ಪಿಚ್ನಲ್ಲಿ ಕೊಹ್ಲಿ ಕಳಪೆ ನಿರ್ವಹಣೆ: ಬಡಪಾಯಿ ಅನುಷ್ಕಾ ಟ್ರೋಲ್
Team Udayavani, Jan 6, 2018, 3:58 PM IST
ಕೇಪ್ಟೌನ್ : ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಅಂಗಳದಲ್ಲಿ ಆತಿಥೇಯ ದಕ್ಷಿಣ ಆಫ್ರಿಕದೆದುರಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೇವಲ ಐದು ರನ್ ಗಳಿಸಿ ಮಾರ್ನೆ ಮಾರ್ಕೆಲ್ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಗೆ ಕ್ಯಾಚಿತ್ತು ಔಟಾದುದಕ್ಕೆ ಟ್ವಿಟರಾಟಿಗಳು ಪಿಚ್ನಲ್ಲಿನ ಕೊಹ್ಲಿ ಕಳಪೆ ನಿರ್ವಹಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ವರ್ಷ ಡಿ.11ರಂದು ಇಟಲಿಯ ಟುಸ್ಕಾನಿಯಲ್ಲಿ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರನ್ನು ವಿವಾಹವಾದ ‘ಕೊಹ್ಲಿ ಇನ್ನೂ ಹನಿಮೂನ್ ಗುಂಗಿನಿಂದ ಹೊರಬಂದಿಲ್ಲ’ ಎಂದು ಕೆಲವು ಟ್ವಿಟರಾಟಿಗಳು ಜರೆದಿದ್ದಾರೆ.
ಕೊಹ್ಲಿ ಕಳಪೆ ಬ್ಯಾಟಿಂಗಿಗೆ ಅನುಷ್ಕಾ ಶರ್ಮಾ ಹ್ಯಾಂಗೋವರೇ ಕಾರಣವೆಂದು ಇನ್ನು ಕೆಲವು ಟ್ವಿಟರಾಟಿಗಳು ವ್ಯಂಗ್ಯವಾಡಿದ್ದಾರೆ.
ಈ ಕಳಪೆ ಬ್ಯಾಟಿಂಗಿನೊಂದಿಗೆ ಕೊಹ್ಲಿ ಹನಿಮೂನ್ ಮುಗಿದಿರುವುದು ಈಗ ಅಧಿಕೃತವಾಗಿದೆ ಎಂದು ದೀಪಕ್ ಸಯಾಲ್ ಎಂಬ ಟ್ವಿಟರಾಟಿ ಹೇಳಿದ್ದಾರೆ.
ಕೇವಲ ಐದು ರನ್ನಿಗೆ ಕೊಹ್ಲಿ ಔಟಾಗಿರುವುದು ಅನುಷ್ಕಾಗೆ ಭಯ ಉಂಟುಮಾಡಿದೆ ಎಂದು ಕಶೀಶ್ ಜೋಷಿ ಬರೆದಿದ್ದಾರೆ. ಹಾಗಿದ್ದರೂ ಟೀಮ್ ಇಂಡಿಯಾಗೆ ಬೆಸ್ಟ್ ಆಫ್ ಲಕ್ ಎಂದು ಪ್ರಜಾಕ್ತಾ ಭಾವಸಾರ್ ಶುಭ ಹಾರೈಸಿದ್ದಾರೆ.
‘ಕೊಹ್ಲಿಗೆ ಅನುಷ್ಕಾ ಶರ್ಮಾ ಯಾವತ್ತೂ ಬ್ಯಾಡ್ ಲಕ್’ ಎಂದು ಆಶಿಶ್ ರಾಣಾ ಜರೆದಿದ್ದಾರೆ. ”5 ರನ್ಗೆ ಔಟಾಗಿ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ನಿರಾಶೆಯುಂಟು ಮಾಡಿದ್ದಾರೆ; ಅನುಷ್ಕಾಗೆ ಥ್ಯಾಂಕ್ಸ್” ಎಂದು ಶ್ರೀಕಾಂತ್ ರೆಡ್ಡಿ ಕಟಕಿಯಾಡಿದ್ದಾರೆ.
ಕಳೆದ ವಿಶ್ವ ಕಪ್ ಸೆಮಿ ಫೈನಲ್ನಲ್ಲಿ ಕೊಹ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ನಿರ್ವಹಣೆ ತೋರಿದ್ದಾಗಲೂ ಹಲವು ಮಂದಿ ಟ್ಟಿಟರ್ನಲ್ಲಿ ಕೊಹ್ಲಿ ಸ್ನೇಹಿತೆ ಅನುಷ್ಕಾಳನ್ನು ದೂರಿದ್ದರು.
ಆಗ ವಿರಾಟ್ ಕೊಹ್ಲಿ ತೀರ ಸಿಟ್ಟಿನಿಂದ “ಅನುಷ್ಕಾಳನ್ನು ವಿನಾಕಾರಣ ಈ ರೀತಿ ದೂರುವವರಿಗೆ ನಾಚಿಕೆಯಾಗಬೇಕು; ತಮ್ಮನ್ನು ತಾವು ಶಿಕ್ಷಿತರೆಂದು ಈ ರೀತಿ ಟೀಕೆ ಮಾಡುವವರಿಗೆ ನಾಚಿಕೆಯಾಗಬೇಕು. ನನ್ನ ಆಟದ ಮೇಲೆ ಯಾವುದೇ ನಿಯಂತ್ರಣ ಇಲ್ಲದ ಅನುಷ್ಕಾಳನ್ನು ಹೊಣೆ ಮಾಡುವವರಿಗೆ ನಾಚಿಕೆಯಾಗಬೇಕು’ ಎಂದು ನಿಷ್ಠುರವಾಗಿ ಸಾಮಾಜಿಕ ಜಾಲ ತಾಣದಲ್ಲಿ ಉತ್ತರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು
Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.