ಜುಟ್ಟು ಹಾವು ಗಿಡುಗ
Team Udayavani, Jan 6, 2018, 2:14 PM IST
ತಲೆ ಮೇಲೆ ಜುಟ್ಟಿರುವ ಈ ಗಿಡುಗ, ಹಾವುಗಳನ್ನು ಎತ್ತರದ ಮರಗಳಿಂದಲೇ ಗುರುತಿಸಿ, ಅವುಗಳನ್ನು ಬೆನ್ನಟ್ಟಿ, ಇಲ್ಲವೇ ಕೆಲವೊಮ್ಮೆ ನೆಲದ ಮೇಲೆ ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತದೆ. Crested serpent Eagle-(Spilornis cheels) ಜುಟ್ಟು ಹಾವು ಗಿಡುಗ, ಮಧ್ಯಮ ಎತ್ತರದ ದಪ್ಪ ತಲೆಯ ಹಕ್ಕಿ. ಇದು ನೆಟ್ಟಗೆ ಕುಳಿತುಕೊಳ್ಳಬಲ್ಲದು. ಎಸಿಪಿóಡಿಯಾ ಕುಟುಂಬಕ್ಕೆ ಸೇರಿದ ಇದು, 55ರಿಂದ 75 ಸೆಂ.ಮೀ ಎತ್ತರ ಇರುತ್ತದೆ. ರೆಕ್ಕೆ ಬಿಚ್ಚಿ ಕುಳಿತಾಗ, ರೆಕ್ಕೆಗಳು ಇಂಗ್ಲಿಷ್‌ನ “ವಿ’ ಆಕಾರದಲ್ಲಿ ಕಾಣಿಸುತ್ತದೆ. ದಪ್ಪ ತಲೆಯ ಈ ಪಕ್ಷಿಯ ತಲೆಯ ಮೇಲೆ ಚಿಕ್ಕ ಚಿಕ್ಕ ಅಚ್ಚ ಕಂದು ಬಣ್ಣದ ಚುಕ್ಕೆ ಇರುತ್ತದೆ. ತಲೆ, ಮೈ ಮಾಸಲು ಬಿಳಿ ಬಣ್ಣ ಇದ್ದು, ಅದರ ಮೇಲೆ ಚಿಕ್ಕ, ಕಂದುಗಪ್ಪು ಬಣ್ಣದ ಚುಕ್ಕೆ ಇದೆ. ಬೆನ್ನಿನ ಮೇಲೆ ಅರ್ಧ ಚಂದ್ರಾಕಾರದಲ್ಲಿ ಕಂದುಗಪ್ಪು ಬಣ್ಣದ ಗುರುತಿದೆ. ಇದು ಮಚ್ಚೆ ಯಂತೆ ಕಾಣಿಸುತ್ತದೆ. ರೆಕ್ಕೆಯ ಅಡಿಭಾಗ ತಿಳಿ ಕಂದುಗೆಂಪು ಬಣ್ಣದಲ್ಲಿದೆ.
ಹೆಸರಿನಲ್ಲಿ ಹಾವೇಕೆ?
ಈ ಪಕ್ಷಿಯು ಹೆಚ್ಚಾಗಿ ಹಾವು ಮತ್ತು ಸರೀಸೃಪ ವರ್ಗದ ಪ್ರಾಣಿಗಳನ್ನೇ ಹೆಚ್ಚಾಗಿ ತಿನ್ನುವುದರಿಂದ ಇದಕ್ಕೆ ” ಜುಟ್ಟು ಹಾವು ಗಿಡುಗ’ ಎಂಬ ಹೆಸರು ಬಂದಿದೆ. ಹಸಿರು ಹಾವು, ಓತಿಕ್ಯಾತ, ನಾಗರಹಾವು, ಹರಣೆ, ಲಾರ್ವಾ ಇದರ ಮುಖ್ಯ ಆಹಾರ. ಕೈಟ್ ಮತ್ತು ಈಗಲ್ ಎಂಬ ಎರಡು ಪ್ರಭೇದದ ಹಕ್ಕಿಗಳಿಗೂ “ಹದ್ದು’ ಎನ್ನುತ್ತಾರೆ. “ಕೈಟ್’ಗಳನ್ನು ಹದ್ದು ಎಂದೂ, “ಈಗಲ್’ಗಳನ್ನು ಗಿಡುಗ ಎಂದೂ ಬರೆದರೆ ಅವುಗಳ ನಿಖರತೆ ತಿಳಿಯುವುದರಿಂದ ಈಗಲ್‌ಗಳನ್ನು “ಗಿಡುಗ’ ಎಂದೇ ಬರೆಯಲಾಗಿದೆ.
ದೇಹ ರಚನೆ
ಈ ಪಕ್ಷಿಗೆ ತುದಿಯಲ್ಲಿ ಕೊಕ್ಕೆಯಂತೆ ಬಗ್ಗಿರುವ, ದಪ್ಪ ಬೂದುಬಣ್ಣದ ಚುಂಚು (ಕೊಕ್ಕು)ಇದೆ. ಚುಂಚಿನ ಈ ರಚನೆ ಪ್ರಾಣಿಗಳನ್ನು ಬೇಟೆಯಾಡಿ, ಹರಿದು ತಿನ್ನಲು ಸಹಾಯಕ. ಹಾವುಗಳನ್ನು ಎತ್ತರದ ಮರಗಳಿಂದಲೇ ಗುರುತಿಸಿ, ಅವುಗಳನ್ನು ಬೆನ್ನಟ್ಟಿ, ಇಲ್ಲವೇ ಕೆಲವೊಮ್ಮೆ ನೆಲದಮೇಲೆ ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತದೆ. ಹಳದಿಬಣ್ಣದ ಕಣ್ಣಿನ ಮಧ್ಯ ಇರುವ ಕಪ್ಪು ಚುಕ್ಕೆಯಂಥ ಪಾಪೆ ನೋಟದ ತೀಕ್ಷ್ಣತೆಯನ್ನು ಹೆಚ್ಚಿಸಿದೆ. ಕುತ್ತಿಗೆಯ ಮೇಲ್ಭಾಗದಲ್ಲಿ ಗರಿಗಳ ಜುಟ್ಟು ಇದೆ. ಹಾವುಗಳನ್ನು ತಿನ್ನುವ ಜುಟ್ಟಿನ ಗಿಡುಗ ಎನ್ನಲು ಇದೇ ಕಾರಣ. ಇದರ ಜುಟ್ಟು ಕೂಗುವಾಗ ನೆಟ್ಟಗೆ ನಿಲ್ಲುತ್ತದೆ.
ಹಳದಿ ಬಣ್ಣದ ಬಲವಾದ ಕಾಲುಗಳಲ್ಲಿ ಮೂರು ಬೆರಳುಗಳಿದ್ದು, ಅದರ ತುದಿಯಲ್ಲಿ ಚೂಪಾದ ಉಗುರುಗಳಿವೆ. ಇದು ಹಾರುತ್ತಾ ಎರಗಿ ಬೇಟೆಯನ್ನು ಕಾಲಲ್ಲಿ ಹಿಡಿದು, ನಂತರ ಎತ್ತರದ ಮರದಮೇಲೆ ಕುಳಿತು, ಚುಂಚಿನಿಂದ ಚುಚ್ಚಿ ಬೇಟೆಯನ್ನು ತಿನ್ನುತ್ತದೆ. ವಿಷದ ಹಾವುಗಳನ್ನೂ ಇದು ಬೇಟೆಯಾಡಿ ತಿನ್ನುತ್ತದೆ. ಹಾವಿನ ವಿಷ ಈ ಪಕ್ಷಿಗೆ ಹಾನಿಕಾರಕವೇ, ಅಲ್ಲವೇ ? ವಿಷದ ಹಾವನ್ನು ತಿಂದರೂ ಇದಕ್ಕೆ ಸಣ್ಣದೊಂದು ತೊಂದರೆಯೂ ಆಗುವುದಿಲ್ಲವೇ? ಎಂಬುದನ್ನು ಸಂಶೋಧನೆಗಳಿಂದ ತಿಳಿಯಬೇಕಿದೆ.
ಜುಟ್ಟು ಹಾವು ಗಿಡುಗ ಪಕ್ಷಿಗಳಲ್ಲಿ ಗಂಡು- ಹೆಣ್ಣು ನೋಡಲು ಒಂದೇ ರೀತಿ ಇರುತ್ತದೆ. ಮರಿಗಳು ಬಿಳಿಯಾಗಿರುತ್ತವೆ. ಪ್ರೌಢಾವಸ್ಥೆ ತಲುಪಿದ ಮೇಲೆ ತಲೆ, ಮೈ, ಗರಿಗಳ ಮೇಲೆ ಕಂದುಗಪ್ಪು ಬಣ್ಣದ ಚುಕ್ಕೆ ಮತ್ತು ಗೆರೆಗಳು ಮೂಡುತ್ತವೆ. ಗಂಡು ಹೆಣ್ಣು ಎರಡೂ ಸಾಮಾನ್ಯವಾಗಿ ಒಂದೇ ರೀತಿ ಕೂಗುತ್ತವೆ. ಈ ಪ್ರಭೇದದಲ್ಲಿ 60 ಕ್ಕಿಂತ ಹೆಚು ಉಪಜಾತಿಗಳಿವೆ.
ಹಿಮಾಲಯ ಪ್ರದೇಶ, ನೇಪಾಳ, ಕರ್ನಾಟಕ, ತಮಿಳುನಾಡು, ಅಂಡಮಾನ್- ನಿಕೋಬಾರ್, ಶ್ರೀಲಂಕಾ, ಕಬಿನಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಈ ಪಕ್ಷಿಗಳು ಕಂಡು ಬರುತ್ತವೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ಇವು ಮರಿ ಮಾಡಲು ಸ್ಥಳದ ಆಯ್ಕೆ ಮಾಡುತ್ತವೆ. ನೀರಿನ ಸಮೀಪ ಎತ್ತರದ ಮರಗಳಲ್ಲಿ ಕಟ್ಟಿಗೆ ತುಂಡು ಸೇರಿಸಿ, ಗೂಡು ಕಟ್ಟುತ್ತವೆ. ಅದರ ಮೇಲೆ ಹಸಿರೆಲೆ ಹರಡಿ ಒಂದು ಅಥವಾ ಎರಡು ಮೊಟ್ಟೆ ಇಡುತ್ತವೆ. ಮೊಟ್ಟೆ ಕಾರಣಾಂತರಗಳಿಂದ ಮರಿಯಾಗದಿದ್ದಾಗ 2 ಅಥವಾ 7 ವಾರದಲ್ಲಿ ಪುನಃ ಮೊಟ್ಟೆ ಇಡುತ್ತವೆ. ಗಂಡು ಹೆಣ್ಣು ಸೇರಿ ಗೂಡು ಕಟ್ಟುತ್ತವೆ. ಮೊಟ್ಟೆ ಮರಿಯಾಗಲು 41 ದಿನ ಬೇಕು.
ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.