ಗಡಿಪಾರು: ಹಿಂ.ಜಾ.ವೇ. ಪ್ರತಿಭಟನೆ ಆರನೇ ದಿನಕ್ಕೆ
Team Udayavani, Jan 7, 2018, 4:37 PM IST
ಬಂಟ್ವಾಳ : ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಕಲ್ಲಡ್ಕ ರತ್ನಾಕರ ಶೆಟ್ಟಿ ಗಡಿಪಾರನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಬಿ.ಸಿ.ರೋಡ್ ತಾ| ಕಚೇರಿ ಎದುರು ಹಿಂ.ಜಾ.ವೇ. ಆಶ್ರಯದಲ್ಲಿ ನಡೆಯುತ್ತಿರುವ ಧರಣಿ ಪ್ರತಿಭಟನೆ ಜ. 6ಕ್ಕೆ ಆರನೇ ದಿನಕ್ಕೆ ಪ್ರವೇಶಿಸಿದೆ. ಹಿಂ.ಜಾ.ವೇ.ಆಶ್ರಯದಲ್ಲಿ ಜ. 1 ರಿಂದ ಪ್ರತಿಭಟನೆ ಆರಂಭವಾಗಿದ್ದು ಸತತ ಮುಂದುವರಿದಿದೆ. ಶನಿವಾರ ವಿಟ್ಲ ತಾ| ಹಿಂಜಾವೇ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕೇಶವ ಅವರ ಕೊಲೆ ಯತ್ನ, ಕಾಟಿಪಳ್ಳದ ದೀಪಕ್‌ರಾವ್ ಹತ್ಯೆ ನಡೆಸಿದವರನ್ನು ಪತ್ತೆ ಹಚ್ಚಿ ಕಠಿನ ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಲಾಯಿತು. ಪುತ್ತೂರಿನಲ್ಲಿ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಹಿಂದೂ ಜಾಗರಣ ವೇದಿಕೆ ಮತ್ತಿತರ ಹಿಂದೂ ಸಂಘಟನೆಗಳ ನಾಯಕ ಮತ್ತು ಕಾರ್ಯಕರ್ತರ ಮೇಲೆ ನಡೆಸಿದ ದೌರ್ಜನ್ಯಕ್ಕಾಗಿ ಸಂಪ್ಯ ಆರಕ್ಷಕ ಠಾಣಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಹಿಂಜಾವೇ ಪುತ್ತೂರು ಜಿಲ್ಲಾ ಪ್ರಮುಖರಾದ ಅರುಣ ಗಣಪತಿ, ಬಾಲಕೃಷ್ಣ ಶೆರ್ಕಳ, ತನಿಯಪ್ಪ ನೇರಳಕಟ್ಟೆ , ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ, ಹಿಂದೂ ಯುವ ನಾಯಕ ಅರುಣ್
ಕುಮಾರ್ ಪುತ್ತಿಲ, ಹಿಂಜಾವೇ ಮಾಜಿ ತಾ| ಸಂಚಾಲಕ ವಿಶ್ವನಾಥ ಕಾಂಜಗುಳಿ, ಸುಜಿತ್ ಕೊಟ್ಟಾರಿ, ರಾಧಾಕೃಷ್ಣ ಆಳ್ವ , ಜಯಂತ ಬೆಳ್ಳಾರೆ, ರಮಾನಾಥ ರಾಯಿ, ಹಿಂಜಾವೇ ಮಹಿಳಾ ಘಟಕದ ಅಧ್ಯಕ್ಷೆ ಬಬಿತಾ, ದಿನೇಶ್ ಅಮೂrರು, ತಾ| ಆರ್ ಎಸ್‌ಎಸ್ ಕಾರ್ಯವಾಹ ಚೇತನ್, ರಾಧಾಕೃಷ್ಣ ಆಳ್ವ , ಬಾಳ್ತಿಲ ಗ್ರಾಮಾಧ್ಯಕ್ಷ ವಿಟ್ಠಲ, ಕೃಷ್ಣಪ್ಪ, ಚಂದ್ರ ಕಲಾೖ, ಮನೋಜ್ ಪೆರ್ನೆ, ಪ್ರವೀಣ್ ಅಡ್ಯಾರ್ ಸಭೆಯಲ್ಲಿ ಮಾತನಾಡಿದರು.
ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಸವಿತಾ, ಕವಿತಾ, ಮಲಿಕಾ, ವಾಣಿ, ಯಶೋದಾ, ಕಮಲಾಕ್ಷಿ , ತಾ.ಪಂ. ಸದಸ್ಯೆ ಲಕ್ಷ್ಮೀ ಮುಲಾರು, ವಿಶಾಲಾಕ್ಷಿ , ಗಿರಿಜಾ, ಮೈತ್ರೇಯಿ ಅಡ್ಯಂತಾಯ ಮೊದಲಾದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.