ಕದ್ರಿ ಉದ್ಯಾನವನಗಳಲ್ಲಿನ ಲೇಸರ್ ಶೋ ವೀಕ್ಷಿಸಿದ ಸಿಎಂ
Team Udayavani, Jan 8, 2018, 6:05 AM IST
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಕದ್ರಿ ಜಿಂಕೆ ಉದ್ಯಾನವನದಲ್ಲಿ ನಿರ್ಮಿಸಿದ ಸಂಗೀತ ಕಾರಂಜಿ, ಲೇಸರ್ ಶೋ ಮತ್ತು ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ರವಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು. ಆ ಬಳಿಕ ಕದ್ರಿ ಪಾರ್ಕ್‌ನಲ್ಲಿ ಲೇಸರ್ ಶೋ ಅನ್ನು ಕಣ್ತುಂಬಿಕೊಂಡರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ಯು.ಟಿ. ಖಾದರ್, ಮಂಗಳೂರು ನಗರಾಭಿವೃದ್ಧಿ ಸಚಿವ ಸುರೇಶ್ ಬಲ್ಲಾಳ್, ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮೇಯರ್ ಕವಿತಾ ಸನಿಲ್, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶ್ರೀಕಾಂತ್ ರಾವ್ ಕೆ., ಸಹಾಯಕ ಕಾರ್ಯಪಾಲಕ ಅಭಿಯಂತರ ಮನೋಹರ್ ಪಿ. ಕಳಸ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಚ್.ಆರ್. ನಾಯ್ಕ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯೆ ಶೋಭಾ, ಸದಸ್ಯ ಕೇಶವ ಸನಿಲ್, ವಸಂತ ಬೆರ್ನಾಡ್, ಮುರಳಿ ಮೋಹನ್ ಸಾಲಿಯಾನ್, ರಾಧಾಕೃಷ್ಣ ಉಪಸ್ಥಿತರಿದ್ದರು.
ಸದ್ಯಕ್ಕೆ ಪುಟಾಣಿ ರೈಲು ಓಡುವುದಿಲ್ಲ
ಕದ್ರಿ ಪಾರ್ಕ್‌ನಲ್ಲಿ ಕಳೆದ 5 ವರ್ಷಗಳಿಂದ ಓಡಾಟ ನಿಲ್ಲಿಸಿದ್ದ “ಬಾಲ ಮಂಗಳ ಎಕ್ಸ್‌ಪ್ರೆಸ್’ ಪುಟಾಣಿ ರೈಲು ಉದ್ಘಾಟನೆ ಗೊಂಡರೂ, ರೈಲಿನಲ್ಲಿ ಮಕ್ಕಳು ಓಡಾಡಲು ಕೆಲ ಸಮಯಗಳ ಕಾಲ ಕಾಯಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಹೊಸ ರೈಲಿಗೆ ಇತರ ಭಾಗಗಳ ಜೋಡಣೆಯೊಂದಿಗೆ ರೈಲ್ವೇ ಇಲಾಖೆಯಿಂದ ಟ್ರಾÂಕ್ ಪರಿಶೀಲನೆ ಕಾರ್ಯ ನಡೆಸಬೇಕಿದೆ. ಇದಾದ ಬಳಿಕವಷ್ಟೇ ರೈಲು ಓಡಾಟ ಆರಂಭವಾಗುತ್ತದೆ.
5 ವರ್ಷಗಳ ಅನಂತರ ಚಾಲನೆ
ಕಳೆದ ಐದು ವರ್ಷಗಳಿಂದ “ಬಾಲಮಂಗಳ ಎಕ್ಸ್ ಪ್ರಸ್’ ಪುಟಾಣಿ ರೈಲು ಚಾಲನೆ ಮಾಡುತ್ತಿರಲಿಲ್ಲ. ಕದ್ರಿ ಪಾರ್ಕ್‌ನಲ್ಲಿ 1983ರಿಂದ ತನ್ನ ಓಡಾಟ ಆರಂಭಿಸಿದ್ದ ರೈಲು 2012ರವರೆಗೆ ನಿರಂತರವಾಗಿ ಮಕ್ಕಳ ಮನೋರಂಜನೆಯ ಭಾಗವಾಗಿತ್ತು. ಆದರೆ ಈ ರೈಲು ಹಿಂದೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಓಡಾಟ ನಡೆಸುತ್ತಿದ್ದದರಿಂದ ತೀರಾ ಹಳೆಯದಾಗಿತ್ತು. ಈ ಹಿನ್ನೆಲೆಯಲ್ಲಿ ಕದ್ರಿಪಾರ್ಕ್‌ನಲ್ಲಿ ಹೊಸ ರೈಲು ತರುವ ಉದ್ದೇಶದಿಂದ 2013ರಲ್ಲಿ ಪುಟಾಣಿ ರೈಲು ಓಡಾಟವನ್ನು ಸ್ಥಗಿತಗೊಳಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.