ಏಶ್ಯನ್ ಪ್ರಭಾವ: ಮುಂಬಯಿ ಶೇರು 184 ಅಂಕ ಜಂಪ್
Team Udayavani, Jan 5, 2018, 4:06 PM IST
ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿನ ತೇಜಿ, ಡಾಲರ್ ಎದುರು ಚೇತರಿಕೆ ಕಂಡ ರೂಪಾಯಿ ಮತ್ತು ಸದ್ಯದಲ್ಲೇ ಅನಾವರಣಗೊಳ್ಳಲಿರುವ ಕಂಪೆನಿಗಳ 3ನೇ ತ್ತೈಮಾಸಿಕ ಫಲಿತಾಂಶಗಳ ಬಗೆಗಿನ ವಿಶ್ವಾಸ – ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು 184.21 ಅಂಕಗಳ ಉತ್ತಮ ಏರಿಕೆಯನ್ನು ಕಂಡು 34,153.85 ಅಂಕಗಳ ಮಟ್ಟವನ್ನು ತಲುಪಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 54.10 ಅಂಕಗಳ ಏರಿಕೆಯೊಂದಿಗೆ 10,558.90 ಅಂಕಗಳ ಮಟ್ಟವನ್ನು ತಲುಪಿತು.
ಇಂದು ವಹಿವಾಟಿಗೆ ಒಳಪಟ್ಟ 30,063 ಶೇರುಗಳ ಪೈಕಿ 1,709 ಶೇರುಗಳು ಮುನ್ನಡೆ ಸಾಧಿಸಿದವು; 1,226 ಶೇರುಗಳು ಹಿನ್ನಡೆಗೆ ಗುರಿಯಾದವು; 128 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. ಮಿಡ್ ಕ್ಯಾಪ್ ಶೇರುಗಳು ಇಂದು ಹೊಸ ದಾಖಲೆಯ ಎತ್ತರವನ್ನು ತಲುಪಿದವು.
ಇಂದಿನ ಟಾಪ್ ಗೇನರ್ಗಳು : ಐಡಿಯಾ ಸೆಲ್ಯುಲರ್, ಎಸ್ ಬ್ಯಾಂಕ್, ಬಜಾಜ್ ಫಿನಾನ್ಸ್, ಅದಾನಿ ಪೋರ್ಟ್, ಭಾರ್ತಿ ಏರ್ಟೆಲ್; ಟಾಪ್ ಲೂಸರ್ಗಳು : ಭಾರ್ತಿ ಇನ್ಫ್ರಾಟೆಲ್, ಹಿಂಡಾಲ್ಕೊ, ಯುಪಿಎಲ್, ಎಚ್ಪಿಸಿಎಲ್, ಬಿಪಿಸಿಎಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.