ತ್ರಿಪುರ ಸುಂದರಿ ಅಮ್ಮನವರ ಬ್ರಹ್ಮ ರಥೋತ್ಸವ


Team Udayavani, Jan 4, 2018, 12:27 PM IST

m6-charioit.jpg

ಮೂಗೂರು/ತಿ.ನರಸೀಪುರ: ತಾಲೂಕಿನ ಮೂಗೂರು ಗ್ರಾಮದಲ್ಲಿ ಬುಧವಾರ ಶ್ರೀ ತ್ರಿಪುರ ಸುಂದರಿ ಅಮ್ಮನವರ  ಮಹಾಬ್ರಹ್ಮ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ, ಭಾವ ಸಡಗರದೊಂದಿಗೆ ಬಹಳ ವಿಜೃಂಭಣೆಯಿಂದ ಜರುಗಿತು.

ಮಧ್ಯಾಹ್ನ 3.50 ಕ್ಕೆ ಸರಿಯಾಗಿ ರಥೋತ್ಸವಕ್ಕೆ ಕಳಸ ಶಂಕುಸ್ಥಾಪನೆಯನ್ನು ದೇವಾಲಯದ ಆರ್ಚಕರು  ನೆರವೇರಿಸಿದರು. ನಂತರ ಮಧ್ಯಾಹ್ನ 4.30ಕ್ಕೆ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ದೇವಸ್ಥಾನದ ಆವರಣದಲ್ಲಿ ಜಮಾಯಿಸಿ ಹಸಿರುತಳಿರು ತೋರಣ, ಬೃಹದಾಕಾರದ ಹೂವಿನ ಹಾರಗಳಿಂದ ಅಲಂಕೃತವಾಗಿ ಸಿಂಗಾರಗೊಂಡಿದ್ದ

ಶ್ರೀ ತ್ರಿಪುರ ಸುಂದರಿ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ಮಹಾಮಂಗಳಾರತಿ ನೆರವೇರಿಸುವ ಮೂಲಕ ವಾಟಾಳು ಶ್ರೀ ಸಿದ್ಧಲಿಂಗಶಿವಚಾರ್ಯಸ್ವಾಮಿಜೀ ಹಾಗೂ ತಹಶೀಲ್ದಾರ್‌ ಬಸವರಾಜ್‌ ಚಿಗರಿ ಚಾಲನೆ ನೀಡಿದರು. ಕಾಂಕ್ರೀಟ್‌ ರಸ್ತೆ ನಿರ್ಮಾಣದಿಂದಾಗಿ ರಥವು ಯಾವುದೇ ಅಡೆತಡೆಗಳಿಲ್ಲದೇ ಸುಗಮವಾಗಿ ರಥದ ಬೀದಿ, ಅಂಗಡಿ ಬೀದಿ, ಮತ್ತು ಬಂಡಿ ಬೀದಿ ಮೂಲಕ ಸ್ವಸ್ಥಾನ ತಲುಪಿತು.

ಇಷ್ಟಾರ್ಥ ಸಿದ್ಧಿ ಪ್ರಾರ್ಥನೆ: ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ರಾಮನಗರ, ಕನಕಪುರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ರಥೋತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರು ಹಣ್ಣುದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರೆ, ಯುವ ಸಮೂಹ ಉತ್ಸಾಹದಿಂದ ತ್ರಿಪುರ ಸುಂದರಿ ಅಮ್ಮನವರಿಗೆ ಜೈಕಾರ ಕೂಗುತ್ತ ಪರಸ್ಪರ ಬಣ್ಣ ಎರಚಿಕೊಂಡು ತೇರನ್ನು ಎಳೆದು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು.

ಹೆಚ್ಚಾಗಿ ನವ ದಂಪತಿಗಳು ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಿ ಹಣ್ಣು ದವನ ಎಸೆದು ಭಕ್ತಿ ಪರಕಾಷ್ಟೆ ಮೆರೆದರು. ಸರ್ಕಲ್‌ಇನ್ಸ್‌ಪೆಕ್ಟರ್‌ ಮನೋಜ್‌ಕುಮಾರ್‌ ನೇತೃತ್ವದಲ್ಲಿ ತಿ.ನರಸೀಪುರ ಪಿಎಸ್‌ಐ ಎನ್‌.ಆನಂದ್‌, ಲತೇಶ್‌ಕುಮಾರ್‌, ನಂದೀಶ್‌ಕುಮಾರ್‌, ಮಂಚಿಗಯ್ಯ, ಇಮ್ರಾನ್‌ ಅಹಮ್ಮದ್‌  ಸೇರಿದಂತೆ 100 ಕ್ಕೂ ಹೆಚ್ಚು ಪೋಲಿಸ್‌ ಸಿಬ್ಬಂದಿ ಬಿಗಿಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ಎಂ.ಚಂದ್ರಶೇಖರ್‌, ಪಾರುಪತ್ತೇಗಾರ್‌ ಎಂ.ಬಿ.ಸಾಗರ್‌, ಮುಖಂಡರಾದ ಎಂ.ಡಿ.ಬಸವರಾಜು, ಎಂ.ಆರ್‌.ಸುಂದರ್‌, ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರಮೇಶ್‌, ತಾಲೂಕು ಬಾಬು ಜಗಜೀವನರಾಂ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು, ಎಂ.ಆರ್‌.ಶಿವಮೂರ್ತಿ, ನಂಜುಂಡಸ್ವಾಮಿ,

ಜಿಲ್ಲಾ ಜೆಡಿಎಸ್‌ ಮಾಜಿ ಉಪಾಧ್ಯಕ್ಷ ಎಂ.ಕೆ.ಸಿದ್ದರಾಜು, ಗೌ.ನಾಗರಾಜು, ಎಂ.ಎಂ ಜಗದೀಶ್‌, ಡೈರಿ ನಾಗೇಂದ್ರ, ಯಜಮಾನ್‌ ಪುಟ್ಟಮಾದಯ್ಯ, ಪಿಡಿಒ ನಾಗೇಂದ್ರ, ನಿಂಗಪ್ಪ, ಜಯಣ್ಣ,  ಮರಿಸ್ವಾಮಿ, ರೇವಣ್ಣ, ಉಪನ್ಯಾಸಕ ಕುಮಾರಸ್ವಾಮಿ, ರಮೇಶ್‌ನಾಯ್ಕ, ಮಹದೇವನಾಯ್ಕ ಇತರರು ಇದ್ದರು.

ಸಾಲುಗಟ್ಟದ ಭಕ್ತರು: ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಅಲ್ಲಲ್ಲಿ ಹರಕೆ ಹೊತ್ತ ಭಕ್ತರು ನೆರೆದಿದ್ದ ಭಕ್ತರಿಗೆ ಮೊಸರನ್ನ, ಬಾತ್‌ ಹಾಗೂ ಪಾನಕ, ಮಜ್ಜಿಗೆ, ಕೊಸಂಬರಿ ವಿತರಣೆ ಮಾಡಿದರು. ಬೆಳಗ್ಗಿನ 6 ಗಂಟೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ದೇವಸ್ಥಾನದ ಪ್ರಾಂಗಣದಿಂದ ಮುಖ್ಯ ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತು ಅಮ್ಮನವರ ದರ್ಶನ ಪಡೆದುಕೊಂಡರು.

ಧಾರ್ಮಿಕ ವಿಧಿವಿಧಾನದಂತೆ ಅಮ್ಮನವರಿಗೆ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮೂಗೂರು ಗೆಳೆಯರ ಬಳಗದ ವತಿಯಿಂದ ರಥೋತ್ಸವಕ್ಕೆ ಬೃಹತ್‌ ಹೂವಿನ ಹಾರವನ್ನು ಅರ್ಪಿಸಿ ನೆರೆದಿದ್ದ ಭಕ್ತರಿಗೆ ಸಿಹಿಹಂಚಲಾಯಿತು.

ಟಾಪ್ ನ್ಯೂಸ್

Krishna-Byragowda

Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

HDK

Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

CT-Ravi

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Krishna-Byragowda

Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

HDK

Congress Government: ಈ ಸರ್ಕಾರದಲ್ಲಿ ಸಹಿ ಮಾತ್ರವಲ್ಲ, ಕ್ಷಣವೂ ಮಾರಾಟಕ್ಕಿದೆ: ಎಚ್‌ಡಿಕೆ

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

Cyber Crime : ರೂಪ ಬದಲಾಯಿತು ಗಾಳ ದೊಡ್ಡದಾಯಿತು

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.