ಬಜೆಟ್ ಸಭೆ ಮೂರು ಗಂಟೆ ಅಲ್ಲ; ಅದಕ್ಕಿಂತಲೂ ಹೆಚ್ಚು
Team Udayavani, Jan 7, 2018, 6:10 AM IST
ಹೊಸದಿಲ್ಲಿ: ಕೇಂದ್ರದಲ್ಲಿರುವ ಹಾಲಿ ಸರಕಾರ ಅಧಿಕಾರಕ್ಕೆ ಬರುವ ವರೆಗೆ ಬಜೆಟ್ ಸಿದ್ಧತೆ ಎಂದರೆ ಹಣಕಾಸು ಸಚಿವಾಲಯದ ಅಧಿಕಾರಿಗಳದ್ದೇ ಪಾರಮ್ಯ. ಅಗತ್ಯ ಬಿದ್ದರೆ ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ)ಯನ್ನು ಸಂಪರ್ಕಿಸಿ ಸಲಹೆ ಕೇಳಲಾಗುತ್ತಿತ್ತು.
ಅಂತಿಮ ಕರಡನ್ನು ಪಿಎಂಒಗೆ ಸಲ್ಲಿಸಲಾಗುತ್ತಿತ್ತು. ನಾರ್ತ್ ಬ್ಲಾಕ್‌ನಲ್ಲಿರುವ ಹಣಕಾಸು ಸಚಿವಾಲಯದ ಕಚೇರಿ ಫುಲ್ ಬ್ಯುಸಿಯಾಗಿರುತ್ತಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲವೂ ಬದಲಾಗಿದೆ. ಪ್ರಧಾನಮಂತ್ರಿಗಳ ಅಧಿಕೃತ ನಿವಾಸದಲ್ಲಿಯೇ ಬಜೆಟ್ ಸಿದ್ಧತಾ ಸಭೆಗಳು ನಡೆಯುತ್ತಿವೆ. ಹಾಲಿ ಸರಕಾರ ಬರುವುದಕ್ಕಿಂತ ಮೊದಲು ಸಿದ್ಧತಾ ಸಭೆ ಹೆಚ್ಚೆಂದರೆ 3 ಗಂಟೆ ನಡೆಯುತ್ತಿತ್ತು. ಈಗ ಅದಕ್ಕಿಂತ ಹೆಚ್ಚೇ ನಡೆಯುತ್ತಿ¤ದೆ.
ಪ್ರತಿ ಬಜೆಟ್ ಸಿದ್ಧತೆಯಲ್ಲಿ ಪಿಎಂಒ ಮತ್ತು ಪ್ರಧಾನಿ ಮೋದಿಯವರೇ ಖುದ್ದಾಗಿ ಭಾಗವಹಿಸುತ್ತಿದ್ದಾರೆ. ಈ ಬಾರಿಯೂ ಅಷ್ಟೆ. ಮುಂದಿನವಾರ ನಡೆಯಲಿರುವ ಅಂಥ ಒಂದು ಪ್ರಮುಖ ಸಿದ್ಧತಾ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಎರಡನೇ ಪ್ರಧಾನಿ: ಮಾಸಾಂತ್ಯದಲ್ಲಿ ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಈ ಮೂಲಕ ದಾವೋಸ್‌ಗೆ ತೆರಳಲಿರುವ 2ನೇ ಪ್ರಧಾನಿ ಎಂಬ ಖ್ಯಾತಿಗಳಿಸಲಿದ್ದಾರೆ. 1997ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮೊದಲ ಬಾರಿಗೆ ಶೃಂಗದಲ್ಲಿ ಭಾಗವಹಿಸಿದ್ದರು.
ಪ್ರಧಾನಿಗೆ ಗುಡ್‌ಮಾರ್ನಿಂಗ್ ಹೇಳಿದ ಸಂಸದ ಉದಾಸಿ
ಕೆಲ ದಿನಗಳ ಹಿಂದೆ ನಡೆದಿದ್ದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪಿಎಂ ಮೋದಿ ಅವರು ಸರಕಾರದ ವಿವಿಧ ಯೋಜನೆಗಳ ಬಗ್ಗೆ ವಿಚಾರ ಮಂಡನೆಗಾಗಿ ಅಭಿವೃದ್ಧಿಪಡಿಸಲಾಗಿರುವ “ನಮೋ ಆ್ಯಪ್’ನಲ್ಲಿ ಸಂಸದರಿಗಾಗಿ ಇರುವ ವಿಭಾಗದಲ್ಲಿ ತಮ್ಮ ಸಂದೇಶಗಳಿಗೆ ಯಾರೊಬ್ಬರೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ಆಕ್ಷೇಪದ ಬಳಿಕ ಕರ್ನಾಟಕದ ಹಾವೇರಿ ಸಂಸದ ಶಿವಕುಮಾರ ಸಿ.ಉದಾಸಿ ಸೇರಿದಂತೆ ಹಲವು ಸಂಸದರು ಪ್ರತಿಕ್ರಿಯೆ ನೀಡಿದ್ದಾರೆ. ಉದಾಸಿ “ಗುಡ್ ಮಾರ್ನಿಂಗ್. ಹ್ಯಾವ್ ಎ ನೈಸ್ ಡೇ’ ಎಂದಿದ್ದರೆ, ಮಾಜಿ ಸಚಿವ ಡಾ.ಮುರಳಿ ಮನೋಹರ ಜೋಶಿ “ಹ್ಯಾಪಿ ಬರ್ತ್‌ಡೇ’ ಎಂದು ಹಾರೈಸಿದ್ದಾರೆ. ಒಂದು ಗ್ರೂಪ್‌ನಲ್ಲಿ ಲೋಕಸಭೆಯ 285 ಬಿಜೆಪಿ ಸಂಸದರಿದ್ದಾರೆ. ಮತ್ತೂಂದರಲ್ಲಿ ಬಿಜೆಪಿಯ ರಾಜ್ಯಸಭೆ ಸದಸ್ಯರಿಗಾಗಿಯೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
MUST WATCH
ಹೊಸ ಸೇರ್ಪಡೆ
Kasaragod: ಅಪರಾಧ ಸುದ್ದಿಗಳು
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.