ಆಡುತ್ತ-ಓಡುತ್ತಲೇ ಗೆದ್ದ ಚೈತನ್ಯದ ಚಿಲುಮೆ ತೇಜಶ್ರೀ
Team Udayavani, Jan 4, 2018, 2:50 PM IST
ಸಾಧಿಸಲು ನಮಗೆ ಬೇಕಾದುದೊಂದೇ. ಅದು – ಛಲ. ಛಲವೊಂದು ನಮ್ಮ ಜೊತೆಗಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದ್ದಾರೆ ತೇಜಶ್ರೀ.
ಪುತ್ತೂರು ತಾಲೂಕಿನ ಉದ್ಲಡ್ಕ ನಿವಾಸಿ ಕೃಷಿಕ ಕುಶಾಲಪ್ಪ ಹಾಗೂ ಕಸ್ತೂರಿ ದಂಪತಿಯ ಪುತ್ರಿ ತೇಜಶ್ರೀ ಅಪ್ಪಟ ಪ್ರತಿಭಾವಂತೆ. ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಖೋಖೋ
ಹಾಗೂ ಆ್ಯತ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ಅವರು, ಗುರಿಯತ್ತ ದಾಪುಗಾಲಿಡುತ್ತಿದ್ದಾರೆ. ಇಷ್ಟಾಗಿಯೂ
ಎಲೆ ಮರೆಯ ಕಾಯಿಯಂತಿದ್ದಾರೆ.
ಹಳ್ಳಿಯಲ್ಲಿ ಹುಟ್ಟಿ ಬೆಳೆದ ತೇಜಶ್ರೀ ಕ್ರೀಡೆಯನ್ನೇ ತಮ್ಮ ಉಸಿರನ್ನಾಗಿ ಮಾಡಿಕೊಂಡಿದ್ದಾರೆ. 2013-14ನೇ
ಸಾಲಿನಲ್ಲಿ ಹಾಸನದಲ್ಲಿ ನಡೆದ ಖೋ ಖೋ ಪಂದ್ಯಾಟದಲ್ಲಿ ರಾಜ್ಯ ತಂಡವನ್ನು ಅವರು ಪ್ರತಿನಿಧಿಸಿದ್ದಾರೆ. ಆ್ಯತ್ಲೆಟಿಕ್ಸ್
ನಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅಸಂಖ್ಯ ಬಹುಮಾನ ಪಡೆದುಕೊಂಡಿದ್ದಾರೆ. ವಿವಿಧ ಕಡೆಗಳಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ 400, 800 ಹಾಗೂ 1000 ಮೀ. ಓಟದಲ್ಲಿ ಹಲವು ಬಾರಿ ಗೆಲುವಿನ ಗೆರೆ ಮುಟ್ಟಿ ಮಿಂಚಿದ್ದಾರೆ.
ತೇಜಶ್ರೀಗೆ ಬಾಲ್ಯದಿಂದಲೇ ಕ್ರೀಡೆ ಎಂದರೆ ಎಲ್ಲಿಲ್ಲದ ಪ್ರೀತಿ. ಈಗಷ್ಟೇ ಬೆಳಗುತ್ತಿರುವ ಕ್ರೀಡಾ ಜ್ಯೋತಿ ಅವರು. ಕ್ರೀಡೆಯಲ್ಲಿ ಈವರೆಗಿನ ಸಾಧನೆ ಬಗ್ಗೆ ಕೇಳಿದಾಗ, ನನಗೆ ನನ್ನ ಸಾಧನೆಯ ಕುರಿತು ಹೆಮ್ಮೆ ಇದೆ. ನಾನು ಇನ್ನು ಮುಂದೆಯೂ ಉತ್ಕೃಷ್ಟ ಸಾಧನೆ ಮಾಡಿ, ನನ್ನ ಹೆತ್ತವರಿಗೆ ಕೀರ್ತಿ ತರಬೇಕೆಂಬ ಪುಟ್ಟ ಕನಸಿದೆ ಎಂದರು.
ರಕ್ಷಿತಾ ಸಿ.ಎಚ್.
ಉದಯವಾಣಿ ವಿದ್ಯಾರ್ಥಿ ಪತ್ರಕರ್ತ
ಯೋಜನೆಯ ಶಿಕ್ಷಣಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.