ಬಗೆಬಗೆ ಸ್ಕರ್ಟುಗಳು


Team Udayavani, Jan 5, 2018, 12:32 PM IST

05-28.jpg

ಮಹಿಳೆಯರು ಬೇರೆ ಬೇರೆ ಸಂದರ್ಭಗಳಲ್ಲಿ ಸೂಕ್ತವೆನಿಸುವ ದಿರಿಸುಗಳನ್ನೇ ಬಳಸಲು ಇಚ್ಛಿಸುವುದು ಸಾಮಾನ್ಯವಾದ ಸಂಗತಿಯಾಗಿದೆ. ಎಲ್ಲಾ ಸಂದರ್ಭಗಳಿಗೆ ಸಾಂಪ್ರದಾಯಿಕ ಉಡುಪುಗಳು ಹೊಂದುವುದಿಲ್ಲ , ಅಂತೆಯೇ ಎಲ್ಲ ಕಡೆ ಮಾಡರ್ನ್ ಬಟ್ಟೆಗಳು ಧರಿಸಲು ಸೂಕ್ತವೆನಿಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಮ್ಮ ಸಹಾಯಕ್ಕೆ ಬರುವಂಥದ್ದು ಫ್ಯೂಷನ್‌ ದಿರಿಸುಗಳು. ಅವುಗಳಲ್ಲಿ ಒಂದು ಮ್ಯಾಕ್ಸಿ ಸ್ಕರ್ಟುಗಳು ಅಥವಾ ಲಾಂಗ್‌ ಸ್ಕರ್ಟುಗಳು. ಹಿಂದಿನ ಉದ್ದ ಲಂಗದ ಮಾಡರ್ನ್ ವರ್ಷನ್‌ ಎಂದರೂ ತಪ್ಪಾಗಲಿಕ್ಕಿಲ್ಲ. ಇವುಗಳು ಧರಿಸಲು ಮತ್ತು ಬಳಸಲು ಬಹಳ ಆರಾಮದಾಯಕವಾಗಿರು ವಂತಹವು. ವಯಸ್ಸಿನ ಮಿತಿಯಿಲ್ಲದೆ ಎಲ್ಲಾ ಸಂದರ್ಭಗಳಿಗೆ ಸೂಕ್ತವೆನಿಸುವಂತಹ ವಿಧವಾಗಿದೆ. ಅಂತೆಯೇ ಸ್ಕರ್ಟುಗಳಿಗೆ ಹೊಂದುವಂತಹ ಟಾಪ್‌ ವೇರುಗಳ ಆಯ್ಕೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಅಂತಹ ಕೆಲವು ಸ್ಕರ್ಟುಗಳ ಬಗೆಯನ್ನು ನೋಡೋಣ.

1ಎ ಲೈನ್‌ ಸ್ಕರ್ಟ್ಸ್ :  ಇವುಗಳು ವೇಸ್ಟ್ ಬ್ಯಾಂಡ್‌ನ‌ಲ್ಲಿ ಕಡಿಮೆ ಅಗಲವನ್ನು ಹೊಂದಿದ್ದು ಕೆಳಗೆ ಬಂದಂತೆ ಅಗಲ ಹೆಚ್ಚುತ್ತಾ ಹೋಗುತ್ತವೆ. ಇವುಗಳ ಆಕಾರ “A’ಗೆ ಹೋಲುವುದರಿಂದ ಇವುಗಳಿಗೆ “ಎ’ ಲೈನ್‌ ಸ್ಕರ್ಟುಗಳೆಂದು ಕರೆಯಲಾಗುತ್ತದೆ. ಇವುಗಳು ನೀ-ಲೆನ್ತ್, ಕಾಲ್ಫ್ ಲೆನ್ತ್ ಹಾಗೂ ಆ್ಯಂಕಲ್ ಲೆನ್ತ್ ಎಂಬ ಮೂರು ಬಗೆಗಳಲ್ಲಿ ದೊರೆಯುತ್ತವೆ. ಎಲ್ಲಾ ಬಗೆಯ ಬಟ್ಟೆಗಳಲ್ಲಿ ಮತ್ತು ಹಲವಾರು ಡಿಸೈನುಗಳಲ್ಲಿ ದೊರೆಯುತ್ತವೆ. ಆದ್ದರಿಂದ ಕ್ಯಾಷವಲ… ಮತ್ತು ಪಾರ್ಟಿವೇರ್‌ ಎರಡೂ ಮಾದರಿಗಳ ಸ್ಕರ್ಟುಗಳು ದೊರೆಯುತ್ತವೆ.
   
1ಮ್ಸ್ಟಿಕ್‌ ಸ್ಕರ್ಟ್ಸ್: ಇವುಗಳು ಮಡಚಿದಂತಹ ಅಥವಾ ರಿಂಕಲ್ ಮಾದರಿಯಲ್ಲಿರುತ್ತವೆ. ನೀ-ಲೆನ್ತ್ ಮತ್ತು ಆ್ಯಂಕಲ್‌ ಲೆನ್‌¤ ಎರಡೂ ಬಗೆಗಳಲ್ಲಿ ದೊರೆಯುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ಮೂರು ಅಥವಾ ಮೂರಕ್ಕಿಂತ ಹೆಚ್ಚಿನ ಸ್ಟ್ರಿಪ್ಸ್ ಒಂದಕ್ಕೊಂದು ಜೋಡಣೆಯಾಗಿರುತ್ತವೆ. ಲೇಯರುಗಳಂತೆ ಕಾಣುತ್ತವೆ ಮತ್ತು ಕ್ಯಾಷುವಲ್ ಸ್ಕರ್ಟುಗಳಾಗಿವೆ.

3ಬಬಲ್ ಸ್ಕರ್ಟ್ಸ್: ಇವುಗಳು ಎಲ್ಯಾಸ್ಟಿಕ್‌ ಇರುವ ಫಿಟ್ ವೈಸ್ಟ್ ಬ್ಯಾಂಡನ್ನು ಹೊಂದಿದ್ದು ಕೆಳಗಡೆ ಉಬ್ಬಿದಂತಹ ಲುಕ್ಕನ್ನು ನೀಡುವ ಸ್ಕರ್ಟುಗಳಾಗಿರುವುದರಿಂದ ಇವುಗಳಿಗೆ ಬಬಲ್ ಸ್ಕರ್ಟುಗಳು ಎನ್ನಲಾಗುತ್ತದೆ. ಬಬ್ಲಿ ಲುಕ್ಕನ್ನು ನೀಡುತ್ತವೆ. ಈ ಬಗೆಯ ಸ್ಕರ್ಟುಗಳು ಹೆಚ್ಚಾಗಿ ಶಾರ್ಟ್‌ ಲೆನ್ತ್ನಲ್ಲಿ ದೊರೆಯುತ್ತವೆ. ಮಕ್ಕಳಿಗೆ ಬಹಳ ಚೆನ್ನಾಗಿ ಒಪ್ಪುವಂತಹ ಸ್ಕರ್ಟುಗಳಿವಾಗಿವೆ.

4ಸಕ್ಯುಲರ್‌ ಸ್ಕರ್ಟ್ಸ್: ಹೆಸರಿಗೆ ತಕ್ಕಂತೆ ಸರ್ಕಲ್ ಶೇಪನ್ನು ಹೊಂದಿರುವ ಸ್ಕರ್ಟುಗಳಿವು. ಇವುಗಳು ಫ್ಲೇರಿಯಾಗಿದ್ದು ಧರಿಸಲು ಆರಾಮದಾಯಕವಾಗಿರುತ್ತವೆ. ಇವುಗಳ ತಯಾರಿಕೆಯು ಸುಲಭವಾದುದು. ಇವುಗಳಲ್ಲಿ ಬೇಕಾದ ಬಟ್ಟೆಗಳಿಂದ ತಯಾರಾದ ವಿವಿಧ ಬಗೆಯ ಸ್ಕರ್ಟುಗಳು ದೊರೆಯುತ್ತವೆ. ಇವುಗಳೊಂದಿಗೆ ಕ್ರಾಪ್‌ ಟಾಪುಗಳು ಅಥವಾ ಶಾರ್ಟ್‌ ಕುರ್ತಿಗಳನ್ನು ಧರಿಸಬಹುದಾಗಿದೆ. ಇವುಗಳನ್ನು ಧರಿಸಿದಾಗ ಇವುಗಳ ಕೆಳಭಾಗ ಅಲೆಗಳಂತಹ ಲುಕ್ಕನ್ನು ನೀಡುತ್ತವೆ. ಸೆಮಿ ಕ್ಯಾಷುವಲ್ ಅಥವಾ ಕ್ಯಾಷುವಲ… ದಿರಿಸಾಗಿ ಬಳಸಲ್ಪಡುತ್ತವೆ. 

5ಡಿಂಡಲ್ ಸ್ಕರ್ಟ್ಸ್: (dirndl skirt) ಇವುಗಳು ವೆಸ್ಟ್ ಪಟ್ಟಿಯಲ್ಲಿ ಪ್ಲೇಟ್ಸ್‌ಗಳನ್ನು ಹೊಂದಿದ್ದು ಪಫ್ ಲುಕ್ಕನ್ನು ನೀಡುತ್ತವೆ. ನೋಡಲು ಸ್ವಲ್ಪ ಬಬಲ್ ಸ್ಕರ್ಟನ್ನು ಹೋಲುವುದಾದರೂ ಬಬಲ್ ಸ್ಕರ್ಟಿನಂತೆ ಹೆಮ… ಲೈನಿನಲ್ಲಿ  ಉಬ್ಬಿದಂತಿರುವುದಿಲ್ಲ. ಇವುಗಳಲ್ಲಿಯೂ ವಿವಿಧ ಲೆನ್‌¤ಗಳ ಸ್ಕರ್ಟುಗಳು ಲಭ್ಯವಿದೆ. ಆಯ್ಕೆಗೆ ವಿಫ‌ುಲ ಅವಕಾಶಗಳಿರುತ್ತವೆ.

6ಫಿಶ್ಟ್ರಲ್ ಸ್ಕರ್ಟ್ಸ್ : ಇವುಗಳನ್ನು ಮರ್ಮೈಡ್‌ (ಜಲ್ ಪರಿ) ಸ್ಕರ್ಟುಗಳೆಂದೂ ಕರೆಯಲಾಗುತ್ತದೆ. ಈ ಬಗೆಯ ಸ್ಕರ್ಟುಗಳು ವೇಸ್ಟಿನಿಂದ ಹಿಪ್‌ವರೆಗೆ ಫಿಟ್ಟಿಂಗ್‌ ಹೊಂದಿದ್ದು ನಂತರ ಅಗಲಗೊಳ್ಳುತ್ತಾ ಫ್ಲೇರ್ಸ್‌ ಅನ್ನು ಒಳಗೊಂಡಿರುತ್ತವೆ. ಆದ್ದರಿಂದಲೇ ಇವುಗಳಿಗೆ ಫಿಶ್ಟ್ರಲ್ ಸ್ಕರ್ಟ್ಸ್ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಹೈ-ಲೊ ಮಾದರಿಯೂ ಕೂಡ ದೊರೆಯುತ್ತದೆ. ವಿಧ ವಿಧದ ಬಗೆಯ ಬಟ್ಟೆಗಳಲ್ಲಿ ಮತ್ತು ಬಣ್ಣಗಳಲ್ಲಿ ದೊರೆಯುತ್ತವೆ.
 
7ಫ್ಲೇರ್ಡ್‌ ಸ್ಕರ್ಟ್ಸ್: ಫ್ಲೇರ್ಡ್‌ ಸ್ಕರ್ಟುಗಳು ಎ ಲೈನ್‌ ಸ್ಕರ್ಟುಗಳಿಗೆ ಹೋಲುವಂತಿರುತ್ತವೆ. ಕೆಳಭಾಗ ಅಗಲವಾಗಿರುತ್ತವೆ. ಇವುಗಳು ಮೂರು ಲೆನ್ತ್ ಗಳಲ್ಲಿಯೂ ಲಭಿಸುತ್ತವೆ. ಅಷ್ಟೇ ಅಲ್ಲದೆ ಇವುಗಳ ತಯಾರಿಕೆಗೆ ಬಳಸುವ ಬಟ್ಟೆಗಳ ಆಧಾರದ ಮೇಲೆ ಸೂಕ್ತ ಸಂದರ್ಭಗಳಿಗೆ ಬಳಸಿಕೊಳ್ಳಬಹುದು ಅಥವಾ ಧರಿಸಬಹುದು.

8ಗೋರ್ಡ್ಸ್‌ ಸ್ಕರ್ಟ್ಸ್: ಹಲವು ತ್ರಿಕೋನೀಯ ಪಟ್ಟಿಗಳನ್ನು ಜೋಡಿಸುವುದರ ಮೂಲಕ ಈ ಸ್ಕರ್ಟುಗಳನ್ನು ತಯಾರಿಸಲಾಗುತ್ತದೆ. ಈ  ಬಗೆಯ ಸ್ಕರ್ಟುಗಳು ವೇಸ್ಟಿನಲ್ಲಿ ಫಿಟ್ಟಿಂಗ್‌ ಅನ್ನು ಹೊಂದಿದ್ದು ನಂತರ ಎ ಲೈನ್‌ ಶೇಪನ್ನು ಪಡೆದುಕೊಳ್ಳುತ್ತದೆ. ಅಂಬ್ರೆಲ್ಲಾ ಸ್ಕರ್ಟುಗಳಂತೆಯೇ ಲುಕ್ಕನ್ನು ಕೊಡುವ ಇವುಗಳು ನೋಡಲು ಸುಂದರವಾಗಿರುತ್ತವೆ. ಧರಿಸಲು ಕೂಡ ಆರಾಮದಾಯಕವಾಗಿರುತ್ತವೆ.
 
9ಮಿನಿ ಸ್ಕರ್ಟ್ಸ್: ಇವು ಹೆಸರಿಗೆ ತಕ್ಕಂತೆ ಶಾರ್ಟ್‌ ಸ್ಕರ್ಟುಗಳು. ಹೆಚ್ಚಾಗಿ ಮುಂದುವರಿದ ನಗರಗಳಲ್ಲಿ ಮಾತ್ರ ಬಳಸುವಂತಹ ಸ್ಕರ್ಟುಗಳಾಗಿದ್ದು, ಮಕ್ಕಳಿಂದ ಎಲ್ಲಾ ಕಡೆಗಳಲ್ಲಿ ಬಳಸಲ್ಪಡುತ್ತವೆ. ಇವುಗಳಲ್ಲಿ ಹಲವು ಮಾದರಿಗಳ ಮಿನಿ ಸ್ಕರ್ಟುಗಳು ದೊರೆಯತ್ತವೆ. ಸರ್ಕಲ್ ಮಿನಿಸ್ಕರ್ಟ್‌, ಗೋರ್ಡ್‌ ಸ್ಕರ್ಟ್‌, ಬಬಲ್ ಸ್ಕರ್ಟ್‌ ಇತ್ಯಾದಿ ಬಗೆಗಳಲ್ಲಿ ದೊರೆಯುತ್ತವೆ. ಬಹಳ ಮಾಡರ್ನ್ ಬಗೆಯ ದಿರಿಸಾದ್ದರಿಂದ ಇವುಗಳು ಸ್ಟೈಲಿಶ್‌ ಲುಕ್ಕನ್ನು ನೀಡುತ್ತವೆ.

10ಪೀಸಂಟ್ ಸ್ಕರ್ಟ್ಸ್: ಪೀಸಂಟ್ ಸ್ಕರ್ಟುಗಳು ಬ್ರೂಮ…ಸ್ಟಿಕ್‌ ಸ್ಕರ್ಟುಗಳಿಗೆ ಹೋಲುತ್ತವೆ. ಆದರೆ ಈ ಬಗೆಗಳಲ್ಲಿ ರಿಂಕಲ್ ಲುಕ್ಕಿರುವುದಿಲ್ಲ, ಮೂರು ಅಥವಾ ನಾಲ್ಕು ಅಡ್ಡ ಲೇಯರುಗಳನ್ನು ಹೊಂದಿರುತ್ತವೆ. ಇವುಗಳು ಕಾಟನ್‌, ಶಿಫಾನ್‌, ಜಾರ್ಜೆಟ್, ಪ್ರಿಂಟೆಡ್‌ ಎಲ್ ಬಗೆಗಳಲ್ಲಿಯೂ ದೊರೆಯುತ್ತವೆ.

11. ಪೆನ್ಸಿಲ್ ಸ್ಕರ್ಟ್ಸ್: ಪೆನ್ಸಿಲ್ ಸ್ಕರ್ಟಗಳು     ನೀ ಲೆನ್‌¤ ಸ್ಕರ್ಟುಗಳಾಗಿದ್ದು ಕೆಳಭಾಗದಲ್ಲಿ ಫಿಟ್ ಇರುತ್ತದೆ. ಇವುಗಳನ್ನು ಧರಿಸಿಡೆಯಲು ಸ್ವಲ್ಪ ಕಠಿಣವೆನಿಸಿದರೂ ಸ್ಟೈಲಿಶ್‌ ಮತ್ತು ಎಲಿಗ್ಯಾಂಟ್ ಲಕ್ಕನ್ನು ನೀಡುತ್ತವೆ. ಪ್ಲೆ„ನ್‌ ಅಥವಾ ಪ್ರಿಂಟೆಡ್‌ ಎರಡೂ ಬಗೆಗಳಲ್ಲಿಯೂ ದೊರೆಯುತ್ತವೆ. ಫಾರ್ಮಲ್ ಮತ್ತು ಪಾರ್ಟಿವೇರ್‌ ಎರಡೂ ಡಿಸೈನುಗಳಲ್ಲಿ ದೊರೆಯಬಲ್ಲವು. ಫಾರ್ಮಲ್ವೇರಾಗಿ ಬಳಸಲು ಬಹಳ ಸೂಕ್ತವೆನಿಸುತ್ತವೆ.

ಪ್ರಭಾ ಭಟ್‌

ಟಾಪ್ ನ್ಯೂಸ್

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.