾಗಿದ್ದವು. 2016ರಲ್ಲಿ ಈ ಸಂಖ್ಯೆ 128ಕ್ಕೇರಿದ್ದರೆ, 2017ರಲ್ಲಿ 342 ಪ್ರಕರಣ ದಾಖಲಾಗಿದೆ. ಇದೇ ವೇಳೆ ಎನ್‌ಸಿಬಿ ಅಧಿಕಾರಿಗಳು 2016ರಲ್ಲಿ 13 ಪ್ರಕರಣ ಹಾಗೂ 2017ರಲ್ಲಿ 15 ಪ್ರಕರಣ ದಾಖಲಿಸಿದ್ದಾರೆ.
ಆತಂಕದ ಸಂಗತಿ ಏನೆಂದರೆ ಈ ದಂಧೆಯಲ್ಲಿ ತೊಡಗಿದವರಲ್ಲಿ ವಿದೇಶಿ ಪ್ರಜೆಗಳು ಮತ್ತು ಉತ್ತರ ಭಾರತ ಮೂಲದವರು. ಇವರ ಜತೆಗೆ ವಿದ್ಯಾರ್ಥಿಗಳೇ ಮಾದಕ ವಸ್ತು ಪೂರೈಸುವ ಪೆಡ್ಲರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಾದಕ ಲೋಕ ನಿಯಂತ್ರಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರಿಗೆ ಅಂಟಿಕೊಳ್ಳುತ್ತಿರುವ “ಡ್ರಗ್ಸ್ ಯಾರ್ಡ್’ ಎಂಬ ಹಣೆಪಟ್ಟಿ ಕಳಚಲು ನಗರ ಪೊಲೀಸರು ಟೊಂಕಕಟ್ಟಿ ನಿಂತಿದ್ದು, ಹೊಸ ಮಾದರಿಯಲ್ಲಿ ಕಾರ್ಯಾಚರಣೆಗಿಳಿದಿದ್ದಾರೆ. ಹಿಂದೆ ಬಾತ್ಮೀದಾರರ ಮಾಹಿತಿಯನ್ನಾಧರಿಸಿ ದಾಳಿ ನಡೆಸುತ್ತಿದ್ದ ಅಧಿಕಾರಿಗಳು,
ಇದೀಗ ಮಾದಕ ವ್ಯಸನಿಗಳಿಗೆ ಆಪ್ತ ಸಮಾಲೋಚನೆ ಕೊಡಿಸಿ ಅವರ ಹೇಳಿಕೆಯನ್ನಾಧರಿಸಿ ಮಧ್ಯವರ್ತಿಗಳ ಮನೆಗಳಿಗೆ ದಾಳಿ ನಡೆಸಿ ಬಂಧಿಸುವ ಕೆಲಸ ಆರಂಭಿಸಿದ್ದಾರೆ. ಹೀಗಾಗಿ ದಾಖಲಾದ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಾದಕ ವಸ್ತು ಬರುವುದು ಹೀಗೆ: ಒಡಿಶಾ, ಅಸ್ಸಾಂ, ಆಂಧ್ರಪ್ರದೇಶ ಸೇರಿದಂತೆ ಕೆಲ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಾಗಿ ಗಾಂಜಾ ಬೆಳೆಯುತ್ತಾರೆ. ಅವುಗಳನ್ನು ಕೋಲಾರ, ಚಿಕ್ಕಬಳ್ಳಾಪುರ ಮೂಲಕ ಹೊಸಕೋಟೆ ಮಾರ್ಗವಾಗಿ ನಗರ ತಲುಪಿಸುತ್ತಿದ್ದು, ಉತ್ತರ ಭಾರತದ ಮೂಲದವರು ಈ ದಂಧೆಯಲ್ಲಿ ತೊಡಗಿದ್ದಾರೆ. ಇವರಿಗೆ ಸ್ಥಳೀಯರೂ ಸಹಕಾರ ನೀಡುತ್ತಿದ್ದಾರೆ.
ಇನ್ನು ಐಷಾರಾಮಿ ಮಂದಿ ಬಳಸುವ ಕೊಕೇನ್, ಹೆರಾಯಿನ್ ಹಾಗೂ ಇತರೆ ಮಾದಕ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡು ದೆಹಲಿ, ಮುಂಬೈ ಮಾರ್ಗವಾಗಿ ನಗರಕ್ಕೆ ಪೂರೈಸಲಾಗುತ್ತದೆ. ನಗರದಲ್ಲಿರುವ ವಿದೇಶಿ ಪ್ರಜೆಗಳು ಅಕ್ರಮವಾಗಿ ಆನ್‌ಲೈನ್ ಹಾಗೂ ನೇರವಾಗಿ ಸಣ್ಣ-ಸಣ್ಣ ಪ್ಯಾಕೆಟ್‌ಗಳ ಮೂಲಕ ಮಾದಕ ವ್ಯಸನಿಗಳಿಗೆ ಪೂರೈಸುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಇತ್ತೀಚೆಗೆ 320 ಕೆ.ಜಿ. ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿಗೆ ಮುಂಬೈ, ಗೋವಾ, ಚೆನ್ನೈ ಹಾಗೂ ವೈಜಾಗ್ ಮೂಲಕ ಮಾದಕ ವಸ್ತು ಪೂರೈಕೆಯಾಗುತ್ತದೆ. ಗಾಂಜಾ, ಚರಸ್ ಹೊರತು ಪಡಿಸಿದರೆ ಕೊಕೇನ್, ಎಲ್‌ಎಸ್‌ಡಿ, ಬ್ರೌನ್‌ಶುಗರ್, ಎಂಡಿಎಂ ಆಪಾ^ನಿಸ್ತಾನ, ಪಾಕಿಸ್ತಾನ ಇರಾನ್, (ಗೋಲ್ಡನ್ ಕ್ರೆಸೆಂಟ್) ಹಾಗೂ ಮ್ಯಾನ್ಮಾರ್, ಥೈಲ್ಯಾಂಡ್, ಲಾವೋಸ್ (ಗ್ಲೋಲ್ಡನ್ ಟ್ರೈಯಾಗಲ್)ಗಳಿಂದ ಜಲ ಮತ್ತು ವಾಯು ಮಾರ್ಗದ ಮೂಲಕ ದೇಶಕ್ಕೆ ಬರುತ್ತವೆ. ನಂತರ ರಸ್ತೆ ಮಾರ್ಗದ ಮೂಲಕ ಪ್ರಮುಖ ನಗರಗಳಿಗೆ ತಲುಪುತ್ತವೆ.
ಇದಕ್ಕಾಗಿಯೇ ನಗರದಲ್ಲಿ ಕೆಲ ವಿದೇಶಿಯರು ಒಂದು ಸಣ್ಣ ಗುಂಪು ಕಟ್ಟಿಕೊಂಡು ಈ ದಂಧೆಯನ್ನು ನಡೆಸುತ್ತಿದ್ದಾರೆ. ಲೋಕಲ್ ಗಾಂಜಾ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮೂಲಕ ರಾಜ್ಯ ಪ್ರವೇಶಿಸುತ್ತವೆ. ಮತ್ತೂಂದೆಡೆ ಪಶ್ಚಿಮ ಘಟ್ಟಗಳು ಎಂದು ಗುರುತಿಸುವ ಚಾಮರಾಜನಗರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ ವ್ಯಾಪ್ತಿಯಲ್ಲಿ ಗಾಂಜಾ ಗಿಡಗಳನ್ನು ಅರಣ್ಯಪ್ರದೇಶಗಳಲ್ಲಿ ಬೆಳೆಸಿ ಮಾರಾಟ ಮಾಡುತ್ತಾರೆ ಎಂದು ಕೇಂದ್ರ ಮಾದಕ ವಸ್ತು ನಿಯಂತ್ರಣ ಘಟಕದ ಅಧಿಕಾರಿ ತಿಳಿಸಿದ್ದಾರೆ.
ನಗರದಲ್ಲಿ ಎಲ್ಲೆಲ್ಲಿ ಮಾರಾಟ: ನಗರದ ಹೊರವಲಯ ಜತೆಗೆ, ಆಫ್ರಿಕಾ, ನೈಜಿರಿಯಾ ಪ್ರಜೆಗಳು ನೆಲೆಸಿರುವ ಕೊತ್ತನೂರು, ಬಾಣಸವಾಡಿ, ಕೆ.ಆರ್.ಪುರ, ಇಂದಿರಾನಗರ, ರಾಮಮೂರ್ತಿನಗರ, ಹೆಣ್ಣೂರು ಠಾಣೆ, ಸುದ್ದುಗುಂಟೆ ಪಾಳ್ಯ ವ್ಯಾಪ್ತಿಯಲ್ಲಿ ಹೆಚ್ಚಾಗಿದೆ. ಗಾಂಜಾ ಮಾರಾಟ ಹೊಸಕೋಟೆ, ಮೈಸೂರು ರಸ್ತೆ, ಬಾಣಸವಾಡಿ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಎಚ್‌ಎಸ್‌ಆರ್ ಲೇಔಟ್ ಹಾಗೂ ಮೈಕೋ ಲೇಔಟ್, ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ಸಕ್ರಿಯವಾಗಿದೆ.
ಟ್ರೋಲ್ ಫೀ ನಂಬರ್ “1908’ಗೆ ಸಹಕರಿಸುತ್ತಿಲ್ಲ: ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಮಾರಾಟ ದಂಧೆಯ ಹೆಡೆಮುರಿಕಟ್ಟಲು ಸಿಸಿಬಿ ಪೊಲೀಸರು “1908′ ಟ್ರೋಲ್ ಫ್ರಿ ನಂಬರ್ ತೆರೆದಿದ್ದಾರೆ. ಮಾದಕ ವಸ್ತು ಮಾರಾಟ ಕಂಡು ಬಂದರೆ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. ಆದರೆ, ಇದುವರೆಗೂ ನಾಲ್ಕೈದು ದೂರುಗಳು ಮಾತ್ರ ಬಂದಿವೆ.
ಇನ್ನೊಂದೆಡೆ ಪೊಲೀಸರು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಶಾಲೆ, ಕಾಲೇಜು ಹಾಗೂ ಕೆಲ ಆರೋಗ್ಯ ಕೇಂದ್ರಗಳಲ್ಲಿ ಮಾದಕ ವಸ್ತುವಿನ ಬಗ್ಗೆ ಅರಿವು ಮೂಡಿಸುವಂತೆ ಮನವಿ ಮಾಡಿದ್ದಾರೆ. ಡಿಸಿಪಿ ಹಾಗೂ ಎಸಿಪಿ ನೇತೃತ್ವದಲ್ಲಿ ತಮ್ಮ ತಮ್ಮ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಲ್ಲಿ ಈ ಕುರಿತು ಆಂದೋಲನ ನಡೆಸುವಂತೆ ಸೂಚಿಸಲಾಗಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವರ್ಷ ಪ್ರಕರಣ ಬಂಧನ(ವಿದೇಶಿ) ಭಾರತೀಯರು
2015 69 11 130
2016 128 20 285
2017 342 100 500
ಎನ್‌ಸಿಬಿ (ಮಾದಕ ವಸ್ತು ನಿಯಂತ್ರಣ ಘಟಕ) ಪ್ರಕರಣ
ವರ್ಷ ಪ್ರಕರಣ ಬಂಧನ(ವಿದೇಶಿ) ಭಾರತೀಯರು
2016 13 10 8
2017 15 4 25
ನಗರದಲ್ಲಿ 900 ಮಂದಿ ಅಕ್ರಮ ವಿದೇಶಿಯರು: ವಿದೇಶಿಗರೇ ಹೆಚ್ಚು ದಂಧೆಯಲ್ಲಿ ತೊಡಗಿರುವುದರಿಂದ ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿಗೆ (ಎಫ್ಆರ್‌ಆರ್‌ಒ) ಪೊಲೀಸರು ಪತ್ರ ಬರೆದು ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಬಗ್ಗೆ ಮಾಹಿತಿ ಕೇಳಿದ್ದರು. ಇದುವರೆಗೆ ಬಂದಿರುವ ಮಾಹಿತಿ ಪ್ರಕಾರ 900 ವಿದೇಶಿಗರು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ರಮ ನಿವಾಸಿಗಳ ವಿವರಗಳನ್ನು ಆಯಾ ಠಾಣೆ ವ್ಯಾಪ್ತಿಗೆ ಕಳುಹಿಸಿಕೊಡಲಾಗಿದೆ. ಅವರ ಮೇಲೆ ದಾಳಿ ನಡೆಸಿ ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ಗಡೀಪಾರಿಗೆ ಪ್ರಕರಣಗಳೇ ಅಡ್ಡಿ!: ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಗಡೀಪಾರು ಮಾಡಲು ಮಾದಕ ವಸ್ತು ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಯಂತಹ ಪ್ರಕರಣದಲ್ಲಿ ಅವರು ಭಾಗಿರುವುದೇ ಪ್ರಮುಖ ಅಡ್ಡಿಯಾಗಿದೆ. ಒಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾದರೆ ಅದು ಇತ್ಯರ್ಥವಾಗುವವರೆಗೂ ಆತ ತನ್ನ ದೇಶಕ್ಕೆ ತೆರಳುವಂತಿಲ್ಲ. ಇದನ್ನೇ ದುರುಪಯೋಗಪಡಿಸಿಕೊಳ್ಳುವ ಅವರು ಜಾಮೀನಿನ ಮೇಲೆ ಹೊರಬಂದು ಮತ್ತೆ ಜೀವನ ನಿರ್ವಹಣೆಗಾಗಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗುತ್ತಾರೆ.
ಇತ್ತೀಚಿಗೆ ಬಂಧನವಾದ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಈ ಅಂಶ ಬಯಲಾಗಿದೆ. ಒಂದು ಪ್ರಕರಣ ಇತ್ಯರ್ಥವಾಗುತ್ತಿದ್ದಂತೆ ಮತ್ತೂಂದು ಪ್ರಕರಣದಲ್ಲಿ ಭಾಗಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾದ ವಿದೇಶಿಯರ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆಯಲು ಆದೇಶ ನೀಡಿ ಗಡಿಪಾರು ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಅವಕಾಶ ನೀಡದರೆ ಗಡೀಪಾರು ಕಾರ್ಯ ಆರಂಭವಾಗಲಿದೆ ಎಂದು ಸಿಸಿಬಿ ಅಧಿಕಾರಿ ವಿವರಿಸಿದರು.
ಕಳೆದ ಮೂರು ವರ್ಷಗಳಲ್ಲಿ 2017ರಲ್ಲಿ ಅತಿ ಹೆಚ್ಚು ಮಾದಕ ವಸ್ತು ಮಾರಾಟ ಪ್ರಕರಣ ಪತ್ತೆಯಾಗಿವೆ. ಅಕ್ರಮದ ಬಗ್ಗೆ ಮಾಹಿತಿ ನೀಡುವವರಿಗೆ “1908′ ಟೋಲ್ ಫ್ರೀ ಸಂಖ್ಯೆ ಆರಂಭಿಸಲಾಗಿದೆ. ಜತೆಗೆ ದಂಧೆಯ ಮೂಲ ಪತ್ತೆ ಮಾಡಲು ಸಿಸಿಬಿಯ ಒಂದು ತಂಡ ಒಡಿಶಾ, ಅಸ್ಸಾಂ ಹಾಗೂ ಆಂಧ್ರಪ್ರದೇಶದ ಮಾದಕ ವಸ್ತು ಮಾರಾಟ ದಂಧೆಕೋರರ ಬಗ್ಗೆ ನಿಗಾ ವಹಿಸಿದೆ.
-ಸತೀಶ್ ಕುಮಾರ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.