ತಲಾಖ್: ಮತ್ತೂಂದು ದಿನದ ಕಲಾಪ ವ್ಯರ್ಥ
Team Udayavani, Jan 5, 2018, 7:10 AM IST
ನವದೆಹಲಿ: ತ್ರಿವಳಿ ತಲಾಖ್ ನಿಷೇಧಿಸುವ ಮುಸ್ಲಿಂ ಮಹಿಳಾ (ಹಕ್ಕುಗಳು ಮತ್ತು ವಿವಾಹ ರಕ್ಷಣೆ) ಮಸೂದೆ ಬಗ್ಗೆ ನಡೆದ ವಾಗ್ವಾದದಿಂದಾಗಿ ಗುರುವಾರವೂ ಕಲಾಪ ವ್ಯರ್ಥವಾಗಿದೆ. ಬುಧವಾರ ಮಸೂದೆಯನ್ನು ಮಂಡಿಸಲಾಗಿತ್ತಾದರೂ, ಆಯ್ಕೆ ಸಮಿತಿಗೆ ಮಸೂದೆಯನ್ನು ಕಳುಹಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು. ಗುರುವಾರ ಕೂಡ ಸಚಿವೆ ಸ್ಮತಿ ಇರಾನಿ ಮತ್ತು ಟಿಎಂಸಿ ಸದಸ್ಯ ಡೆರೆಕ್ ಓಬ್ರಿಯಾನ್ ಮಧ್ಯೆ ತೀವ್ರ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿ ಸುವಂತೆ ಪ್ರತಿಪಕ್ಷಗಳು ಆಗ್ರಹಿಸಿದವು. ಈ ಸಂಬಂಧ ನಿಲುವಳಿ ಮಂಡಿಸಲು ಕಾಂಗ್ರೆಸ್ ಕೋರಿದಾಗ ಬಿಜೆಪಿ ಆಕ್ಷೇಪಿಸಿತು.
ನಂತರ ಸುಗಮ ಕಲಾಪಕ್ಕೆ ಸಂಬಂಧಿಸಿ ವಿವಿಧ ಪಕ್ಷಗಳೊಂದಿಗೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಚರ್ಚೆ ನಡೆಸಿದರು. ದೊಡ್ಡ ಪಕ್ಷಗಳು ಗದ್ದಲ ಎಬ್ಬಿಸುವುದರಿಂದಾಗಿ ಸಣ್ಣ ಪಕ್ಷಗಳು ತಮ್ಮ ವಿಷಯಗಳ ಬಗ್ಗೆ ಚರ್ಚಿ ಸಲು ಸಾಧ್ಯವಾಗುತ್ತಿಲ್ಲ. ತಲಾಖ್ ವಿಚಾರ ಕುರಿತು ಪ್ರತಿಪಕ್ಷಗಳು- ಸರ್ಕಾರ ಒಮ್ಮತಕ್ಕೆ ಬರಬೇಕು ಎಂದೂ ಆಗ್ರಹಿಸಿದರು.
ಈ ಮಧ್ಯೆ ನ್ಯಾಯಾಧೀಶರ ವೇತನ ಹೆಚ್ಚಳ ಮಾಡುವ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಾಧೀಶರ (ಸಂಬಳ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆದ ವೇಳೆ, ಶಾಸಕಾಂಗದ ಮೇಲೆ ನ್ಯಾಯಾಂಗ ಹೆಚ್ಚಿನ ಅಧಿಕಾರ ಹೊಂದಲು ಬಯಸುತ್ತಿದೆ ಎಂಬ ಆರೋಪಗಳನ್ನು ಎಲ್ಲ ಪಕ್ಷದ ಸಂಸದರು ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.