“ಅದಮಾರು’ ಅಧ್ಯಾತ್ಮದತ್ತ ತಮ್ಮೊಲವ ಜತೆಗೂಡಿಸಿದ ಸ್ಥಳ: ಶ್ರೀಪಾದರು
Team Udayavani, Jan 4, 2018, 12:09 PM IST
ಪಡುಬಿದ್ರಿ: ಅದಮಾರು ತಮ್ಮನ್ನು ಪಾರಮಾರ್ಥಿಕದತ್ತ, ಲೌಕಿಕ ವಿದ್ಯಾಭ್ಯಾಸದೊಂದಿಗೂ ಜತೆಗೂಡಿಸಿದ ಸ್ಥಳವಾಗಿದೆ. ಹಾಗಾಗಿ ಅದಮಾರನ್ನು ತಾವು ಮರೆಯಲಾರೆವು. ತಮಗಿಂದು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥರು ಪ್ರೀತಿಯ, ವೈಭವದ ಸ್ವಾಗತ, ಔತಣ ಯಾವುದನ್ನೂ ಮರೆಯಲಾರೆವು. ಅವರೂ ತಮ್ಮನ್ನು ಎರಡೂ ವರ್ಷಗಳ ಪರ್ಯಾಯದಲ್ಲೂ ಜತೆಗೂಡಲಿರುವರು ಎಂಬುದಾಗಿ ಭಾವೀ ಪರ್ಯಾಯ ಪೀಠಾಧಿಪತಿ, ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಅವರು ಜ. 3ರಂದು ಅದಮಾರು ಮೂಲಮಠದಲ್ಲಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಮಗೆ ನೀಡಿದ್ದ ಔತಣ ಕೂಟದಲ್ಲಿ ಭಾಗವಹಿಸಿ ಶ್ರೀ ವಾಸುದೇವರ ಮೂಲ ಸನ್ನಿಧಾನದಲ್ಲಿ ತಮಗಿತ್ತ ಮಾಲಿಕೆ ಮಂಗಳಾರತಿಯನ್ನು ಸ್ವೀಕರಿಸಿ ಆಶೀರ್ವಚಿಸುತ್ತಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸಮಸ್ಯೆಗಳನ್ನೆಲ್ಲಾ ಆಚ್ಛಾದನೆಯನ್ನು ಮಾಡುವ ವಾಸುದೇವರ ಸನ್ನಿಧಾನದಲ್ಲಿ ಪಲಿಮಾರು ಶ್ರೀಪಾದರನ್ನು ಉಡುಪಿಯಲ್ಲಿನ ಎರಡು ವರ್ಷದ ಕಾರ್ಯಕ್ರಮಗಳಿಗಾಗಿ ಬೀಳ್ಕೊಡುತ್ತಿದ್ದೇವೆ. ಉಡುಪಿ ಶ್ರೀ ಕೃಷ್ಣ, ಮುಖ್ಯಪ್ರಾಣರ ಮುಖೇನ ಭಕ್ತರೆಲ್ಲರ ಸಹಕಾರದಿಂದ ಅವರ ನೆನೆಸಿರುವ ಮಹಾನ್ ಕಾರ್ಯಗಳೆಲ್ಲಾ ಮಲ್ಲಿಗೆಯ ಹೂವಿನಂತೆ ಕೈಗೂಡಿಸಲಿರುವರು ಎಂದರು.
ಅದಮಾರು ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಿರಿಯಡ್ಕ
ವೇ | ಮೂ | ಮಧುಸೂದನ ಆಚಾರ್ಯರ ಪೌರೋಹಿತ್ಯದಲ್ಲಿ ಅದಮಾರು ಮಠದ ಮುಂಬಯಿ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಶ್ರೀ ಶ್ರೀಗಳ ಮಾಲಿಕೆ ಮಂಗಳಾರತಿಯನ್ನು ನೆರವೇರಿಸಿದರು. ಅದಮಾರು ಮಠದ ದಿವಾನ ವೆಂಕಟರಮಣ ಮುಚ್ಚಿಂತಾಯ, ಶಿಬರೂರು ವೇ | ಮೂ | ವಾಸುದೇವ ಆಚಾರ್ಯ, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣ ದಾಸ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ದ.ಕ., ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅದಮಾರು ಶಿಕ್ಷಣ ಮಂಡಳಿ ಕಾರ್ಯದರ್ಶಿ, ನ್ಯಾಯವಾದಿ ಪ್ರದೀಪ್ ಕುಮಾರ್, ಶ್ರೀ ಪಲಿಮಾರು ಮಠದ ದಿವಾನರಾದ ಶಿಬರೂರು ವೇ | ಮೂ | ವೇದವ್ಯಾಸ ತಂತ್ರಿ, ದ.ಕ., ಜಿಲ್ಲಾ ವಿಹಿಂಪ ಅಧ್ಯಕ್ಷ ಎಂ. ಬಿ. ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು.
ಅದಮಾರಿಗೆ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಬೆಳಗ್ಗೆ ಆಗಮಿಸಿದಾಗ ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ವೈಭವೋಪೇತವಾಗಿ ಸ್ವಾಗತಿಸಿ ಶ್ರೀ ಅದಮಾರು ಮೂಲ ಮಠದತ್ತ ಮೆರವಣಿಗೆಯಲ್ಲಿ ಕರೆದು ಕೊಂಡು ಒಯ್ದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
KAUP: ಸಂವಿಧಾನ ಉಳಿಸಿ ಬೃಹತ್ ಜಾಥಾ ಮತ್ತು ಸಾರ್ವಜನಿಕ ಸಭೆ
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.