ಭಾರತ ಗಡಿಯಲ್ಲಿ ಪಾಕಿಗೆ ಚೀನದಿಂದ ಬಂಕರ್, ಮೂಲ ಸೌಕರ್ಯ ನಿರ್ಮಾಣ
Team Udayavani, Jan 6, 2018, 7:09 PM IST
ಹೊಸದಿಲ್ಲಿ : ಭಾರತದ ಗಡಿಗೆ ತಾಗಿಕೊಂಡ ಪಾಕ್ ನೆಲದಲ್ಲಿ ಚೀನ ಸೈನಿಕರ ಉಪಸ್ಥಿತಿ ಹೆಚ್ಚುತ್ತಿದೆ. ಅಂತೆಯೇ ಪಾಕಿಸ್ಥಾನ ಭಾರತದೊಂದಿಗಿನ ತನ್ನ ಗಡಿಯಲ್ಲಿ ತನ್ನ ಮಿಲಿಟರಿ ಮೂಲ ಸೌಕರ್ಯವನ್ನು ಆಧುನೀಕರಿಸಲು ಚೀನದ ನೆರವು ಪಡೆಯುತ್ತಿದೆ. ಚೀನ ಸೇನೆ ಈಗಾಗಲೇ ಪಾಕ್ ಸೇನೆಗಾಗಿ 350ಕ್ಕೂ ಹೆಚ್ಚು ಕಲ್ಲಿನ ಬಂಕರ್ಗಳನ್ನು ನಿರ್ಮಿಸಿಕೊಟ್ಟಿದೆ. ಮಾತ್ರವಲ್ಲದೆ ಚೀನ ಸೇನೆ ಪಾಕಿಸ್ಥಾನಕ್ಕೆ ಅನೇಕ ಗಡಿ ಹೊರಠಾಣೆಗಳನ್ನು ಮತ್ತು ರಸ್ತೆ ಜಾಲಗಳನ್ನು ನಿರ್ಮಿಸಿಕೊಡುತ್ತಿದೆ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.
ಝೀ ಮೀಡಿಯಾ ಸಂಗ್ರಹಿಸಿರುವ ವಿಡಿಯೋ ದೃಶ್ಯಾವಳಿಗಳಲ್ಲಿ ಚೀನ ಸೇನೆ ಪಾಕ್ ಸೇನಗೆ 350ಕ್ಕೂ ಹೆಚ್ಚು ಕಲ್ಲಿನ ಬಂಕರ್ಗಳನ್ನು ಕಟ್ಟಿಸಿಕೊಟ್ಟಿರುವುದು ಕಂಡು ಬಂದಿದೆ. ಈ ನಿರ್ಮಾಣ ತಾಣಗಳು ಯಾರಿಗೂ ಗೊತ್ತಾಗದ ರೀತಿಯಲ್ಲಿ ಅವುಗಳ ಹೊರನೋಟವನ್ನು ಪಲ್ಲಟಿಸಲಾಗಿದೆ.
ಈ ನಿರ್ಮಾಣ ಕಾಮಗಾರಿಗಳಯಾವುದೇ ವಿವರಗಳನ್ನು ಪಾಕ್ ಸರಕಾರ ಭಾರತಕ್ಕೆ ಔಪಚಾರಿಕವಾಗಿ ತಿಳಿಸಿಲ್ಲ. ಪಾಕ್ ಭದ್ರತಾ ಪಡೆಗಳು ಭಾರತ ಸೇನೆಯೊಂದಿಗೆ ಧ್ವಜ ಸಭೆಯಲ್ಲಿ
ಆ ಕುರಿತ ಮಾಹಿತಿ ನೀಡುವುದು ಶಿಷ್ಟಾಚಾರವಾಗಿದೆ.
ಪಾಕ್ ಸೇನೆ ತನ್ನ ಗಡಿಯಲ್ಲಿ ಚೀನ ಸೇನೆ ನೆರವಿನಿಂದ ರಸ್ತೆ ಜಾಲ, ಬಂಕರ್ಗಳು ಹಾಗೂ ಕಾಲುವೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಮೂಲ ಉದ್ದೇಶ ಭಾರತ ಯಾವುದೇ ಹೊತ್ತಿನಲ್ಲಿ ಕೈಗೊಳ್ಳಬಹುದಾದ ಸಾಂಪ್ರದಾಯಿಕ ಸಮರದ ವೇಳೆ ಅದರ ಸೇನೆಯನ್ನು ಹಿಮ್ಮೆಟ್ಟಿಸುವುದೇ ಆಗಿದೆ ಮಾತ್ರವಲ್ಲದೆ ಅದಕ್ಕೆ ಸಾಂಪ್ರದಾಯಿಕ ದಾಳಿ ಮಾರ್ಗಗಳು ಸಿಗದಂತೆ ಮಾಡುವುದು ಕೂಡ ಆಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.