ಪಾಂಡ್ಯ ಪರಾಕ್ರಮ; ಭಾರತ 209


Team Udayavani, Jan 7, 2018, 6:00 AM IST

Indian-batsman-Hardik-Pandy.jpg

ಕೇಪ್‌ಟೌನ್‌: ಪ್ರವಾಸಿ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೆಲ್ಲ ಆಫ್ರಿಕಾದ ವೇಗಕ್ಕೆ ಚೆಲ್ಲಾಪಿಲ್ಲಿಯಾದಾಗ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ದಿಟ್ಟ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಆಪತಾºಂಧವನಾಗಿ ಮೂಡಿಬಂದರು. ಆತಿಥೇಯರ 286ಕ್ಕೆ ಉತ್ತರವಾಗಿ, ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ದ್ವಿತೀಯ ದಿನ ಭಾರತ 209 ರನ್ನಿಗೆ ಆಲೌಟ್‌ ಆಗಿದೆ. ಇದರಲ್ಲಿ ಪಾಂಡ್ಯ ಪಾಲು 93 ರನ್‌.

77 ರನ್ನುಗಳ ಮುನ್ನಡೆ ಪಡೆದ ದಕ್ಷಿಣ ಆಫ್ರಿಕಾ ದಿನದಾಟದ ಅಂತ್ಯಕ್ಕೆ 2 ವಿಕೆಟಿಗೆ 65 ರನ್‌ ಗಳಿಸಿದ್ದು, ಒಟ್ಟು 142 ರನ್‌ ಲೀಡ್‌ ಹೊಂದಿದೆ. ಎರಡೂ ವಿಕೆಟ್‌ಗಳು ಪಾಂಡ್ಯ ಪಾಲಾದವು. ಈ ಆಲ್‌ರೌಂಡ್‌ ಪ್ರದರ್ಶನದೊಂದಿಗೆ ಪಾಂಡ್ಯ 2ನೇ ದಿನದಾಟದ ಹೀರೋ ಎನಿಸಿಕೊಂಡರು. ಆರಂಭಿಕರಾದ ಮಾರ್ಕ್‌ರಮ್‌ 34 ಮತ್ತು ಎಲ್ಗರ್‌ 25 ರನ್‌ ಗಳಿಸಿ ಔಟಾಗಿದ್ದಾರೆ. ನೈಟ್‌ ವಾಚ್‌ಮನ್‌ ರಬಾಡ (2) ಮತ್ತು ಹಾಶಿಮ್‌ ಆಮ್ಲ (4) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.
92 ರನ್ನಿಗೆ 7 ವಿಕೆಟ್‌ ಉದುರಿಸಿಕೊಂಡು ಭಾರೀ ಹಿನ್ನಡೆಯ ಭೀತಿಗೆ ಸಿಲುಕಿದ್ದ ಭಾರತವನ್ನು ಹಾರ್ದಿಕ್‌ ಪಾಂಡ್ಯ ಎತ್ತಿ ನಿಲ್ಲಿಸಿದರು. ಅವರಿಗೆ ಬೌಲರ್‌ ಭುವನೇಶ್ವರ್‌ ಕುಮಾರ್‌ ಅತ್ಯುತ್ತಮ ಬೆಂಬಲ ಒದಗಿಸಿದರು. ಇವರಿಬ್ಬರು ಸೇರಿಕೊಂಡು 8ನೇ ವಿಕೆಟಿಗೆ 99 ರನ್‌ ಪೇರಿಸುವ ಮೂಲಕ ಭಾರತದ ಸ್ಕೋರ್‌ಬೋರ್ಡ್‌ನಲ್ಲಿ ಇನ್ನೂರರ ಮೊತ್ತ ಕಾಣುವಂತೆ ಮಾಡಿದರು.

ಈ ಫಾಸ್ಟ್‌ ಟ್ರ್ಯಾಕ್‌ನಲ್ಲಿ ರಕ್ಷಣಾತ್ಮಕ ಆಟವಾಡಿದರೆ ಲಾಭವಿಲ್ಲ ಎಂಬ ನಿರ್ಣಯಕ್ಕೆ ಬಂದ ಪಾಂಡ್ಯ, ನೇರವಾಗಿ ಸ್ಫೋಟಕ ಆಟಕ್ಕೆ ಇಳಿದರು. ಅವರ ಈ ಯೋಜನೆ ಫ‌ಲ ನೀಡಿತು. ಆಫ್ರಿಕಾದ ಯಾವುದೇ ಬೌಲರ್‌ಗೂ ಬಗ್ಗದೆ ಬೌಂಡರಿಗಳ ಸುರಿಮಳೆಗೈದರು. 46 ಎಸೆತಗಳಲ್ಲಿ ಅವರ ಅರ್ಧ ಶತಕ ಪೂರ್ತಿಗೊಂಡಿತು. ಭುವಿ ಇನ್ನೂ ಸ್ಟಾಂಡ್‌ ಕೊಡುತ್ತಲೇ ಉಳಿದುದರಿಂದ ಪಾಂಡ್ಯ 2ನೇ ಶತಕ ಸಂಭ್ರಮ ಆಚರಿಸಬಹುದೆಂಬ ನಿರೀಕ್ಷೆ ಮೂಡಿತು. ಆದರೆ ಇದಕ್ಕೆ ಕೇವಲ 7 ರನ್‌ ಅಡ್ಡಿಯಾಯಿತು. ಒಟ್ಟು 95 ಎಸೆತ ಎದುರಿಸಿದ ಪಾಂಡ್ಯ 14 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. 

ಭುವನೇಶ್ವರ್‌ 86 ಎಸೆತಗಳ ದಿಟ್ಟ ನಿಲುವಿನಲ್ಲಿ 25 ರನ್‌ ಹೊಡೆದರು. ಇದರಲ್ಲಿ 4 ಬೌಂಡರಿ ಒಳ ಗೊಂಡಿತ್ತು.
ಪ್ರವಾಸಿಗರ ಎಲ್ಲ ವಿಕೆಟ್‌ಗಳನ್ನೂ ವೇಗಿಗಳೇ ಉಡಾಯಿಸಿದರು. ಫಿಲಾಂಡರ್‌ ಮತ್ತು ರಬಾಡ ತಲಾ 3; ಸ್ಟೇನ್‌ ಮತ್ತು ಮಾರ್ಕೆಲ್‌ ತಲಾ 2 ವಿಕೆಟ್‌ ಕಿತ್ತರು. ಪೂಜಾರ ಅವರನ್ನು ಔಟ್‌ ಮಾಡುವ ಮೂಲಕ ಫಿಲಾಂಡರ್‌ ತವರಿನ ಟೆಸ್ಟ್‌ ಪಂದ್ಯಗಳಲ್ಲಿ 100 ವಿಕೆಟ್‌ ಬೇಟೆ ಪೂರ್ತಿಗೊಳಿಸಿದರು.

ಲಂಚ್‌ ಬಳಿಕ ಕುಸಿತ
ಭಾರತ 3ಕ್ಕೆ 28 ರನ್‌ ಮಾಡಿದಲ್ಲಿಂದ ಶನಿವಾರದ ಆಟ ಆರಂಭಿಸಿತು. ಚೇತೇಶ್ವರ್‌ ಪೂಜಾರ ಮತ್ತು ರೋಹಿತ್‌ ಶರ್ಮ ಅತ್ಯಂತ ಎಚ್ಚರಿಕೆಯಿಂದ ಸಾಗಿದರು. ಆಫ್ರಿಕನ್ನರ ವೇಗದ ದಾಳಿಯನ್ನು ನಿಭಾಯಿಸಸುವಲ್ಲಿ ಸಾಮಾನ್ಯ ಮಟ್ಟದ ಯಶಸ್ಸು ಕೂಡ ಸಿಕ್ಕಿತು. ಸ್ಕೋರ್‌ ನಿಧಾನ ಗತಿಯಲ್ಲಿ ಏರತೊಡಗಿತು. ಮೊದಲ ಅವಧಿಯಲ್ಲಿ ಉರುಳಿದ್ದು ರೋಹಿತ್‌ (59 ಎಸೆತ, 11 ರನ್‌) ವಿಕೆಟ್‌ ಮಾತ್ರ. ಭಾರತದ ಲಂಚ್‌ ಸ್ಕೋರ್‌ 4ಕ್ಕೆ 76 ರನ್‌.

ದ್ವಿತೀಯ ಅವಧಿಯ ಆಟದಲ್ಲಿ ಭಾರತ ಪೂಜಾರ, ಅಶ್ವಿ‌ನ್‌ ಮತ್ತು ಸಾಹಾ ಅವರನ್ನು ಕಳೆದುಕೊಂಡಿತು. ಪೂಜಾರ 154 ನಿಮಿಷ ನಿಂತು, 92 ಎಸೆತಗಳಿಂದ 26 ರನ್‌ ಮಾಡಿದರು. ಬಡ್ತಿ ಪಡೆದು ಬಂದ ಅಶ್ವಿ‌ನ್‌ 12 ರನ್‌ ಮಾಡಿದರೆ, ಸಾಹಾ ಖಾತೆಯನ್ನೇ ತೆರೆಯಲಿಲ್ಲ.

ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌    286
ಭಾರತ ಪ್ರಥಮ ಇನ್ನಿಂಗ್ಸ್‌
ಮುರಳಿ ವಿಜಯ್‌    ಸಿ ಎಲ್ಗರ್‌ ಬಿ ಫಿಲಾಂಡರ್‌    1
ಶಿಖರ್‌ ಧವನ್‌    ಸಿ ಮತ್ತು ಬಿ ಸ್ಟೇನ್‌    16
ಚೇತೇಶ್ವರ್‌ ಪೂಜಾರ    ಸಿ ಡು ಪ್ಲೆಸಿಸ್‌ ಬಿ ಫಿಲಾಂಡರ್‌    26
ವಿರಾಟ್‌ ಕೊಹ್ಲಿ    ಸಿ ಡಿ ಕಾಕ್‌ ಬಿ ಮಾರ್ಕೆಲ್‌    5
ರೋಹಿತ್‌ ಶರ್ಮ    ಎಲ್‌ಬಿಡಬ್ಲ್ಯು ರಬಾಡ    11
ಆರ್‌. ಅಶ್ವಿ‌ನ್‌    ಸಿ ಡಿ ಕಾಕ್‌ ಬಿ ಫಿಲಾಂಡರ್‌    12
ಹಾರ್ದಿಕ್‌ ಪಾಂಡ್ಯ    ಸಿ ಡಿ ಕಾಕ್‌ ಬಿ ರಬಾಡ    93
ವೃದ್ಧಿಮಾನ್‌ ಸಾಹ    ಎಲ್‌ಬಿಡಬ್ಲ್ಯು ಸ್ಟೇನ್‌    0
ಭುವನೇಶ್ವರ್‌ ಕುಮಾರ್‌    ಸಿ ಡಿ ಕಾಕ್‌ ಬಿ ಮಾರ್ಕೆಲ್‌    25
ಮೊಹಮ್ಮದ್‌ ಶಮಿ    ಔಟಾಗದೆ    4
ಜಸ್‌ಪ್ರೀತ್‌ ಬುಮ್ರಾ    ಸಿ ಎಲ್ಗರ್‌ ಬಿ ರಬಾಡ    2
ಇತರ         14
ಒಟ್ಟು  (ಆಲೌಟ್‌) 209  ವಿಕೆಟ್‌ ಪತನ: 1-16, 2-18, 3-27, 4-57, 5-76, 6-81, 7-92, 8-191, 9-199.
ಬೌಲಿಂಗ್‌:
ವೆರ್ನನ್‌ ಫಿಲಾಂಡರ್‌        14,3-33-3
ಡೇಲ್‌ ಸ್ಟೇನ್‌        17.3-6-51-2
ಮಾರ್ನೆ ಮಾರ್ಕೆಲ್‌        19-6-57-2
ಕಾಗಿಸೊ ರಬಾಡ        16.4-4-34-3
ಕೇಶವ್‌ ಮಹಾರಾಜ್‌        6-0-20-0

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PKL 11: defeat for bengaluru bulls against Patna pirates

PKL 11: ಬುಲ್ಸ್‌ ಗೆ 10ನೇ ಸೋಲು

Women’s Asian Champions Trophy Hockey: India advances to final; opponent China

Women’s Asian Champions Trophy Hockey: ಫೈನಲ್‌ಗೆ ಲಗ್ಗೆ ಹಾಕಿದ ಭಾರತ; ಎದುರಾಳಿ ಚೀನ

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Suside-Boy

Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

police

Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

police

Siddapura: ಕಂಟೇನರ್‌ ಲಾರಿ ಒಳರಸ್ತೆಗೆ ಬರದಿದ್ದಕ್ಕೆ ಚಾಲಕನಿಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.