ತಪ್ಪು ಮಾಡಿದೆ, ಮಗ ಬುದುಕಿರುತ್ತಿದ್ದ; ಗೋಳಿಟ್ಟ ದೀಪಕ್ ತಾಯಿ
Team Udayavani, Jan 4, 2018, 4:52 PM IST
ಮಂಗಳೂರು: ‘ನನ್ನ ಮಗ ಪಾಪದವ, ಅವವಿದೇಶಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದಿದ್ದ, ನಾನೇ ಬೇಡ ಎಂದು ತಪ್ಪು ಮಾಡಿದೆ. ಹೋಗಿದ್ದರೆ ನನ್ನ ಮಗ ಬದುಕಿರುತ್ತಿದ್ದ…’ಇದು ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ರಾವ್ ಅವರ ತಾಯಿ ಗೋಳಿಟ್ಟ ಪರಿ.
ದೀಪಕ್ ಅಂತ್ಯಕ್ರಿಯೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮಲತಾ ‘ನನ್ನ ಮಗ ತುಂಬಾ ಪಾಪದವ, ಪ್ರತೀ ದಿನ ಕೆಲಸ ಮುಗಿಸಿ ಸಂಜೆ 7 ಗಂಟೆಯ ಒಳಗೆ ಮನೆಗೆ ಬರುತ್ತಿದ್ದ. ಮನೆಗೆ ಆಧಾರವಾಗಿದ್ದ. ಅವನೇ ಸಾಲ ಮಾಡಿ ಮನೆ ಕಟ್ಟಿದ್ದ. ಇನ್ನು 2 ಲಕ್ಷ ಸಾಲ ಬಾಕಿ ಉಳಿದಿದೆ. ಅದನ್ನು ತೀರಿಸುತ್ತೇನೆ. ನಿಮ್ಮ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬರುತ್ತೇನೆ ಎಂದಿದ್ದ. ನಾನು ನೀನೆ ನನಗೆ ಚಿನ್ನ ಎಂದಿದ್ದೆ’ ಎಂದು ಕಣ್ಣೀರಿಟ್ಟರು.
‘ನನ್ನ ಪಾಪದ ಮಗನನ್ನು ಕೊಂದವರಿಗೆ ನಾನು ನಂಬಿದ ದೇವರೇ ಶಿಕ್ಷೆ ನೀಡಲಿ. ಅದು ಹೇಗೆ ಎಂದು ನಾನು ಹೇಳುವುದಿಲ್ಲ’ ಎಂದರು.
‘ಪ್ರತೀ ವಾರಕ್ಕೊಮ್ಮೆ ಭಜನೆ ಗೆ ಹೋಗುತ್ತಿದ್ದ ,ಅವನಿಗೆ ಮದುವೆ ಮಾಡಲು ಮುಂದಾಗಿದ್ದೆ’ಎಂದು ಕಣ್ಣೀರಿಟ್ಟರು.
‘ಮಧ್ಯಾಹ್ನ ಊಟಕ್ಕೆ ಬರುವವನಿದ್ದ ಅವನಿಗಾಗಿ ಕಾದು ಕಾದು 3 ಗಂಟೆಗೆ ಮೊಬೈಲ್‌ಗೆ ಕರೆ ಮಾಡಿದೆ ಆದರೆ ಸ್ವಿಚ್ ಆಫ್ ಆಗಿತ್ತು. ಇನ್ನೆಲ್ಲಿ ನನ್ನ ಮಗ’ ಎಂದು ಗೋಳಿಟ್ಟರು.
ಮುಸ್ಲಿಂ ಮಾಲೀಕನ ಅಂಗಡಿಯಲ್ಲಿ ಕೆಲಸ!
ಮಜೀದ್ ಎನ್ನುವವರ ಮೊಬೈಲ್ ಅಂಗಡಿಯಲ್ಲಿ ಸಿಮ್ ಕಾರ್ಡ್ ಮಾರುವ ಕೆಲಸ ಮಾಡಿಕೊಂಡಿದ್ದ ದೀಪಕ್ ಗೆ ತಿಂಗಳಿಗೆ 11 ಸಾವಿರ ಸಂಬಳ ಪಡೆಯುತ್ತಿದ್ದ. ಸಂಬಳದಲ್ಲಿ 6 ಸಾವಿರವನ್ನು ಮನೆಯ ಸಾಲದ ಕಂತಿಗೆ ಕಟ್ಟುತ್ತಿದ್ದರೆ, 1,500 ರೂಪಾಯಿ ಬೈಕ್ ಸಾಲದ ಕಂತಿಕೆ ಕಟ್ಟುತ್ತಿದ್ದ, ಮನೆಗೆ 2,500 ರೂಪಾಯಿ ಖರ್ಚಿಗೆ ತಾಯಿಗೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.
ಮಜೀದ್ ತೀವ್ರ ದುಃಖ
ದೀಪಕ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಮೊಬೈಲ್ ಅಂಗಡಿ ಮಾಲಕ ಮಜೀದ್ ‘ದೀಪಕ್ ಒಳ್ಳೆಯ ಹುಡುಗ. ಕಳೆದ 7 ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿಕೊಂಡಿದ್ದ. ಯಾರ ಬಳಿಯೂ ಜಗಳವಾಡುತ್ತಿರಲಿಲ್ಲ, ಸ್ನೇಹಮಯಿಯಾದ ಅವನ ಹತ್ಯೆ ನನಗೆ ನಂಬಲಾಗುತ್ತಿಲ್ಲ’ ಎಂದು ಸಖೇದಾಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.