ಈ ಊರಲ್ಲಿ ಜನಗಣಮನವೇ ಸುಪ್ರಭಾತ
Team Udayavani, Jan 6, 2018, 11:14 AM IST
ಭಾಣಕ್‌ಪುರ್: ಹರ್ಯಾಣದ ಫರೀದಾಬಾದ್ ಜಿಲ್ಲೆಯ ಭಾಣಕ್‌ಪುರ್ ಹಳ್ಳಿಯಲ್ಲಿ ಪ್ರತಿದಿನ ಬೆಳಗ್ಗೆ ಅನುಕರಣೀಯ ವಿದ್ಯಮಾನವೊಂದು ನಡೆಯಲಾರಂಭಿಸಿದೆ. ಬೆಳಗ್ಗೆ ಸರಿಯಾಗಿ 8 ಗಂಟೆಗೆ, ಈ ಹಳ್ಳಿಯ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿರು ವವರು, ಹಸು ಎಮ್ಮೆಗಳನ್ನು ಮೇಯಿಸುವವರು, ಬೆರಣಿ ತಟ್ಟುವವರು, ಚಾಪೆ, ಬುಟ್ಟಿ ಹೆಣೆಯು ವವರು, ಇತರೆಲ್ಲಾ ಶ್ರಮಿಕ ವರ್ಗಗಳೂ ತಮ್ಮ ಕೆಲಸಗಳನ್ನು ಬದಿಗಿಟ್ಟು “ಸಾವಧಾನ್’ ಭಂಗಿಯಲ್ಲಿ ನಿಂತು ಗ್ರಾಮದೆಲ್ಲೆಡೆ ಮೊಳಗುವ ರಾಷ್ಟ್ರಗೀತೆಗೆ ದನಿಗೂಡಿಸುತ್ತಾರೆ!
ಒಬ್ಬಿಬ್ಬರಲ್ಲ, ಹತ್ತಿಪ್ಪತ್ತಲ್ಲ ಹಳ್ಳಿಯ ಬರೋಬ್ಬರಿ 5 ಸಾವಿರ ನಾಗರಿಕರು, ಒಟ್ಟಿಗೇ ನಿಂತು ರಾಷ್ಟ್ರಕ್ಕೆ ಹೀಗೊಂದು ಸ್ವರ ನಮನ ಸಲ್ಲಿಸಿ ದಿನ ಆರಂಭಿಸು ವುದನ್ನು ನೋಡಿದರೆ ಮೈ ನವಿರೇಳುವಂತಿದೆ. ಗುರುವಾರದಿಂದಲೇ ಇಂಥದ್ದೊಂದು ವ್ಯವಸ್ಥೆ ಇಲ್ಲಿ ಜಾರಿಯಾಗಿದೆ. ವಾಟ್ ಆ್ಯನ್ ಐಡಿಯಾ ಸರ್”ಪಂಚ್’ ಜೀ: ಇಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಆರೆಸ್ಸೆಸ್ ಮುಖಂಡರಾಗಿರುವ 24 ವರ್ಷದ ಸಚಿನ್ ಮಂಡೋಟಿಯಾ ಅವರ ಐಡಿಯಾದ ಫಲವಿದು.
ಎರಡು, ಮೂರು ದಿನ ಹಾಡಿ ಸುಮ್ಮ ನಾಗುವ ಜಾಯಮಾನದವರಲ್ಲ ಮಂಡೋಟಿಯಾ. ಈ ರಾಷ್ಟ್ರ ನಮನವನ್ನು ನಿರಂತರವಾಗಿಸಲು ಇಡೀ
ಗ್ರಾಮದಲ್ಲಿ 2.97 ಲಕ್ಷ ರೂ. ಖರ್ಚು ಮಾಡಿ 20 ಸ್ಪೀಕರ್‌ಗಳನ್ನು ಹಾಕಿಸಿ, ತಮ್ಮ ಮನೆಯಲ್ಲೇ ಇದರ ಕಂಟ್ರೋಲ್ ರೂಂ ಅನ್ನೂ ಸ್ಥಾಪಿಸಿದ್ದಾರೆ.
ಅಷ್ಟೇ ಅಲ್ಲ, ರಾಷ್ಟ್ರಗೀತೆ ಮೊಳಗುವ ವೇಳೆಯ ಚಿತ್ರಣವನ್ನು ದಾಖಲಿಸಲು ಗ್ರಾಮದ ಅಲ್ಲಲ್ಲಿ 22 ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಿದ್ದಾರೆ.
ದೇಶದ ಎರಡನೇ ಹಳ್ಳಿ
ಕಳೆದ ವರ್ಷ ಆಗಸ್ಟ್‌ನಲ್ಲಿ ತೆಲಂಗಾಣದ ಜಮ್ಮಿ ಕುಂಟ ಎಂಬಲ್ಲಿ ಇಂಥದ್ದೊಂದು ಸಂಪ್ರದಾಯ ಆರಂಭವಾಗುವ ಮೂಲಕ ದೇಶದಲ್ಲಿ ಈ ವ್ಯವಸ್ಥೆ ಜಾರಿಗೆ ತಂದ ಮೊದಲ ಹಳ್ಳಿಯೆಂಬ ಹೆಗ್ಗಳಿಕೆ ತಂದಿತ್ತು. ಇದೀಗ, ಭಾಣಕ್‌ಪುರ್ ಈ ಸಂಪ್ರದಾಯ ಆಚರಣೆಗೆ ತಂದ ದೇಶದ 2ನೇ ಹಳ್ಳಿಯೆಂಬ ಹಿರಿಮೆಗೆ ಪಾತ್ರವಾಗಿದೆ.
ಸದ್ಯಕ್ಕೆ ದಿನಕ್ಕೊಮ್ಮೆ ರಾಷ್ಟ್ರಗೀತೆ ಮೊಳಗಿಸಲಾಗುತ್ತಿದೆ. ಜನರು ಇದಕ್ಕೆ ಹೊಂದಿಕೊಂಡ ಮೇಲೆ ದಿನಕ್ಕೆರಡು ಬಾರಿ ರಾಷ್ಟ್ರಗೀತೆ ಹಾಡಿಸಲು ನಿರ್ಧರಿಸಲಾಗಿದೆ.
●ಸಚಿನ್ ಮಂಟೋಡಿಯಾ, ಭಾಣಕ್‌ಪುರ್ ಗ್ರಾಪಂ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.