ಅಭಯಾಕ್ಷರ ಸಂಗ್ರಹಕ್ಕೂ ಕೇಸು ದಾಖಲಿಸುವ ಷಡ್ಯಂತ್ರ
Team Udayavani, Jan 6, 2018, 10:24 AM IST
ಉಪ್ಪಿನಂಗಡಿ: ಅಭಯಾಕ್ಷರ ಯಾರ ವಿರುದ್ಧವೂ ಅಲ್ಲ. ನಮಗಾಗಿ ಜೀವ ಸವೆಸುವ ಗೋವನ್ನು ಉಳಿಸಲು ಈ ಆಂದೋಲನ. ಆದರೆ ಅಭಯಾಕ್ಷರ ಸಂಗ್ರಹಿಸಿದ ಬಗ್ಗೆ ಪ್ರಕರಣ ದಾಖಲಿಸುವ ಷಡ್ಯಂತ್ರ ನಡೆದಿದೆ. ನಿನ್ನೆ ಗೋಹತ್ಯೆ, ಇಂದು ನಮ್ಮ ಹತ್ಯೆ, ನಾಳೆ ನಮ್ಮ ಮಕ್ಕಳೂ ಹತ್ಯೆಯಾಗಬಹುದು. ದೇಶ, ಸಂಸ್ಕೃತಿ, ಗೋವು ಉಳಿಯಬೇಕಾದರೆ ನಾವೆಲ್ಲ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ ನೀಡಿದರು.
ಅವರು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಗೋ ಅಭಯಾಕ್ಷರ ಸಮರ್ಪಣಾ ಸಮಾರಂಭ ಮತ್ತು ಅಭಯ ಗೋಯಾತ್ರೆ ಸಂದೇಶ ಸಭೆಯಲ್ಲಿ ಆಶೀರ್ವಚನ ನೀಡಿದರು. ದೇಶದಲ್ಲಿ ನೂರು ಕೋಟಿಗೂ ಅಧಿಕ ಮಂದಿ ಗೋಹತ್ಯೆಯಾಗಬಾರದು ಎಂದು ಬಯಸುತ್ತಾರೆ. ಅವರ ಅಭಿಪ್ರಾಯವನ್ನು ಅಭಿವ್ಯಕ್ತ ಪಡಿಸಲು ಇರುವ ವೇದಿಕೆಯೇ ಅಭಯಾಕ್ಷರ ಅಭಿಯಾನ. ಗೋಹತ್ಯೆ ಮಾಡಬಾರದು ಎನ್ನುವವರು ದೇಶದ ಬಹುತೇಕ ಮಂದಿ. ಆದರೆ ಗೋವನ್ನು ಕೊಲ್ಲಬೇಕು ಎನ್ನುವವರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ವಿಶ್ಲೇಷಿಸಿದರು.
ಸಂಯಮ, ದಾನಶೀಲತೆ, ಕರುಣೆ ಜೀವನಕ್ಕೆ ಅನಿವಾರ್ಯ. ನಮಗೆ ಅಹಿತವಾದದ್ದನ್ನು ಬೇರೆಯವರಿಗೆ ಮಾಡಬಾರದು. ಎಷ್ಟು ದೊಡ್ಡ ಲಾಭವಿದ್ದರೂ ಗೋಹತ್ಯೆಯಂಥ ಪಾಪಕೃತ್ಯಕ್ಕೆ ಕೈಹಾಕಬಾರದು. ಹೆತ್ತ ತಾಯಿಯ ಎದೆ ಸೀಳಲು ಸಾಧ್ಯವೇ? ನಮ್ಮ ಮಗುವನ್ನು ಕೊಲ್ಲಲು ಸಾಧ್ಯವೇ ? ಅದಾಗದು ಎಂದ ಮೇಲೆ ಗೋವಿನ ಹತ್ಯೆ ಸರಿಯೇ ? ಎಂದು ಪ್ರಶ್ನಿಸಿದರು.
ಗೋಸಂರಕ್ಷಣೆ ಭಾಗ್ಯ ಏಕೆ ನೀಡಿಲ್ಲ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕರಾವಳಿಯಲ್ಲಿ ಗೋವಿನ ಹಾಗೂ ಜನರ ರಕ್ತ ಹರಿಯುತ್ತಿದೆ. ಇದನ್ನು ತಡೆಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಗೋವನ್ನು ಉಳಿಸಲು ಜನಾಂದೋಲನವೇ ನಡೆಯಬೇಕು. ರಾಜ್ಯದ ಜನರಿಗೆ ಹಲವು ಭಾಗ್ಯಗಳನ್ನು ಕರುಣಿಸಿರುವ ಮುಖ್ಯಮಂತ್ರಿಗಳು ಗೋಸಂರಕ್ಷಣೆಯ ಭಾಗ್ಯವನ್ನು ಇನ್ನೂ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರು. ಗೋಸಂರಕ್ಷಣೆ ಚಳವಳಿಗೆ ಅಂತಿಮವಾಗಿ ಜಯ ನಿಶ್ಚಿತ. ಗೋಮಾತೆ ವಿಶ್ವಮಾತೆಯಾಗಬೇಕು ಎಂದರು.ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಉತ್ತರಕಾಶಿಯ ಕಪಿಲಾಶ್ರಮದ ಶ್ರೀ ರಾಮಚಂದ್ರ ಗುರೂಜಿ ಗೋಸಂದೇಶ ನೀಡಿದರು.
ಗಣ್ಯರಾದ ಮುರಳೀಕೃಷ್ಣ ಹಸಂತಡ್ಕ, ಸಂಜೀವ ಮಠಂದೂರು, ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಅನಿಲ್ ಕುಮಾರ್ ದಡ್ಡು, ಸುನಿಲ್ ದಡ್ಡು, ಅಲಿಮಾರ್ ರಘುನಾಥ ರೈ, ರಾಧಾಕೃಷ್ಣ ನಾೖಕ್ ನೆಕ್ಕಿಲಾಡಿ, ಮಹೇಶ್ ಬಜತ್ತೂರು, ಹರಿಪ್ರಸಾದ್ ಪೆರಿಯಾಪು, ಈಶ್ವರಿ ಬೇರ್ಕಡವು, ಹೇರಂಭ ಶಾಸ್ತ್ರಿ, ಜ್ಯೋತಿ ಹೇರಂಭ ಶಾಸ್ತ್ರಿ, ಕೆದ್ಲ ಅಶೋಕ ಭಟ್, ಶ್ರೀಧರ ಭಟ್, ರಮೇಶ್ ಭಟ್ ಸರವು, ಮಧು ಗೋಮತಿ, ವಿನಾಯಕ ಭಟ್ ತಲವಟ್ಟ, ಸಾರಂಗ ಶ್ರೀàನಾಥ್, ಶಿಶಿರ್ ಹೆಗಡೆ, ಉದಯಶಂಕರ ಭಟ್ ಮಿತ್ತೂರು, ರಾಮಚಂದ್ರ ಮಣಿಯಾಣಿ, ಕೇಶವ ಗೌಡ, ಕರುಣಾಕರ ಸುವರ್ಣ, ವೆಂಕಟೇಶ, ಕೈಲಾಶ್ ರಾಜ್, ಗೋಪಾಲ ಭಟ್, ಹರೀಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.