ವಿಲಿಯಮ್ಸನ್‌ ಶತಕದ ಏಟಿಗೆ ಪಾಕ್‌ ವಿಲವಿಲ


Team Udayavani, Jan 7, 2018, 6:15 AM IST

New-Zealand-Kane-Williamson.jpg

ವೆಲ್ಲಿಂಗ್ಟನ್‌: ನಾಯಕ ಕೇನ್‌ ವಿಲಿಯಮ್ಸನ್‌ ಅವರ ಶತಕದ ಅಬ್ಬರಕ್ಕೆ ಹಾಗೂ ನ್ಯೂಜಿಲ್ಯಾಂಡಿನ ಅಗ್ರ ಸರದಿಯ ಬ್ಯಾಟಿಂಗ್‌ ಹೊಡೆತಕ್ಕೆ ತತ್ತರಿಸಿದ ಪಾಕಿಸ್ಥಾನ, ಮೊದಲ ಏಕದಿನ ಪಂದ್ಯದಲ್ಲಿ 61 ರನ್ನುಗಳ ಸೋಲನುಭವಿಸಿದೆ. ಕೊನೆಯಲ್ಲಿ ಸುರಿದ ಮಳೆ ಪಾಕ್‌ ಸೋಲಿಗೊಂದು ನೆಪವಾಯಿತು.

ಶನಿವಾರ ವೆಲ್ಲಿಂಗ್ಟನ್‌ನಲ್ಲಿ ನಡೆದ ಈ ಮುಖಾಮುಖೀಯಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್‌ 7 ವಿಕೆಟಿಗೆ 315 ರನ್‌ ಪೇರಿಸಿ ಸವಾಲೊಡ್ಡಿತು. ದೊಡ್ಡ ಮೊತ್ತವನ್ನು ಬೆನ್ನಟ್ಟುವ ವೇಳೆ ತೀವ್ರ ಕುಸಿತಕ್ಕೆ ಸಿಲುಕಿದ ಪಾಕಿಸ್ಥಾನ 30.1 ಓವರ್‌ಗಳಲ್ಲಿ 6 ವಿಕೆಟಿಗೆ 166 ರನ್‌ ಮಾಡಿದ ವೇಳೆ ಸುರಿದ ಮಳೆಯಿಂದ ಆಟವೇ ಸ್ಥಗಿತಗೊಂಡಿತು. ಆಗ ಡಕ್‌ವರ್ತ್‌-ಲೂಯಿಸ್‌ ನಿಯಮದಂತೆ ಪಾಕಿಸ್ಥಾನ 61 ರನ್ನುಗಳ ಹಿನ್ನಡೆಯಲ್ಲಿತ್ತು. ಇದರೊಂದಿಗೆ ನ್ಯೂಜಿಲ್ಯಾಂಡ್‌ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ದ್ವಿತೀಯ ಪಂದ್ಯ ಜ. 9ರಂದು ನೆಲ್ಸನ್‌ನಲ್ಲಿ ನಡೆಯಲಿದೆ.

ವಿಲಿಯಮ್ಸನ್‌ 10ನೇ ಶತಕ
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆತಿಥೇಯ ಕಿವೀಸ್‌ ಇದರ ಭರಪೂರ ಲಾಭವೆತ್ತಿತು. ಮೊಹಮ್ಮದ್‌ ಆಮಿರ್‌, ರುಮ್ಮನ್‌ ರಯೀಸ್‌ ಹಾಗೂ ಹಸನ್‌ ಅಲಿ ದಾಳಿಯನ್ನು ಪುಡಿಗುಟ್ಟುತ್ತಲೇ ಸಾಗಿತು. ಮಾರ್ಟಿನ್‌ ಗಪ್ಟಿಲ್‌ (48)-ಕಾಲಿನ್‌ ಮುನ್ರೊ (58) ಜೋಡಿಯಿಂದ ಮೊದಲ ವಿಕೆಟಿಗೆ 12.3 ಓವರ್‌ಗಳಿಂದ 83 ರನ್‌ ಒಟ್ಟುಗೂಡಿತು. ಅನಂತರ ಕ್ರೀಸ್‌ ಇಳಿದ ಕಪ್ತಾನ ಕೇನ್‌ ವಿಲಿಯಮ್ಸನ್‌ 48ನೇ ಓವರ್‌ ತನಕ ಪ್ರವಾಸಿಗರನ್ನು ಚೆಂಡಾಡುತ್ತ ಶತಕ ಸಂಭ್ರಮವನ್ನಾಚರಿಸಿದರು. ಕೊನೆಯಲ್ಲಿ ಹೆನ್ರಿ ನಿಕೋಲ್ಸ್‌ ಬಿರುಸಿನ ಆಟಕ್ಕಿಳಿದು ಭರ್ತಿ 50 ರನ್ನುಗಳ ಕೊಡುಗೆ ಸಲ್ಲಿಸಿದರು. ಈ ನಾಲ್ವರ ಸಾಹಸದಿಂದ ಕಿವೀಸ್‌ ಸ್ಕೋರ್‌ ಮುನ್ನೂರರ ಗಡಿ ದಾಟಿತು.

ವಿಲಿಯಮ್ಸನ್‌ 117 ಎಸೆತಗಳನ್ನು ನಿಭಾಯಿಸಿ 115 ರನ್‌ ಬಾರಿಸಿದರು. ಇದು 119ನೇ ಏಕದಿನದಲ್ಲಿ ವಿಲಿಯಮ್ಸನ್‌ ಹೊಡೆದ 10ನೇ ಶತಕ. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ವಿಲಿಯಮ್ಸನ್‌ 26 ರನ್‌ ಮಾಡಿದ ವೇಳೆ ಕೀಪರ್‌ ಸಫ‌ìರಾಜ್‌ ಕ್ಯಾಚ್‌ ಬಿಟ್ಟದ್ದು ಪಾಕಿಗೆ ದುಬಾರಿಯಾಗಿ ಪರಿಣಮಿಸಿತು. ಟಯ್ಲರ್‌ (12), ಲ್ಯಾಥಂ (3), ಸ್ಯಾಂಟ್ನರ್‌ (7) ಬೇಗನೇ ಆಟ ಮುಗಿಸಿದರು.

ಫ‌ಕರ್‌ ಜಮಾನ್‌ ಏಕಾಂಗಿ ಹೋರಾಟ
ಪಾಕ್‌ ಸರದಿಯಲ್ಲಿ ಮಿಂಚಿದ್ದು ಆರಂಭಕಾರ ಫ‌ಕರ್‌ ಜಮಾನ್‌ ಮಾತ್ರ. ಒಂದು ತುದಿಯಲ್ಲಿ ಕ್ರೀಸಿಗೆ ಅಂಟಿಕೊಂಡು ನಿಂತ ಜಮಾನ್‌ 86 ಎಸೆತಗಳಿಂದ 82 ರನ್‌ ಬಾರಿಸಿ ಔಟಾಗದೆ ಉಳಿದರು (5 ಬೌಂಡರಿ, 4 ಸಿಕ್ಸರ್‌). ಕಿವೀಸ್‌ ವೇಗಿಗಳಾದ ಸೌಥಿ 3, ಬೌಲ್ಟ್ 2 ವಿಕೆಟ್‌ ಉರುಳಿಸಿ ಪಾಕಿಗೆ ಘಾತಕವಾಗಿ ಪರಿಣಮಿಸಿದರು. ಪಾಕ್‌ ಆರಂಭದಲ್ಲಿ 13ಕ್ಕೆ 3, ಬಳಿಕ 54ಕ್ಕೆ 5 ವಿಕೆಟ್‌ ಕಳೆದುಕೊಂಡು ತೀರಾ ಸಂಕಟದಲ್ಲಿತ್ತು. 6ನೇ ವಿಕೆಟಿಗೆ ಜತೆಗೂಡಿದ ಜಮಾನ್‌-ಶಾದಾಬ್‌ ಖಾನ್‌ (28) 78 ರನ್‌ ಜತೆಯಾಟದ ಮೂಲಕ ಕುಸಿತಕ್ಕೆ ತಡೆಯಾದರು. ಬಳಿಕ ಮಳೆಯಾಟ ಮೊದಲ್ಗೊಂಡಿತು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-50 ಓವರ್‌ಗಳಲ್ಲಿ 7 ವಿಕೆಟಿಗೆ 315 (ವಿಲಿಯಮ್ಸನ್‌ 115, ಮುನ್ರೊ 58, ನಿಕೋಲ್ಸ್‌ 50, ಗಪ್ಟಿಲ್‌ 48, ಹಸನ್‌ ಅಲಿ 61ಕ್ಕೆ 3). ಪಾಕಿಸ್ಥಾನ-30.1 ಓವರ್‌ಗಳಲ್ಲಿ 6 ವಿಕೆಟಿಗೆ 166 (ಜಮಾನ್‌ 82, ಶಾದಾಬ್‌ 28, ಸೌಥಿ 22ಕ್ಕೆ 3, ಬೌಲ್ಟ್ 35ಕ್ಕೆ 2). 

ಪಂದ್ಯಶ್ರೇಷ್ಠ: ಕೇನ್‌ ವಿಲಿಯಮ್ಸನ್‌.

ಟಾಪ್ ನ್ಯೂಸ್

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

crimebb

Kasaragod ಅಪರಾಧ ವಾರ್ತೆ; ಆನೆಯ ತುಳಿತಕ್ಕೆ ಮಾವುತ ಸಹಿತ ಇಬ್ಬರ ಸಾವು

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Arrest

Kasaragod: ವಂದೇ ಭಾರತ್‌ಗೆ ಕಲ್ಲೆಸೆತ, ಹಳಿಯಲ್ಲಿ ಕಲ್ಲಿರಿಸಿದ ಇಬ್ಬರ ಬಂಧನ

ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.