ಲೋಕಾಗೆ ಹೆಚ್ಚುವರಿ ಸಿಬ್ಬಂದಿ ಕಲಾಶ್ರೀನೇಮಕಕ್ಕೆ ಸರ್ಕಾರ ಒಪ್ಪಿಗ
Team Udayavani, Jan 7, 2018, 10:15 AM IST
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಕೊರತೆಯಿದ್ದ ಐವರು ಹೆಚ್ಚುವರಿ ನಿಬಂಧಕರು ಸೇರಿದಂತೆ 20 ಹುದ್ದೆಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ್‌ಶೆಟ್ಟಿ ಹೇಳಿದರು. ಲೋಕಾಯುಕ್ತ ಕಚೇರಿಯಲ್ಲಿ ಶನಿವಾರ ಲೋಕಾಯುಕ್ತ ಪೊಲೀಸ್ ಸಿಬ್ಬಂದಿಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಾಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಥೆಯಲ್ಲಿ 3,034 ಪ್ರಕರಣಗಳು ಬಾಕಿ ಇದ್ದು, 2017ರಲ್ಲಿ 841 ಹೊಸ ಪ್ರಕರಣಗಳು ದಾಖಲಾಗಿವೆ. ಇವುಗಳ ತ್ವರಿತ ವಿಲೇವಾರಿಗೆ ಹೆಚ್ಚುವರಿ 9 ಮಂದಿ ನಿಬಂಧಕರ ಹುದ್ದೆ ಭರ್ತಿ ಮಾಡುವಂತೆ ಸರ್ಕಾರವನ್ನು ಕೋರಲಾಗಿತ್ತು. ಅದರಂತೆ ಸದ್ಯ ಐವರು ಹೆಚ್ಚುವರಿ ನಿಬಂಧಕರು, ಹೆಚ್ಚುವರಿ ನಿಬಂಧಕರಿಗೆ ಅಗತ್ಯವಿರುವ ಡಿ ಗ್ರೂಪ್, ಪ್ರಥಮ ದರ್ಜೆ
ಸಹಾಯಕರು ಮತ್ತು ತೀರ್ಪು ಬರಹಗಾರರ ತಲಾ ಐದು ಹುದ್ದೆಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ
ಎಂದು ಅವರು ತಿಳಿಸಿದರು.
ಲೋಕಾಯುಕ್ತ ಸಂಸ್ಥೆ ಲಂಚ ಪ್ರಕರಣಗಳು ಮಾತ್ರವಲ್ಲದೇ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ
ವ್ಯಕ್ತಿಗೆ ತಲುತ್ತಿದೆಯೇ ಇಲ್ಲವೇ ಎಂಬ ಬಗ್ಗೆಯೂ ಸಿಬ್ಬಂದಿ ಗಮನ ಹರಿಸುತ್ತಿದ್ದಾರೆ. ಜತೆಗೆ ಸರ್ಕಾರದ ಇಂದಿರಾ ಕ್ಯಾಂಟೀನ್‌ನಲ್ಲಿ ಸಿಗುವ ಆಹಾರದ ಗುಣಮಟ್ಟವನ್ನು ಸಹ ಸಿಬ್ಬಂದಿ ಗೌಪ್ಯವಾಗಿ ಪರೀಕ್ಷಿಸಿ, ಈಗಾಗಲೇ ಎರಡು ವರದಿಯನ್ನು ಸಹ ನೀಡಿದ್ದಾರೆ ಎಂದು ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಹೇಳಿದರು.
ಲಂಚ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಕೆಲ ದೂರುದಾರರು ಒತ್ತಡಕ್ಕೆ ಮಣಿದು ವಿಚಾರಣೆಗೆ ಗೈರು ಹಾಜರಾಗುತ್ತಾರೆ. ಈ ವೇಳೆ ಪರ್ಯಾಯ ಸಾಕ್ಷಾಗಳನ್ನು ಇಟ್ಟು ಕೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಲೋಕಾಯುಕ್ತ ಪೊಲೀಸರು ಗಮನ ಹರಿಸಬೇಕು. ಜತೆಗೆ ಪ್ರಕರಣಗಳ ದೋಷಾರೋಪ ಪಟ್ಟಿ ಸಲ್ಲಿಸುವಾಗ ವಿಧಿವಿಜ್ಞಾನ ಪರೀಕ್ಷಾ ವರದಿಯನ್ನು ತಪ್ಪದೇ ಸಲ್ಲಿಸಿದರೆ ಪ್ರಕರಣ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಕಿವಿಮಾತು ಹೇಳಿದರು. ಉಪಲೋಕಾಯುಕ್ತ ನ್ಯಾ. ಸುಭಾಷ್ ಬಿ.ಆಡಿ, ನ್ಯಾ.ಆನಂದ್, ರಿಜಿಸ್ಟ್ರಾರ್ ನಂಜುಂಡಸ್ವಾಮಿ ಹಾಗೂ ಹೈಕೋರ್ಟ್ ನಿವೃತ್ತ ನ್ಯಾ. ಚಂದ್ರಶೇಖರ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರದಲ್ಲಿ ತಾಂತ್ರಿಕವಾಗಿ ತರಬೇತಿ ಪಡೆದ ಪೇದೆಗಳನ್ನು ನೇಮಕ ಮಾಡಿದರೆ, ಸಿಬ್ಬಂದಿ ಕೊರತೆ ನೀಗಿಸಬಹುದು. ಹೀಗಾಗಿ ಪೊಲೀಸ್ ಇಲಾಖೆಯಲ್ಲಿರುವ ತಾಂತ್ರಿಕವಾಗಿ ಸಾಮರ್ಥಯವುಳ್ಳ
ಪೇದೆಗಳಿಗೆ ಮತ್ತಷ್ಟು ತರಬೇತಿ ನೀಡಿ ಎಫ್ಎಸ್‌ಎಲ್‌ಗೆ ನಿಯೋಜನೆ ಮಾಡಬಹುದು ಎಂದು ಸಲಹೆ ನೀಡಿದರು.
●ನ್ಯಾ.ಜಗನಾಥ್‌ಶೆಟ್ಟಿ, ನಿವೃತ್ತ ನ್ಯಾಯಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.