ಬಣ್ಣ ಬಣ್ಣದ ಸಂತೆ: ಬಣ್ಣಿಸಲು ಆಗದು ಈ “ಚಿತ್ರಸಂತೆ’


Team Udayavani, Jan 6, 2018, 3:19 PM IST

88.jpg

 ಹೊಸವರ್ಷದ ಮೊದಲ ಭಾನುವಾರ, ಬೆಂಗಳೂರಿನಲ್ಲಿ ಒಂದು ಅಪರೂಪದ, ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುವ ಸಂತೆಯೊಂದು ನಡೆಯುತ್ತಿದೆ- ಅದೇ “ಚಿತ್ರಸಂತೆ’. ಕರ್ನಾಟಕ ಚಿತ್ರಕಲಾ ಪರಿಷತ್‌ ಆಯೋಜಿಸುತ್ತಿರುವ ಈ ಕಲಾಮೇಳಕ್ಕೆ ಕುಮಾರಕೃಪಾ ರಸ್ತೆ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಈ ವರ್ಷ ಚಿತ್ರಸಂತೆಗೆ 15ರ ಹರೆಯ. 14 ವರ್ಷಗಳಿಂದ ಕಲಾತ್ಮಕವಾಗಿ, ವಿಭಿನ್ನವಾಗಿ ನಡೆದುಕೊಂಡು ಬರುತ್ತಿದೆ…

ಸಂತೆಯ ಕಲ್ಪನೆ ಬಹಳ ಪ್ರಾಚೀನವಾದದ್ದು. ಬಹಳ ಹಿಂದಿನಿಂದಲೂ ಪ್ರತೀ ವಾರಕ್ಕೊಮ್ಮೆ ಹಳ್ಳಿಗಳಲ್ಲಿ ಸಂತೆ ನಡೆಯುವುದುಂಟು. ರೈತರು ಬೆಳೆದ ತರಕಾರಿಗಳನ್ನೋ, ಬೇರೆ ಕಡೆಯಿಂದ ತಂದ, ನಿತ್ಯ ಬಳಕೆಯ ವಸ್ತುಗಳನ್ನೋ ಪೂರೈಸುವ ನಿಟ್ಟಿನಲ್ಲಿ ಈ ಸಂತೆಗಳ ಪಾತ್ರ ದೊಡ್ಡದು.

ಕಾಲಕ್ರಮೇಣ, ನಗರಗಳಲ್ಲಿಯೂ ಸಂತೆಯು ನಡೆದು, ಯಶಸ್ವಿಯಾಗಿರುವುದನ್ನು ಕಾಣಬಹುದು. ಹೊಸವರ್ಷದ ಮೊದಲ ಭಾನುವಾರ, ಬೆಂಗಳೂರಿನಲ್ಲಿ ಒಂದು ಅಪರೂಪದ, ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುವ ಸಂತೆಯೊಂದು ನಡೆಯುತ್ತಿದೆ- ಅದೇ “ಚಿತ್ರಸಂತೆ’. ಕರ್ನಾಟಕ ಚಿತ್ರಕಲಾ ಪರಿಷತ್‌ ಆಯೋಜಿಸುತ್ತಿರುವ ಈ ಕಲಾಮೇಳಕ್ಕೆ ಕುಮಾರಕೃಪಾ ರಸ್ತೆ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಈ ವರ್ಷ ಚಿತ್ರಸಂತೆಗೆ 15ರ ಹರೆಯ. 14 ವರ್ಷಗಳಿಂದ ಕಲಾತ್ಮಕವಾಗಿ, ವಿಭಿನ್ನವಾಗಿ ನಡೆದುಕೊಂಡು ಬರುತ್ತಿರುವ ಈ ಪ್ರಯತ್ನಕ್ಕೆ ಜನರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. 

ಎಲ್ಲರಿಗಾಗಿ ಕಲೆ
ಕರ್ನಾಟಕ ಚಿತ್ರಕಲಾ ಪರಿಷತ್‌ “ಎಲ್ಲರಿಗಾಗಿ ಕಲೆ’ ಎಂಬ ಶೀರ್ಷಿಕೆಯಡಿ ಚಿತ್ರಸಂತೆಯನ್ನು ಆಯೋಜಿಸುತ್ತಿರುವುದು ವಿಶೇಷ. ಕಲೆ ಎಂಬುದು ಎಲ್ಲರ ಮನೆ-ಮನ ತಲುಪಬೇಕು. ಕಲೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕಲಾ ಪ್ರಚಾರ, ಕಲಾ ಪ್ರಾಕಾರಗಳನ್ನು ಪರಿಚಯಿಸುವ ಕೆಲಸವಾಗಬೇಕು ಎಂಬ ಆಶಯದ ಹಿನ್ನೆಲೆಯಲ್ಲಿ ಚಿತ್ರಸಂತೆ ನಡೆಯುತ್ತಿದೆ. 

ಮನೆಗೊಂದು ಕಲಾಕೃತಿ ತಲುಪಿಸುವ ಉದ್ದೇಶ
ಎಷ್ಟೋ ಕಲಾವಿದರು ಎಲೆ ಮರೆಯ ಕಾಯಿಗಳಂತೆ ಇದ್ದಾರೆ. ಅಂಥವರ ಕಲೆ ಬೆಳಕಿಗೆ ಬರಬೇಕು, ಅವರ ಪ್ರತಿಭೆಯನ್ನು ಎಲ್ಲರೂ ಗುರುತಿಸುವಂತಾಗಬೇಕು ಎಂಬುದು ಇದರ ಉದ್ದೇಶ. ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟು, ಕಲಾಸಕ್ತರಿಗೆ ಅದನ್ನು ತಲುಪಿಸುವ ಕೆಲಸ ಚಿತ್ರಸಂತೆಯದ್ದು. 

ಒಂದೇ ದಿನದ ಬೃಹತ್‌ ಕಲಾಮೇಳ 
 ಕೇವಲ ಒಂದು ದಿನ ಮಾತ್ರ ಈ ಚಿತ್ರಸಂತೆ ನಡೆಯುತ್ತದೆ. ಚಿತ್ರಕಲಾ ಪರಿಷತ್‌ನ ಮುಂದೆ ಒಂದು ಕಿಲೋಮೀಟರ್‌ವರೆಗೆ ಕಲಾಜಾತ್ರೆ ನೆರೆದಿರುತ್ತದೆ. ಚಿತ್ರಸಂತೆಯಲ್ಲಿ 100 ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂ. ಮೌಲ್ಯದವರೆಗಿನ, ನೂರಾರು ಬೆಲೆಬಾಳುವ ಕಲಾಕೃತಿಗಳು ಮಾರಾಟಕ್ಕಿರುತ್ತವೆ. ಇಲ್ಲಿ ಯಾವ ಕಲಾಕೃತಿಯ ಮಾರಾಟಕ್ಕೂ ಕಮಿಷನ್‌ ಪಡೆಯುವುದಿಲ್ಲ, ಮಧ್ಯವರ್ತಿಗಳ ಕಾಟ ಇರುವುದಿಲ್ಲ. 

ಒಂದೇ ಸೂರಿನಲ್ಲಿ ಜಗತ್ತಿನ ಕಲಾವಿದರ ಪರಿಚಯ
ಇಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರು ಎನ್ನುವ ಭೇದ ಭಾವ ಇರುವುದಿಲ್ಲ. ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಲಾವಿದರ ನಡುವೆ ವಿಚಾರ ವಿನಿಮಯ, ಚರ್ಚೆ, ಸಂವಾದಗಳಿಗೆ ಈ ಚಿತ್ರಸಂತೆ ಅವಕಾಶ ಮಾಡಿಕೊಡುತ್ತದೆ. ಇಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ದೇಶಾದ್ಯಂತದ ಕಲಾವಿದರ ಕಲಾಪ್ರದರ್ಶನವಿರುತ್ತದೆ. 

ವಿಭಿನ್ನ ಕಲಾಕೃತಿಗಳ ಮಾರಾಟ-ಪ್ರದರ್ಶನ
ಈ ಚಿತ್ರಸಂತೆಯಲ್ಲಿ ಸಾಂಪ್ರದಾಯಿಕ, ಮೈಸೂರು, ತಂಜಾವೂರು, ರಾಜಸ್ತಾನಿ, ಮಧುಬನಿ ಶೈಲಿಯ ಚಿತ್ರಗಳ ಜೊತೆಗೇ ತೈಲ ಮತ್ತು ಜಲವರ್ಣ, ಆಕ್ರಲಿಕ್‌, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೊಲಾಜ್‌, ಲಿಥೋಗ್ರಾಫ್, ಎಂಬೋಸಿಂಗ್‌ ಮಾಧ್ಯಮದ ಕಲಾಕೃತಿಗಳು ಮಾರಾಟಕ್ಕಿರುತ್ತವೆ. ಮುಂದೆಯೇ ಕುಳ್ಳಿರಿಸಿಕೊಂಡು ಆಸಕ್ತರ ಭಾವಚಿತ್ರಗಳನ್ನು ಬಿಡಿಸುವ ಕಲಾವಿದರೂ ಇದ್ದಾರೆ. ಜೊತೆಗೆ ವ್ಯಂಗ್ಯಚಿತ್ರಗಳನ್ನೂ ಬಿಡಿಸಿ ಕೊಡಲಾಗುತ್ತದೆ. 

ಕಲಾವಿದರಿಗೆ ಊಟ-ವಸತಿ ವ್ಯವಸ್ಥೆ
ಚಿತ್ರಸಂತೆಯ ದಿನ ಕಲಾಕೃತಿಗಳ ಮಾರಾಟಕ್ಕೆಂದು ಬರುವ ಕಲಾವಿದರಿಗೆ ಚಿತ್ರಕಲಾ ಪರಿಷತ್‌ ವತಿಯಿಂದ (ಯಾವುದೇ ಶುಲ್ಕ ಪಡೆಯದೇ) ಊಟ- ವಸತಿಯ ವ್ಯವಸ್ಥೆ ಮಾಡುತ್ತಿದೆ. ಇದಕ್ಕೆ ಕೂಪನ್‌ ವ್ಯವಸ್ಥೆ ಮಾಡಲಾಗಿದೆ. 

 ಸ್ವಂತ ಕಲಾಕೃತಿಗಳ ಮಾರಾಟಕ್ಕೆ ಮಾತ್ರ ಅವಕಾಶ
ಕಲಾವಿದರು ರಚಿಸುವ, ಪ್ರದರ್ಶಿಸುವ ಕಲಾಕೃತಿಗಳು ಸ್ವಂತದ್ದಾಗಿರುತ್ತವೆ. ಛಾಯಾಚಿತ್ರಗಳ ನಕಲು ಚಿತ್ರಗಳನ್ನು ಪ್ರದರ್ಶನಕ್ಕಿಡಲು, ಮಾರಾಟ ಮಾಡಲು ಅವಕಾಶ ಇರುವುದಿಲ್ಲ. 

ದಿವ್ಯಾಂಗ ಮತ್ತು ಹಿರಿಯ ಕಲಾವಿದರಿಗೆ ಆದ್ಯತೆ
ದಿವ್ಯಾಂಗ ಮತ್ತು ಹಿರಿಯ ಕಲಾವಿದರಿಗೆ ಪರಿಷತ್ತಿನ ಆವರಣದಲ್ಲಿಯೇ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇವರಿಗೆ ಸಹಾಯ ಮಾಡಲು, ಮಾಹಿತಿ ನೀಡಲು ಸ್ವಯಂಸೇವಕ ಸಮೂಹ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಮಾಡಲಾಗಿದೆ. ಚಿತ್ರಸಂತೆಯ ದಿನ ಲಕ್ಷಕ್ಕಿಂತಲೂ ಹೆಚ್ಚು ಕಲಾವಿದರು ಮತ್ತು ಕಲಾಸಕ್ತರು ಭೇಟಿ ನೀಡುತ್ತಾರೆ. ನಿಮಗೂ ಚಿತ್ರಕಲೆಯಲ್ಲಿ ಆಸಕ್ತಿಯಿದ್ದರೆ, ಆ ದಿನ ಬಿಡುವು ಮಾಡಿಕೊಂಡು ಚಿತ್ರಸಂತೆಗೆ ಭೇಟಿ ಕೊಡಿ.

ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಷತ್‌ 
ಯಾವಾಗ?: ಜನವರಿ 7, ಭಾನುವಾರ 

– ಚಿತ್ರ- ಲೇಖನ: ವೆಂಕಟದಾಸ್‌ ಎಸ್‌.ಎನ್‌.  

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.