ಮನಸಲಾಜಿಕಲ್ ಹಾರರ್
Team Udayavani, Jan 5, 2018, 10:19 AM IST
“ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಎಂಬ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಈ ಚಿತ್ರವಾದರೂ ತನ್ನ ಕೈ ಹಿಡಿಯುತ್ತದೆ, ಹಿಂದಿನ ಚಿತ್ರದ ಸೋಲನ್ನು ಮರೆಸುತ್ತದೆ ಎಂಬ ವಿಶ್ವಾಸ ಶಂಕರ್ ಅರುಣ್ ಅವರಿಗಿದೆ.
ಹೌದು, ಅರುಣ್ ಅವರು ಈ ಹಿಂದೆ “ಸಪ್ನೊàಂಕಿ ರಾಣಿ’ ಎಂಬ ಸಿನಿಮಾ ನಿರ್ಮಿಸಿದ್ದರು. ಆದರೆ, ಆ ಚಿತ್ರ ಇವರಿಗೆ ಲಾಭ ತಂದುಕೊಂಡಲಿಲ್ಲ. ಮೊದಲ ಚಿತ್ರದಲ್ಲೇ ನಷ್ಟ ಅನುಭವಿಸಿದ ಅರುಣ್ ಅವರಿಗೆ ಅವರ ತಂದೆ-ತಾಯಿ, “ಸಾಕಪ್ಪ ಸಿನಿಮಾ ಸಹವಾಸ. ಬೇರೇನಾದರೂ ನೋಡಿಕೋ’ ಎಂದರಂತೆ. ಆದರೆ, ಅರುಣ್‌ಗೆ ತಾನು ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲೇ ಪಡೆದಕೊಳ್ಳಬೇಕೆಂಬ ಹಠ. ಆ ಹಠದ ಪರಿಣಾಮ “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಎಂಬ ಸಿನಿಮಾ ಮಾಡಿದ್ದಾರೆ. ನಿರ್ಮಾಣ ಮಾಡಲು ಹಿಂದೇಟು ಹಾಕಿದ್ದ ಅವರ ತಂದೆಯನ್ನು ಒಪ್ಪಿಸಿ, ಅವರ ಸಹಕಾರದೊಂದಿಗೆ ಈ ಸಿನಿಮಾ ಮಾಡಿದ್ದಾರೆ.
“ನಾನು ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲೇ ಪಡೆಯಬೇಕೆಂಬ ಛಲದಿಂದ ಈ ಸಿನಿಮಾ ಮಾಡಿದ್ದೇನೆ. ಇಲ್ಲಿ ಗೆಲ್ಲಬೇಕಾದರೆ ಹೊಸದೇನಾದರೂ ಮಾಡಬೇಕು. ಅದೇ ಕಾರಣದಿಂದ ಬೇರೆ ರೀತಿಯ ಕಥೆ ಮಾಡಿಕೊಂಡಿದ್ದೇನೆ. ಇದು ರೆಗ್ಯುಲರ್ ಪ್ಯಾಟರ್ನ್ ಸಿನಿಮಾವಲ್ಲ’ ಎಂದು ಚಿತ್ರದ ಬಗ್ಗೆ ವಿವರ ಕೊಟ್ಟರು. ಈ ಚಿತ್ರ ಮತ್ತೆ ನಾಗವಲ್ಲಿ ಸುತ್ತ ಸುತ್ತಲಿದೆಯಂತೆ. ವಿಷ್ಣುವರ್ಧನ್ ಹಾಗೂ ಸೌಂದರ್ಯ ಸಾವಿಗೆ ನಾಗವಲ್ಲಿ ಕಾರಣನಾ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಜೊತೆಗೆ ಚಿತ್ರತಂಡ ನಾಗವಲ್ಲಿಯನ್ನು ಹುಡುಕಿಕೊಂಡು ಆಕೆಯ ಅರಮನೆಗೆ ಹೋಗಿದೆ. ತಿರುವನಂತಪುರದ ನಾಗವಲ್ಲಿ ಪ್ಯಾಲೇಸ್‌ನಲ್ಲೂ ಚಿತ್ರೀಕರಣ ಮಾಡಿದೆ. ಕೇರಳ ಸರ್ಕಾರದ ಅನುಮತಿ ಪಡೆದು ಐದು ದಿನಗಳ ಕಾಲ ಅರಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಈ ಸಿನಿಮಾಕ್ಕಾಗಿ ಅರುಣ್ ಸಾಕಷ್ಟು ಅಧ್ಯಯನ ಕೂಡಾ ಮಾಡಿದ್ದಾರಂತೆ. “ಮನೋವೈದ್ಯರ ಮೇಲೆ ಆತ್ಮ ಬರುತ್ತಾ ಎಂಬ ಅಂಶವೂ ಈ ಚಿತ್ರದಲ್ಲಿದೆ. ಅದಕ್ಕಾಗಿ ಅಧ್ಯಯನ ಕೂಡಾ ಮಾಡಿದ್ದೇನೆ’ ಎನ್ನುತ್ತಾರೆ ಅರುಣ್. ಅರುಣ್ ಅವರು ಈ ಚಿತ್ರವನ್ನು ಮನಸಾಲಜಿಕಲ್ ಹಾರರ್ ಎಂದು ಕರೆಯಯತ್ತಾರೆ. ಇನ್ನು, ಈ ಚಿತ್ರಕ್ಕೆ ನಾಯಕಿ ವೈಷ್ಣವಿ ಹಾಗೂ ಅವರ ತಾಯಿ ನೀಡಿದ ಸಹಕಾರವನ್ನು ನೆನೆಯಲು ಮರೆಯಲಿಲ್ಲ ಅರುಣ್.
ಚಿತ್ರದಲ್ಲಿ ವಿಕ್ರಮ್ ಕಾರ್ತಿಕ್ ನಾಯಕರಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ರಾಜ ಹಾಗೂ ಪತ್ರಕರ್ತನಾಗಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡಿದ್ದಾಗಿ ಹೇಳಿಕೊಂಡರು ವಿಕ್ರಮ್ ಕಾರ್ತಿಕ್. ಚಿತ್ರದಲ್ಲಿ ವೈಷ್ಣವಿ ನಾಯಕಿಯಾಗಿ ನಟಿಸಿದ್ದಾರೆ. “ಆಪ್ತಮಿತ್ರ’ದಲ್ಲಿ ಸೌಂದರ್ಯ ಅವರು ಮಾಡಿದಂತಹ ಪಾತ್ರವೇ ಇಲ್ಲಿ ಸಿಕ್ಕಿದೆಯಂತೆ. ವೈಷ್ಣವಿ ದೇವರನ್ನು ನಂಬುತ್ತಿರಲಿಲ್ಲವಂತೆ. ಈ ಸಿನಿಮಾದ ನಂತರ ದೇವರನ್ನು ನಂಬಲು ಶುರು ಮಾಡಿದರಂತೆ. ಅದಕ್ಕೆ ಕಾರಣ ಈ ಸಿನಿಮಾದಲ್ಲಿ ಅವರಿಗಾದ ಕೆಲವು ಅನುಭವಗಳು. ಚಿತ್ರದ ಸಹ ನಿರ್ಮಾಪಕ ಪ್ರಬಿಕ್, ಸಂಗೀತ ನಿರ್ದೇಶಕ ಉತ್ತಮ್ ರಾಜ್ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು. ಮಗನ ಸಿನಿಮಾ ಪ್ರಯತ್ನ ಬಗ್ಗೆ ಅರುಣ್ ತಂದೆ ಗೋವಿಂದ ರಾಜು ಕೂಡಾ ಮಾತನಾಡಿದರು. ಚಿತ್ರ ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ತೆರೆಕಾಣಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.