ಊರುಗೋಲಿನ ಆಸರೆಯಲ್ಲಿ ಜಯಸೂರ್ಯ
Team Udayavani, Jan 7, 2018, 6:55 AM IST
ಕೊಲಂಬೊ: ಎರಡು ದಶಕಗಳ ಹಿಂದೆ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ವಿಶ್ವದ ಘಾತಕ ಬೌಲರ್‌ಗಳನ್ನೆಲ್ಲ ಪುಡಿಗುಟ್ಟುತ್ತ, ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಸಂಚಲನವನ್ನೇ ಮೂಡಿಸಿ¨ ಶ್ರೀಲಂಕಾ ತಂಡದ ಮಾಜಿ ಆಟಗಾರ, ಕ್ರಿಕೆಟ್ ದಂತಕತೆ ಸನತ್ ಜಯಸೂರ್ಯ ಇಂದು ನಡೆದಾಡದ ಸ್ಥಿತಿಯಲ್ಲಿದ್ದಾರೆ. ಊರುಗೋಲಿನ ನೆರವಿಲ್ಲದೇ ಒಂದು ಹೆಜ್ಜೆಯನ್ನೂ ಮುಂದಕ್ಕೆ ಇಡದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ದೀರ್ಘಕಾಲ ಕ್ರಿಕೆಟ್ ಆಡಿರುವ ಜಯಸೂರ್ಯ ಅವರಿಗೆ ಈಗ ಮಂಡಿ ನೋವು ವಿಪರೀತವಾಗಿದೆ. ಈ ಹಿಂದೆಯೇ ಇದ್ದ ಈ ನೋವು ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಹೆಜ್ಜೆ ಊರಲಾಗದ ಸ್ಥಿತಿಯಲ್ಲಿದ್ದಾರೆ. ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ.
ಮೆಲ್ಬರ್ನ್ನಲ್ಲಿ ಶಸ್ತ್ರಚಿಕಿತ್ಸೆ
1996ರ ವಿಶ್ವಕಪ್ ಹೀರೋ ಸನತ್ ಜಯಸೂರ್ಯ ಅನಂತರ ಶ್ರೀಲಂಕಾ ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ದುಡಿದಿದ್ದರು. ಸದ್ಯ ಯಾವುದೇ ಕ್ರಿಕೆಟ್ ಚಟುವಟಿಕೆಗಳಿಂದ ದೂರೆವೇ ಉಳಿದಿದ್ದಾರೆ. ಹೀಗಿರುವಾಗಲೇ ಅವರ ಮಂಡಿ ನೋವು ಉಲ್ಬಣಿಸಿದೆ. ಶೀಘ್ರದಲ್ಲಿಯೇ ಮೆಲ್ಬರ್ನ್ಗೆ ತೆರಳಲಿದ್ದು, ಅಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ-ಚಿತ್ರ ವೈರಲ್ ಆಗಿದ್ದು, ಬೇಗ ಗುಣಮುಖರಾಗುವಂತೆ ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.
ಜಯಸೂರ್ಯ ಸಾಧನೆ
ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ ಅವರಂತೆಯೇ ಜಯಸೂರ್ಯ ಕೂಡ ಕ್ರಿಕೆಟ್‌ನ ದಂತಕತೆ. 1996ರ ವಿಶ್ವಕಪ್ ವೀಕ್ಷಿಸಿದವರಿಗೆಲ್ಲ ಜಯಸೂರ್ಯ ಬ್ಯಾಟಿಂಗ್ ತಾಕತ್ತು ಏನೆಂಬುದು ಚೆನ್ನಾಗಿ ಗೊತ್ತು. ಕ್ರೀಸ್‌ನಲ್ಲಿ ಇರುವಷ್ಟು ಹೊತ್ತು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಳಿಸುತ್ತಿದ್ದರು. 1996ರ ವಿಶ್ವಕಪ್ ಶ್ರೀಲಂಕಾ ಗೆಲ್ಲುವಲ್ಲಿ ಜಯಸೂರ್ಯ ಕೊಡುಗೆ ದೊಡ್ಡದಿದೆ.
ಜಯ ಸೂರ್ಯ ಶ್ರೀಲಂಕಾ ಪರ 110 ಟೆಸ್ಟ್, 445 ಏಕದಿನ ಮತ್ತು 31 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 6,973 ರನ್, ಏಕದಿನದಲ್ಲಿ 13,430 ರನ್, ಟಿ20ಯಲ್ಲಿ 629 ರನ್ ದಾಖಲಿಸಿದ್ದಾರೆ. ಏಕದಿನದಲ್ಲಿ ಗರಿಷ್ಠ ರನ್ ಬಾರಿಸಿದವರ ಯಾದಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.