ಅವಳ ಬದುಕು
Team Udayavani, Jan 7, 2018, 6:45 AM IST
ಮೆಸೆಂಜರ್ ತೆಗೆದು ಮತ್ತೆ ನೋಡಿದ ಮಧುಸೂದನ. ಅಷ್ಟಕ್ಕೇ ಸಮಾಧಾನವಾಗದೇ ಕಾಲ್‌ಲಾಗ್ ತೆಗೆದು ನೋಡಿದ. ಯಾರಾದರೂ ಗಮನಿಸಿದರೂ ಅವನಿಗೆ ಖುಷಿಯೇ ಆಗುತ್ತಿತ್ತು. ಸೀಮಾ ಆಂಕರ್ ಎಂಬ ಹೆಸರು ತನ್ನ ಮೊಬೈಲಿನಲ್ಲಿರುವುದನ್ನು ಯಾರಾದರೂ ಗಮನಿಸಿದರೆ ಅದು ಹೆಮ್ಮೆಯ ವಿಷಯ ತಾನೆ? ಮೊದಲು ಶ್ರೀಧರನಿಗೆ ಥ್ಯಾಂಕÕ… ಹೇಳಬೇಕು. ಈ ಫೇಸ್‌ಬುಕ್ ಎಂಬುದನ್ನು ಪರಿಚಯಿಸಿದವನು ಅವನೇ ತಾನೇ? ಅಲ್ಲಿಯವರೆಗೂ ಮಧುಸೂದನನಿಗೆ ಸಹನಾ ಎಂಬ ಇವಳೇ… ಆ ಅವಳೇ? ಎಂಬ ಅನುಮಾನವಿತ್ತು. ಫೇಸ್‌ಬುಕ್ಕಿನಲ್ಲಿ ಯಾವಾಗ ಸೀಮಾ ಬಾವಿಹಟ್ಟಿ ಅಂತ ಇತ್ತೋ ಮಧುಸೂದನನಿಗೆ 200% ಅದು ಆ ಅವಳೇ ಎಂಬುದು ಖಾತ್ರಿಯಾಗಿ ಹೋಯ್ತು. ಅವಳದು ತನ್ನ ಹಾಗೆ ಪ್ರೊಫೈಲಲ್ಲ. ಪೇಜು. ಮಧುಸೂದನನ ಒಂದು ಫೋಟೋಗೆ ಬೀಳುವ ಲೈಕು ಹತ್ತಾದರೆ, ಅವಳದಕ್ಕೆ ಹತ್ತು ಸಾವಿರ!
ಹುಡುಕುØಡುಕಿ ಫೋಟೋಗಳನ್ನು ನೋಡಿದ. ಎಷ್ಟು ಬಗೆದು ನೋಡಿದರೂ ಒಬ್ಬಳದೇ ಫೋಟೋಗಳು. ಹೆಚ್ಚೆಂದರೆ ಗೆಳೆಯ-ಗೆಳತಿಯರೊಂದಿಗಿನದು. ಇಲ್ಲವೇ ಅವಳ ಸುದ್ದಿ, ವರದಿಗಳಿಗೆ ಸಂಬಂಧಿಸಿದ್ದು. ಮದುವೆಯಾಗಿಲ್ಲವಾ? ಅಥವಾ ಗಂಡ ಸತ್ತುಹೋದನಾ? ಮಕ್ಕಳು ಮರಿ? ಯೋಚಿಸುತ್ತ ಬಸ್ಸಿನ ಕಿಟಕಿಯಿಂದ ಹೊರಗಿನ ದೃಶ್ಯಗಳನ್ನು ನೋಡುತ್ತಿದ್ದ ಮಧುಸೂದನ ಮತ್ತೆ ಫೋನು ತೆರೆದು ಮೆಸೆಂಜರ್ ನೋಡಿದ. ಮತ್ತೆ ಕಾಲ್‌ಲಾಗ್.
ಮುಂಚೆ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡ್ತಿದ್ದ ಮಧುಸೂದನ ಅರಣ್ಯ ಇಲಾಖೆಯಲ್ಲಿ ಸಣ್ಣದೊಂದು ಕೆಲಸ ಗಿಟ್ಟಿಸಿಕೊಂಡು ಐದು ವರ್ಷವಾಗುತ್ತ¤ ಬಂತು. ಕುಶಾಲನಗರದ ಚೆಕ್‌ಫೋಸ್ಟಿನಲ್ಲಿ ಕೂತಿರುವುದೇ ಕೆಲಸ ಈಗ. ಹಾಗೆ ಕೂತು ಕೂತು ತೂಕಡಿಸುವಾಗೊಮ್ಮೆ ಗೆಳೆಯ ಶ್ರೀಧರ ಫೇಸ್‌ಬುಕ್ಕಿನ ಪರಿಚಯ ಮಾಡಿಸಿದ. ಮಧುಸೂದನನೂ ಖುಷಿಯಿಂದ ತನ್ನ ಹೆಂಡತಿಯ, ಮಕ್ಕಳ ಫೋಟೋಗಳನ್ನು ಅಪ್ಲೋಡ್ ಮಾಡುತ್ತ ದೇವರ ವೀಡಿಯೋಗಳನ್ನು ಹಾಕುತ್ತ ಆಗೀಗ ಕಾಡಿನ ಚಿಟ್ಟೆ, ಪಕ್ಷಿಗಳ ಜೊತೆಗೆ ಸೆಲ್ಫಿà ಟ್ರೈ ಮಾಡುತ್ತ¤ ಸಂತಸದಿಂದಿದ್ದ. ಹಾಗೆ ಯಾವತ್ತೋ ಫೇಸ್‌ಬುಕ್ಕಿನಲ್ಲಿ ಸಾವಿತ್ರಿಯ ಫೋಟೋ ನೋಡಿದ. ಆದರೆ ಹೆಸರು ಮಾತ್ರ ಸೀಮಾ ಎಂದಿತ್ತು! ಟಿವಿಯಲ್ಲಿಯೂ ಹಾಗೇ. ಸೀಮಾ ಕಾಣಿಸಿಕೊಂಡಾಗಲೆಲ್ಲ ಅವನು ಹೆಂಡತಿಯ ಹತ್ತಿರ, “”ಇವಳು ನಮ್ಮೂರ್ ಹುಡ್ಗಿ. ನಾನು ಇವಳೆ°à ಮದ್ವೆಯಾಗಬೇಕಿತ್ತು. ಜÓr… ಮಿಸ್ಸು” ಅನ್ನುತ್ತಿದ್ದ. ಆಗೆಲ್ಲ ಹೆಂಡತಿ, ಮಕ್ಕಳು ಒಟ್ಟಿಗೇ ಮಧುಸೂದನನ್ನು ಆಡಿಕೊಂಡು ಗೊಳ್ಳೆಂದು ನಗುತ್ತಿದ್ದರು. ನಾಕನೇ ಕ್ಲಾಸಿನಲ್ಲಿ ಓದುತ್ತಿದ್ದ ದೊಡ್ಡ ಮಗಳಂತೂ ಬೆಳಗ್ಗೆಯೇ ಟಿವಿ ಹಚ್ಚುವವಳು. ಸೀಮಾ ಕಾಣಿಸಿದರೆ, “”ಅಪ್ಪನಿನ್ ಗರ್ಲ್ಫ್ರೆಂಡು” ಅಂತ ರೇಗಿಸುತ್ತಿದ್ದಳು. “”ಅವಳಿಗ್ ಮೇಕಪ್ ಸಾಮಾನ್ ತಂದೊRಟ… ಪೂರೈಸೋಕೂ ಆಗ್ತಿರ್ಲಿಲ್ವೇನೋ. ಎಕ್ಕಡಾನೇ ಸಾÊÅ… ಸಾÊÅ… ರೂಪಾಯಿದ್ ಹಾಕತಾರೆ ಅವೆÅಲ್ಲ. ನಮ್ಮಂಗ್ ಬಡವರ ಮಕ್ಕಳಾ ಅವೆÅಲ್ಲ? ಕನಸ್ ಕಾಣಕೇನ್ ಕಾಸ್ ಕೊಡಬೇಕಾ?” ಅಂತ ಅಡುಗೆ ಮನೆಯೊಳಗಿಂದಲೇ ಕೂಗುವ ಹೆಂಡತಿ, “ಇವನ್ ಮೂತಿಗ್ ಇದ್ ಬೇರೆ ಕೇಡು’ ಎನ್ನುವ ಮಾತನ್ನು ಬಾಯಿಬಿಟ್ಟು ಹೇಳದೆಯೂ ತನ್ನೆಲ್ಲ ಕೆಲಸಗಳ ಮೂಲಕ ತೋರಿಸುತ್ತಿದ್ದಳು. ಸಾವಿತ್ರಿಯನ್ನು ಮದುವೆಯಾಗಿದ್ದರೆ ತಾನೆಷ್ಟು ಸುಖೀಯಾಗಿರುತ್ತಿ¨ªೆ ಎಂದು ದಿನಕ್ಕೊಮ್ಮೆಯಾದರೂ ಯೋಚಿಸುತ್ತಿದ್ದ. ಅವಳು ಭಾಗ್ಯಳ ಹಾಗಲ್ಲ, ಮೃದುಸ್ವಭಾವದವಳು. ತಾನೇ ಎಲ್ಲ ಹಾಳುಮಾಡಿಕೊಂಡೆ ಅಂದುಕೊಳ್ಳುತ್ತ, ತನ್ನಿಂದಾದ ತಪ್ಪಿಗೆ, ಮೋಸಕ್ಕೆ ಕೊರಗುತ್ತ, ಪಶ್ಚಾತ್ತಾಪ ಪಡುತ್ತಲೇ ಇದ್ದ.
ಫೇಸ್‌ಬುಕ್ಕಿನಲ್ಲಿದ್ದ ಸೀಮಾಳೇ ತನ್ನ ಗೆಳತಿ ಸಾವಿತ್ರಿಯು ಅಂತ ಹೆಂಡತಿಗಾಗಲೀ ಶ್ರೀಧರನಿಗಾಗಲೀ ಹೇಳುವ ಧೈರ್ಯ ಸಾಲದೇ ಸುಮ್ಮನಿದ್ದ ಮಧುಸೂದನ. ಫ್ರೆಂಡ್ ರಿಕ್ವೆÓr… ಕಳಿಸಿದರೆ, “ಕ್ಯೂನಲ… ಬೇಜಾನ್ ಜನ ಅವೆÅ ಮುಚRಂಡ್ ಹಿಂದ್ ನಿಂತ್ಕಳಲೇಯ…’ ಅಂತ ಬೈದ ಫೇಸ್‌ಬುಕ್ಕು, ಅವಳನ್ನು ಫಾಲೋ ಮಾಡಲು ಹೇಳಿತು. ಸಾವಿತ್ರಿಯೇ ತನ್ನನ್ನು ಗುರುತಿಸಲೆಂದು ಏನೇನೋ ಐಡಿಯಾ ಮಾಡಿದ. ತನ್ನ ಬಳಿ ಇದ್ದ ಹಳೆಯ ಕಾಲೇಜು ಫೋಟೋ ಹಾಕಿದ. ಅದರಲ್ಲಿ ಸೀಮಾಳನ್ನು ಟ್ಯಾಗಿಸಿದ. ಅವಳ ಎಲ್ಲ ಫೋಟೋಗಳಿಗೂ ಕಮೆಂಟು ಮಾಡಿದ. ಅದರಲ್ಲಿ ಸಾವಿತ್ರಿ ಎಂದೇ ಬರೆಯುತ್ತಿದ್ದ.
ತನ್ನ ಪ್ರೊಫೈಲು ಪಿಕ್ಚರನ್ನೂ ಬದಲಿಸಿ ತನ್ನ ಹಳೆಯ ಲುಕ್ಕಿನ ಕಾಲೇಜು ಫೋಟೋ ಹಾಕಿಕೊಂಡ. ಕಡೆಗೆ ಧೈರ್ಯ ಮಾಡಿ ಒಂದು ಮೆಸೇಜು ಬಿಟ್ಟ. ಏಳೆಂಟು ಸಾಲಿನ ಪುಟ್ಟ ಪತ್ರ. ಫೋನ್ ನಂಬರೂ ಲಗತ್ತಿಸಿದ್ದ. ತಿಂಗಳೆರಡರವರೆಗೂ ದಿನಕ್ಕಿಪ್ಪತ್ತು ಸಲ ಉತ್ತರ ಬಂತೋ? ಅಂತ ಮೆಸೆಂಜರು ನೋಡೀ ನೋಡೀ ಕುತ್ತಿಗೆ ಸವೆಸಿದ. ಆಮೇಲೆ, “ಸಾವಿರಾರು ಜನರ ಮೆಸೇಜು ಬಾಕಿಯಿರಬಹುದು. ನನ್ನದನ್ನೆಲ್ಲಿ ನೋಡುತ್ತಾಳೆ?’ ಅಂತ ತನಗೆ ತಾನೇ ಸಮಾಧಾನ ಹೇಳಿಕೊಂಡು ಆ ಆಸೆಯನ್ನೆೇ ಕೈಬಿಟ್ಟ. ಈ ನಡುವೆ ಅವಳು ಸಾವಿತ್ರಿಯೇ ಅಲ್ಲವೇನೋ. ಜಗತ್ತಲ್ಲಿ ಒಂದೇ ಥರ ಏಳು ಜನ ಇರ್ತಾರಂತೆ. ಇವಳೂ ಅಂತವಳೇ ಯಾರೋ ಇರಬೇಕೆಂದುಕೊಂಡು ಮರೆತು ಸುಮ್ಮನಿರಲೊಂದು ದಿನ ಬಂದೇಬಿಟ್ಟಿತ್ತದು, ಸೀಮಾಳ ಮೆಸೇಜು. ಅರ್ಥಾತ್ ಮಧುಸೂದನನ ಸಾವಿತ್ರಿಯದು.
“”ಹಲೋ… ಮಧುಸೂದನ್ ಅವ್ರಾ ಮಾತಾಡೋದು? ನಾನ್ ಸೀಮಾ ಅಂತ ಮಾತಾಡ್ತಿದೀನಿ”. ಮಧುಸೂದನ ಆ ಧ್ವನಿ ಕೇಳಿ ಕುರ್ಚಿಯಿಂದ ಎದ್ದು ನಿಂತ. ತಡಬಡಿಸಿದ. “”ಹಾn… ಹೇಳಿ… ಹೇಳಿ…” ಅನ್ನುವುದರಿಂದ ಮುಂದೆ ಏನೂ ಮಾತಾಡಲಿಲ್ಲ ಅಥವಾ ಮುಂದಿನ ಮಾತನ್ನು ಸೀಮಾಳೇ ಆಡಿದ್ದಳು. “”ಹೇಗಿದೀರಾ? ಕುಶಾಲನಗರಾನಾ ಈಗ? ಬೆಂಗಳೂರಿಗ್ ಯಾವಾಗ?” ಅಂದಾಗ ಮಧುಸೂದನ ಅರೆಗಳಿಗೆಯೂ ಯೋಚಿಸದೆ ಗಡಿಬಿಡಿಯಲಿ “”ನಾಳೆನೇ” ಅಂದುಬಿಟ್ಟ. “”ಬನ್ನಿ ಬನ್ನಿ . ನಾಳೆ ಸಂಜೆ ಫ್ರೀ ಇರ್ತೀನಿ. ಅಡ್ರಸ್ ಮೆಸೇಜ… ಮಾಡ್ತೀನಿ… ಓಕೆ ಬೈ” ಅಂದು ಫೋನಿಟ್ಟಾಗ ನಂತರದ ಕೆಲ ಗಳಿಗೆಗಳು ಮಧುಸೂದನ ಕಾಲಚಕ್ರದಲಿ 15 ವರುಷ ಹಿಂದಕ್ಕುರುಳಿ ನಿಂತುಬಿಟ್ಟಿದ್ದ !
“”ಅಡ್ರಸ್ಸಿನೊಂದಿಗೆ ಎಲ್ಲ ಕಾಲೇಜು ಫೋಟೋಗಳನ್ನೂ ತಗೊಂಡು ಬಾ” ಅಂತ ಇಂಗ್ಲೀಷಿನಲ್ಲಿದ್ದ ಮೆಸೇಜು ನೋಡಿ ಅವಳೇಕೆ ತನ್ನನ್ನು ಹೋಗಿ ಬನ್ನಿ ಅಂತ ಮಾತಾಡಿಸಿದಳು? ಅನ್ನುವ ಪ್ರಶ್ನೆ ಎದ್ದು, ಎಷ್ಟೋ ವರುಷಗಳಾಯಿತಲ್ಲ ಅಂತ ತನಗೆ ತಾನೇ ಸಮಜಾಯಿಷಿ ಕೊಟ್ಟುಕೊಂಡು ಫೋಟೋಗಳನ್ನು ಜೋಡಿಸಿಕೊಂಡ. ಆಫೀಸು ಕೆಲಸ, ಸಾಹೇಬರ ಜೊತೆ ಹೆಡ್ಡಾಫೀಸಿಗೆ ಹೋಗಬೇಕು ಅಂತೇನೋ ಹೆಂಡತಿಗೆ ಸಿಕ್ಕ ಸುಳ್ಳು ಹೇಳಿ ಬೆಳಗ್ಗೆ ಐದಕ್ಕೇ ಬಸ್ಸು ಹತ್ತಿ¤ಬಿಟ್ಟಿದ್ದ. ವೋಲ್ವೋ ಯಾಕೆ ಹತ್ತಿದೆ? ಅಂತ ಅವನಿಗೇ ಗೊತ್ತಾಗಲಿಲ್ಲ.
ಎಂಜಿ ರೋಡಿನ ತುದಿಯಲ್ಲಿ ಬಸ್ಸಿಳಿದು ಅಡ್ರಸ್ ಕೇಳುತ್ತ¤ ಕೊನೆಗೂ ಸದರೀ ಬಿಲ್ಡಿಂಗು ಮುಟ್ಟಿ ಒಳಹೋದ. ಲಿಫ್ಟಿನ ಹತ್ತಿರ ನಿಂತು ಫೋನಾಯಿಸಿದ. ಅತ್ತಿಂದ ಉತ್ತರವಿಲ್ಲ. ಎರಡೆರಡು ಸಲ ಫೋನು ಮಾಡಿದ. ಮೆಸೇಜು ಮಾಡಿದ. ಉತ್ತರವಿಲ್ಲ. ಸೆಕ್ಯುರಿಟಿಯನ್ನು ಮಾತಾಡಿಸಿದ. ಇವನು ಕನ್ನಡದಲ್ಲೇನೋ ಕೇಳಿದರೆ ಅವನು ಹಿಂದಿಯಲ್ಲಿನ್ನೇನೋ ಹೇಳಿದ. ಭಾಷೆ ಅರ್ಥವಾಗದಿದ್ದರೂ, ಅವನ ಮುಖಭಾವದ ನಿರ್ಲಕ್ಷÂ ಮಧುಸೂದನನಿಗೆ ಅರ್ಥವಾಗಿತ್ತು. ಅವನ ಹಳೆಯ ಚಪ್ಪಲಿ, ದೊಗಲೆ ಷರಟು, ಮಂಡಿವರೆಗೆ ನೇತಾಡುತ್ತಿದ್ದ ಸೈಡುಬ್ಯಾಗು ಸೆಕ್ಯೂರಿಟಿಯವನ ನಿರ್ಲಕ್ಷ್ಯಕ್ಕೆ ಕಾರಣವಾಯಿತೇನೋ. “ಠಣ್’ ಅಂತು ಮೆಸೇಜು. “ಜÓr… ಅ ಮಿನಟ್. ಮೇಕಪ್ ರಿಮೂವ್ ಮಾಡ್ತಿದೀನಿ’ ಅಂತ ಕಳಿಸಿದ್ದಳು. ಆ ಮೆಸೇಜಿನ ಧೈರ್ಯದ ಮೇಲೆ ಸೆಕ್ಯುರಿಟಿಯವನನ್ನು ತಾನೂ ಅಲಕ್ಷ್ಯದಿಂದ ನೋಡಿ, ಫ್ಲೋರ್‌ನ ತುದಿಗೆ ಹೋಗಿ ನಿಂತ. ಗಾಜಿನಿಂದ ಕಾಣುತ್ತಿದ್ದ ಕಾಫಿಬಾರು, ಕೆನರಾಬ್ಯಾಂಕ್ ಎಟಿಎಂ ಮುಂದಿನ ದೊಡ್ಡ ಮೀಸೆಯ ಸೆಕ್ಯೂರಿಟಿ, ನೀಲಿಕನ್ನಡಕದ ಡೆನಿಮ… ಚೆಡ್ಡಿಯ ಹುಡುಗಿ- ಎಲ್ಲವನ್ನೂ ನೋಡುತ್ತಾ ನಿಂತವನ ಹಿಂದೆ “ಹಲೋ’ ಎಂಬ ಧ್ವನಿ ತೇಲಿಬಂದು ತಿರುಗಿನೋಡಿದ. ಸಾವಿತ್ರಿ! ಇನ್ನವನಿಗೆ ಯಾವ ಅನುಮಾನವೂ ಉಳಿಯಲಿಲ್ಲ. ಅವಳು ಮಧುಸೂದನನಿಗೆ ಏನೋ ಹೇಳಲು ಹೊರಟಾಗಲೇ ಲಿಫ್ಟಿನಿಂದ ಹೊರಬಂದ ಕೆಂಚುಕೂದಲಿನ ಹುಡುಗ “”ಹಾಯ… ಸೀಮಾ” ಅಂದ. ಸೀಮಾ, “”ಹೋಯ… ರಾಕೀ” ಎನ್ನುತ್ತಾ ಹತ್ತಿರ ನಡೆದಳು. ಅವನು, “”ಹೌ ಆರ್ ಯೂ ಡಾರ್ಲಿಂಗ್?” ಎನ್ನುತ್ತಾ ಅಪ್ಪಿದ. ಅವಳೂ ತಬ್ಬಿಕೊಂಡು “”ಯಾ ಫೈನ್ ಥ್ಯಾಂಕ್ಯೂ” ಎಂದವಳು ಕೈ ಹಿಡಿದು ಮಾತಾಡಿ “ಬೈ’ ಹೇಳಿ ಮಧುಸೂದನನ ಕಡೆ ತಿರುಗಿ “”ಓ ಯಾಮ… ಸಾರಿ…” ಎಂದಳು. ಮಧುಸೂದನ “ಪರವಾಗಿಲ್ಲ’ ಅಂದ. “”ನೀವು ಕೆಳಗಿರಿ ನಾನು ಕಾರ್ ತರ್ತೀನಿ” ಅಂತ ಹೇಳಿ ಮತ್ತೆ ಲಿಫr…ನೊಳಗೆ ತೂರಿಕೊಂಡಳು.
.
ಸಾವಿತ್ರಿ ಆಗ ಮೊದಲನೇ ಪಿಯುಸಿ ಇರಬೇಕು. ಲಂಗ, ರವಿಕೆ ಉದ್ದನೆಯ ಎರಡು ಜಡೆ. ಬ್ಯಾಗ್ ತರ್ತಿರಲಿಲ್ಲ. ಪುಸ್ತಕವನ್ನು ಎದೆಗೊತ್ತಿಕೊಂಡು ಹಿಡಿದು ನಡೆದುಬರೋಳು. ಅವಳ ಊರು ಹುಳಿಮಾವು ಆದ ನಂತರವೇ ಇವನ ಬೋಗಳ್ಳಿ. ದಿನಾ ಒಂದೇ ಪ್ರೈವೇಟ… ಬಸ್ಸಿನಲ್ಲಿ ಓಡಾಟ. ಹುಳಿಮಾವು ಮೇನ್ ರೋಡಿನಲ್ಲಿ ಇಳಿದು ಗ¨ªೆಗಳ ಮೇಲೆ ಒಂದೂವರೆ ಕಿ. ಮೀ. ಇಬ್ಬರೂ ನಡೆದು ಹೋಗಬೇಕಿತ್ತು. ಆ ದಾರಿಯುದ್ದಕ್ಕೂ ಎಂದೂ ಒಂದೂ ಮಾತಾಡದೆ, ಪುಸ್ತಕಗಳನ್ನು ಎದೆಗೆ ಇನ್ನಷ್ಟು ಬಿಗಿದೊತ್ತಿ ನೆಲನೋಡುತ್ತ ನಡೆಯುತ್ತಿದ್ದ ಸಾವಿತ್ರಿ, ಅಂದು ಯಾಕೋ ಕಣ್ಣೀರೊರೆಸಿಕೊಳ್ಳುತ್ತ ನಡೆಯುತ್ತಿದ್ದುದು ಮಧುಸೂದನನ ಕಣ್ಣಿಗೂ ಬಿದ್ದು, ಅವನೇ ಮಾತಾಡಿಸಿದ. ಸಾವಿತ್ರಿಯ ದುಃಖ ಮತ್ತೂ ಹೆಚ್ಚಿತು. ಅವಳು ಬಸ್ಸಿನಲಿ ಕಂಬಿ ಹಿಡಿದು ನಿಂತಿ¨ªಾಗ, ಬಸವಾಪುರದ ಸತೀಶನೆಂಬ ಕ್ವಾಟ್ಲೆ ಹುಡುಗ ಅವಳ ಕೈಮೇಲೆ ತಾನೂ ಕೈ ಇಟ್ಟು ತಕ್ಷಣವೇ “ಸಾರಿ ಸಾರಿ’ ಅಂತ ಹೇಳಿ ಹಿಂದಕ್ಕೆ ಹೋದ. ಹಿಂದಿನ ಸೀಟಿನ ಹುಡುಗರು “ಗೊಳ್’ ಅಂತ ನಕ್ಕಿದ್ದರು. ಇದನ್ನು ಕೇಳಿ ಮಧುಸೂದನನ ಪಿತ್ತ ನೆತ್ತಿಗೇರಿ, ಮಾರನೆಯ ದಿನ ಮಾರಾಮಾರಿಯಾಗಿ ಮತ್ತೆ ಆ ಸತೀಶನ ಗ್ಯಾಂಗು ಎಸ್ಸಾರ್ಟಿ ಬಸ್ಸನೇ ಹತ್ತಲಿಲ್ಲ. ಮಧುಸೂದನ ಒಳೇಟಿನಿಂದ ಸುಧಾರಿಸಿಕೊಂಡದ್ದೂ ತಿಂಗಳಾದ ಮೇಲೆಯೇ. ಅದಾದ ಮೇಲೆಯೇ ಸಾವಿತ್ರಿಯೂ ತಾನೂ ನಿಧಾನಕ್ಕೆ ಮಾತಾಡಲು ಶುರು ಮಾಡಿದ್ದು.
.
ಕಾರಿನ ಹಾರ್ನ್ ಶಬ್ದಕೆ ಮಧುಸೂದನ ಗ¨ªೆಬಯಲಿಂದ ಸೀದಾ ಎಂಜಿ ರಸ್ತೆಗೆ ಬಿದ್ದ. ಕಾರೊಳಗೆ ಕಣ್ಣಿಗೆ ಕನ್ನಡಕ ತುಟಿಗೆ ಗಾಢಗುಲಾಬಿಯ ಲಿಪ್‌ಸ್ಟಿಕ್ಕು ಹಾಕಿದ ಸಾವಿತ್ರಿ! “ಈಗ ಸ್ವಲ್ಪ$ಹೊತ್ತಿನ ಮುಂಚೆ ಲಿಪ್‌ಸ್ಟಿಕ್ಕು ಇತ್ತಾ? ನಾನೇ ಸರಿಯಾಗಿ ನೋಡಲಿಲ್ಲವಾ?’ ಹಾರ್ನ್ ಶಬ್ದ ಜೋರಾಗಿ, ಮಧುಸೂದನ ಬಂದು ಕಾರಿನಲ್ಲಿ ಕೂತ. ಯಾರಿಗೋ ಕೈ ಬೀಸಿ ಸಾವಿತ್ರಿ ಕಾರನ್ನು ಮುಖ್ಯರಸ್ತೆಗಿಳಿಸಿದಳು. ಹತ್ತುನಿಮಿಷ. ಕಾರು ಎಂಜಿ ರೋಡು ದಾಟಿ ಯುಬಿಸಿಟಿಯ ಮುಂದೆ ನಿಲ್ಲುವವರೆಗೂ ಇಬ್ಬರೂ ಮಾತಾಡಲಿಲ್ಲ. ಯಾವುದೋ ಇಂಗ್ಲಿಷ್ ಮ್ಯೂಸಿಕ್ಕಿಗೆ ಸಾವಿತ್ರಿ ಕುತ್ತಿಗೆ ಕೊಂಕಿಸುತ್ತಿದ್ದಳು ಅಷ್ಟೇ. “”ಸಾರಿ ಕೇಳ್ಳೇ ಇಲ್ಲ, ಊಟ ಮಾಡಿದೀರೋ ಇಲ್ವೋ?” ಅಂದಳು. ಮಧುಸೂದನ “ಆಯ್ತು . ಬಸ್ಸಾ$rಂಡ್ ಹೋಟ್ಲÇÉೆ’ ಅಂದ.
“”ಸಂಕೋಚ ಪಟ್ಕೊàಬೇಡಿ. ವೆಜ…, ನಾನ್ವೆಜ…, ಎನಿಥಿಂಗ್ ಇಸ್ ಫೈನ್. ಹೋಗೋಣ್ವ? ಒಳ್ಳೆ ಹೊಟೇಲಿಗ್ ಕರ್ಕೊಂಡೋಗ್ತಿàನಿ. ಏನು?” ಮಧುಸೂದನ, “”ಇಲ್ಲ. ಬೇಡ. ಮನೆಗೆ ಹೋಗೋಣ” ಅಂದ. ಅವಳು ಒತ್ತಾಯಿಸಲಿಲ್ಲ. “ಓಕೆ’ ಅಂದು, ಮತ್ತೆ ಕಾರು ಸ್ಟಾರ್ಟ್ ಮಾಡಿದಳು.
ಗಿರಿನಗರದ ಪುಟ್ಟ ಅಪಾಟೆ¾ìಂಟ್‌ನಂಥ ಬಿಲ್ಡಿಂಗ್‌ನಡಿ ಕಾರು ನಿಲ್ಲಿಸಿ, ಲಿಫ್ಟಿನೊಳಗೆ ಮೂರನೇ ನಂಬರಿನ ಗುಂಡಿ ಒತ್ತಿದಳು. ಲಿಫ್ಟಿನೊಳಗೆ ಫ್ಯಾನಿನ ಗುಂಡಿ ಒತ್ತೂತ್ತಿ, ಅದು ಕೆಟ್ಟಿರುವುದಕ್ಕೆ ಮುಖ ಗಿಂಜಿಕೊಂಡು, ಕೈಬೀಸಣಿಗೆ ಮಾಡಿಕೊಂಡಳು. ಲಿಫ್ಟ್ನಿಂದ ಹೊರಬಂದು ಮನೆಯ ಬೀಗ ತೆಗೆದು, ದೊಡ್ಡ ಗಾತ್ರದ ಸೋಫಾ ತೋರಿಸಿ, “”ಕೂತ್ಕೊಳಿ ಪ್ಲೀಸ್” ಅಂದು, ತನ್ನ ಜಾಕೆಟ್ ಬಿಚ್ಚೆಸೆದು “ಉಫ್’ ಎನ್ನುತ್ತಾ ತಾನೂ ಅಡ್ಡಾದಳು. ಜಾಕೆಟ್ಟಿನೊಳಗಿದ್ದ ಸ್ಲಿàವ್‌ಲೆಸ್ ಟೀಶರ್ಟ್, ಡೀಪ್ನೆಕ್, ಮಧುಸೂದನನ ಮುಜುಗರಕ್ಕೆ ಕಾರಣವಾದರೂ ಸೀಮಾ ಮಾತ್ರ ಸಹಜವಾಗೇ ಇದ್ದಳು. ಬೇರೆ ಯಾರಾದರೂ ಆಗಿದ್ದರೆ, ಅಪ್ಪ,$ಅಮ್ಮ, ಅಣ್ಣ, ಅಕ್ಕ ತಂಗಿ ಮುಂತಾಗಿ ವಿಚಾರಿಸುತ್ತ ಮಾತು ಶುರುಮಾಡಬಹುದಿತ್ತು. ಆದರೆ ಸಾವಿತ್ರಿಗ್ಯಾರಿ¨ªಾರೆ? ಸಾವಿತ್ರಿ ಕೆಂಚಪ್ಪನ ಮೊದಲ ಹೆಂಡತಿ ಮಗಳು. ಅವನ ಎರಡನೆ ಹೆಂಡತಿ ಸಾವಿತ್ರಿಗೆ ಕೊಟ್ಟ ಕಾಟ ಒಂದೆರಡಲ್ಲ. ಕೆಂಚಪ್ಪ ಸತ್ತಮೇಲಂತೂ ಸಾವಿತ್ರಿ ತೀರಾ ಮನೆಕೆಲಸದವಳೇ ಆಗಿಬಿಟ್ಟಿದ್ದಳಲ್ಲ. ಹಳೇಸೀರೆಯಲ್ಲಿ ಕೈಸೂಜಿಯಿಂದಲೇ ಲಂಗ ಹೊಲೆದುಕೊಳ್ಳುತ್ತಿದ್ದ ಕಸುಬುಗಾತಿ ಅವಳು. ಲಂಗರವಿಕೆ ಹಾಕಿಕೊಂಡು ಒಲೆಬೂದಿ ತೋಡಿಕೊಂಡು ಮಸಿಪಾತ್ರೆ ಉಜ್ಜುತ್ತಿದ್ದ ಸಾವಿತ್ರಿ ಇವಳೇನಾ? ಯಾಕೋ ಮಧುಸೂದನನಿಗೆ ಇಲ್ಲದ ಅನುಮಾನ ಮತ್ತೆ ಶುರುವಾಯ್ತು.
“”ಈಗ್ ಬಿಟ್ರೆ ಇÇÉೆ ನಿ¨ªೆ ಮಾಡಿºಡ್ತೀನ್ ನಾನು” ಎನ್ನುತ್ತ ಸೋಫಾದ ಮೇಲೆ ತುಸು ಓರೆಯಾಗಿ ಕೂತಿದ್ದವಳು ಎದ್ದು ಸರಿಯಾಗಿ ಕೂರುತ್ತ¤, “”ರಾತ್ರಿ ಎÇÉಾ ಶೂಟಿಂಗ್ ಮಾಡ್ಕೊಂಡ್ ಸಾಯ್ತಾರೆ. ಅವನ್ಯಾವನೋ ಕಳೊºàಳೀಮಗ ಬರೋದ್ ಲೇಟಾಯ್ತು ಅಂತ ನಾನ್ ನಿ¨ªೆಗೆಟ್ಟಿ¨ªಾಯ್ತು. ಹೋಗ್ಲಿ ಬಿಡಿ. ಇದ್ದಿದ್ದೇ ನಮುª. ಹೇಳಿ, ಏನ್ಸಮಾಚಾರ? ಹೇಗಿದೀರಾ?” ಮಾತು ಕಳೆದುಕೊಂಡಂತಾಗಿದ್ದ ಮಧುಸೂದನ ಮೊದಲ ಬಾರಿಗೆ ಸಾವಿತ್ರಿ ತನ್ನನ್ನು “ಮಧೂ’ ಎಂಬ ಹಳೆಯ ಏಕವಚನ ಮತ್ತು ಸಲುಗೆಯ ಬದಲು, ಪೂರ್ತಿ ಹೆಸರಿನ ಬಹುವಚನದೊಂದಿಗೆ ಮಾತಾಡಿಸುತ್ತಿ¨ªಾಳೆಂಬುದು ಅರಿವಿಗೆ ಬಂದು ಮೌನವಾದ. “”ಯಾಕ್ರೀ… ಏನೂ ಮಾತಾಡ್ತಾನೇ ಇಲ್ಲ?”. “”ಹಾnಂ.. ಚೆನಾಗಿದೀನಿ. ನೀವು?” ಅಂದ. ತಾನೂ ಬಹುವಚನದಲ್ಲಿದ್ದೇನೆಂಬುದನ್ನು ಪ್ರಜ್ಞಾಪೂರ್ವಕವಾಗಿ ಕಂಡುಕೊಂಡಿದ್ದ.
“”ನೋಡ್ತಿದೀರಲ್ಲ?” ಅಂದವಳು ಹಿಂದೆಯೇ “”ಸಿಗರೇಟ… ಸೇದಿ¤àರಾ?” ಕೇಳಿದಳು. ಮಧುಸೂದನ ತಬ್ಬಿಬ್ಟಾದ. ಅದನ್ನು ಅವಳು ಗಮನಿಸದಿರಲಿಲ್ಲ. “”ಬೇಡ್ವಾ? ಇನ್ನೂ ಅಷ್ಟೇ ಒಳ್ಳೆಯರಾಗಿದೀರೇನ್ರೀ?” ಎನ್ನುತ್ತಾ ಅವಳು ಒಳಗೇ ನಕ್ಕರೂ ಆ ನಗು ತುಟಿಮೇಲೂ ಹರಿದಾಡಿತ್ತು. “”ಇಲ್ಯಾರು? ನಿಮ… ಗಂಡ ಸೇದ್ತಾರಾ?” ಟೀಪಾಯ… ಮೇಲಿಟ್ಟ ಆಶ್ ಟ್ರೇ ನೋಡಿ ಕೇಳಿದ. “”ನಿಂಗ್ ಮದ್ವೆಯಾಗಿದಿಯೇನಮ್ಮ? ಅಂತ ಡೈರೆಕ್ಟಾಗೇ ಕೇಳೊºàದಿತ್ತೇನೋ ನೀವು. ನಂಗ್ ಮದ್ವೇನೂ ಆಗಿಲ್ಲ. ಈ ಮನೇಲ… ಯಾವ್ ಗಂಡ್ ಪ್ರಾಣೀನೂ ಇಲ್ಲ. ನಾವ್ ಮೂರ್ ಜನ ಫ್ರೆಂvÕ… ಇರ್ತೀವಿ. ಯಾರ್ ಯಾವಾಗ್ ಬರ್ತೀವಿ ಗೊತ್ತಿಲ್ಲ. ನಮ… ಕೆಲ್ಸಗಳ್ ಹಾಗಿರತ್ತೆ. ಒಟೆYà ಸಿಕಾªಗ ಅಪರೂಪಕ್ ಏನಾದ್ರೂ ಬೇಯಿಸ್ತೀವಿ. ಒಂದ್ ಗ್ಯಾಸ್ ಸಿಲಿಂಡರ್ ಆರ್ ತಿಂಗಳ್ ಮೇಲ… ಬರತ್ತೆ. ನಿಮ್ಮನೇಲಿ?” ಕಡೆಯ ಅನಿರೀಕ್ಷಿತ ಪ್ರಶ್ನೆಗೆ ಕ್ಷಣ ಕಕ್ಕಾಬಿಕ್ಕಿಯಾದ ಮಧುಸೂದನ. “”ಬರತ್ತೆ ಎರಡ್ ತಿಂಗ್ಳು” ಅಂದ. ಅವನ ಉತ್ತರದಲ್ಲಿ ಅವಳಿಗೆ ಅಂಥ ಆಸಕ್ತಿಯೇನೂ ಇದ್ದಂತಿರಲಿಲ್ಲ.
ಅದನ್ನು ಕೇಳಿಸಿಕೊಂಡದ್ದೂ ಅನುಮಾನವೇನೋ ಎಂಬಂತೆ, ರಿಂಗಾದ ಫೋನೆತ್ತಿಕೊಂಡು “ಹಾಯ… ಡಾರ್ಲಿಂಗ್’ ಎನ್ನುತ್ತ ಹಾಲ್‌ನ ತುದಿಯವರೆಗೂ ನಡೆದು ಕಿಟಕಿ ಪರದೆ ಸರಿಸಿ ಜೋರಾಗಿ ನಗುತ್ತ¤ ಮಾತಾಡುತ್ತ ನಿಂತಳು. ಮೊಣಕಾಲಿನವರೆಗಿದ್ದ ಗಿಡ್ಡ ಸ್ಕರ್ಟ್. “ಇಷ್ಟು ನುಣುಪಾಗಿದ್ದವೇ ಉದ್ದಲಂಗದೊಳಗಿದ್ದ ಸಾವಿತ್ರಿಯ ಕಾಲುಗಳು’ ತಾನು ಹೀಗೆ ಯೋಚಿಸಿದ್ದು ಅವಳಿಗೆ ಗೊತ್ತಾಗಿಬಿಟ್ಟರೆ? ಮಧುಸೂದನ ಸಣ್ಣಗೆ ಬೆವರಿದ.
ಸಾವಿತ್ರಿಯನ್ನು ತಾನು ಮದುವೆಯಾಗದೇ ಇದ್ದುದರಿಂದ ಒಳ್ಳೆಯದಾಯಿತಾ? ಕೆಟ್ಟದಾಯ್ತಾ? ಮಧುಸೂದನನೊಳಗೆ ಯಕ್ಷಪ್ರಶ್ನೆಯಂಥದೊಂದು ಪ್ರಶ್ನೆ ಎದ್ದಿತು. ಪಿಯುಸಿ ಮುಗಿದ ಮೇಲೆ ಮಧುಸೂದನ ಐಟಿಐ ಸೇರಿಕೊಂಡ. ಬಿಪಿಎಲ… ಕಾರ್ಡು ತೋರಿಸಿ, ಸಿಟಿಯ ಸರಕಾರೀ ಹಾಸ್ಟೆಲಿನಲ್ಲಿ ಉಳಿದ. ಸಾವಿತ್ರಿ 600ಕ್ಕೆ 481 ನಂಬರು ಪಡೆದು ಕಾಲೇಜಿಗೇ ಮೊದಲಿಗಳಾಗಿದ್ದಳು. ಮರುವಾರವೇ ಕೆಂಚಪ್ಪಸತ್ತು, ಹೈಸ್ಕೂಲಿಗೆ ಬಂದಿದ್ದ ತಮ್ಮಂದಿರು, ಪೋಲೀ ಐಕ್ಳು “ಗ್ವಾಡೆ ಮೇಲೆಲ್ಲ ಅಕ್ಕನೆಸ್ರು ಬರ್ದವೆÅ’ ಅಂತ ಹೇಳಿದ್ದೇ ಕಾರಣವಾಗಿ, ಚಿಕ್ಕವ್ವ ಸಾವಿತ್ರಿಯನ್ನು ಹಟ್ಟಿàಲಿರಿಸಿದಳು. ಮಧುಸೂದನ ಲೆಟರು ಬರೆಯುತ್ತಿದ್ದ. ಸಾವಿತ್ರಿ ತನ್ನ ದುಂಡನೆಯ ಅಕ್ಷರಗಳಲ್ಲಿ ಕಾವ್ಯಮಯವಾಗಿ ಉತ್ತರ ಬರೆಯುತ್ತಿದ್ದಳು. ಅವನಿಗೆ ಎಷ್ಟೋ ಸಲ ಅವಳು ಬರೆದದ್ದು ಅರ್ಥವಾಗುತ್ತಲೂ ಇರಲಿಲ್ಲ. ಆದರೆ ಯಾವಾಗ ಲೆಟರು ಸಾವಿತ್ರಿ ಇಲ್ಲದಾಗ ಚಿಕ್ಕವ್ವನ ಕೈಸೇರಿ ಮಕ್ಕಳಿಂದ ಓದಿಸಲ್ಪಟ್ಟಿತೋ, ಯಾವಾಗ ಮಧುಸೂದನನ ಮನೆ ಮುಂದಕ್ಕೆ ಬಂದು ಹುಳಿಮಾವಿನವರು ಗಲಾಟೆ ಮಾಡಿದರೋ, ಕಾಗದ ಬಂದ್ ಆಯಿತು. ಐಟಿಐ ಮುಗಿಸಿ, ಕೆಲಸ ಹಿಡಿಯುವುದರಲ್ಲಿ ಮಧುಸೂದನನ ಅವ್ವ ತಮ್ಮನ ಮಗಳನ್ನು ತಂದುಕೊಳ್ಳುವ ಒಪ್ಪಂದ ಮಾಡಿ ಮುಗಿಸಿದ್ದಳು. ಸಾವಿತ್ರಿಯ ಪ್ರಸ್ತಾಪ ಮಾಡಿದಾಗ, “ಅವಳು ಗತಿಗೆಟ್ಟವಳು, ಮಕ್ಕಳು ಮರೀ ಆದ್ರೆ ಬಾಣ್ತನ ಮಾಡೋಕೂ ಯಾರೂ ಇಲ್ದವಳು’ ಅಂದಳು ಅವ್ವ. “ನಮೂª ತಮೂª ಅಂತ ಯಾತಕ್ಕಾಯ್ತು ಮಗಾ?’ ಅಂತ ಅನುನಯಿಸಿದಳು. ಒಬ್ಬಳೇ ಮಗಳಾದ ಭಾಗ್ಯ ಅಪ್ಪನ ಆರೆಕರೆ ಗ¨ªೆಯ ಒಡತಿಯೂ ಆಗುವವಳಿದ್ದಳು. ಮಧುಸೂದನನಿಗೆ ಸೋದರಮಾವ ಬದುಕಿದ ವಾಸ್ತವದ ಪಾಠಹೇಳಿ ಒಪ್ಪಿಸಿದ. ಮಧುಸೂದನನಿಗೂ ಸರಿ ಅನಿಸಿತ್ತು. ವಿಷಯ ತಿಳಿದ ಸಾವಿತ್ರಿಯ ಚಿಕ್ಕವ್ವ, “”ನನ್ ತಮ್ಮನಿಗ್ ಮದುವೆ ಮಾಡಿದ್ರೆ ನೇಣಾಕಂತೀನಿ ಅಂದ್ಯÇÉೇ ಕತ್ತೆರಂಡೆ… ಈಗ್ನೊàಡು ನಿನ್ ರಾಜುRಮಾರ ಮದ್ವೆ ಆಯ್ತಾವೆ°. ನನ್ ತಮ್ಮನಿಗೂ ಒಂದ್ ಕೂಸಾಯ್ತು. ಇನ್ಯಾರಿಗ್ ಮದ್ವೆ ಮಾಡ್ಲಿ ನಿನ್ನ? ನಿಮ್ಮಪ್ಪಯಾವ್ ಜಾಗೇರಿ ಮಡಗಿ¨ªಾನು ನಿನ್ ಮದ್ವೆ ಮಾಡಾಕೆ?” ಅಂತ ತಿವಿದಳು.
ಆವತ್ತು ಸಾವಿತ್ರಿ ಸುರಿಸಿದ ಕಣ್ಣೀರಿಗೆ ಹುಳಿಮಾವಿನ ಕೆರೆಯೇ ತುಂಬಿತ್ತೇನೋ. ಕ್ವಾಟ್ಲೆ ಸತೀಶ ಮಧುಸೂದನನಿಗೆ ಒಮ್ಮೆ ಸಿಕ್ಕಿ, “”ಸಾವಿತ್ರಿ ಈಗ ಬೆಂಗಳೂರಲ್ಲವಳೆ. ಯಾರೋ ಸಾವಾRರ್ರ ಹಟ್ಟಿàಲಿ ನಾಯಿಗಳ್ ನೋಡ್ಕಳಕ್ ಕರ್ಕಂಡೋಗಿದಾರಂತೆ” ಅಂದದ್ದಷ್ಟೇ ಅವಳ ಬಗ್ಗೆ ಸಿಕ್ಕ ಕಡೇ ಮಾಹಿತಿ.
ಫೋನ್ ಕತ್ತರಿಸಿ, “”ಓ ಐ ಯಾಮ… ರಿಯಲೀ ಸಾರಿ” ಎನ್ನುತ್ತಾ ಮಧುಸೂದನನ ಕಡೆ ಬಂದಳು ಸೀಮಾ. “”ಐಸ್ಕ್ರೀಮ್ ತಿಂತೀರಾ ಅಲ್ವಾ? ನಿಮ್ಮ… ಕೇಳ್ಳೋದೇ ಇಲ್ಲ. ನಾನೇ ಆರ್ಡರ್ ಮಾಡ್ತೀನಿ. ಇದೊಂದ್ ಲಾÓr… ಕಾಲ…. ಆಮೇಲ… ಫೋನ್ ಆಫ್ ಮಾಡಿºಡ್ತೀನಿ. ಮಾತಾಡಣ. ಓಕೆ?” ಎನ್ನುತ್ತಲೇ ಡಯಲ… ಮಾಡಿ, “ಐಬ್ಯಾಕೋ?’ ಅಂದಳು. ಅವಳು ಏನು ಆರ್ಡರ್ ಮಾಡುತ್ತಿ¨ªಾಳೆಂದು ಮಧುಸೂದನನಿಗೆ ಗೊತ್ತೂ ಆಗಲಿಲ್ಲ. ಐಸ್ಕ್ರೀಮ್ ಕೇಕ್, ಅದರ ಟಾಪಿಂಗÕ… ಎಲ್ಲವನ್ನೂ ಹೇಳಿ ಮುಗಿಸಿ, ಫೋನು ಸೋಫಾದ ಮೇಲೆ ಎಸೆದಳು. “ಫೋನ್ ಆಫ್ ಆಯ್ತು. ಐದ್ ನಿಮಿಷ ಕೊಡ್ತೀರಾ? ಸ್ನಾನ ಮಾಡ್ ಬರ್ತೀನಿ. ಐಸ್ಕ್ರೀಮ್ ತಿನ್ನಕ್ ಒಳ್ಳೆ ಮೂಡ್ ಬರತ್ತೆ’ ಅಂದವಳು, ಅವನ “ಹೂnಂ, ಊಹೂnಂ’ಗಳನೆಲ್ಲ ತಾನೇ ಹೇಳಿಕೊಳ್ಳುವಂತೆ ಒಳಹೋದಳು. ಅವಳು ಬಾತ್‌ರೂಮಿನ ಬಾಗಿಲು ಬಡಿದುಕೊಳ್ಳುವುದಕ್ಕೂ ಗಾಳಿಯ ಸದ್ದಿಗೆ ಕಿಟಕಿ ಪಟಾರನೆ ಬಡಿದುಕೊಂಡದ್ದಕ್ಕೂ ತಾಳಮೇಳವಾಯಿತು. ಮಧುಸೂದನ ತಾನೇ ಎದ್ದು ಕಿಟಕಿ ಮುಚ್ಚಲು ಹೋದ. ಅರಳೀಮರ! ಅರೆ. ಸಿಟಿಗಳಲ್ಲೂ ಇಷ್ಟು ದೊಡ್ಡ ಅರಳೀಮರ ಇರತ್ತಾ? ಓಹ್… ಬೇವೂ ಇದೆ. ಅವನು ನೆನಪಿಗೆ ಜಾರಿದ.
.
ಹುಳಿಮಾವಿನ ದಾರೀಲಿದ್ದ ದೊಡ್ಡರಳೀಮರವೇ ಸಾವಿತ್ರಿ, ಮಧುಸೂದನರಿಗೆ ಜುಲೈ ತಿಂಗಳ ಸಂಜೆಮಳೆಗಳ ಛಾವಣಿಯಾಗಿತ್ತು. ಅವತ್ತು ಸಂಜೆ ಆಷಾಢದ ಗಾಳಿಹೊಡೆತಕ್ಕೆೆ ತತ್ತರಿಸುತ್ತ ಐಸ್‌ಕ್ಯಾಂಡಿಯವನು ಜೋರಾಗಿ ಸೈಕಲ… ತುಳಿಯುತ್ತಿದ್ದ. “”ಅಣ್ಣಾ ಎಷ್ಟು?” ಸಾವಿತ್ರಿ ಕೂಗಿದ್ದಳು. ಅವಳು ಬೇಡವೆಂದರೂ ಮಧುಸೂದನನೇ ಎರಡು ರೂಪಾಯಿ ಕೊಟ್ಟ. ಮಳೆ ಜೋರಾಗಿ, ಅರಳೀಮರದ ನೆರಳಿಗೆ ಬಂದರು. ಎಷ್ಟು ದೊಡ್ಡ ಹನಿಗಳೆಂದರೆ ಮರದಡಿಗೆ ಬರುವುದರಲ್ಲಿ ಅರ್ಧ ನೆನೆದಿದ್ದರು. ಸಾವಿತ್ರಿಯು ಪುಸ್ತಕಗಳನ್ನು ಮರದಡಿಯಲಿಟ್ಟು, ಲಂಗಕ್ಕಂಟಿದ್ದ ಕೆಸರು ಕೊಡವಿ ನಿಂತಳು. ಎರಡು ವರ್ಷದಲ್ಲಿ ಮೊದಲ ಬಾರಿಗೆ ಎದೆಮೇಲೆ ಪುಸ್ತಕವಿರಲಿಲ್ಲ! ಕ್ಯಾಂಡಿಯ ಕೈಚಾಚಿ “”ತಗಳಿ, ತಿನ್ನಿ” ಅಂದಳು. “”ಬ್ಯಾಡ ಎಂಜಲಾಯ್ತದೆ” ಅಂದ ಮಧುಸೂದನ. ಅವಳು ತಾನು ತಿಂದು, “”ಅಯ್ಯೋ. ಎಂಜಲಾಗೋಯ್ತಲ್ಲ? ನೀವೆಂಗ್ ತಿನ್ನದು?” ಅಂತ ಛೇಡಿಸಿದಳು. ಮಧುಸೂದನ ಪರವಾಗಿಲ್ಲ ಅಂತ ಕಿತ್ತುಕೊಂಡ. ಮಳೆ ಮತ್ತೂ ಜೋರಾಯಿತು. ಯಾವ ಕ್ಷಣದಲ್ಲೋ ನುಗ್ಗಿಬಂದ ಭಂಡಧೈರ್ಯದಲ್ಲಿ ಮಧುಸೂದನ ಸಾವಿತ್ರಿಯ ತುಟಿ ಕಚ್ಚಿದ್ದ. ಅವಳು ದೂಡಿ, ಮಳೆಯಲ್ಲೇ ಓಡಿದಳು.
ಮರುದಿನ ಮಾತಾಡದಿದ್ದರೆ? ಅಂತ ಭಯದಲ್ಲಿದ್ದವನಿಗೆ, ಬಸ್ಸಿನಲಿ ಅವಳು ನಕ್ಕಾಗಲೇ ಸಮಾಧಾನವಾಗಿದ್ದು. ಅವತ್ತು ಸಂಜೆಯೂ ಮಳೆಬರಲೆಂದು ಬೇಡಿಕೊಂಡ. ಕಿಟಕಿಯಿಂದ ಹನಿ ಮುಖಕ್ಕೆ ರಾಚಿತು. “”ಅಲ್ಯಾಕ್ ಹೋದ್ರಿ?” ಅನ್ನುವ ಸೀಮಾಳ ಧನಿಗೆ ತಿರುಗಿದ.
.
ಕಿಟಕಿ ಮುಚ್ಚಿಬಂದು ಕೂತ. ಸೀಮಾ ತಿಳಿಗುಲಾಬಿ ಬಣ್ಣದ ಪುಟ್ಟತೋಳಿನ ಟೀಶರ್ಟ್, ನೀಲಿ ಬಣ್ಣದ ತ್ರೀಫೋರ್ಥ್ ಪ್ಯಾಂಟ… ಹಾಕಿದ್ದಳು. “ಹೇಳಿ, ಹೆಂಡ್ತಿ ಮಕ್ಕಳೆÇÉಾ ಆರಾಮಾ?’ ಅಂತ ಕೇಳಿ ಕಾಲು ಚಾಚಿ ಆರಾಮಾಗಿ ಕೂತಳು. ಅವನ ಮುಜುಗರ ಗಮನಿಸಿ. “”ಆರಾಮಾಗ್ ಕೂತ್ಕೊಳಿ. ಬೀ ಕಂಫರ್ಟಬಲ…” ಅಂದಳು. ಮಧುಸೂದನ ತನ್ನ ಭಂಗಿ ಬದಲಿಸದೇ ಚೂರು ಅÇÉಾಡಿದಂತೆ ಮಾಡಿದ. ಅವಳ ಹಿಂದಿನ ಪ್ರಶ್ನೆ ಮರೆತೋ ಅಥವಾ ಉತ್ತರಿಸಲು ಇಷ್ಟವಿಲ್ಲದೆಯೋ ಬೇರೆ ಮಾತಾಡಿದ, “”ಟೀವಿಲ… ನೋಡಿ ಅನ್ಕಂಡೆ. ನೀವೇ ಅಂತ. ಆದ್ರೆ ಯಾರನ್ ಕೇಳ್ಬೇಕು ಗೊತ್ತಾಗ್ಲಿಲ್ಲ” ಅಂದ. ದನಿ ತಗ್ಗಿಸಿ, “”ಕೇಳ್ಳೋಕ್ ಯಾರೂ ಇಲ್ಲ ಬಿಡಿ” ಅಂದಳು. ಅವಳು ಈಗ ಹಳೆಯದರ ಕೊಂಡಿ ಹೂಡುತ್ತಿ¨ªಾಳೆನಿಸಿತು ಮಧುಸೂದನನಿಗೆ. “”ಊರ್ ಕಡೆ ಹೋಗಿಲ್ವಾ?” ಕೇಳಿದ. “”ಯಾವೂರ್ರೀ…? ಯಾವೂÌರೂ ಇಲ್ಲ, ಕೇರೀನೂ ಇಲ್ಲ. ಇದೇ ನಮ್ಮೂರು” ಅಂದಳು. ಅವಳ ಉತ್ತರ ಮತ್ತು ಧನಿಯಲ್ಲಿದ್ದ ಖಾರ ತಾಕಿ, ಮಧುಸೂದನ ಮುಂದೇನೂ ಮಾತಾಡಲು ಗೊತ್ತಾಗದೇ ಕೂತ. “”ಸರ್ಕಾರೀ ಕೆಲಸ, ಒಳ್ಳೆ ಹೆಂಡತಿ, ಮು¨ªಾದ್ ಎರಡ್ ಮಕ್ಕಳು. ಗುಡ್” ಅಂದಳು. ಅದೇನು ಹಾರೈಕೆಯೋ ವ್ಯಂಗ್ಯವೋ ಅಂದುಕೊಳ್ಳುವುದರಲ್ಲಿ ಕಾಲಿಂಗ್‌ಬೆಲ್ ಸದ್ದು ಮಾಡಿತು.
ಟೀಪಾಯ… ಸರಿಸಿ, ಅದರ ಮಧ್ಯದಲ್ಲಿಡುವಂತೆ ಹೇಳಿ, ಪರ್ಸಿನಿಂದ ಐನೂರರ ನೋಟೆಳೆದು ಕೊಟ್ಟಳು. ಕೈ ಉಜ್ಜಿ ಕೊಳ್ತಾ ಐಸ್‌ಕ್ರೀಮ್ ಕೇಕ್ ಫೊಮ… ಐಬ್ಯಾಕೋ ಎಂದು ಜಾಹೀರಾತಿನಂತೆಯೇ ಪಿಸುದನಿಯಲಿ ಹೇಳಿ, “”ತಿನ್ನಣಾÌ? ತಟ್ಟೆ ತರ್ತೀನಿರಿ” ಎನ್ನುತ್ತಾ ಒಳಹೋದಳು. ಇವಳು ಯಾರೋ ಶ್ರೀಮಂತರ ಮನೆಯ ನಾಯಿಯ ಆರೈಕೆಗೆ ಬಂದವಳು, ಅದು ಹೇಗೆ ಟಿವಿ ಸೇರಿಕೊಂಡಳು? ಈ ಸಿನೆಮಾದವರೆಲ್ಲ ಎಲ್ಲಿ ಪರಿಚಯವಾದರು? ತಲೆ ತಗ್ಗಿಸಿಕೊಂಡೇ ಓಡಾಡುತ್ತಿದ್ದ, ಮಾತು ಮಾತಿಗೆ ಅಳುತ್ತಿದ್ದ, ಭಯದ ಹುಡುಗಿ ಸಾವಿತ್ರಿ ಇವಳೇನಾ? ಇಷ್ಟೊಂದು ಧೈರ್ಯವಿತ್ತಾ ಇವಳ ಒಳಗೆ? ತಟ್ಟೆ ಹಿಡಿದು ಬಂದು ಕೇಕ್ ಕತ್ತರಿಸಿ ಹಾಕಿದಳು. ಕಣ್ಣÇÉೇ ಚಪ್ಪರಿಸಿ “ವಾವ್ ಸೋ ಯಮ್ಮಿà’ ಅಂದಳು. ಮಧುಸೂದನ ಬ್ಯಾಗಿಗೆ ಕೈ ಹಾಕಿ ಏನನ್ನೋ ತೆಗೆದ. ಅವಳ ಮುಂದೆ ಚಾಚಿದ. ಫೋಟೋಗಳು ಮತ್ತು ಸಾವಿತ್ರಿ ಬರೆದ ಉದ್ದೂದ್ದ ಪತ್ರಗಳು.
ಸಾವಿತ್ರಿಯ ಮುಖದಲಿ ಸಣ್ಣ ಬದಲಾವಣೆಯಾದುದು ಅವಳು ಮುಚ್ಚಿ ಟ್ಟರೂ ಮಧುಸೂದನನಿಗೆ ಕಂಡಿತು. ಅದನ್ನೆಲ್ಲ ತೆಗೆದುಕೊಂಡು ನೋಡದೆಯೇ ಪಕ್ಕಕ್ಕಿಟ್ಟಳು. “”ಥೂ… ಟಾಪಿಂಗ್ ನಾನೇನೋ ಹೇಳಿದ್ರೆ ಇವನೇನೋ ಹಾಕಿದಾನೆ” ಎನ್ನುತ್ತಾ ಮತ್ತೂಂದು ಪೀಸು ಕತ್ತರಿಸಿ ತಟ್ಟೆಗೆ ಹಾಕಿದಳು. ಯಾಕೋ ಮಧುಸೂದನನಿಗೆ ಗಂಟಲುಬ್ಬಿ , ದುಃಖ ಒತ್ತರಿಸಿಕೊಂಡು ಬಂತು. “”ಸಾರೀ ಸಾವಿತ್ರಿ… ಅವತ್ ನಮ್ಮವ್ವ…” ಎನ್ನುತ್ತಾ ಬಿಕ್ಕಳಿಸಿದ. “”ಅಯ್ಯೋ ರಾಮ… ನೀವೇನ್ರೀ ಅತ್ಕೊಂಡೂ… ನೋಡ್ ಗುರೂ… ನಿನ್ ಸಾರಿ ನೀನೇ ಇಟ್ಕೊà. ನಿನಗ್ ನಾನೇ ಒಂದ್ ದೋಡ್ ಥ್ಯಾಂಕÕ… ಹೇಳ್ತೀನಿ ಅದೂ° ಇಟ್ಕೊà” ಅಂದಳು.
“”ಹಂಗಲ್ಲ ಸಾವಿತ್ರಿ…”
“”ಶ್, ಪ್ಲೀಸ್… ಯಾರ್ರೀ… ಸಾವಿತ್ರಿ? ಇಲ್ಲಿ ಯಾವ್ ಸಾವಿತ್ರೀನೂ ಇಲ್ಲ. ಅವಳು ಸತ್ತು ಎಷ್ಟೋ ವರ್ಷ ಆಯ್ತು. ನಾನು ಸೀಮಾ… ಸೀಮಾ ಅಷ್ಟೆ. ಇನ್ನೊಂದ್ಸಲ ಆ ಹೆಸ್ರು ಎಲ್ಲೂ ಉಪಯೋಗಿಸಬೇಡಿ. ಪ್ಲೀಸ್” ಕಿರುಚಿದಳು. ನಂತರದ ಕೆಲಹೊತ್ತು ಇಬ್ಬರಲ್ಲೂ ಮಾತಿಲ್ಲ. ಮನೆಯ ತುಂಬ ಸೂಜಿ ಸದ್ದಿನ ಮೌನ!
ಮಧುಸೂದನ ತಾನೇ ಎದ್ದು ಮೌನ ಮುರಿದ. “”ಬರ್ತೀನಿ. ಬಸ್ ಮಿಸ್ಸಾಗತ್ತೆ” ಅಂದ. ಸೀಮಾ ಮಾತಾಡಲಿಲ್ಲ. ಮಧುಸೂದನ ಬಾಗಿಲು ದಾಟಿದ. ಜೋರುಮಳೆ. ರಸ್ತೆಗಿಳಿದು ಆಟೋಗಾಗಿ ಕೈ ಚಾಚಿದ. ಒಂದೆರಡು ಆಟೋ ಬಾರದೇ ಪರದಾಡಿದ. ಕಡೆಗೂ ಸಿಕ್ಕ ಆಟೋ ಹತ್ತಿ ಕೂತ. “ಸ್ಯಾಟಲೈಟ… ಬಸ್‌ಸ್ಟಾಂಡ್’ ಅಂತ ಹೇಳಿ ಫೋನು ತೆಗೆದ. ಮೆಸೆಂಜರು ತೆಗೆದು, ಸಾವಿತ್ರಿ ಜೊತೆಗಿನ ಚಾಟ… ಡಿಲೀಟ… ಮಾಡಿದ. ನಂತರ ಕಾಂಟಾಕ್ಟ್$Õಗೆ ಹೋಗಿ “ಸೀಮಾ ಆಂಕರ್’ ಎಂದಿದ್ದ ನಂಬರನ್ನೂ ಡಿಲೀಟು ಮಾಡಿ ಫೋನು ಜೇಬಿಗಿಳಿಸಿ ನಿಟ್ಟುಸಿರುಬಿಟ್ಟ.
– ಕುಸುಮಬಾಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.