ನಬಾರ್ಡ್, ಇನ್‌ಸಾಲ್ವೆನ್ಸಿ ಮಸೂದೆಗೆ ರಾಜ್ಯಸಭೆ ಅನುಮೋದನೆ
Team Udayavani, Jan 4, 2018, 3:43 PM IST
ಹೊಸದಿಲ್ಲಿ : ನಬಾರ್ಡ್ ತಿದ್ದುಪಡಿ ಮಸೂದೆ ಮತ್ತು ದಿವಾಳಿತನ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಸೂಚಿಸಿದ ತಿದ್ದುಪಡಿಯನ್ನು ಇಂದು ಲೋಕಸಭೆ ಅನುಮೋದಿಸಿದೆ.
ಕೇಂದ್ರ ಸಹಾಯಕ ಕಾರ್ಪೊರೇಟ್ ವ್ಯವಹಾರಗಳ ಸಚಿವ ಪಿ ಪಿ ಚೌಧರಿ ಅವರಿಂದು ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆಗಳನ್ನು ಮಂಡಿಸಿದರು. ರಾಜ್ಯ ಸಭೆ ಸೂಚಿಸಿರುವ ತಿದ್ದುಪಡಿಗಳನ್ನು ಧ್ವನಿಮತದಿಂದ ಅನುಮೋದಿಸಲಾಯಿತು. ಆ ಮೂಲಕ ದೇಶದ ಆರ್ಥಿಕಾಭಿವೃದ್ಧಿಗೆ ಮತ್ತು ಹಣಕಾಸು ದೃಢತೆಗೆ ಅವಶ್ಯವಿರುವ ಎರಡು ನಿರ್ಣಾಯಕ ಮಸೂದೆಗಳ ಈಗಿನ್ನು ಕಾಯಿದೆ ರೂಪದಲ್ಲಿ ಹೊರಬರುವುದಕ್ಕೆ ಅನುಕೂಲವಾಯಿತು.
ಈ ಎರಡೂ ಮಸೂದೆಗಳಿಗೆ ಹೊಸ ವರ್ಷದಲ್ಲಿ ಅನುಮೋದನೆ ದೊರಕಿರುವುದರಿಂದ ಅವುಗಳ ವರ್ಷವನ್ನು 2017ಕ್ಕೆ ಬದಲಾಗಿ 2018 ಎಂದು ದಾಖಲಿಸುವ ತಿದ್ದುಪಡಿಯನ್ನು ರಾಜ್ಯಸಭೆ ಸೂಚಿಸಿತು.
ನಬಾರ್ಡ್ ತಿದ್ದುಪಡಿ ಮಸೂದೆಯಿಂದಾಗಿ ಅದಕ್ಕೆ ತನ್ನ ಅಧಿಕೃತ ಬಂಡವಾಳವನ್ನು ಇನ್ನು ಆರು ಪಟ್ಟು ಹೆಚ್ಚಿಸಿ 30,000 ಕೋಟಿ ರೂ.ಗೆ ಏರಿಸಲು ಸಾಧ್ಯವಾಗಿದೆ. ಅಂತೆಯೇ ಆರ್‌ಬಿಐ ನ ಶೇರುಗಳನ್ನು ಈಗಿನ್ನು ಸರಕಾರಕ್ಕೆ ವರ್ಗಾಯಿಸಲು ಅನುಕೂಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!
Udupi: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1
Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್’
Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.