ಲಾಲು ಶಿಕ್ಷೆ ಪ್ರಮಾಣ ಪ್ರಕಟನೆ ಮತ್ತೆ ಮುಂದಕ್ಕೆ, ಶುಕ್ರವಾರ
Team Udayavani, Jan 4, 2018, 5:04 PM IST
ರಾಂಚಿ : ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯದಿಂದ ಘೋಷಿಸಲ್ಪಟ್ಟಿರುವ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ಜೆಡಿ ಮುಖ್ಯಸ್ಥ, ಲಾಲು ಪ್ರಸಾದ್ ಯಾದವ್ ಅವರಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗುವುದನ್ನು ನಾಳೆ ಶುಕ್ರವಾರದ ವರೆಗೆ ಮುಂದೂಡಲಾಗಿದೆ.
21 ವರ್ಷಗಳ ಹಿಂದೆ ದೇವಗಢ ಸರಕಾರಿ ಖಜಾನೆಯಿಂದ 89.27 ಲಕ್ಷ ರೂ.ಗಳನ್ನು ಅಕ್ರಮವಾಗಿ ಪಡೆದುಕೊಂಡ ಆರೋಪಕ್ಕೆ ಸಂಬಂಧಿಸಿದ ಕೇಸಿನಲ್ಲಿ ಲಾಲು ದೋಷಿ ಎಂದು ಪರಿಗಣಿತರಾಗಿದ್ದಾರೆ. ಬಹುಕೋಟಿ ಮೇವು ಹಗರಣಗಳ ಪೈಕಿ ಈಗಾಗಲೇ ಒಂದರಲ್ಲಿ ಲಾಲುಗೆ ಜೈಲು ಶಿಕ್ಷೆಯಾಗಿದ್ದು ಬೇಲ್ನಲ್ಲಿ ಈ ತನಕ ಹೊರಗಿದ್ದರು.
ನಿರಂತರ ಎರಡನೇ ದಿನವಾದ ಇಂದು ಗುರುವಾರ ಕೂಡ ಲಾಲು ಶಿಕ್ಷೆ ಪ್ರಮಾಣ ಪ್ರಕಟನೆಯನ್ನು ನಾಳೆಗೆ ಮುಂದೂಡಿದ ಸಿಬಿಐ ನ್ಯಾಯಾಧೀಶ ಶಿವ ಪಾಲ್ ಸಿಂಗ್ ಅವರು ಲಾಲು ಶಿಕ್ಷೆ ಪ್ರಮಾಣ ಪ್ರಕಟನೆಯನ್ನು ತಾವು ವಿಡಿಯೋ ಕಾನ್ಫರೆನ್ಸ್ ಮೂಲಕ ಅಥವಾ ತೆರೆದ ಕೋರ್ಟಿನಲ್ಲಿ ಪ್ರಕಟಿಸಬೇಕೇ ಎಂಬುದನ್ನು ನಾಳೆ ಶುಕ್ರವಾರವೇ ತೀರ್ಮಾನಿಸುವುದಾಗಿ ಹೇಳಿದರು.
ಲಾಲು ಪ್ರಸಾದ್ ಯಾದವ್ ಹಿತೈಷಿಗಳಿಂದ ತಮಗೆ ಕೆಲ ಫೋನ್ ಕರೆಗಳು ಬಂದಿವೆ ಎಂದಷ್ಟೇ ತಿಳಿಸಿದ ನ್ಯಾಯಾಧೀಶರು ಆ ಫೋನ್ ಕರೆಗಳ ಸ್ವರೂಪ ಮತ್ತು ವಿವರಗಳನ್ನು ಬಹಿರಂಗಪಡಿಸಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.