ಪುತ್ತೂರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ


Team Udayavani, Jan 8, 2018, 11:58 AM IST

8-j-an-11.jpg

ಪುತ್ತೂರು: ಪರಧರ್ಮ ವಿರೋಧಿಸುವವರು, ಅಸಹಿಷ್ಣುತೆಯಿಂದ ನೋಡುವವರು ಮನುಷ್ಯರೇ ಅಲ್ಲ. ಅವರಲ್ಲಿ ಮೃಗೀಯ ವರ್ತನೆ ಕಾಣುತ್ತದೆ. ಜಾತಿ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸಬೇಕು. ಆಗ ಬದುಕು ಸಾರ್ಥವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ, ಪುತ್ತೂರಿನ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಾವೆಲ್ಲ ಹಿಂದೂಗಳೇ. ನಾವು ರಾಮ ನವಮಿ ಆಚರಣೆ ಮಾಡುತ್ತೇವೆ. ಮಹಾಲಿಂಗೇಶ್ವರ ದೇವರ ಫೋಟೋವನ್ನು ನನಗೆ ಸ್ಮರಣಿಕೆಯಾಗಿ ನೀಡಿದ್ದೀರಿ. ನನ್ನ ಹೆಸರು ಸಿದ್ದರಾಮಯ್ಯ. ಮನೆಯಲ್ಲಿ ತಾನು ಆರಾಧಿಸುವ ದೇವರು ಸಿದ್ದರಾಮೇಶ್ವರ. ವೇದಿಕೆ ಮೇಲಿರುವ ಶಕುಂತಳಾ ಶೆಟ್ಟಿ, ರಮಾನಾಥ ರೈ ಹಿಂದೂಗಳೇ. ಅಧಿಕಾರ ಹಿಡಿಯಲು ಧರ್ಮಕ್ಕೆ ರಾಜಕೀಯ ಬಣ್ಣ ಬಳಿಯುವವರಿಂದ ಹಿಂದುತ್ವದ ಪಾಠ ಕಲಿಯಬೇಕಾಗಿಲ್ಲ ಎಂದರು.

ಸಾವಿನ ಮೇಲೆ ಯಾರೂ ರಾಜಕೀಯ ಮಾಡಬಾರದು. ಅದನ್ನು ಧಿಕ್ಕರಿಸುವ ಕೆಲಸ ಆಗಬೇಕಿದೆ. ಅಮಿತ್‌ ಶಾ ಬಂದು
ಇವರಿಗೆಲ್ಲ ಪಾಠ ಮಾಡುತ್ತಾರೆ. ಅವರೂ ಜೈಲಿಗೆ ಹೋಗಿ ಬಂದವರೇ. ಆತ ಬಂದಾಗ ರಾಜ್ಯದ ಬಿಜೆಪಿಗರು ಕೈಕಟ್ಟಿ
ಕುಳಿತುಕೊಳ್ಳುತ್ತಾರೆ. ಇವರಿಗೆ ಕೋಮು ಗಲಭೆ, ಬೆಂಕಿಹಚ್ಚಿ, ಲಾಠಿಚಾರ್ಜ್‌ ಮಾಡಿಸಿ ಮತಗಳ ಕ್ರೋಡಿಕರಣ ಆಗುವಂತೆ ಪಾಠ ಮಾಡಲಾಗುತ್ತದೆ. ಇದನ್ನು ಸ್ವತಃ ಸಂಸದ ಪ್ರತಾಪ್‌ ಸಿಂಹ ಒಪ್ಪಿಕೊಂಡಿದ್ದಾರೆ. ಇಂತಹ ಅಮಿತ್‌ ಶಾ ಪಕ್ಷದ ಅಧ್ಯಕ್ಷರಾಗಲು ನಾಲಯಕ್‌ ಎಂದು ತಿವಿದರು.

ಶಕುಂತಳಾ ಶೆಟ್ಟಿ ಅವರು ಮೊದಲು ಬಿಜೆಪಿಯಲ್ಲಿದ್ದರು. ಆದ್ದರಿಂದ ಬಿಜೆಪಿಗರು ಏನೆಲ್ಲ ಮಾಡುತ್ತಾರೆ ಎನ್ನುವುದು
ಶಕುಂತಳಾ ಶೆಟ್ಟಿಗೆ ಗೊತ್ತಿದೆ. ಅವರು ಒಂದೇ ಅಜೆಂಡಾವನ್ನು ಇಟ್ಟುಕೊಂಡಿದ್ದು, ಅದು ಬೇರೆ ಧರ್ಮದವರನ್ನು ದ್ವೇಷಿ
ಸುವುದು. ತಾವು ಹಿಂದೂ ಎಂದು ಹೇಳಿಕೊಳ್ಳುವ ಇವರುಗಳು, ಗೌರಿ ಲಂಕೇಶ್‌ ಸತ್ತಾಗ ಅವರನ್ನು ನೋಡಲು
ಹೋಗಿಲ್ಲ. ಶವ ಇಟ್ಟು ರಾಜಕಾರಣ ಮಾಡುವುದಕ್ಕಿಂತ ಅಮಾನವೀಯತೆ ಬೇರಿಲ್ಲ. ಕುವೆಂಪು ಹೇಳಿದಂತೆ ಹುಟ್ಟುವಾಗ ವಿಶ್ವ ಮಾನವ, ಬೆಳೆಯುತ್ತಾ ಗುಣದಿಂದ ಅಲ್ಪಮಾನವ ಆಗುತ್ತಾನೆ ಎಂದು ವಿವರಿಸಿದರು.

ಬ್ರಿಟಿಷರ ವಿರುದ್ಧ 4 ಮೈಸೂರು ಯುದ್ಧ ಮಾಡಿರುವ ಟಿಪ್ಪು ಮಹಾನ್‌ ಪರಾಕ್ರಮಿ, ಮಹಾನ್‌ ದೇಶಪ್ರೇಮಿ. ಅವರ ಜಯಂತಿ ಮಾಡುವುದು ತಪ್ಪಾ? ಬಜರಂಗದಳ ಮೊದಲಾದ ಸಂಘಟನೆಗಳಿಗೆ ರೋಗ ಬಂದಂತೆ ವರ್ತಿಸುತ್ತಿದ್ದಾರೆ. 3
ವರ್ಷಗಳಿಂದ ನಡೆಸುತ್ತಿರುವ ಟಿಪ್ಪು ಜಯಂತಿಗೆ ಇವರೆಲ್ಲ ವಿರೋಧ ಮಾಡುತ್ತಿದ್ದಾರೆ. ಮೊದಲು ಶೂರ ಎನ್ನುತ್ತಿದ್ದ
ವರು, ಇದೀಗ ಮತಾಂಧ ಎನ್ನುತ್ತಿದ್ದಾರೆ ಎಂದರು.

ಬಿಜೆಪಿಗೆ ಭಯ
ನಿರಂತರವಾಗಿ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಅದಕ್ಕೆ ವಿರೋಧಿಗಳಿಗೆ ಅಸೂಯೆ. ಚುನಾವಣೆ ಹತ್ತಿರ ಬರು
ತ್ತಿದ್ದಂತೆ ಬಿಜೆಪಿ, ಜೆಡಿಎಸ್‌ಗೆ ಭಯ ಶುರುವಾಗಿದೆ. ಅದಕ್ಕಾಗಿ ಸರಕಾರದ ಹಣದಿಂದ ಕಾರ್ಯಕ್ರಮ ನಡೆಸುತ್ತಾರೆ ಎಂದು ಟೀಕಿಸುತ್ತಿದ್ದಾರೆ. ಪ್ರಧಾನಿ ಗುಜರಾತ್‌ ನಲ್ಲಿ ಕಾರ್ಯಕ್ರಮ ಮಾಡುವಾಗ, ವಿದೇಶಕ್ಕೆ ಹೋಗುವಾಗ ಸ್ವಂತ ಹಣ
ಖರ್ಚು ಮಾಡುತ್ತಾರೆಯೇ? ಎಲ್ಲರೂ ಸರಕಾರದ ಹಣದಿಂದಲೇ ಕಾರ್ಯಕ್ರಮ ಏರ್ಪಡಿಸುತ್ತಾರೆ. ಅದೇ ಕೆಲಸವನ್ನು ನಾನು ಮಾಡಿದ್ದೇನೆ ಎಂದರು. 

ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ, ಸುಳ್ಯ ಕಾಂಗ್ರೆಸ್‌ ತೆಕ್ಕೆಗೆ ಸೇರಿಲ್ಲ. ಮುಂದಿನ ಬಾರಿ ಗೆಲ್ಲಿಸಿ ಕೊಡಬೇಕು ಎಂದು ಸಿಎಂ ಹೇಳಿದಾಗ, ಸಭಿಕರು ಗೆಲ್ಲಿಸಿಕೊಡ್ತೀವಿ ಎಂದು ಭರವಸೆ ನೀಡಿದರು. ಇದೇ ಸಂದರ್ಭ ಡಾ| ರಘು ಅವರನ್ನು ಸಭೆಯಲ್ಲಿ ಗುರುತಿಸಿದರು. ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಭೇದ ಇಲ್ಲ. ನಾಯಕನೂ ಕಾರ್ಯಕರ್ತನೇ, ಪ್ರತಿ ಕಾರ್ಯಕರ್ತನೂ ನಾಯಕ ಎಂದರು.

ಪುತ್ತೂರು ನನ್ನ ಕ್ಷೇತ್ರ
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ತಾನು ಬೆಳ್ಳಿಪ್ಪಾಡಿಯವನು. ಆದ್ದರಿಂದ ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಎಂದೂ ಸೋಲದು. ಕಾಂಗ್ರೆಸ್‌ ಮುಕ್ತ ರಾಜ್ಯ, ರಾಷ್ಟ್ರ ನಿರ್ಮಾಣ ಆಗಬೇಕು ಎಂದು ಕೆಲವರು ಪಣ ತೊಟ್ಟಿದ್ದಾರೆ. ಆದರೆ ನಾವು ಹಸಿವು ಮುಕ್ತ, ಋಣ ಮುಕ್ತ ರಾಜ್ಯ, ರಾಷ್ಟ್ರ ನಿರ್ಮಾಣ ಆಗಬೇಕು ಎಂಬ ದಿಶೆಯಲ್ಲಿ
ಕೆಲಸ ಮಾಡುತ್ತಿದ್ದೇವೆ. ಇಂತಹ ಕೆಲಸ ಪಣ ತೊಟ್ಟವರಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಶಾಸಕಿಯನ್ನು ಗೆಲ್ಲಿಸಿ
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್‌ ಮಾತನಾಡಿ, ಪುತ್ತೂರಿನ ಜತೆಗೆ ಸುಳ್ಯವನ್ನು ಮುಂದಿನ ಬಾರಿ ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಳ್ಳಬೇಕಿದೆ. ಇದು ಸಾಧ್ಯವಾದರೆ ರಾಜ್ಯದಲ್ಲಿ ಮೂರನೇ ಎರಡರಷ್ಟು ಸ್ಥಾನವನ್ನು ಕಾಂಗ್ರೆಸ್‌ ಪಡೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅವರನ್ನು ಹೆಚ್ಚಿನ ಮತಗಳೊಂದಿಗೆ ಗೆಲ್ಲಿಸಿ ಎಂದರು. ಅನ್ನ ಭಾಗ್ಯ ಕೇಂದ್ರ ಸರಕಾರ ನೀಡಿದ್ದು ಎಂದು ಹೇಳುವ ಬಿಜೆಪಿಗರು ತನ್ನ ಅಧಿಕಾರವಿರುವ ರಾಜ್ಯಗಳಾದ ಛತ್ತೀಸ್‌ಗಢ, ಮಹಾರಾಷ್ಟ್ರ, ಗುಜರಾತ್‌, ಮಹಾರಾಷ್ಟ್ರದಲ್ಲಿ ಇಂತಹ ಭಾಗ್ಯವೇ ಇಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಪುತ್ತೂರಿನವರು ಸಿಎಂ ಆದರೂ ನಯಾಪೈಸೆ ಬಂದಿಲ್ಲ. ಆದರೆ ತನ್ನ ಶಾಸಕತ್ವದ ಅವಧಿಯಲ್ಲಿ ಅತಿಹೆಚ್ಚು ಅನುದಾನ ಬಂದಿದೆ ಎಂದು ಟಾಂಗ್‌ ನೀಡಿದರು. ಪುತ್ತೂರಿಗೆ ಮೆಡಿಕಲ್‌ ಕಾಲೇಜು ಬೇಕು, ಪುತ್ತೂರನ್ನು ಗ್ರಾಮಾಂತರ ಜಿಲ್ಲೆಯಾಗಿ ಘೋಷಿಸಬೇಕು, ಬಹುಗ್ರಾಮ ಕುಡಿಯುವ ನೀರು, ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ಬೇಕು, ಮಿನಿ ಏರ್‌ ಪೋರ್ಟ್‌, ಪುತ್ತೂರನ್ನು ಪ್ರವಾಸೋದ್ಯಮ ಕೇಂದ್ರವಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಸುದಿನದಿಂದ ಬೇಡಿಕೆ ಪಟ್ಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ತೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಪುತ್ತೂರು ಅಭಿವೃದ್ಧಿಗಾಗಿ ಸಿಎಂಗೆ ಬೇಡಿಕೆಗಳ
ಪಟ್ಟಿ ಎಂಬ ಶೀರ್ಷಿಕೆಯಲ್ಲಿ ಉದಯವಾಣಿ ಸುದಿನ ವರದಿ ಮಾಡಿತ್ತು. ಇದನ್ನು ಮುಖ್ಯಮಂತ್ರಿ ಕೈಗೆ ನೀಡಲಾಯಿತು.

ಮಿಸರ್‌ ಯಡಿಯೂರಪ್ಪ ಸಾಲಮನ್ನಾ ಮಾಡಿಲ್ಲ
ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿರುವ ಮಿಸ್ಟರ್‌ ಯಡಿಯೂರಪ್ಪ, ಅಧಿಕಾರದಲ್ಲಿದ್ದಾಗ ಯಾಕೆ ಮಾಡಿಲ್ಲ ಎಂದು ಸಿಎಂ ಪ್ರಶ್ನಿಸಿದರು. ಆಗ ಸಾಲಮನ್ನಾ ಮಾಡಿರೆಂದು ಕೇಳಿಕೊಂಡದ್ದಕ್ಕೆ, ದುಡ್ಡೆಲ್ಲಿಂದ ತರಲಿ? ನೋಟು ಪ್ರಿಂಟ್‌ ಮಾಡುವ ಮೆಷಿನ್‌ ಇದೆಯೇ ಎಂದು ಕೇಳಿದ್ದರು. ಇತ್ತೀಚೆಗೆ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಹೋಗಿ, ಮನವಿ ಮಾಡಿಕೊಂಡೆ. ಪ್ರಧಾನಿ ಸಾಲಮನ್ನಾ ಯೋಜನೆಯನ್ನೇ ತಿರಸ್ಕರಿಸಿದರು. ಆಗ ಜತೆಗಿದ್ದ ಬಿಜೆಪಿ ನಾಯಕರು ತುಟಿ ಪಿಟಿಕ್‌ ಎನ್ನಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ಷೇಪಿಸಿದರು.

ಸಮ್ಮಾನ 
ಸಿಎಂ ಸಿದ್ದರಾಮಯ್ಯ ಅವರಿಗೆ ಶ್ರೀ ಮಹಾಲಿಂಗೇಶ್ವರ ದೇವರ ಫೋಟೋವನ್ನು ಸ್ಮರಣಿಕೆಯಾಗಿ ನೀಡಿ, ಸಮ್ಮಾನಿಸಲಾಯಿತು. ವಿವಿಧ ಫಲಾನುಭವಿಗಳಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದ ಸೌಲಭ್ಯ ವಿತರಣೆ ನಡೆಯಿತು. ಇದನ್ನು ಪ್ರಭಾರ ಸಹಾಯಕ ಆಯುಕ್ತೆ ಪ್ರಮೀಳಾ ನಿರ್ವಹಿಸಿದರು.

ಟಾಪ್ ನ್ಯೂಸ್

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.