ಹದಗೆಟ್ಟ  ಸುಳ್ಯ- ಗುರುಂಪು- ಆಲೆಟ್ಟಿ  ಅಂತಾರಾಜ್ಯ ರಸ್ತೆ


Team Udayavani, Jan 7, 2018, 3:27 PM IST

7-Jan-13.jpg

ಸುಳ್ಯ: ಸುಳ್ಯ- ಗುರುಂಪು ನಾಗಪಟ್ಟಣ ಸೇತುವೆಯಾಗಿ ಕೇರಳ ಸಂಪರ್ಕಿಸುವ ಅಂತಾರಾಜ್ಯ ರಸ್ತೆ ತೀವ್ರ ಹದಗೆಟ್ಟಿದ್ದು, ರಿಕ್ಷಾ ಚಾಲಕ ಸಂಘದವರು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.

ಸುಳ್ಯ ಗುರುಂಪುವಿನಿಂದ ಆಲೆಟ್ಟಿ ಮೂಲಕ ಕಲ್ಲಪಳ್ಳಿ – ಕಾಸರಗೋಡು ಸೇರುವ ಲೋಕೋಪಯೋಗಿ ರಸ್ತೆ ಸುಳ್ಯ ನಗರದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ನಾಗಪಟ್ಟಣ ಸೇತುವೆ ವರೆಗೆ ತೀವ್ರ ಹದಗೆಟ್ಟಿದೆ. ಬಾಡಿಗೆ ರಿಕ್ಷಾದವರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಜನಪ್ರತಿನಿಧಿಗಳು ಇದರಲ್ಲೇ ಓಡಾಡುತ್ತಿದ್ದರೂ ರಸ್ತೆ ಹೊಂಡಗಳಿಗೆ ತೇಪೆ ಹಾಕಿಸುವಷ್ಟು ಆಸಕ್ತಿ ವಹಿಸಿಲ್ಲ. ನಮ್ಮ ನೋವು ಕೇಳುವವರಿಲ್ಲ ಎಂದು ಗಾಂಧಿನಗರದ ರಿಕ್ಷಾ ಚಾಲಕ ಚಂದ್ರಶೇಖರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಯ ನಗರದಿಂದ ಆಲೆಟ್ಟಿಗೆ ಹೋಗುವ ಆರಂಭಿಕ 600 ಮೀಟರ್‌ನಷ್ಟು ರಸ್ತೆಯಲ್ಲಿ ಸ್ವಲ್ಪ ಭಾಗ ಕಾಂಕ್ರೀಟ್‌ ಇದೆ. ಉಳಿದಂತೆ ರಸ್ತೆಯಲ್ಲಿ ಹೊಂಡ ಗುಂಡಿಗಳೇ ತುಂಬಿವೆ. ಇಕ್ಕಟ್ಟಾದ ರಸ್ತೆಯ ಅಂಚು ಹಾಳಾಗಿದ್ದು, ಗುಂಡಿ ತಪ್ಪಿಸುವ ಭರದಲ್ಲಿ ರಸ್ತೆಯಂಚಿಗೆ ಸರಿದರೂ ಆಳವಾದ ಹೊಂಡ ವಾಹನಗಳನ್ನು ಸ್ವಾಗತಿಸುತ್ತದೆ. ಎದುರಿನಿಂದ ವಾಹನಗಳು ಬಂದಾಗ ಸೈಡ್‌ ಕೊಡಲು ಹರಸಾಹಸ ಪಡಬೇಕು.

ರಸ್ತೆ ಅಂಚು ಅತಿಕ್ರಮಣ
ರಸ್ತೆ ಅಂಚಿನ ಗುಡ್ಡವನ್ನು ಕಡಿದು ತಮ್ಮ ಜಾಗಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದರಿಂದ ರಸ್ತೆ ಅಗಲವನ್ನು ಕಿರಿದಾಗಿಸಿದೆ. ರಸ್ತೆ ವಿಸ್ತರಣೆಗೂ ಅವಕಾಶವಿಲ್ಲದಾಗಿದೆ. ಸುಳ್ಯ ಗಾಂಧಿನಗರ ಕ್ರಾಸ್‌ ಬಳಿಯಿಂದ ಸೇತುವೆವರೆಗೆ ರಸ್ತೆ ತೀವ್ರ ಇಕ್ಕಟ್ಟಾಗಿದ್ದು, ಕುಗ್ರಾಮದ ರಸ್ತೆಗಿಂತಲೂ ಕಡೆಯೆನಿಸಿದೆ.

ಒಡೆದ ನೀರಿನ ಪೈಪು
ನ.ಪಂ.ನಿಂದ ಪೂರೈಕೆಯಾಗುವ ಕುಡಿಯುವ ನೀರಿನ ಪೈಪು ಒಡೆದು ಗುರುಂಪು ಬಳಿ ನೀರು ಹರಿಯುತ್ತಿದ್ದು, ಪಕ್ಕದ ತೋಟವೊಂದಕ್ಕೆ ಸೇರುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳನ್ನು ಕೇಳಿದರೆ., ಒಡೆದ ಪೈಪನ್ನು ಸರಿಪಡಿಸಿದ್ದೇವೆ. ಅಲ್ಲಿ ನೀರು ಹರಿಯುತ್ತಿರುವುದು ಚರಂಡಿಯದ್ದು ಎನ್ನುತ್ತಿದ್ದಾರೆ.

ಸೂಕ್ತ ಚರಂಡಿಯೂ ಇಲ್ಲ
ಸುಮಾರು ಅರ್ಧ ಕಿ.ಮೀ. ಉದ್ದದ ಇಕ್ಕಟ್ಟಾದ ರಸ್ತೆಯಲ್ಲಿ ಚರಂಡಿಯೇ ಇಲ್ಲ. ನೀರು ರಸ್ತೆಯಲ್ಲಿ ಹರಿದು ಚರಂಡಿ ಸಹಿತ
ರಸ್ತೆ ಪೂರ್ತಿ ಹದಗೆಟ್ಟಿದೆ. ಪಾದಚಾರಿಗಳಿಗೆ ನಡೆದಾಡಲೂ ಅಸಾಧ್ಯವಾಗಿದೆ.

ಸಾಧ್ಯವಿಲ್ಲವೇಕೆ?
ಒಂದು ಬಾರಿ ಡಾಮರೀಕರಣಗೊಂಡಿದ್ದ ಬಳಿಕ ಒಂದೆರಡು ಬಾರಿಯಷ್ಟೇ ರಸ್ತೆಗೆ ತೇಪೆ ಹಾಕಲಾಗಿದೆ. ಅಂತಾರಾಜ್ಯ
ರಸ್ತೆಯಾಗಿರುವ ಇದನ್ನು ಅಭಿವೃದ್ಧಿಪಡಿಸುವ ಬದಲು ಸಮರ್ಪಕವಾಗಿ ದುರಸ್ತಿಗೊಳಿಸಲು ಜನಪ್ರತಿನಿಧಿಗಳಿಗೆ ಸಾಧ್ಯವಿಲ್ಲವೇಕೆ?
ರಾಧಾಕೃಷ್ಣ ಪರಿವಾರಕಾನ
  ತಾ.ಪಂ. ನಾಮನಿರ್ದೇಶಿತ ಸದಸ್ಯ

ತೇಪೆ ಕಾರ್ಯ ಶೀಘ್ರ
ರಸ್ತೆ ದುರಸ್ತಿಗೆಂದು ನ.ಪಂ. 18 ಲಕ್ಷ ರೂಪಾಯಿ ಅನುದಾನವಿರಿಸಿದ್ದು, ಟೆಂಡರ್‌ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವರ್ಷದಂತೆ ಜನವರಿ ತಿಂಗಳ ಬಳಿಕ ತೇಪೆ ಕಾರ್ಯ ನಡೆಯಲಿದೆ. ನ.ಪಂ.ನಿಂದ ಹೆಚ್ಚು ಅನುದಾನ ಲಭ್ಯವಿಲ್ಲದಿದ್ದರಿಂದ ಮತ್ತು ಲೋಕೋಪಯೋಗಿ ರಸ್ತೆಯಾಗಿರುವುದ ರಿಂದ ಶಾಸಕರು ಅಥವಾ ಸಂಸದರ ಅನುದಾನವೇ ಅಗತ್ಯ.
– ಉಮ್ಮರ್‌, ನ.ಪಂ. ವಾರ್ಡ್‌ ಸದಸ್ಯ 

ನ.ಪಂ.ಗೆ ಮನವಿ
ಕಳೆದ ಬಾರಿ ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆದಿತ್ತು. ಶ್ರಮದಾನದ ಮೂಲಕ ರಿಕ್ಷಾ ಚಾಲಕರೇ ಸೇರಿ ದುರಸ್ತಿಪಡಿಸಿದ್ದೆವು. ಈ ಬಾರಿ ಕನಿಷ್ಠ ತೇಪೆಯೂ ನಡೆದಿಲ್ಲ. ನ.ಪಂ.ಗೆ ಮನವಿ ಸಲ್ಲಿಸಲಿದ್ದು, ವಾರದೊಳಗಾಗಿ ಕ್ರಮ
ಕೈಗೊಳ್ಳದಿದ್ದರೆ ರಿಕ್ಷಾ ಚಾಲಕರ ಸಂಘ ಪ್ರತಿಭಟನೆ ನಡೆಸಲಿದೆ.
ರಾಧಾಕೃಷ್ಣ
  ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ 

  ವಿಶೇಷ ವರದಿ

ಟಾಪ್ ನ್ಯೂಸ್

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

10-thirthahalli

Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?

3

Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.