ಹೆಣ್ಣಿನ ತ್ಯಾಗ ಎಲ್ಲಕ್ಕೂ ಮಿಗಿಲು: ಬಾಳೇಕುಂದ್ರಿ


Team Udayavani, Jan 8, 2018, 12:40 PM IST

gul-8.jpg

ಬೀದರ: ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಹೆಣ್ಣಿನ ಆಸರೆಯಲ್ಲಿ ಬದುಕುವನು. ಹೆತ್ತು ಧರೆಗಿಳಿಸಿ, ನಂತರ ಸತ್ತ ಮೇಲೂ ಭೂಮಿ ರೂಪದಲ್ಲಿ ತನ್ನೊಡಲಲ್ಲಿ ಕುಳ್ಳಿರಿಸಿಕೊಳ್ಳುವ ಹೆಣ್ಣಿನ ತ್ಯಾಗ ಮಿಗಿಲಾದದ್ದು. ಆದರೂ ಹೆಣ್ಣನ್ನು ಕುಟುಂಬದ ಕಣ್ಣಾಗಿ ಭಾವಿಸದೇ ಹುಣ್ಣು ಎಂದು ನೋಡುವುದು ದುರಂತ ಎಂದು ಖ್ಯಾತ ಚಿಂತಕಿ ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ ಕಳವಳ ವ್ಯಕ್ತಪಡಿಸಿದರು.

ನಗರದ ಬಿವಿ ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ರವಿವಾರ ವಿಕಾಸ ಅಕಾಡೆಮಿ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಜ್ಞಾನ ವಿಕಾಸ ಸಂಗಮ ಕಾರ್ಯಕ್ರಮ ಉದ್ಘಾಟಿಸಿ “ವಾತ್ಸಲ್ಯ ಜಗದ ಬೆಳಕು ಮಾತೆ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು. ಹೆಣ್ಣಿಲ್ಲದೆ ವಿಶ್ವ ನಿರ್ಮಾಣವೇ ಅಸಾಧ್ಯ. ಇಂದು ಭ್ರೂಣ ಹತ್ಯೆಯಿಂದ 10 ವರ್ಷದಲ್ಲಿ 10 ಕೋಟಿ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಾರೆ. ಈ ಕೃತ್ಯದಲ್ಲಿ ವೈದ್ಯರ ಪಾಲು ಸಹ ಇದೆ ಎಂದರು.

ತಾಯಿ ಇರುವ ಮನೆ ಅದು ಅರಮನೆಗೆ ಸಮಾನ. ಆಕೆ ಇಲ್ಲದ ಮನೆ ಅದು ಬರೀ ಮರಳು ಮನೆಯಷ್ಟೆ. ಹಬ್ಬ, ಹರಿದಿನಗಳು, ಸಂಪ್ರದಾಯ ಉತ್ಸವಗಳು, ಪೂಜಾದಿ ಕಾರ್ಯಗಳು ನಡೆಯಲು ಕಡ್ಡಾಯವಾಗಿ ಹೆಣ್ಣು ಇರಲೇ ಬೇಕು. ಆದರೆ, ಇಂದಿನ ದಿನಮಾನಗಳಲ್ಲಿ ಹೆಣ್ಣಿಗೆ ನಮಸ್ಕಾರ ಮಾಡುವುದಿರಲಿ, ಆಕೆಯನ್ನೇ ನಾಶ ಮಾಡಲು ಹೊರಟಿರುವ ಪರಿ ದಾನವರಿಗಿಂತಲೂ ಕಡುಕಷ್ಟವಾದ ಬೆಳವಣಿಗೆ ಎಂದು ವಿಷಾದಿಸಿದರು.

ಹೆಣ್ಣು ವಾತ್ಸಲ್ಯ ಹಾಗೂ ಮಮಕಾರದ ಸಾಕಾರ ಮೂರ್ತಿ, ಆಕೆಯ ಎದೆ ಹಾಲಿನಲ್ಲಿ ಇಡೀ ಜಗತ್ತನ್ನು ಮೀರಿಸುವ ಅಗಾಧ ಶಕ್ತಿ ತುಂಬಿದೆ. ಹುಟ್ಟಿನಿಂದಲೇ ಆಕೆಯಲ್ಲಿ ಆತ್ಮವಿಶ್ವಾಸ ಹಾಗೂ ಸೌಂದರ್ಯ ಭಾವ ಬೆಳೆದು ಬಂದಿದೆ. ಆದರೆ, ಇಂದು ಹೆಣ್ಣನ್ನು ನಾಶ ಮಾಡಲು ಮತ್ತೂಂದು ಹೆಣ್ಣು ವೈದ್ಯರೊಂದಿಗೆ ಸೇರಿ ಹತ್ತು ವರ್ಷಗಳಲ್ಲಿ 10 ಕೋಟಿ ಹೆಣ್ಣು ಮಕ್ಕಳ ಭ್ರೂಣ ನಾಶ ಮಾಡಿರುವುದು ಕಳವಳಕಾರಿ ಸಂಗತಿ ಎಂದರು.

ಇಂದು ತಾಯಿ ತನ್ನ ಮಗುವಿಗೆ ಸಂಸ್ಕಾರದ ವಾತ್ಸಲ್ಯ ತೋರಬೇಕಿದೆ. ಉತ್ತಮ ಶಿಕ್ಷಣ ನೀಡಿ, ಸ್ವಾಭಿಮಾನಿ ಹಾಗೂ ದೇಶಪ್ರೇಮಿ ಪುತ್ರನನ್ನಾಗಿ ಮಾಡಬೇಕಿದೆ. ಬಾಲ್ಯದಲ್ಲಿ ಮಕ್ಕಳು ಮಾಡುವ ಉತ್ತಮ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ತಪ್ಪು ಎಸಗುವಾಗ ತಿದ್ದುವ ಕಾರ್ಯ ಸಹ ಆಕೆ ಮಾಡುವುದು ಅನಿವಾರ್ಯ. ಸನ್ಮಾರ್ಗದೆಡೆಗೆ ಸಾಗಲು ಮಕ್ಕಳಿಗೆ ತಾಯಿಯೇ ಪ್ರೇರಣೆ. ಆಕೆ ಉತ್ತಮ ಸಮಾಜ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ, ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ವೈದ್ಯ ಮತ್ತು ಇಂಜಿನಿಯರೇ ಆಗು ಎಂದು ಹೇಳುವ ಮೂಲಕ ಅವರ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದ್ದಾರೆ. ಇಂದು ದೇಶದಲ್ಲಿ 58 ಲಕ್ಷ ಯುವಕರು ಇಂಜಿನಿಯಗಳಿದ್ದು, ಕೇವಲ 5 ಸಾವಿರ ರೂ. ವೇತನದಲ್ಲಿ ದುಡಿಯಲು ಸಿದ್ಧರಿದ್ದಾರೆ. ಶಿಕ್ಷಣ ಜ್ಞಾನಕ್ಕಾಗಿ ಇರಬೇಕೆ ವಿನಹ ನೌಕರರಿಗಾಗಿ ಅಲ್ಲ. ಹಾಗಾಗಿ ನನ್ನ ಮಗ ಕೊಡುವವನಾಗಬೇಕೆ, ಹೊರತು ಬೇಡುವವನಾಗಬಾರದು ಎಂದು ಅತ್ಮಸ್ಥೈರ್ಯ ತಾಯಂದಿರಲ್ಲಿ ಇರಬೇಕು. ಆಗ ಮಾತ್ರ ಭಾರತ ಮಾತೆ ಜಗನ್ಮಾತೆ ಆಗಲು ಸಾಧ್ಯ ಎಂದು ಕರೆ ನೀಡಿದರು.

ಐಎಎಸ್‌ ಪಾಸ್‌ ಆದವರು ಪಂಜರದ ಹಕ್ಕಿಗಳಿದ್ದಂತೆ. ಪ್ರತಿ ಬಾರಿ 12 ಲಕ್ಷ ಯುವಕರು ಐಎಎಸ್‌ಗಾಗಿ ಪ್ರವೇಶ ಪಡೆದರೆ ಈ ಪೈಕಿ ಪಾಸ್‌ ಆಗುವರು 200 ಜನ ಮಾತ್ರ. ಅದರಲ್ಲಿ ಖುಷಿ ಅನುಭವಿಸುವರು 50 ಜನ ಮಾತ್ರ. ತನ್ನಿಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಹಾರುವ ಹಕ್ಕಿಗಳಾಗಿ ಬದುಕಬೇಕು ಎಂದು ಕಿವಿ ಮಾತು ಹೇಳಿದರು.

ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಕಾಡೆಮಿ ಜಿಲ್ಲಾ ಸಂಚಾಲಕ ಕರ್ನಲ್‌ ಶರಣಪ್ಪ ಸಿಕೆನಪುರೆ, ಗುತ್ತಿಗೆದಾರ ಗುರುನಾಥ ಕೊಳ್ಳುರ್‌, ಗುರುದ್ವಾರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರಸಿಂಗ್‌, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶಟಕಾರ ವೇದಿಕೆಯಲ್ಲಿದ್ದರು. ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಶಾಂತಕುಮಾರ ಬಿರಾದಾರ ನಿರೂಪಿಸಿದರು. ಕಾಮಶಟ್ಟಿ ಚಿಕಬಸೆ ವಂದಿಸಿದರು. ನಾಟ್ಯಶ್ರೀ ನೃತ್ಯಾಲಯ ಸೇರಿದಂತೆ ಜಿಲ್ಲೆಯ ಇತರೆ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ದೇಶದಲ್ಲಿರುವ 18 ಕೋಟಿ ನಿರುದ್ಯೋಗಿಗಳಿಗೆ ಭತ್ಯೆ ನೀಡುವ ವಿಷಯ ಕುರಿತು ಸಂಸತ್‌ನಲ್ಲಿ ಚರ್ಚೆಯ ವೇಳೆ ಎಲ್ಲ ಸಂಸದರು ಸಹಮತ ವ್ಯಕ್ತಪಡಿಸಿರುವುದು ಬೇಸರದ ಸಂಗತಿ. ನಿರುದ್ಯೋಗಿಗಳಿಗೆ ಭತ್ಯೆ ನೀಡಿದರೆ ಯುವಕರಲ್ಲಿನ ಜ್ಞಾನ, ಬುದ್ದಿ ದುಡಿಮೆ ಸತ್ತು ಹೋಗುತ್ತದೆ. ದುಡಿಯುವ ಜನರು ಮನೆಯಲ್ಲಿ ಕುಳಿತರೆ ದೇಶ ಪ್ರಗತಿ ಸಾಧಿಸದು. ಜಗತ್ತಿನ ನಕಲು ಮಾಡಿದರೆ ಭಾರತ ಮುಂದೆ ಬರುವುದಿಲ್ಲ.
 ಬಸವರಾಜ ಪಾಟೀಲ ಸೇಂಡ, ರಾಜ್ಯಸಭಾ ಸದಸ್ಯ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.