ಈಶಾನ್ಯ ಅಮೆರಿಕ ಮೇಲೆ ಹಿಮ ಬಾಂಬ್ : 24 ಸಾವು
Team Udayavani, Jan 7, 2018, 10:37 AM IST
ಅಮೆರಿಕದ ಪೂರ್ವ ಕರಾವಳಿ ಅಕ್ಷರಶಃ ಹೆಪ್ಪುಗಟ್ಟಿದೆ. ಒಂದೇ ಸಮನೆ ಸುರಿಯುತ್ತಿರುವ ಹಿಮದಿಂದಾಗಿ 9 ವರ್ಷದ ಬಾಲಕಿ ಸೇರಿ 24 ಮಂದಿ ಸಾವಿಗೀಡಾಗಿದ್ದಾರೆ. ಮೈನಸ್ 40 ಡಿಗ್ರಿ ಸೆಲ್ಶಿಯಸ್‌ಗಿಂತಲೂ ಕಡಿಮೆ ತಾಪಮಾನ ದಾಖಲಾಗಿದ್ದು ಜನ ಮನೆಯಿಂದ ಹೊರಗೆ ಕಾಲಿಟ್ಟರೆ ಅಲ್ಲೇ ಫ್ರೀಜ್ ಆಗುವ ಸ್ಥಿತಿ ನಿರ್ಮಾಣವಾಗಿದೆ.
1000c ಮೌಂಟ್ ವಾಷಿಂಗ್ಟನ್‌ನ ಶೀತ ಮಾರುತ
1,200 ವಿಮಾನಗಳ ಹಾರಾಟ ಶುಕ್ರವಾರ ದಿಂದಲೇ ಸ್ಥಗಿತ
31,000 ಕೆರೋಲಿನಾದ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ
1978ರ ಬಳಿಕ ಬೋಸ್ಟನ್‌ನಲ್ಲಿ ಇಂಥ ಪರಿಸ್ಥಿತಿ
ಮೈನಸ್ 40 ಡಿಗ್ರಿ ತಾಪಮಾನ ಹೇಗಿರುತ್ತದೆ?
ಕ್ಷಣ ಮಾತ್ರದಲ್ಲಿ ರಸ್ತೆ ಮುಚ್ಚು ಹೋಗುವಷ್ಟು ಮಂಜು ಸುರಿಯುತ್ತದೆ. ಮನುಷ್ಯರು, ಪ್ರಾಣಿಗಳು ಸೇರಿದಂತೆ ಯಾವುದೇ ಜೀವಿಯ ಚರ್ಮವನ್ನು ಈ ತಾಪಮಾನಕ್ಕೆ ಒಡ್ಡಿದರೆ ಒಂದೆರಡು ನಿಮಿಷಗಳಲ್ಲಿ ಹೆಪ್ಪುಗಟ್ಟುತ್ತದೆ.
ನದಿಗಳೆಲ್ಲ ಮಂಜುಗಡ್ಡೆಯಾಗಿ ಬದಲಾಗುತ್ತವೆ. ಜಲಪಾತವೂ ಹೆಪ್ಪುಗಟ್ಟುತ್ತದೆ. ಅದೇ ರೀತಿ ಎಲ್ಲಿಯೂ ನೀರು ದ್ರವ ರೂಪದಲ್ಲಿ ಸಿಗುವುದೇ ಇಲ್ಲ. ಕೊತ ಕೊತ ಕುದಿಯುವ ನೀರನ್ನು ಮೇಲಕ್ಕೆ ಎರಚಿದರೂ ನೆಲಕ್ಕೆ ಬೀಳುವ ವೇಳೆಗಾಗಲೇ ಅದು ಮಂಜುಗಡ್ಡೆಯಾಗಿರುತ್ತದೆ. ಕಣ್ಣುಗುಡ್ಡೆಗಳು, ಹಲ್ಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಉಸಿರಾಡುವಾಗ ಮಂಜುಗಡ್ಡೆಯ ಚೂಪಾದ ಹರಳುಗಳೇ ನಿಮ್ಮ ಶ್ವಾಸನಾಳದಲ್ಲಿ ಹಾದು ಹೋದಂತೆ ಅನುಭವವಾಗುತ್ತದೆ.
ಉಸಿರಾಡಲು ಕಷ್ಟವಾಗುತ್ತದೆ ಮಸ್ಸಾಚ್ಯುಸೆಟ್ಸ್ ಕಡಲ ತೀರದಲ್ಲಿ ನೂರಾರು ಶಾರ್ಕ್ ಮೀನು
ಹಿಮಗಟ್ಟಿ ಸಾವು
ಮನೆಯ ಹೊರಗೆ ಇದ್ದ ನಾಯಿಗಳು ಮತ್ತು ಇತರ ಸಾಕುಪ್ರಾಣಿಗಳೂ ಮಂಜುಗಟ್ಟಿ ಸಾವು
ಕಾರುಗಳು ಹಿಮದಲ್ಲಿ ಮುಚ್ಚಿ ಕಣ್ಮರೆಯಾಗುವುದನ್ನು ತಪ್ಪಿಸಲು ವಿಂಡ್‌ಶೀಲ್ಡ್ ಮತ್ತು ವೈಪರ್‌ಗಳನ್ನು ತೆರೆದಿಟ್ಟ ಮಾಲೀಕರು ಮಸ್ಸಾಚ್ಯುಸೆಟ್ಸ್ ತೀರದಲ್ಲಿ ಬಿರುಗಾಳಿ ಮತ್ತು ಹಿಮದ ಅಲೆಗಳಿಂದ ಮನೆಗಳಿಗೆ ಹಾನಿ
ಬಾಂಬ್ ಸೈಕ್ಲೋನ್ ಬಳಿಕ ನಗರಗಳ ರಸ್ತೆಗಳು ಐಸ್ ಶೀಟ್ ಮತ್ತು ಕೊರೆಯುವ ನೀರಿನಿಂದ ಆವೃತ. ಇದರ ದುಷ್ಪರಿಣಾಮ ಹಿಮಕ್ಕಿಂತಲೂ ಹೆಚ್ಚು.
ಬುಧವಾರ ಸಂಭವಿಸಿದ ಸೂಪರ್‌ಮೂನ್ ನಿಂದಾಗಿ ಸಮುದ್ರದಲ್ಲಿನ ಉಬ್ಬರ ಇಳಿತ ಹೆಚ್ಚಾಗಿದ್ದೇ ಹಿಮ ಮಾರುತ ಸಾಮಾನ್ಯಕ್ಕಿಂತ ಹೆಚ್ಚಾಗಲು ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.