ರಂಗ ಪಠ್ಯವಾದ “ಕೊಂದವರಾರು?’


Team Udayavani, Jan 5, 2018, 3:18 PM IST

05-41.jpg

ರಥಬೀದಿ ಗೆಳೆಯರು (ರಿ.), ಉಡುಪಿ ಇವರ ಆಶ್ರಯದಲ್ಲಿ ಯುವರಂಗ ತರಬೇತಿ ಶಿಬಿರದಲ್ಲಿ ಪ್ರಸ್ತುತಪಡಿಸಿದ ಪ್ರಸನ್ನರ ನಾಟಕ “ಕೊಂದವರಾರು’ ಶಿಬಿರಾರ್ಥಿಗಳಿಗೆ ರಂಗ ಪಠ್ಯದಂತೆ ಉಪಯೋಗವಾಯಿತು. ಸಂತೋಷ್‌ ನಾಯಕ್‌ ಪಟ್ಲ ಯುವ ರಂಗ ತರಬೇತಿ ಶಿಬಿರದ ಪ್ರಧಾನ ನಿರ್ದೇಶಕ . ಇದು ರಥಬೀದಿ ಗೆಳೆಯರ ಎರಡನೇ ರಂಗ ತರಬೇತಿ ಶಿಬಿರ. 

ರಂಗ ತರಬೇತಿ ಎಂದ ಕೂಡಲೇ ಕೇವಲ ನಾಟಕವಾಡಲು ಕಲಿಸುವುದಲ್ಲ . ರಂಗಕ್ಕೆ ಬೇಕಾದ ಮನಸ್ಥಿತಿಯನ್ನು ನಿರ್ಮಾಣ ಮಾಡಬೇಕು. ಅದಕ್ಕಾಗಿ ರಂಗದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಪಳಗಿದ ತಜ್ಞರು ದಿನಕ್ಕೊಬ್ಬರಂತೆ ವಿಷಯ ಮಾಹಿತಿ ನೀಡಿದರು. ಸಂಗೀತದ ಬಗ್ಗೆ ಗುರುರಾಜ ಮಾರ್ಪಳ್ಳಿ , ಯಕ್ಷ ಹೆಜ್ಜೆಯ ಬಗ್ಗೆ ಗುರು ಬನ್ನಂಜೆ ಸಂಜೀವ ಸುವರ್ಣ, ಸಂಸ್ಕೃತ ನಾಟಕಗಳ ಬಗ್ಗೆ ಡಾ| ರಾಘವೇಂದ್ರ ರಾವ್‌, ರಂಗ ಪ್ರಯೋಗಗಳು ಒಳಗೆ -ಹೊರಗೆ ಕುರಿತು ಐ. ಕೆ. ಬೋಳುವಾರು, ಸ್ಯಾಂಸ್ಲವ್‌ಸ್ಕಿ ಮತ್ತು ಬ್ರೆಕ್ಟ್ ಸಿದ್ಧಾಂತದ ಬಗ್ಗೆ ಪಣಿರಾಜ್‌ರವರು , ಅಭಿನಯದ ಬಗ್ಗೆ ಮೇಘ ಸಮೀರರವರು, ಗಾಂಧಿ ಮತ್ತು ಕಾರಂತರ ಬಗ್ಗೆ ಜಿ. ರಾಜಶೇಖರ್‌ ಮಾತನಾಡಿದರು.

ಸುಳ್ಳಿನ ಮೂಲಕ ಸತ್ಯದ ಶೋಧನೆ ಮಾಡುವುದೇ ನಟನೆ. ಕೊಂದವರಾರು ನಾಟಕದಲ್ಲಿ ಅದಕ್ಕೆ ಜೀವ ತುಂಬುವ ಪ್ರಯತ್ನ ಪ್ರಸನ್ನ ಮಾಡಿದ್ದಾರೆ. ಅದೇ ಕೆಲಸ ಈ ಶಿಬಿರದಲ್ಲಿ ಕೂಡ ಆಗಿದೆ. ನಾಟಕದಲ್ಲಿ ಅಹಿಂಸೆಯ ಮೀಮಾಂಸೆ, ಯಂತ್ರ ನಾಗರಿಕತೆಯ ವಿವೇಚನೆ, ಅಸ್ಪೃಶ್ಯತೆಯ ಸಮಸ್ಯೆಗಳೊಂದಿಗೆ ನೈತಿಕತೆಯ ವಿಷಯವನ್ನು ಚರ್ಚಿಸುತ್ತಾರೆ.

ನಾಟಕದ ಪ್ರಾರಂಭವೇ ನಾಟಕದ ರಿಹರ್ಸಲ್‌ನಲ್ಲಿ ಪಾತ್ರಕ್ಕಾಗಿ ಕಿತ್ತಾಟವಾಗುವ ದೃಶ್ಯದೊಂದಿಗೆ ಆಗುತ್ತದೆ. ಪರಸ್ಪರ ದೂಷಣೆಯಾದ ಬಳಿಕ ರಾಮಿ ಮೇಡಂ ಸಮಜಾಯಿಸಿ ಮಾಡಿ ಪಾತ್ರಗಳನ್ನು ಹಂಚುತ್ತಾರೆ. ನ್ಯಾಯಾಧೀಶರಾಗಿ ರಾಮಿ ಮೇಡಂ, ಒಬ್ಬ ಗುಮಾಸ್ತ, ಇಬ್ಬರು ವಕೀಲರು, ವಕೀಲರೊಡನೆ ನಡೆಯುವ ತರ್ಕ, ಗೋಡ್ಸೆ ಮತ್ತೆ ಹುಟ್ಟಿ ಬರಲಿ, ರಕ್ತದ ಹೊಳೆ ಹರಿಯಲಿ, ಅಖಂಡ ಹಿಂದೂ ರಾಷ್ಟ್ರ ಸ್ಥಾಪಿತವಾಗಲಿ ಹೀಗೆ ತರ್ಕ ಅತಿರೇಕಕ್ಕೆ ಹೋಗುತ್ತದೆ. ನಟನು ಅತಿರೇಕಕ್ಕೆ ಹೋಗಬಾರದು ಎಂದು ತಿಳಿ ಹೇಳುತ್ತಾರೆ. ನಾಟಕದುದ್ದಕ್ಕೂ ಇಂತಹ ಘಟನೆ ಆಗಾಗ ನಡೆಯುತ್ತದೆ.

ನಾಟಕದಲ್ಲಿ ಬರುವ ಠೊಣಪ, ಗಣಪ ಪಾತ್ರಗಳು ಮನೋರಂಜನೆಯನ್ನು ನೀಡುತ್ತವೆ. ಗಾಂಧಿ- ಚಾಪ್ಲಿನ್‌ರ ಭೇಟಿ, ಠಾಗೋರ್‌- ಗಾಂಧಿ ಭೇಟಿ, ಗಾಂಧೀಜಿಯವರು ಆಧುನಿಕ ಯಂತ್ರ ವಿರೋಧಿ ಅಂತ ಗುಂಪಿನಿಂದ ಒಬ್ಬ ಹೇಳಿದರೆ, ಹಲ್ಲಿನ ಕಸ ತೆಗೆಯುವ ಕಡ್ಡಿಯೂ ಒಂದು ಯಂತ್ರವೇ ಎನ್ನುತ್ತಾನೆ ಗಾಂಧಿ ಪಾತ್ರಧಾರಿ.

 ಪ್ರಜ್ವಲ್‌ ಕೆ., ಅಭಿಷೇಕ್‌ ಉಪಾಧ್ಯ ಕೆ., ತ್ರಿವರ್ಣ, ನೇತ್ರಾವತಿ, ದೀಕ್ಷಿತ್‌ ಸುವರ್ಣ, ಸೊನಾಲಿ, ಕಾರ್ತಿಕ್‌ ಪ್ರಸಾದ್‌, ಗೌತಮ್‌, ಅಜಿತ್‌ ಭಟ್‌, ನಾಗೇಶ್‌ ಶೆಟ್ಟಿ ಮುಂತಾದವರ ನಟನೆ ಮೆಚ್ಚುವಂತಹದ್ದು . ಪುನರ್ವಸು ಉದ್ಯಾವರ ಸಹಕಾರ ನೀಡಿದರು. ಬೆಳಕು ಚೆನ್ನಾಗಿ ಮೂಡಿಬಂತು. ದಿವಾಕರ ಕಟೀಲ್‌ರ ಸಂಗೀತ ನಾಟಕದ ಓಘಕ್ಕೆ ಚೆನ್ನಾಗಿ ಹೊಂದಿಕೆಯಾಯಿತು. ಇಡೀ ನಾಟಕದಲ್ಲಿ ದೃಶ್ಯಗಳು ಬಂದು ಹೋಗುವಾಗ ಹಿನ್ನೆಲೆ ಸಂಗೀತ ಮತ್ತು ಬೆಳಕಿನ ಸಂಯೋಜನೆ ಪೂರಕವಾಗಿದ್ದು , ವಸ್ತ್ರ ವಿನ್ಯಾಸವೂ ತುಂಬಾ ಸರಳವಾಗಿತ್ತು. ಸಮರ್ಥ ನಿರ್ದೇಶನ ನಾಟಕ ಗೆಲುವಿನ ಮುಖ್ಯ ಕಾರಣವಾಗಿತ್ತು. ಅದಕ್ಕಾಗಿ ಸಂತೋಷ್‌ ನಾಯಕ್‌ ಪಟ್ಲ ಅವರನ್ನು ಅಭಿನಂದಿಸಬೇಕು.

ಯುವ ರಂಗ ತರಬೇತಿ ಶಿಬಿರದ ಗೆಲುವಿಗೆ ರಥಬೀದಿ ಗೆಳೆಯರಾದ ಪ್ರೊ| ಮುರಳೀಧರ ಉಪಾಧ್ಯಾಯ, ಪ್ರೊ| ಸುಬ್ರಹ್ಮಣ್ಯ ಜೋಷಿ, ಉದ್ಯಾವರ ನಾಗೇಶ್‌ ಕುಮಾರ್‌ ಮತ್ತು ಸಂತೋಷ್‌ ಕುಮಾರ್‌ ಶೆಟ್ಟಿ ಹಿರಿಯಡಕ ಸಹಕರಿಸಿದರು. 

ಜಯರಾಂ ನೀಲಾವರ 

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.