ಹಳೆ ನೋಟಿಂದ ಫೈಲ್ ರೆಡಿ
Team Udayavani, Jan 8, 2018, 8:45 AM IST
ಚೆನ್ನೈ: ನೋಟು ಅಪಮೌಲ್ಯದಿಂದ ಕಪ್ಪುಹಣ ಹೊಂದಿರುವವರ ಜೀವನ ಸಂಕಷ್ಟಕ್ಕೀಡಾಗಿತ್ತು. ಆದರೆ ಕೆಲವು ಅಪರಾಧಿಗಳು ಇದರಲ್ಲೂ ಜೀವನ ನಿರ್ವಹಣೆಯನ್ನು ಕಲಿತಿದ್ದಾರೆ! ತಮಿಳುನಾಡಿನ ಪುಳಲ್ ಕೇಂದ್ರೀಯ ಜೈಲಿನಲ್ಲಿ ಕೈದಿಗಳು ಅಪಮೌಲ್ಯಗೊಂಡ ನೋಟುಗಳನ್ನು ಬಳಸಿ ಸ್ಟೇಷನರಿ ತಯಾರಿಸಿದ್ದಾರೆ.
ಆರ್‌ಬಿಐ ಈ ಜೈಲಿಗೆ ಸುಮಾರು 70 ಟನ್ ರದ್ದಾದ ನೋಟುಗಳನ್ನು ಕಳುಹಿಸುವುದಾಗಿ ಹೇಳಿತ್ತು. ಈ ಪೈಕಿ ಸದ್ಯ ಒಂಬತ್ತು ಟನ್‌ಗಳಷ್ಟನ್ನೇ ಜೈಲು ಅಧಿಕಾರಿಗಳು ಸ್ವೀಕರಿಸಿದ್ದಾರೆ. ಇದನ್ನೇ ಬಳಸಿಕೊಂಡ ಸುಮಾರು 25-30 ಕೈದಿಗಳು ಫೈಲ್ ಪ್ಯಾಡ್‌ಗಳನ್ನು ನಿರ್ಮಿಸಿದ್ದಾರೆ. ಇದನ್ನು ರಾಜ್ಯ ಸರಕಾರದ ಇಲಾಖೆಗಳು ಮತ್ತು ಇತರ ಕಚೇರಿಗಳಲ್ಲಿ ಬಳಸುವುದಕ್ಕೆ ನೀಡಲಾಗಿದೆ. ದಿನವೊಂದಕ್ಕೆ ಸುಮಾರು 1 ಸಾವಿರ ಫೈಲ್ ಪ್ಯಾಡ್‌ಗಳನ್ನು ತಯಾರಿಸಲಾಗುತ್ತಿದೆ. ಇದನ್ನು ಕೊಳೆಸಿ, ಮೋಲ್ಡ್‌ಗೆ ಹಾಕಿ ಗಟ್ಟಿ ಮಾಡಲಾಗುತ್ತದೆ. ಅನಂತರ ಪ್ಯಾಡ್‌ಗಳನ್ನಾಗಿ ಕತ್ತರಿಸಲಾಗುತ್ತದೆ. ಇಡೀ ಪ್ರಕ್ರಿಯೆಯಲ್ಲಿ ಯಂತ್ರಗಳ ಬಳಕೆ ಅತ್ಯಂತ ಕಡಿಮೆ.
ಸರಕಾರಿ ಕಚೇರಿಗಳಲ್ಲಿ ಕಡತಗಳ ಮೇಲ್ಭಾಗದಲ್ಲಿ ದಪ್ಪನೆಯ ಮುಚ್ಚಳದ ರೀತಿ ಇದನ್ನು ಬಳಸಲಾಗುತ್ತದೆ. ಇದರ ಮೇಲೆ ಕಡತದ ಸಂಕ್ಷಿಪ್ತ ವಿವರ ಇರುತ್ತದೆ. ಎರಡು ಪ್ಯಾಡ್‌ಗಳನ್ನು ಜೋಡಿಸಲು ಬಟ್ಟೆಯ ತುಂಡನ್ನು ಬಳಸಲಾಗುತ್ತದೆ. ಈ ಪ್ಯಾಡ್‌ಗಳನ್ನು ತಯಾರಿಸುವ ಕೈದಿಗಳಿಗೆ 160 ರಿಂದ 200 ರೂ. ಕೂಲಿ ಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.