ಆಧಾರ್ ಡಾಟಾಬೇಸ್ ಕನ್ನ ಸಾಧ್ಯ: ಎಡ್ವರ್ಡ್ ಸ್ನೋಡೆನ್ ಎಚ್ಚರಿಕೆ
Team Udayavani, Jan 5, 2018, 3:43 PM IST
ಹೊಸದಿಲ್ಲಿ : ಭಾರತ ಸರಕಾರ ಹೇಳಿಕೊಂಡಿರುವಂತೆ ಆಧಾರ್ ಡಾಟಾಬೇಸ್ ಸುರಕ್ಷಿತವಲ್ಲ; ಅದಕ್ಕೆ ಹ್ಯಾಕರ್‌ಗಳು ಸುಲಭದಲ್ಲಿ ಕನ್ನ ಹಾಕಬಹುದಾಗಿದೆ ಎಂದು ಅಮೆರಿಕದ ವ್ಹಿಸಲ್ ಬ್ಲೋವರ್ ಎಡ್ವರ್ಡ್ ಸ್ನೋಡೆನ್ ಹೇಳಿದ್ದಾರೆ.
ಭಾರತದಲ್ಲಿ ಆಧಾರ್ ಡಾಟಾ ಬೇಸ್‌ಗೆ ಅಕ್ರಮವಾಗಿ ಕೈ ಹಾಕಲಾಗಿರುವ ಬಗ್ಗೆ ಸಿಬಿಎಸ್ ಪತ್ರಕರ್ತ ಝಾಕ್ ವಿಟೇಕರ್ ಅವರು ಬಝ್ಫೀಡ್ ವರದಿಗೆ ನೀಡಿರು ಪ್ರತಿಕ್ರಿಯೆಗೆ ರೀ-ಟ್ವೀಟ್ ಮಾಡಿರುವ ಸ್ನೋಡನ್, ಖಾಸಗಿ ಮಾಹಿತಿಗಳ ಸುರಕ್ಷಿತವಾಗಿರಬೇಕು ಎಂಬುದು ಎಲ್ಲ ಸರಕಾರಗಳ ಸಹಜ ಪ್ರವೃತ್ತಿ ಮತ್ತು ಆಶಯವಾಗಿರುತ್ತದೆ; ಆದರೆ ಅದಕ್ಕೆ ಕನ್ನ ಹಾಕುವುದಕ್ಕೆ ಯಾವುದೇ ಕಾನೂನು ಒಂದು ಅಡಚಣೆಯೇ ಅಲ್ಲ ಎಂಬುದನ್ನು ಇತಿಹಾಸವೇ ನಮಗೆ ತೋರಿಸುತ್ತದೆ; ಪರಿಣಾಮವಾಗಿ ಅವು ಸುಲಭದಲ್ಲಿ ಚೋರರ ಕೈವಶವಾಗುತ್ತವೆ’ ಎಂದು ಹೇಳಿದ್ದಾರೆ.
ವಿಟೇಕರ್ ಅವರು ಈ ಮೊದಲು ಭಾರತವು ತನ್ನ 1.2 ಶತಕೋಟಿ ಜನರ ಖಾಸಗಿ ಮಾಹಿತಿಗಳ ಆಧಾರ್ ಡಾಟಾ ಬೇಸ್ ಹೊಂದಿದೆ; ಅದಕ್ಕೆ ಕನ್ನ ಹಾಕಲಾಗಿದೆ ಎಂದು ವರದಿಯಾಗಿದೆ. ಆ್ಯಡ್ಮಿನ್ ಖಾತೆಗಳು ಸುಲಭದಲ್ಲಿ ಕನ್ನ ಹಾಕುವವರ ವಶವಾಗುತ್ತವೆ ಮತ್ತು ಅವು ಮಾರಲ್ಪಡುತ್ತವೆ’ ಎಂದು ಎಚ್ಚರಿಸಿದ್ದರು.
ಟ್ರಿಬ್ಯೂನ್ ಪತ್ರಿಕೆ ನಡೆಸಿದ್ದ ತನಿಖೆಯಲ್ಲಿ ಆಧಾರ್ ಭದ್ರತೆಯಲ್ಲಿ ಲೂಪ್ ಹೋಲ್ ಇರುವುದು ಬಹಿರಂಗವಾಗಿತ್ತು. ಆಧಾರ್ ಕಾರ್ಡ್ ಡೇಟಾ ಭದ್ರತೆ ಮತ್ತು ಸುರಕ್ಷೆಯ ಬಗ್ಗೆ ಯುಐಡಿಎಐ ಮತ್ತು ಕೇಂದ್ರ ಸರಕಾರ ಎಷ್ಟೇ ಭರವಸೆ ನೀಡಿದರೂ 12 ಡಿಜಿಟ್‌ಗಳ ಈ ವಿಶಿಷ್ಟ ಗುರುತು ಸಂಖ್ಯೆಯ ಡಾಟಾಗಳನ್ನು ಸುಲಭದಲ್ಲಿ ಮತ್ತು ಅನಿರ್ಬಂಧಿತವಾಗಿ ಪಡೆಯಬಹುದಾಗಿದೆ ಎಂಬುದು “ದ ಟ್ರಿಬ್ಯೂನ್’ತನಿಖೆಯಲ್ಲಿ ಬಹಿರಂಗವಾಗಿತ್ತು.
ತನ್ನ ವರದಿಗಾರರು ವಾಟ್ಸಾಪ್‌ನಲ್ಲಿ ಅನಾಮಿಕ ಮಾರಾಟಗಾರರ ಮೂಲಕ, ಪೇಟಿಎಂ ನಲ್ಲಿ ಏಜಂಟ್ ಒಬ್ಬರಿಗೆ ಕೇವಲ 500 ರೂ. ಪಾವತಿಸಿ ಆಧಾರ್ ಡಾಟಾ ಖರೀದಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿತ್ತು.
ಖರೀದಿ ನಡೆಸಿದ ಕೇವಲ 10 ನಿಮಿಷಗಳಲ್ಲಿ ಆ ಏಜಂಟ್ ಪತ್ರಿಕಾ ವರದಿಗಾರನಿಗೆ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಕೊಟ್ಟಿದ್ದಾನೆ. ಇದರ ಮೂಲಕ ನೂರು ಕೋಟಿ ಆಧಾರ್ ನಂಬರ್‌ಗಳಿಗೆ ಅನಿರ್ಬಂಧಿತ ಸಂಪರ್ಕ ದೊರಕಿ ಅವುಗಳಲ್ಲಿನ ಖಾಸಗಿ ಮಾಹಿತಿಗಳನ್ನು ತನಿಖಾ ವರದಿಗಾರ ಪಡೆದಿರುವುದಾಗಿ “ದ ಟ್ರಿಬ್ಯೂನ್’ ವರದಿ ತಿಳಿಸಿತ್ತು.
ಲಾಗ್ ಇನ್ ಗೇಟ್‌ವೇ ಮೂಲಕ ಯಾರೇ ಆದರೂ ಯಾವುದೇ ನಿರ್ದಿಷ್ಟ ಆಧಾರ್ ನಂಬರ್ ಅನ್ನು ಪೋರ್ಟಲ್‌ನಲ್ಲಿ ತಲುಪಬಹುದಾಗಿದ್ದು ಆ ನಂಬರ್‌ನ ವ್ಯಕ್ತಿಯ ಹೆಸರು, ವಿಳಾಸ, ಪೋಸ್ಟಲ್ ಕೋಡ್, ಫೋಟೋ, ಫೋನ್ ನಂಬರ್, ಇ-ಮೇಲ್ ವಿಳಾಸ ಇತ್ಯಾದಿಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ. ಇದಕ್ಕಿಂತ ಗಂಭೀರವಾದ ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಹೆಚ್ಚುವರಿಯಾಗಿ 300 ರೂ.ಗಳನ್ನು ಏಜಂಟ್‌ಗೆ ಪಾವತಿಸಿದರೆ ಆಧಾರ್ ಕಾರ್ಡ್ ಪ್ರಿಂಟ್ ಮಾಡಬಲ್ಲ ಸಾಫ್ಟ್ ವೇರನ್ನು ಕೂಡ ಆತ ಒದಗಿಸುತ್ತಾನೆ ಎಂದು ಪತ್ರಿಕಾ ವರದಿ ತಿಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ
Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.