ತಾಂಡಾಗಳಿಗೆ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ
Team Udayavani, Jan 4, 2018, 12:48 PM IST
ಬಸವಕಲ್ಯಾಣ: ಸೌಲಭ್ಯ ವಂಚಿತ ತಾಂಡಾಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಲರಾಜ ಹೇಳಿದರು.
ತಾಲೂಕಿನ ದೇವಿನಗರ ಕಲಖೋರಾ ತಾಂಡಾದಲ್ಲಿ ಶ್ರೀ ಮರಿಯಮ್ಮದೇವಿ 134ನೇ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಂಜಾರ ಸಮುದಾಯದ ಪ್ರಗತಿಗಾಗಿ ರಾಜ್ಯದಲ್ಲಿರುವ ತಾಂಡಾ, ವಾಡಿ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಮೂಲಕ ರಾಜ್ಯ ಸರ್ಕಾರ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಬಂಜಾರಾ ಸಮಾಜದ ಪ್ರಗತಿಗೆ ಸರ್ಕಾರ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.
ತಾಂಡಾ ಅಭಿವೃದ್ಧಿ ನಿಗಮದಿಂದ ಹುಮನಾಬಾದ ತಾಲೂಕಿನ ಗೋರಂಪಳ್ಳಿಯಲ್ಲಿ 6 ಕೋಟಿ ರು. ವೆಚ್ಚದ ಟ್ರೈಬಲ್ ಪಾರ್ಕ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ನಿಗಮದಿಂದ ತಾಂಡಾಗಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಅಗತ್ಯವಿರುವ ಕಡೆ ಸರ್ಕಾರದಿಂದ ಹೆಚ್ಚಿನ ಅನುದಾನ ಮಂಜೂರಿ ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸಂಸದಿಯ ಕಾರ್ಯದರ್ಶಿ, ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಮಾತನಾಡಿ, ಫೆ. 15ರಂದು ರಾಜ್ಯ ಸರ್ಕಾರದಿಂದಲೇ ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಿಸಲು ಸರ್ಕಾರ ಕುರಿತು ಮುಖ್ಯಮಂತ್ರಿಗಳು ಘೋಷಣೆ ಮಾಡುವ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿಪಂ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಮಾಜಿ ಶಾಸಕ ಎಂ.ಜಿ. ಮುಳೆ, ಕೆಪಿಸಿಸಿ ಕಾರ್ಯದರ್ಶಿ ನಾರಾಯಣರಾವ, ಎಐಬಿಎಸ್‌ಎಸ್ ಅಧ್ಯಕ್ಷ ಸುಭಾಷ ರಾಠೊಡ, ಜಿಪಂ ಸದಸ್ಯ ರಾಜಶೇಖರ ಮೇತ್ರೆ, ಕಾಂಗ್ರೆಸ್ ಮುಖಂಡ ಬಾಬು ಹೊನ್ನಾನಾಯಕ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಗೋಬ್ಬರವಾಡಿಯ ಶ್ರೀ
ಬಳಿರಾಮ ಮಹಾರಾಜರು ಆಶೀರ್ವಚನ ನೀಡಿದರು.
ಕಲಖೋರಾ ತಾಂಡಾದ ಶ್ರೀ ಅನೀಲ ಮಹಾರಾಜರು ನೇತೃತ್ವ ವಹಿಸಿದ್ದರು. ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ. ಹೀರಾಲಾಲ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಜಿಪಂ ಮಾಜಿ ಸದಸ್ಯ ಸುನೀಲಸಿಂಗ್ ಹಜಾರಿ, ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅಶೋಕ ರಾಠೊಡ, ಕಾರ್ಯದರ್ಶಿ ರಾಜಕುಮಾರ ಪವಾರ, ಗ್ರಾಪಂ ಅಧ್ಯಕ್ಷ ವಿಜಯಕುಮಾರ ರಾಠೊಡ, ಸಿಪಿಐ ಮಲ್ಲಿಕಾರ್ಜುನ ಡಪ್ಪಿನ, ಪಿಎಸ್‌ಐಗಳಾದ ಸಿರೋಮಣಿ, ಅಮೂಲ ಕಾಳೆ, ಪ್ರಮುಖರಾದ ಅಶೋಕ ಗುತ್ತೇದಾರ, ಮೀರ ಅಮಾನತಲಿ, ಅನ್ವರ ಭೋಸಗೆ, ದಾವುದ ಮಂಠಾಳ, ಓಂಪ್ರಕಾಶ ಪಾಟೀಲ, ಶ್ರೀಚಂದ ಪವಾರ, ಇಇ ಬಾಬು ಪವಾರ ಇದ್ದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ನೀಲಕಂಠ ರಾಠೊಡ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿವರಾಮ ಚವ್ಹಾಣ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.