ಸಮಾಜದ ಸಂಕಟಗಳಿ ಗೆಅಡಿಗರ ಕಾವ್ಯದಲ್ಲಿ ಮದ್ದು
Team Udayavani, Jan 7, 2018, 9:47 AM IST
ಬೆಂಗಳೂರು: ಮೊಗೇರಿ ಗೋಪಾಲಕೃಷ್ಣ ಅಡಿಗರ ಚಿಂತನೆ, ಸಾಹಿತ್ಯದ ಒಳನೋಟ ಈ ಕಾಲದ ತಲ್ಲಣ, ಸಂಕಟಕ್ಕೆ ಪರಿಹಾರ ಸಾಧನ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತ್ಯ ಅಕಾಡೆಮಿ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಸೆಂಟ್ರಲ್ ಕಾಲೇಜು ಆವರಣದ ಸೆಮಿನಾರ್ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೊಗೇರಿ ಗೋಪಾಲ ಕೃಷ್ಣ ಅಡಿಗ ಜನ್ಮ ಶತಮಾನೋತ್ಸವದ ವಿಚಾರ ಸಂಕಿರಣದಲ್ಲಿ ಅವರು ಆಶಯ ಭಾಷಣ ಮಾಡಿದರು. ಅಡಿಗರ ಕಾವ್ಯ ಎಂದಿಗಿಂತ ಇಂದಿನ ಸನ್ನಿ ವೇಶಕ್ಕೆ ಬಹಳ ಪ್ರಸ್ತುತವಾಗಿದೆ. ಅವರ ಚಿಂತನೆ, ಸಾಹಿತ್ಯದ ಒಳನೋಟ ಸಮಾಜದ ಇಂದಿನ ಸಂಕಟಕ್ಕೆ ಪರಿಹಾರ ನೀಡಬಲ್ಲದು.
ರಾಜಕೀಯ ಮತ್ತು ಧರ್ಮ ತೀರ ಭ್ರಷ್ಟವಾಗಿ, ಮಾರ್ಗದರ್ಶನ ಮಾಡುವ ಶಕ್ತಿಯನ್ನೇ ಕಳೆದುಕೊಂಡಿದೆ. ಸಾಹಿತ್ಯ ಮಾತ್ರ ಭರವಸೆಯ ಬೆಳಕಾಗಿ ಉಳಿದಿದೆ ಎಂದು ವಿವರಿಸಿದರು.
ಅಡಿಗರ ಸಾಹಿತ್ಯ ಈ ಕಾಲದ ಭರವಸೆಯ ಬೆಳ್ಳಿಗೆರೆಯಾಗಿದೆ. ಅವರು ಅತ್ಯಂತ ತೀಕ್ಷ್ಣವಾದ ರಾಜಕೀಯ ಪ್ರಜ್ಞೆಯ ಕವಿ ಎಂಬುದು ಕವಿತೆಗಳ ಮೂಲಕ ಸಾಬೀತಾಗಿದೆ. ಅನುಭವದ ಅನ್ವೇಷಣೆ, ಸಾಮಾಜಿಕ ಚಿಂತನೆ, ರಾಜಕೀಯ, ಧರ್ಮ ಹಾಗೂ ಸಮಾಜವನ್ನು ಒಂದೇ ಬಿಂದುವಿನಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದರು. ಮುಖಹೀನ ಸಂಸ್ಕೃತಿ ಮತ್ತು ರಾಕ್ಷಸಿ ಶಕ್ತಿಯ ಬಗ್ಗೆ ಅಡಿಗರು ಆ ಕಾಲದಲ್ಲೇ ಆತಂಕ ವ್ಯಕ್ತಪಡಿಸಿದ್ದನ್ನು ನೆನಪಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ ಮಾತನಾಡಿ, ಅಡಿಗರಿಗೆ ವೈರಿಗಳು ಇರಲಿಲ್ಲ. ಅವರೇ ಶಿಷ್ಯರೇ ವೈರಿಗಳಾಗಿದ್ದರು. ಅವರು ನಂಬಿದ್ದು, ನಡೆದದ್ದು ಮತ್ತು ಮಾತನಾಡಿದ್ದು ಒಂದೇ ಆಗಿತ್ತು. ಅವರಲ್ಲಿ ಯಾವ ವಿಷಯದಲ್ಲೂ ದ್ವಂದ್ವ ಇರಲಿಲ್ಲ. ಬಲಪಂಥೀಯ ಚಿಂತನೆ ಹಾಗೂ ಅರ್‌ಎಸ್‌ಎಸ್ ಬಗ್ಗೆ ಒಲವು ಹೊಂದಿದ್ದರು.
ಅದಕ್ಕೆ ನಿದರ್ಶನ ವಾಗಿ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸ್ವಯಂ ಸೇವಕರು ದೇಶದ
ಸೈನಿಕರಿಗೆ ಮಾಡಿದ ಸಹಾಯವನ್ನು ಸದಾ ಸ್ಮರಿಸಿ, ವಿವರಿಸುತ್ತಿದ್ದರು ಎಂದು ಹೇಳಿದರು.
ನನ್ನ ಪದ್ಯವನ್ನು ಅಡಿಗರು ಓದಿ, ಗುರುತಿಸಿದ್ದರು. ಸುಮಾರು ಆರು ವರ್ಷಗಳ ಕಾಲ ಅವರ ನಿಕಟವರ್ತಿಯಾಗಿದ್ದೆ. ಅವರ ಪುಸ್ತಕಕ್ಕೆ ನಾನು ಮುನ್ನುಡಿ ಬರೆದಿದ್ದು, ಅವರು ನನ್ನ ಪುಸ್ತಕಕ್ಕೆ ಮುನ್ನುಡಿ ಬರೆದುಕೊಟ್ಟಿದ್ದು ಇದೆ. ಎರಡು ವರ್ಷ ನಾವಿಬ್ಬರೂ ಮಾತನಾಡುತ್ತಿರಲಿಲ್ಲ. ಮತ್ತೆ ಮಾತಾಡಲು ಆರಂಭಿಸಿದ್ದೇವು ಎಂದು ತಮ್ಮ ಮತ್ತು ಅಡಿಗರ ನಡುವಿನ ಒಡನಾಟವನ್ನು ಬಿಚ್ಚಿಟ್ಟರು.
ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್, ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಎಸ್.ಜಾಫೆಟ್, ತಮಿಳು ಲೇಖಕ ಸಿರ್ಪಿ ಬಾಲಸುಬ್ರಹ್ಮಣ್ಯಂ, ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ. ಮಹಾಲಿಂಗೇಶ್ವರ ಇದ್ದರು. ಗೋಪಾಲಕೃಷ್ಣ ಅಡಿಗರು ತಮ್ಮ ಕಾವ್ಯದಲ್ಲಿ ಬಲ ಮತ್ತು ಎಡಪಂಥೀಯ ನಿಲುವುಗಳನ್ನು ಸಮಾನವಾಗಿ ಪ್ರಕಟಿಸುತ್ತಿದ್ದರು. ಭ್ರಷ್ಟಾಚಾರ ಮತ್ತು ಕೋಮು ವೈಷಮ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ನವ್ಯಕಾಲದ ಸಣ್ಣ ಕಥೆ, ಕಾದಂಬರಿ, ನಾಟಕ ಹಾಗೂ ವಿಮರ್ಶೆಯ ಮೇಲೆ ಅಡಿಗರ ಪ್ರಭಾವ ಇತ್ತು.
●ಸಿರ್ಪಿ ಬಾಲಸುಬ್ರಹ್ಮಣ್ಯಂ, ತಮಿಳು ಲೇಖಕ
ಹೊಸ ತಲೆಮಾರಿನವರು ಅಡಿಗರ ಸಾಹಿತ್ಯವನ್ನು ಗಂಭೀರವಾಗಿ ಓದಬೇಕು. ಅವರ ಚಿಂತನಾ ಶಕ್ತಿ ಪ್ರತಿಯೊಬ್ಬರಿಗೂ ಮಾದರಿ.
●ಪ್ರೊ.ಜಾಫೆಟ್, ಬೆಂಗಳೂರು ಕೇಂದ್ರ ವಿವಿ ಕುಲಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.