ಮಾದರಿ ಬಡಾವಣೆ: ಕುಳಾಯಿ ಗೋಕುಲನಗರ

Team Udayavani, Jan 6, 2018, 10:03 AM IST

6-Jan-3.jpg

ಕುಳಾಯಿ: ಕುಳಾಯಿ ಸಮೀಪ ಗೋಕುಲ ನಗರ ಬಡಾವಣೆ ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ದ್ವಾರ ಪ್ರವೇಶಿಸುತ್ತಿದ್ದಂತೆ ಅಪ್ಪಟ ತುಳು ಭೂಮಿಯೊಂದನ್ನು ಪ್ರವೇಶಿಸಿದ ಅನುಭವ.

ಹಚ್ಚ ಹಸುರು ಬಡಾವಣೆಗೆ ಬರುವವರ ಮನ ಮುದಗೊಳಿಸಿದರೆ, ಗೋಡೆಗಳಲ್ಲಿ ಇರುವ ವರ್ಣಮಯ ತುಳುನಾಡಿನ ಸಂಪ್ರದಾಯ ಬಿಂಬಿಸುವ ಚಿತ್ತಾರ ಆಕರ್ಷಿಸುತ್ತದೆ. ಮೊದಲಿಗೆ ಕಾಣಸಿಗುವುದೇ ಸೌಹಾರ್ದದ ಸಂಕೇತದ ಚಿತ್ರ. ತುಳುನಾಡಿನ ಆಟಿ ಕಳಂಜ ಆಟಿಯನ್ನು ನೆನಪಿಸಿದರೆ, ನೇಮದ ಅಣಿ ಭೂತಕೋಲವನ್ನು ಯಕ್ಷಗಾನದ ಮಹಿಷಾಸುರ ಚಿತ್ರವು ಯಕ್ಷಗಾನದ ಕೊನೆಯ ಭಾಗ ಮಹಿಷಾಸುರ ಬರುವ ಭಾಗವನ್ನು ನೆನಪಿಸುತ್ತದೆ. ಇನ್ನು ಮೊಗವೀರ ಸಾಂಪ್ರದಾಯಿಕ ಮೀನು ಬಲೆ ಹಾರಿಸುವ ಚಿತ್ರ, ಕೃಷ್ಣಾಷ್ಟಮಿಯ ಮಡಕೆ ಒಡೆಯುವ, ಹುಲಿ ವೇಷ, ಕೋಳಿ ಅಂಕ, ರಥೋತ್ಸವ, ದೇವರ ಬಲಿ ಹೀಗೆ ತುಳುನಾಡ ಹಬ್ಬ ಹರಿದಿನ ಚಿತ್ರಗಳು ಕಣ್ಮನ ಸೆಳೆಯುತ್ತವೆ.

ಸ್ವಚ್ಛತೆಗೆ ಮಾದರಿ
ಗೋಕುಲ ನಗರ ನಿವಾಸಿಗಳ ಸಂಘ ಬಡಾವಣೆಯನ್ನು ಮಾದರಿಯಾಗಿ, ಸ್ವಚ್ಛವಾಗಿ ಇಡಲು ಹಲವು ವರ್ಷಗಳ ಹಿಂದೆಯೇ ಸೈಕಲ್‌ ಮೂಲಕ ಮನೆ ಮನೆ ತೆರಳಿ ತ್ಯಾಜ್ಯ ಸಂಗ್ರಹಿಸಿದ ಕೀರ್ತಿ ಹೊಂದಿದೆ. ಇದೀಗ ರಸ್ತೆಯ ಎರಡೂ ಬದಿ ಕಾಂಕ್ರೀಟ್‌ ಹಾಕುವ ಮೂಲಕ ಹುಲ್ಲು ಬೆಳೆಯದಂತೆ ಮಾಡಲಾಗಿದೆ. ಇಲ್ಲವಾದರೆ ವರ್ಷಕ್ಕೆ ಹಲವು ಸಾವಿರ ರೂಪಾಯಿ ಇದಕ್ಕಾಗಿಯೇ ಮೀಸಲು ಇಡಬೇಕಾಗಿತ್ತು.

ಸ್ವಚ್ಛತೆಯ ಸರ್ವೇಗೆ ಸೂಕ್ತ
ಸ್ವಚ್ಛತೆಯ ಸರ್ವೇ ಇದೀಗ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಇದಕ್ಕೆ ಕುಳಾಯಿ ಗೋಕುಲನಗರ ಸೂಕ್ತವಾಗಿದೆ. ಇಲ್ಲಿನ ಸಂಘವು ಪ್ರತೀ ವಾರ ಸ್ವಚ್ಛತ ಕಾರ್ಯದ ಮೇಲುಸ್ತುವಾರಿ ವಹಿಸಿ ಪರಿಶೀಲನೆ ನಡೆಸುತ್ತದೆ. ಇಲ್ಲಿಂದ ಪ್ರತಿ ದಿನ ಸಂಗ್ರಹಿಸಲಾದ ಕಸವನ್ನು ಪಾಲಿಕೆ ವತಿಯಿಂದ ಬರುವ ವಾಹನಕ್ಕೆ ನೀಡಲಾಗುತ್ತದೆ. ಇಲ್ಲಿನ ನಿವಾಸಿಗಳೂ ಸ್ವತ್ಛತೆಯ ಕುರಿತಾಗಿ ಜಾಗೃತರಾಗಿ ಬಡಾವಣೆಯನ್ನು ಶುಚಿತ್ವದಿಂದ ಇಟ್ಟುಕೊಳ್ಳುವಲ್ಲಿ ಒಗ್ಗಟ್ಟಾಗಿ ಶ್ರಮಿಸುತ್ತಾರೆ ಎನ್ನುತ್ತಾರೆ ಸಂಘದ ಉಪಾಧ್ಯಕ್ಷ ವಿಜಯ್‌ ಸುವರ್ಣ.

ಚಟುವಟಿಕೆಗಳಿಗಿಲ್ಲಿ ಪ್ರೋತ್ಸಾಹ
ಸಂಘದ ಚಟುವಟಿಕೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ವಿದ್ಯಾರ್ಥಿವೇತನ, ಸಂಘದ ನಿವಾಸಿಗಳ ಅನುಕೂಲಕ್ಕಾಗಿ ಆರೋಗ್ಯ ಶಿಬಿರ, ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬಡಾವಣೆಯಲ್ಲಿ ಸದಾ ಉತ್ಸಾಹ, ಸಂತಸದ ಚಿಲುಮೆ ಇರುವಂತೆ ಮಾಡಿದರೆ, ಹಿರಿಯರಿಗೆ ವಿಶ್ರಾಂತಿ ಕಟ್ಟೆ, ದೇಶದ ಹಬ್ಬವನ್ನು ಆಚರಿಸಲು ಧ್ವಜಸ್ತಂಭವಿದೆ. ಬಡಾವಣೆಯ ನಾಗರಿಕರ ಕ್ರೀಡೆಗಾಗಿ ಕ್ರೀಡಾಉಪಕರಣಗಳಿವೆ. 17ನೇ ವಾರ್ಷಿಕೋತ್ಸವ ಸಂಭ್ರಮವನ್ನು ಸಂಘ ಜ. 6 ರಂದು ಆಚರಿಸುತ್ತಿದ್ದು, ನೂತನವಾಗಿ ಕೈಗೊಂಡ ವರ್ಣಚಿತ್ರಗಳ ಉದ್ಘಾಟನೆ, ವಿವಿಧ ಮೂಲ ಸೌಲಭ್ಯಗಳ ಅನಾವರಣ ನಡೆಯಲಿದೆ.

ಮಾದರಿಯಾಗಿ ರೂಪಿಸಿದ್ದೇವೆ
ಜ. 6ರಂದು ಗೋಕುಲನಗರ ನಿವಾಸಿಗಳ ಸಂಘದ ವಾರ್ಷಿಕೋತ್ಸವವಿದೆ. ಇದಕ್ಕೂ ಮುನ್ನ ಬಡಾವಣೆಯನ್ನು ವರ್ಣಮಯಗೊಳಿಸಿದ್ದೇವೆ. ತುಳು ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದೇವೆ. ನಮ್ಮ ಸಂಘದ ಖರ್ಚಿನಲ್ಲಿಯೇ ನಮ್ಮ ಬಡಾವಣೆಯನ್ನು ಇತರರಿಗೆ ಮಾದರಿಯಾಗಿ ರೂಪಿಸಿದ್ದೇವೆ. ಪಾಲಿಕೆ ವತಿಯಿಂದ ಸ್ವಚ್ಛತೆಯ ಕುರಿತಾಗಿ ಬಡಾವಣೆಗೆ ಇಂತಿಷ್ಟು ಹಣ ಬಿಡುಗಡೆ ಮಾಡಿ ಸ್ಪರ್ಧೆ ಏರ್ಪಡಿಸಿದಲ್ಲಿ ಪ್ರತೀ ಬಡಾವಣೆ ಸ್ವಚ್ಛವಾಗಿ, ಸುಂದರವಾಗಿ ಇರುವಂತೆ ನೋಡಿಕೊಳ್ಳಲು ಸ್ಪರ್ಧೆ ಏರ್ಪಡುತ್ತದೆ. ಪಾಲಿಕೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದರೆ ನಮ್ಮ ಸಂಘ ಬೆಂಬಲ ನೀಡುತ್ತದೆ.
ಪದ್ಮರಾಜ್‌, ಅಧ್ಯಕ್ಷ,
  ಗೋಕುಲನಗರ ನಿವಾಸಿಗಳ ಸಂಘ, ಕುಳಾಯಿ

ಟಾಪ್ ನ್ಯೂಸ್

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

4-mng-2

Mangaluru: ಹೆಲಿಕಾಪ್ಟರ್ ಸಂಚಾರ: ಸ್ಥಳ ಬದಲಾವಣೆ

6

Mangaluru; ನಗರದ ಇನ್ನಷ್ಟು ಕಡೆ ಬೀದಿ ಬದಿ ವ್ಯಾಪಾರಸ್ಥರ ವಲಯ: ಮೇಯರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.