‘ಕೃಷಿಯ ಜತೆ ಮೀನುಗಾರಿಕೆಗೆ ಉತ್ತೇಜನದಿಂದ ಯಶಸ್ಸು’
Team Udayavani, Jan 6, 2018, 10:51 AM IST
ಮಹಾನಗರ: ರೈತನು ತನ್ನ ಕೃಷಿ ಚಟುವಟಿಕೆಯ ಜತೆಗೆ ಮೀನು ಸಾಕಾಣಿಕೆಗೆ ಉತ್ತೇಜನ ನೀಡಿದಲ್ಲಿ ಕೃಷಿಯಲ್ಲಿ ಇನ್ನಷ್ಟು ಅಭಿವೃದ್ದಿ ಕಾಣಲು ಸಾಧ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಶಿವಕುಮಾರ್ ಮಗದ ಹೇಳಿದರು.
ಎಕ್ಕೂರು ಕೃಷಿ ವಿಜ್ಞಾನ ಕೇಂದ್ರ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಕಿಂಡಿ ಅಣೆಕಟ್ಟುಗಳಲ್ಲಿ ಮೀನು ಕೃಷಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ರೈತನು ತನ್ನ ಕೃಷಿ ಚಟುವಟಿಕೆ ಮಧ್ಯೆ ಮೀನು ಸಾಕಾಣೆ ಉತ್ತೇಜನ ನೀಡಿದಲ್ಲಿ ಖಂಡಿತ ಅವನ ಪಾಲಿಗೆ ಉಳಿದ ಕೃಷಿಗಿಂತ ಮೀನು ಸಾಕಾಣೆ ಹೆಚ್ಚು ಲಾಭದಾಯಕ ಎನಿಸಲಿದೆ. ಆದರೆ ಮಾಹಿತಿ ಕೊರತೆಯಿಂದ ಇದು ಸಾಧ್ಯವಾಗಿಲ್ಲ ಎಂದರು.
ಮೀನು ಕೃಷಿಗೆ ವಿಫುಲ ಅವಕಾಶ
ಕರಾವಳಿಯಲ್ಲಿ ಯಥೇತ್ಛ ಕೆರೆ, ಕಿಂಡಿ ಅಣೆಕಟ್ಟುಗಳಿದ್ದು ಅದರಲ್ಲಿ ಮೀನು ಕೃಷಿಗೆ ವಿಫುಲ ಅವಕಾಶಗಳಿವೆ. ಕೃಷಿ ವಿಜ್ಞಾನ ಇಲಾಖೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಮೀನು ಸಾಕಾಣೆ ಪ್ರೋತ್ಸಾಹ ನೀಡಲಾಗುವುದು. ಸಾಕಾಣೆ ಮಾಡಿದ ಮೀನುಗಳನ್ನು ಖರೀದಿ ಮಾಡಲು ಬೇರೆ ಬೇರೆ ವ್ಯವಸ್ಥೆಗಳನ್ನು ರೂಪಿಸಲಾಗುವುದು. ವಿಶ್ವಾದ್ಯಂತ ತೆಲಾಪಿಯ ಮೀನಿಗೆ ವಿಶೇಷ ಬೇಡಿಕೆಯಿದ್ದು, ಕರಾವಳಿ ಪರಿಸರ ಈ ಮೀನುಗಾರಿಕೆ ಹೆಚ್ಚು ಸೂಕ್ತವಾಗಿದೆ ಎಂದರು.
ರಾಜ್ಯದಲ್ಲಿ 82 ಜಲಾಶಯ, 5,000 ದೊಡ್ಡ ಕೆರೆ, 19 ಸಾವಿರ ಸಣ್ಣ ಕೆರೆ, 5ಸಾವಿರ ಕಿಲೋ ಮೀಟರ್ ನದಿಗಳಿವೆ. ಆದರೆ ಒಳ ನಾಡಿನ ಮೀನು ಕೃಷಿ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ ಎಂದರು. ಮಂಜುಳಾ, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ| ಸುಶ್ಮಿತಾ ರಾವ್, ಮೀನುಗಾರಿಕೆ ಮಹಾ ವಿದ್ಯಾಲಯ ಡೀನ್ ಡಾ| ಎಂ.ಎನ್. ವೇಣುಗೋಪಾಲ್ ಉಪಸ್ಥಿತರಿದ್ದರು.
ಅನುದಾನ ಪಡೆದುಕೊಳ್ಳಿ
ಜಿ.ಪಂ.ನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ವಿಶೇಷ ಅನುದಾನವಿದ್ದು, ರೈತರು ಅದರ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಕೃಷಿ ಹೊಂಡದಲ್ಲೂ ಮೀನು ಕೃಷಿ ಬೆಳೆಸಿ ಲಾಭ ಪಡೆದುಕೊಳ್ಳಬಹುದು. ಸರಕಾರದಲ್ಲಿ ವಿವಿಧ ಯೋಜನೆ ಹಾಗೂ ಸವಲತ್ತುಗಳಿದ್ದು ಅದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು.
– ಮಮತಾ ಡಿ. ಎಸ್. ಗಟ್ಟಿ ,
ಜಿಲ್ಲಾ ಪಂಚಾಯತ್ ಸದಸ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.