ಉದಾತ್ತತೆಯಿಂದ ಸಮಸ್ಯೆ ದೂರ: ಯೇಸುದಾಸ್
Team Udayavani, Jan 7, 2018, 9:56 AM IST
ಬೆಂಗಳೂರು: ಜಾತಿ-ಧರ್ಮ ಯಾವುದೇ ಇರಲಿ ಮನುಷ್ಯನಲ್ಲಿ ಉದಾತ್ತ ಚಿಂತನೆಗಳು ಇದ್ದರೆ ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ ಎಂದು ಖ್ಯಾತ ಸಂಗೀತಗಾರ ಪದ್ಮವಿಭೂಷಣ ಕೆ.ಜೆ ಯೇಸುದಾಸ್ ಅಭಿಪ್ರಾಯ ಪಟ್ಟಿದ್ದಾರೆ.
ರೇವಾ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ “ರೇವಾ ಜೀವಮಾನ ಸಾಧನೆ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಉದಾತ್ತ ಚಿಂತನೆಗಳಿಗೆ ಜಾತಿ-ಧರ್ಮಗಳ ಮೇರೆಗಳಿರುವುದಿಲ್ಲ. ಆಯಾ ಧರ್ಮದವರು ತಮ್ಮ ಧರ್ಮ ಪಾಲಿಸುವ ಜೊತೆಗೆ ಇನ್ನೊಂದು ಧರ್ಮವನ್ನು ಗೌರವಿಸುವ ಪರಸ್ಪರ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂಗೀತವೇ ಸರ್ವಸ್ವ: ನನಗೆ ಸಂಗೀತವೇ ಸರ್ವಸ್ವ. ನನ್ನ ಜೀವನದಲ್ಲಿ ಆಗಿರುವ ಒಳ್ಳೆಯದೆಲ್ಲ ದೇವರ ಕೃಪೆ
ಎಂದು ಭಾವಿಸಿದ್ದೇನೆ. ನಾನು ಮಾಡುತ್ತಿರುವ ಸೇವೆ ಸಹ ಆ ದೇವರಿಗಾಗಿಯೇ. ನನಗೆ ಸಿಕ್ಕಿರುವ ಸ್ಥಾನಮಾನ, ಪ್ರಶಸ್ತಿ ಮತ್ತು ಬಿರುದುಗಳೆಲ್ಲವೂ ಆ ದೇವರಿಗೆ ಸಲ್ಲಬೇಕು ಎಂದರು.
ರೇವಾ ಆವಾರ್ಡ್ ಆಫ್ ಎಕ್ಸ್‌ಲೆನ್ಸ್ ಸ್ವೀಕರಿಸಿ ಮಾತನಾಡಿದ ನಟ ರಮೇಶ್ ಅರವಿಂದ್, ಇದು ಆಗಲ್ಲ, ಅದು ಅಸಾಧ್ಯ ಎಂದು ಹೇಳುವ ಬದಲು ಇದು ಆಗುತ್ತೇ, ಇದು ನನ್ನಿಂದ ಸಾಧ್ಯ ಎಂದು ಹೇಳುವ ಪ್ರತಿಯೊಬ್ಬರು ಸಾಧಕರಾಗುತ್ತಾರೆ. ಎಂದರು.
ರೇವಾ ವಿವಿ ಸಂಸ್ಥಾಪಕ ಹಾಗೂ ಕುಲಾಧಿಪತಿ ಡಾ. ಪಿ. ಶ್ಯಾಮರಾಜು ಮಾತನಾಡಿ, ನನ್ನ ಜೀವನದಲ್ಲಿ ಅನುಭವಿಸಿದ ಕಷ್ಟ ಮತ್ತು ನೋವು ಗಳನ್ನು ಈಗ ಮರೆತುಬಿಟ್ಟಿದ್ದೇನೆ ಎಂದರು. ನೃತ್ಯ ಕಲಾವಿದ ಸತ್ಯನಾರಾಯಣ ರಾಜು, ಉಪಕುಲಪತಿ ಡಾ. ಎಸ್.ವೈ. ಕುಲಕರ್ಣಿ, ರಿಜಿಸ್ಟ್ರಾರ್ ಡಾ. ಎಂ. ಧನಂಜಯ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.